Karnataka Postal Recruitment- ಕರ್ನಾಟಕ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಕೇಂದ್ರ ಸರ್ಕಾರಿ ಉದ್ಯೋಗ

Spread the love

WhatsApp Group Join Now
Telegram Group Join Now

ಕರ್ನಾಟಕ ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ (Karnataka Postal Recruitment) ಆಹ್ವಾನಿಸಲಾಗಿದೆ. ಪದವೀಧರ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಅಂಚೆ ಇಲಾಖೆಯಲ್ಲಿ (Karnataka Postal Circle) ವಿವಿಧ ಶಾಖೆಗಳಲ್ಲಿ ಖಾಲಿ ಇರುವ 129 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಗೊAಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅಂಚೆ ಇಲಾಖೆಯ ಈ ಉದ್ಯೋಗಗಳು ಭದ್ರತಾ ದೃಷ್ಠಿಯಿಂದ ಬಹುಮಾನ್ಯವಾಗಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.

KCET Seat Blocking 2025- ಕೆಸಿಇಟಿ ಸೀಟ್ ಬ್ಲಾಕ್ | ಕೆಇಎ ಮಹತ್ವದ ಮಾಹಿತಿ | ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು ಇಲ್ಲಿವೆ…

ನೇಮಕಾತಿಯ ಪ್ರಮುಖ ಮಾಹಿತಿ
  • ನೇಮಕಾತಿ ಸಂಸ್ಥೆ: ಕರ್ನಾಟಕ ಅಂಚೆ ಇಲಾಖೆ (Karnataka Postal Circle)
  • ಉದ್ಯೋಗದ ಪ್ರಕಾರ: ಕೇಂದ್ರ ಸರ್ಕಾರಿ ಉದ್ಯೋಗ
  • ಹುದ್ದೆಗಳ ಶ್ರೇಣಿ: ಗ್ರೂಪ್ ‘ಸಿ’ (Group-C)
  • ಉದ್ಯೋಗ ಸ್ಥಳ: ಕರ್ನಾಟಕದ ವಿವಿಧ ಜಿಲ್ಲೆಗಳ ಅಂಚೆ ಕಚೇರಿಗಳು
  • ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್ ಮೂಲಕ
ಹುದ್ದೆಗಳ ವಿವರ
  • ಅಂಚೆ ಸಹಾಯಕ (Circle Office & Regional Offices): 05
  • ಅಂಚೆ ಸಹಾಯಕ (Post Office Assistant): 114
  • ವಿಂಗಡನೆ ಸಹಾಯಕ (Sorting Assistant): 10
  • ಒಟ್ಟು ಹುದ್ದೆಗಳು: 129

ಈ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಪ್ರಕ್ರಿಯೆ (Direct Recruitment) ಮೂಲಕ ಆಯ್ಕೆ ಮಾಡಲಾಗುತ್ತದೆ. ಕೆಲವು ಹುದ್ದೆಗಳನ್ನು ವಿಭಾಗಗಳ ಅನುಸಾರವಾಗಿ ವಿಂಗಡಿಸಲಾಗಿದೆ.

ಕರ್ನಾಟಕ ಅಂಚೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
Karnataka Postal Recruitment 2025
ಅರ್ಹತಾ ಮಾನದಂಡಗಳು

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಉತ್ತೀರ್ಣರಾಗಿರಬೇಕು. ಅಂಚೆ ಇಲಾಖೆಯ ಕೆಲಸದ ನೈಪುಣ್ಯಕ್ಕೆ ತಕ್ಕಂತೆ ಕಂಪ್ಯೂಟರ್ ಜ್ಞಾನ ಹೊಂದಿದ್ದರೆ ಉತ್ತಮ.

ವಯೋಮಿತಿ: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ವಯೋಮಿತಿ ಒಳಗಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇದೆ.

PM-Kisan 20th Installment- ರೈತರ ಖಾತೆಗೆ ಈ ವಾರದಲ್ಲಿ ಪಿಎಂ ಕಿಸಾನ್ ₹2,000 ಹಣ ಜಮಾ | ಯಾರಿಗೆಲ್ಲ ಸಿಗಲಿದೆ ಹಣ? ಸಂಪೂರ್ಣ ಮಾಹಿತಿ ಇಲ್ಲಿದೆ…

ಮಾಸಿಕ ವೇತನ ಶ್ರೇಣಿ

ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮೇಲ್ಕಾಣಿಸಿದ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ₹25,500/- ರಿಂದ ₹81,100/- ಮಾಸಿಕ ವೇತನ ನಿಗದಿಪಡಿಸಲಾಗಿದೆ. ಇದರ ಜೊತೆಗೆ DA, HRA, TA ಸೇರಿದಂತೆ ಎಲ್ಲಾ ಬಗೆಯ ಸರ್ಕಾರಿ ಸವಲತ್ತುಗಳು ಲಭ್ಯವಿವೆ.

ಅರ್ಜಿ ಸಲ್ಲಿಕೆಯ ವಿವರಗಳು

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ವಿಧಾನವಿಲ್ಲ. ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಪೋಸ್ಟ್ ಮೂಲಕ ಕಳುಹಿಸಬೇಕು. ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು ಹೀಗಿವೆ:

  • ವಿದ್ಯಾರ್ಹತೆ ಪ್ರಮಾಣಪತ್ರಗಳ ಪ್ರತಿ
  • ಜನ್ಮ ಪ್ರಮಾಣ ಪತ್ರ/ SSLC ಮಾರ್ಕ್ಸ್ ಕಾರ್ಡ್
  • ಜಾತಿ ಪ್ರಮಾಣಪತ್ರ (ಅನುದಾನಿತ ವರ್ಗಕ್ಕೆ)
  • ವಾಸಸ್ಥಳದ ಪತ್ತೆ ದೃಢೀಕರಣ
  • ಗುರುತಿನ ಚೀಟಿ (ಆಧಾರ್/ಪ್ಯಾನ್) ಪ್ರತಿಗಳು
  • ರುಜುವಾತಾಗಿರುವ ಕಂಪ್ಯೂಟರ್ ಜ್ಞಾನ ಪ್ರಮಾಣಪತ್ರ (ಇದ್ದಲ್ಲಿ)
  • ಪಾಸ್‌ಪೋರ್ಟ್ ಗಾತ್ರದ ಎರಡು ಫೋಟೋ

Retired Teacher Pension Hike- ಶಿಕ್ಷಕರ ಪಿಂಚಣಿ ಹೆಚ್ಚಳ | ಯಾರಿಗೆ ಎಷ್ಟು ಪೆನ್ಷನ್ ಏರಿಕೆಯಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಅರ್ಜಿಯನ್ನು ಕಳುಹಿಸಬೇಕಾದ ವಿಳಾಸಗಳು

ಅರ್ಜಿ ನಮೂನೆ ಮತ್ತು ದಾಖಲೆಗಳನ್ನು ಕೆಳಗಿನ ವಿಳಾಸಗಳಿಗೆ ಯಾವುದೇ ಒಂದು ಕಚೇರಿಗೆ ಕಳುಹಿಸಬಹುದು:

1. ಪೋಸ್ಟ್ ಮಾಸ್ಟರ್ ಜನರಲ್,
ಉತ್ತರ ಕರ್ನಾಟಕ ಪ್ರದೇಶ,
ಧಾರವಾಡ – 580001

2. ಪೋಸ್ಟ್ ಮಾಸ್ಟರ್ ಜನರಲ್,
ದಕ್ಷಿಣ ಕರ್ನಾಟಕ ಪ್ರದೇಶ,
ಬೆಂಗಳೂರು – 560001

WhatsApp Group Join Now
Telegram Group Join Now

3. ಪೋಸ್ಟ್ ಮಾಸ್ಟರ್ ಜನರಲ್,
ಬೆಂಗಳೂರು ಪ್ರಧಾನ ಕಚೇರಿ ಪ್ರದೇಶ,
ಬೆಂಗಳೂರು – 560001

4. ಜಿಎಂ (ಪಿಎ&ಎಫ್),
ಬೆಂಗಳೂರು ಜಿಪಿಒ ಕಟ್ಟಡ,
ಬೆಂಗಳೂರು – 560001

5. ಅಧಿಕಾರಿ ಉಸ್ತುವಾರಿ,
ಪಿ & ಟಿ ಆಡಳಿತ ಘಟಕ, ಎಪಿಎಸ್ ವಿಂಗ್,
ಬ್ರಿಗೇಡಿಯರ್ ಆಫ್ ದಿ ಗಾರ್ಡ್ಸ್,
ಪಿನ್ 900746, ಸಿ/ಒ 56 ಎಪಿಒ,
ಬೆಂಗಳೂರು – 560001

DA Hike July 2025- ಸರ್ಕಾರಿ ನೌಕರರಿಗೆ ಜುಲೈನಿಂದ ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಎಷ್ಟು ಏರಿಕೆಯಾಗಲಿದೆ?

ಪ್ರಮುಖ ದಿನಾಂಕಗಳು
  • ಅರ್ಜಿ ಆಹ್ವಾನ ಪ್ರಾರಂಭ: 09 ಜೂನ್ 2025
  • ಅರ್ಜಿ ಸಲ್ಲಿಕೆ ಕೊನೇ ದಿನ: 02 ಜುಲೈ 2025
ಅಧಿಸೂಚನೆಯನ್ನು ಸಂಪೂರ್ಣ ಓದಿ

ಈ ನೇಮಕಾತಿ ಕರ್ನಾಟಕದ ಯುವ ಪದವೀಧರರಿಗೆ ಉತ್ತಮ ಸರ್ಕಾರಿ ಉದ್ಯೋಗದ ಅವಕಾಶವಾಗಿದೆ. ಇದು ಕೇಂದ್ರ ಸರ್ಕಾರದ ನೇಮಕಾತಿ ಆಗಿರುವುದರಿಂದ ಉತ್ತಮ ವೇತನದ ಜೊತೆಗೆ ನಿವೃತ್ತಿ ಭದ್ರತೆ, ಪಿಂಚಣಿ, ಆರೋಗ್ಯ ವಿಮೆ ಮತ್ತು ಇತರ ಸೌಲಭ್ಯಗಳು ಲಭ್ಯವಿವೆ.

ಅರ್ಹ ಅಭ್ಯರ್ಥಿಗಳು ತಡವಿಲ್ಲದೇ ತಮ್ಮ ಅರ್ಜಿಯನ್ನು ಅರ್ಜಿ ನಮೂನೆಯೊಂದಿಗೆ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಮಾಡಿಸಿಕೊಳ್ಳಬಹುದು. ಅರ್ಜಿ ನಮೂನೆ ಹಾಗೂ ವಿವರವಾದ ಅಧಿಸೂಚನೆ ಲೇಖನದ ಕೊನೆಯಲ್ಲಿದೆ. Download ಮಾಡಿಕೊಂಡು ಸಂಪೂರ್ಣವಾಗಿ ಓದಿದ ನಂತರವೇ ಅರ್ಜಿ ಸಲ್ಲಿಸಿ…

ಅಧಿಸೂಚನೆ ಮತ್ತು ಅರ್ಜಿ ನಮೂನೆ: Download

Railway Technician Recruitment 2025- SSLC, ITI ಅಭ್ಯರ್ಥಿಗಳಿಂದ ಹುಬ್ಬಳ್ಳಿ, ಬೆಂಗಳೂರು ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ


Spread the love
error: Content is protected !!