ರಾಜಧಾನಿ ಬೆಂಗಳೂರಿನಲ್ಲಿ ಕಡಿಮೆ ಬೆಲೆಯಲ್ಲಿ ಬಿಡಿಎ ಸೈಟ್ ಖರೀದಿಗೆ (BDA Open Auction 2025) ರಾಜ್ಯ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಬೆಂಗಳೂರು ನಗರದೊಳಗೆ ಕಾನೂನುಬದ್ಧವಾದ, ಉತ್ತಮ ವ್ಯವಸ್ಥೆಯ ನಿವೇಶನವನ್ನು ಖರೀದಿಸಲು ಈಗ ಸರಿಯಾದ ಸಮಯ ಕೂಡಿ ಬಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) 2025ರ ಜುಲೈನಲ್ಲಿ ವಿವಿಧ ಬಡಾವಣೆಗಳಲ್ಲಿನ ನಿವೇಶನಗಳನ್ನು ಸಾರ್ವಜನಿಕ ಹರಾಜು ಮೂಲಕ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಮುಂದಾಗಿದೆ.
ಈ ಹರಾಜು ಎಲ್ಲರಿಗೂ ಮುಕ್ತವಾಗಿ ತೆರೆಯಲ್ಪಟ್ಟಿದ್ದು, ಬೆಂಗಳೂರು ಮಹಾನಗರದಲ್ಲಿ ಮನೆ ಕಟ್ಟುವ ಕನಸು ಹೊಂದಿರುವವರಿಗೆ ಇದು ಉತ್ತಮ ಅವಕಾಶವಾಗಲಿದೆ. ಆಸಕ್ತರು ತಪ್ಪದೇ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.
PM Kisan 20ne Kanthu- ರೈತರಿಗೆ PM-KISAN 20ನೇ ಕಂತಿನ ₹2,000 ರೂ. ಹಣ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ…
ಬಿಡಿಎ ಹರಾಜಿನ ಪ್ರಮುಖ ಲಕ್ಷಣಗಳು
- ಸಂಪೂರ್ಣ ಪಾರದರ್ಶಕ ಹಾಗೂ ಸರ್ಕಾರದ ನಿಯಮಾನುಸಾರ ಹರಾಜು
- ಯಾವುದೇ ಮೀಸಲು ಇಲ್ಲ – ಎಲ್ಲರಿಗೂ ಮುಕ್ತ ಅವಕಾಶ
- ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಸೈಟ್‌ಗಳು ಲಭ್ಯ
- ಸ್ಪರ್ಧಾತ್ಮಕ ಬಿಡ್ ವ್ಯವಸ್ಥೆ
- ಕಾನೂನುಬದ್ಧ ದಾಖಲೆಗಳು, ಯಾವುದೇ ತಕರಾರಿಲ್ಲದ ನಿವೇಶನಗಳು
ಹರಾಜು ದಿನಾಂಕಗಳು
ಬಿಡಿಎ ಈ ಬಾರಿ ಹರಾಜು ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸುತ್ತಿದೆ:
ಹಂತ 1- ಆನ್‌ಲೈನ್ (ಇ-ಹರಾಜು): ಇದು ಜುಲೈ 19, 2025ರಂದು ನಡೆಯಲಿದ್ದು; ನೀವು ನಿಮ್ಮ ಮನೆ ಅಥವಾ ಕಚೇರಿಯಿಂದಲೇ ಆನ್‌ಲೈನ್ ಮೂಲಕ ಬಿಡ್ ಹಾಕಬಹುದು. ಈ ಹರಾಜು ಡಿಜಿಟಲ್ ತಂತ್ರಜ್ಞಾನ ಬಳಸಿ ಸುರಕ್ಷಿತವಾಗಿ ನಡೆಯಲಿದೆ.
ಹಂತ 1- ನೇರ ಹರಾಜು: ಇದು ಜುಲೈ 21, 2025ರಂದು ನಡೆಯಲಿದ್ದು; ನೇರವಾಗಿ ಹರಾಜು ಸ್ಥಳದಲ್ಲಿ ಪಾಲ್ಗೊಂಡು ಬಿಡ್ ಹಾಕಲು ಅವಕಾಶ. ಕೊನೆ ದಿನವಾಗಿರುವುದರಿಂದ ಆಸಕ್ತರು ತ್ವರಿತವಾಗಿ ತೀರ್ಮಾನ ಮಾಡಬಹುದು.
ಯಾವೆಲ್ಲ ಬಡಾವಣೆಗಳಲ್ಲಿ ಸೈಟ್‌ಗಳಿವೆ?
ಬಿಡಿಎ ಹರಾಜಿಗಿಡುವ ನಿವೇಶನಗಳು ಬೆಂಗಳೂರಿನ ಪ್ರಮುಖ ಹಾಗೂ ಅಭಿವೃದ್ಧಿಪಡಿಸಲಾದ ಈ ಕೆಳಕಂಡ ಬಡಾವಣೆಗಳಲ್ಲಿ ಹಂಚಿಕೆಯಾಗಿದೆ:
- ಅಂಜನಾಪುರ ಟೌನ್‌ಶಿಪ್
- ಜೆ.ಪಿ. ನಗರ 9ನೇ ಹಂತ
- ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ
- ನಾಗರಭಾವಿ 2ನೇ ಹಂತ
- ಬಿಡಿಎ ಲೇಔಟ್ 4ನೇ ಹಂತ
- ಬನಶಂಕರಿ 3ನೇ ಹಂತ
- ಆಸ್ಟಿನ್ ಟೌನ್
- ಎಚ್‌ಬಿಆರ್ ಲೇಔಟ್ 1ನೇ ಹಂತ ಮತ್ತು 2ನೇ ಬ್ಲಾಕ್
- ಅರ್ಕಾವತಿ ಲೇಔಟ್ (ಜಕ್ಕೂರು) 7ನೇ ಬ್ಲಾಕ್
ಇನ್ನೂ ಹೆಚ್ಚಿನ ಬಡಾವಣೆಗಳಲ್ಲಿಯೂ ನಿವೇಶನಗಳು ಲಭ್ಯವಾಗುವ ಸಾಧ್ಯತೆ ಇದೆ. ಹೆಚ್ಚು ವಿವರಗಳಿಗೆ BDA ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.

ಹರಾಜಾಗಲಿರುವ ನಿವೇಶನಗಳ ಗಾತ್ರ
ಬಿಡಿಎ ಹರಾಜಿನಲ್ಲಿ ಸಣ್ಣ ಕುಟುಂಬಗಳಿಂದ ದೊಡ್ಡ ಯೋಜನೆಗಳಿಗೆ ಸೂಕ್ತವಾಗುವಂತೆ ವಿವಿಧ ಗಾತ್ರದ ನಿವೇಶನಗಳು ಲಭ್ಯವಿವೆ:
- ಕನಿಷ್ಠ ಗಾತ್ರ: 600 ಚದರ ಅಡಿ
- ಗರಿಷ್ಠ ಗಾತ್ರ: 4500 ಚದರ ಅಡಿ
ಇದರಿಂದ ನೀವು ನಿಮ್ಮ ಬಜೆಟ್ ಮತ್ತು ಅವಶ್ಯಕತೆಗೆ ತಕ್ಕಂತೆ ಆಯ್ಕೆಮಾಡಬಹುದು.
ಹರಾಜಾಗಲಿರುವ ಸೈಟುಗಳ ಬೆಲೆ
ಬಿಡಿಎ ಈ ಬಾರಿ ನಿವೇಶನಗಳ ಪ್ರಾರಂಭಿಕ ಹರಾಜು ದರವನ್ನು ಪ್ರತಿ ಚದರ ಮೀಟರ್’ಗೆ ₹500 (ಅಂದಾಜು ₹46.45 ಪ್ರತಿ ಚದರ ಅಡಿ) ದರದಂತೆ ರಿಯಾಯತಿ ಬೆಲೆ ನಿಗದಿ ಮಾಡಿದೆ.
ಉದಾಹರಣೆ 30×40 ಅಡಿ (1200 sq.ft) ಗಾತ್ರದ ನಿವೇಶನ ಪ್ರಾರಂಭಿಕ ಬೆಲೆ ₹5.58 ಲಕ್ಷ ಆಗಲಿದೆ. ಅದೇ ರೀತಿ 40×60 ಅಡಿ (2400 sq.ft) ಅಳತೆಯ ನಿವೇಶನದ ಪ್ರಾರಂಬಿಕ ಬೆಲೆ ₹11.16 ಲಕ್ಷ.
ಗಮನಿಸಿ: ಹರಾಜಿನಲ್ಲಿ ಬಿಡ್ ಮಾಡುವ ವೇಳೆ ಈ ದರಗಳು ಹೆಚ್ಚಿನ ಮಟ್ಟಕ್ಕೆ ಹೋಗುವ ಸಾಧ್ಯತೆ ಇದ್ದರೂ, ಈ ಪ್ರಾರಂಭಿಕ ದರಗಳು ಸ್ಪರ್ಧಾತ್ಮಕವಾಗಿವೆ ಮತ್ತು ಬಹಳಕಷ್ಟು ಜನರಿಗೆ ಕೈಗೆಟಕುವಂತಿವೆ.
ಬಿಡಿಎ ಹರಾಜು ಸರ್ಕಾರಿ ನಿಯಮಾನುಸಾರ, ಯಾವುದೇ ಮಾಲೀಕತ್ವ ತಕರಾರು ಇಲ್ಲದಂತೆ ನಡೆಯುತ್ತದೆ. ಇದು ಸಂಪೂರ್ಣ ಪಾರದರ್ಶಕ, ಸ್ಪರ್ಧಾತ್ಮಕ, ಹಾಗೂ ಕಾನೂನುಬದ್ಧವಾಗಿದೆ.
ಹರಾಜಿನಲ್ಲಿ ಯಾರೆಲ್ಲ ಪಾಲ್ಗೊಳ್ಳಬಹುದು?
ಈ ಹರಾಜು ಎಲ್ಲರಿಗೂ ಮುಕ್ತವಾಗಿದೆ. ಇಲ್ಲಿ ಸರ್ಕಾರ/ಖಾಸಗಿ ಉದ್ಯೋಗಿಗಳು, ಉದ್ಯಮಿಗಳು, ಸ್ವಯಂ ಉದ್ಯೋಗಿಗಳು, ನಿವೃತ್ತರು, ಹೂಡಿಕೆದಾರರು ಹಾಗೂ ಮನೆಯ ಕನಸು ಇಟ್ಟುಕೊಂಡಿರುವ ಸಾಮಾನ್ಯ ಕುಟುಂಬಗಳು ಎಲ್ಲರೂ ಸಮಾನವಾಗಿ ಭಾಗವಹಿಸಬಹುದು.
ಈ ಯೋಜನೆಯ ಪ್ರಯೋಜನಗಳು
- ನಗರ ಪ್ರದೇಶದಲ್ಲಿ ಕಡಿಮೆ ಬೆಲೆಯಲ್ಲಿ ನಿವೇಶನ
- ಬಿಡಿಎ ಅಭಿವೃದ್ಧಿಪಡಿಸಿದ ಯೋಜನೆ – ಉತ್ತಮ ರಸ್ತೆ, ಒಳಚರಂಡಿ, ವಿದ್ಯುತ್, ನೀರು ಸಂಪರ್ಕ
- ಕಾನೂನುಬದ್ಧ ದಾಖಲೆ – ಯಾವುದೇ ಹಕ್ಕು ತಕರಾರುಗಳಿಲ್ಲ
- ಮನೆ ಕಟ್ಟಲು ಬ್ಯಾಂಕ್ ಸಾಲ ಪಡೆಯಲು ಸುಲಭ
- ಭವಿಷ್ಯದಲ್ಲಿ ಉತ್ತಮ ಮೌಲ್ಯ ವೃದ್ಧಿ
ಬೆಂಗಳೂರು ನಗರದಲ್ಲಿ ಮನೆ ಕಟ್ಟುವುದು ಬಹಳಷ್ಟು ಜನರ ಕನಸು. ಬಿಡಿಎ ನಿವೇಶನ ಹರಾಜು ಪ್ರಕ್ರಿಯೆ ಇದನ್ನು ವಾಸ್ತವಕ್ಕೆ ತರಲು ಸಹಾಯ ಮಾಡುತ್ತಿದೆ. ಈ ಬಾರಿಯ ಹರಾಜು ನಿಮ್ಮ ಕುಟುಂಬದ ಭವಿಷ್ಯವನ್ನು ರೂಪಿಸಲು ಉತ್ತಮ ಅವಕಾಶವಾಗಬಹುದು. ಈ ಸದಾವಕಾಶವನ್ನು ಬಳಸಿಕೊಳ್ಳಿ!
ಹೆಚ್ಚು ಮಾಹಿತಿಗೆ
- ದೂರವಾಣಿ: 080-23442273, 080-23442274
ವೆಬ್‌ಸೈಟ್: kbda.karnataka.gov.in

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.