KCET Counselling Seat List Delay- ಕೆಇಎಗೆ ಇನ್ನೂ ಸಿಗದ ಸೀಟುಗಳ ಪಟ್ಟಿ | ಕೆಸಿಇಟಿ ಕೌನ್ಸೆಲಿಂಗ್ ಮುಂದೂಡಿಕೆ

Spread the love

WhatsApp Group Join Now
Telegram Group Join Now

KCET 2025 ಫಲಿತಾಂಶ ಪ್ರಕಟವಾಗಿ ತಿಂಗಳಾದರೂ ಇನ್ನೂ ಕೌನ್ಸೆಲಿಂಗ್ ಪ್ರಕ್ರಿಯೆ (KCET Counselling Seat List Delay) ಆರಂಭವಾಗುತ್ತಿಲ್ಲ. ಇದಕ್ಕೆ ಕಾರಣವೇನು? ಕೆಇಎ ಸ್ಪಷ್ಟನೆ ಏನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶ ಪ್ರಕಟವಾಗಿ ಒಂದು ತಿಂಗಳಾದರೂ, ಇನ್ನೂ ಪ್ರವೇಶಕ್ಕಾಗಿ ಅಗತ್ಯವಿರುವ ಸೀಟುಗಳ ಪಟ್ಟಿ ಅಂತಿಮಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳ ನಿರೀಕ್ಷೆಯೊಂದಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗುತ್ತಿದೆ.

ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು 2025ರ ಜೂನ್ 25ರಿಂದ ಮೊದಲನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದರು. ಆದರೆ, ಸೀಟುಗಳ ಪಟ್ಟಿ ಸಿಗುವುದು ವಿಳಂಬವಾಗುತ್ತಿರುವುದರಿಂದ ಕೌನ್ಸೆಲಿಂಗ್ ಕೂಡ ತಡವಾಗುವ ಸಂಭವವಿದೆ.

KCET Counselling Updates- ಕೆಸಿಇಟಿ ಕೌನ್ಸೆಲಿಂಗ್ ಪ್ರಾರಂಭ | ಹೊಸ ಅಪ್ಡೇಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ…

ವಿಳಂಬದ ಪ್ರಮುಖ ಕಾರಣಗಳು ಏನು?

2025ರ ಮೇ 24ರಂದು ಸಿಇಟಿ ಫಲಿತಾಂಶ ಪ್ರಕಟವಾದ ಬಳಿಕ, ಅಭ್ಯರ್ಥಿಗಳು ತೀವ್ರ ಉತ್ಸುಕತೆಯಿಂದ ಕೌನ್ಸೆಲಿಂಗ್ ಆರಂಭಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಈ ಪ್ರಕ್ರಿಯೆ ವಿಳಂಬವಾಗುತ್ತಿದ್ದು; ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರ ಮಾಹಿತಿ ಪ್ರಕಾರ ಕೌನ್ಸೆಲಿಂಗ್ ವಿಳಂಬಕ್ಕೆ ಪ್ರಮುಖ ಕಾರಣಗಳು ಹೀಗಿವೆ:

ವೈದ್ಯಕೀಯ ಸೀಟುಗಳ ಪಟ್ಟಿ ಲಭ್ಯವಿಲ್ಲ : ಜೂನ್ 14ರಂದು NEET-UG 2025 ಫಲಿತಾಂಶ ಪ್ರಕಟವಾದರೂ, ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ಆಯುಷ್ ಇಲಾಖೆ ಇಂದಿಗೂ ಸೀಟುಗಳ ಅಂತಿಮ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿಲ್ಲ.ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ರಾಜ್ಯದೊಳಗಿನ ಲಭ್ಯವಿರುವ ಸರ್ಕಾರಿ ಹಾಗೂ ಖಾಸಗಿ ಸೀಟುಗಳನ್ನು ಕಾನೂನುಬದ್ಧವಾಗಿ ಹಂಚಿಕೆ ಮಾಡಲು ಈ ಪಟ್ಟಿ ಅವಶ್ಯಕ.

ಇತರೆ ಕೋರ್ಸುಗಳ ಪಟ್ಟಿ ಪ್ರಕಟವಿಲ್ಲ: ಇಂಜಿನಿಯರಿಂಗ್‌ಗಿಂತ ಹೊರಗಿನ ಯೋಗ ಮತ್ತು ನ್ಯಾಚುರೋಪಥಿ, ಬಿ.ಎಸ್‌ಸಿ ಕೃಷಿ, ಬಿ.ಎಸ್‌ಸಿ ನರ್ಸಿಂಗ್ ಹಾಗೂ ಪಶುವೈದ್ಯಕೀಯದಂತಹ ಹಲವಾರು ಕೋರ್ಸುಗಳಿಗೆ. ಆದರೆ, ಇವುಗಳ ಸೀಟುಗಳ ಅಂತಿಮ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಈ ಪಟ್ಟಿಯಿಲ್ಲದೇ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲಾಗದು.

PM Kisan 20th Installment- ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ₹2,000 ಜಮಾ | ಹಣ ಜಮಾ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಇಂಜಿನಿಯರಿಂಗ್‌ಗೆ ಮಾತ್ರ ಕರಡು ಪಟ್ಟಿ ಬಿಡುಗಡೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂಜಿನಿಯರಿಂಗ್ ಕೋರ್ಸಿಗೆ ಲಭ್ಯವಿರುವ 1.35 ಲಕ್ಷ ಸೀಟುಗಳ ಕರಡು ಪಟ್ಟಿ ಹೊರಡಿಸಿದ್ದು, ಇದು ಅಂತಿಮವಾದುದಲ್ಲ. ಈ ಪಟ್ಟಿಯಲ್ಲಿ ಕೆಲವು ತಿದ್ದುಪಡಿ ಇರುವ ಕಾರಣ, ಅಭ್ಯರ್ಥಿಗಳು ಇನ್ನೂ ತಮ್ಮ ಆಯ್ಕೆಗಳನ್ನು ನಿರ್ಧರಿಸಲು ಸ್ಪಷ್ಟತೆ ಹೊಂದಿಲ್ಲ.

KCET 2025 ಫಲಿತಾಂಶ ಪ್ರಕಟವಾಗಿ ತಿಂಗಳಾದರೂ ಇನ್ನೂ ಕೌನ್ಸೆಲಿಂಗ್  ಆರಂಭವಾಗುತ್ತಿಲ್ಲ. ಕಾರಣವೇನು? ಕೆಇಎ ಸ್ಪಷ್ಟನೆ ಏನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
KCET Counselling Seat List Delay 2025
ಅರ್ಹ ಅಭ್ಯರ್ಥಿಗಳ ಸಂಖ್ಯೆ ಎಷ್ಟು?

ಈ ಸಲ ಸಿಇಟಿ ಪರೀಕ್ಷೆಗೆ 3.11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದು, ವಿವಿಧ ಕೋರ್ಸುಗಳಿಗೆ ಅರ್ಹರಾದವರ ವಿವರ ಈ ಕೆಳಗಿನಂತಿದೆ:

  • ಇಂಜಿನಿಯರಿಂಗ್: 2,62,195
  • ಯೋಗ ಮತ್ತು ನ್ಯಾಚುರೋಪಥಿ: 1,98,679
  • ಬಿ.ಎಸ್‌ಸಿ (ಕೃಷಿ): 2,14,588
  • ಪಶುವೈದ್ಯಕೀಯ: 2,18,282
  • ಬಿ-ಫಾರ್ಮ್: 2,66,256
  • ಫಾರ್ಮಾ-ಡಿ: 2,66,757
  • ಬಿ.ಎಸ್‌ಸಿ (ನರ್ಸಿಂಗ್): 2,08,171

ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಷ್ಠಿತ ವೃತ್ತಿಪರ ಕೋರ್ಸುಗಳಿಗೆ ಕಾಯುತ್ತಿದ್ದಾರೆ. ಸೀಟು ಹಂಚಿಕೆ ಪ್ರಕ್ರಿಯೆಯ ವಿಳಂಬವು ಅವರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ.

DA Hike July 2025- ಸರ್ಕಾರಿ ನೌಕರರಿಗೆ ಜುಲೈನಿಂದ ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಎಷ್ಟು ಏರಿಕೆಯಾಗಲಿದೆ?

ಕೌನ್ಸೆಲಿಂಗ್ ಒಂದು ವಾರ ತಡ – ಕೆಇಎ ಸ್ಪಷ್ಟನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಈ ಕುರಿತು ಮಾಹಿತಿ ನೀಡಿದ್ದು; ‘ವೈದ್ಯಕೀಯ ಕೋರ್ಸುಗಳಿಗೆ ಸೀಟುಗಳ ಪಟ್ಟಿ ಸಿಗುತ್ತಲೇ, ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಬಳಿಕ ಇಂಜಿನಿಯರಿಂಗ್ ಸೇರಿದಂತೆ ಇತರ ಕೋರ್ಸುಗಳ ಕೌನ್ಸೆಲಿಂಗ್ ಕೂಡ ತಕ್ಷಣ ಆರಂಭವಾಗುತ್ತದೆ. ಇದಕ್ಕೆ ಇನ್ನೂ ಕನಿಷ್ಠ ಒಂದು ವಾರ ಬೇಕಾಗುತ್ತದೆ’ ಎಂದಿದ್ದಾರೆ.

KCET 2025 ಕೌನ್ಸೆಲಿಂಗ್ ಪ್ರಕ್ರಿಯೆ ವಿಳಂಬದ ಹಿಂದೆ ಕೆಲ ತಾಂತ್ರಿಕ ಅಡೆತಡೆಗಳಿವೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಬಗ್ಗೆ ಸ್ಪಷ್ಟತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ತಾಳ್ಮೆಯಿಂದ ಕಾಯುವುದು ಉತ್ತಮ. ಆದಷ್ಟು ಶೀಘ್ರದಲ್ಲಿ ಸೀಟು ಪಟ್ಟಿಗಳು ಬಿಡುಗಡೆಯಾದ ಬಳಿಕ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ.

Railway Technician Recruitment 2025- SSLC, ITI ಅಭ್ಯರ್ಥಿಗಳಿಂದ ಹುಬ್ಬಳ್ಳಿ, ಬೆಂಗಳೂರು ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now


Spread the love
error: Content is protected !!