ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ… PM Surya Ghar Muft Bijli Yojana 2024

Spread the love

PM Surya Ghar Muft Bijli Yojana 2024 : ಕೇಂದ್ರ ಸರಕಾರ ಈಚೆಗೆ ಅನುಷ್ಠಾನಗೊಳಿಸಿರುವ ಮನೆ ಮನೆಗಳ ಮೇಲೆ ಉಚಿತ ಸೋಲಾರ್ ವಿದ್ಯುತ್ (Solar power) ಒದಗಿಸುವ ‘ಪಿಎಂ ಸೂರ್ಯ ಘರ್ ಯೋಜನೆ’ಗೆ (pradhan mantri surya ghar yojana) ರಾಜ್ಯದಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ. ದೇಶಾದ್ಯಂತ ಒಂದು ಕೋಟಿ ಮನೆಗಳ ಛಾವಣಿಗೆ ಸೋಲಾರ್ ಫಲಕ ಅಳವಡಿಸಿ ಉಚಿತ ವಿದ್ಯುತ್ ಒದಗಿಸುವ ಈ ಯೋಜನೆಯ ಪ್ರಚಾರಕ್ಕೆ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅಧಿಕೃತ ಚಾಲನೆ ನೀಡಿದ್ದಾರೆ.

WhatsApp Group Join Now
Telegram Group Join Now

ಕೇಂದ್ರ ಸರಕಾರದ ಈ ಯೋನೆಯಡಿ ರಾಜ್ಯದಲ್ಲಿ ಈ ತನಕ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡವರೆಷ್ಟು? ನೋಂದಣಿ ಮಾಡಿಕೊಳ್ಳುವ ವಿಧಾನ ಹೇಗೆ? ಯಾರೆಲ್ಲ ಈ ಯೋಜನೆಯಡಿ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಅರ್ಹರು? ಇತ್ಯಾದಿ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ…

ಸರಕಾರಿ ನೌಕರರ ಸಂಬಳ, ಭತ್ಯೆ ಏರಿಕೆಯ ಸಂಪೂರ್ಣ ಮಾಹಿತಿ | 7ನೇ ವೇತನ ಆಯೋಗದ ಶಿಫಾರಸುಗಳು 7th pay Commission Complete Information

ರಾಜ್ಯದಲ್ಲಿ 10,000 ಅರ್ಜಿ ಸಲ್ಲಿಕೆ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಪಿಎಂ ಸೂರ್ಯ ಘರ್ ಯೋಜನೆ ಕುರಿತು ವಿಶೇಷ ಪ್ರಚಾರಾಂದೋಲನ ಹಮ್ಮಿಕೊಂಡಿದೆ. ಇದಕ್ಕಾಗಿ ‘ಸೂರ್ಯ ರಥ ಯಾತ್ರೆ’ ಆಯೋಜಿಸಿದ್ದು; ಸದರಿ ಸೂರ್ಯ ರಥ ಯಾತ್ರೆಗೆ ರಾಜ್ಯ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಸಿರು ನಿಶಾನೆ ತೋರಿಸಿದ್ದಾರೆ.

ಪಿಎಂ ಸೂರ್ಯ ಘರ್ ಯೋಜನೆಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಈ ತನಕ ರಾಜ್ಯದಲ್ಲಿ ಟ್ಟಾರೆ 10,000 ಜನ ಪಿಎಂ ಸೂರ್ಯ ಘರ್ ಯೋಜನೆಯ ಉಚಿತ ಸೋಲಾರ್ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ತಿಳಿಸಿದ್ದಾರೆ.

PM Surya Ghar Muft Bijli Yojana 2024

PUC, 7th ಪಾಸಾದವರಿಗೆ ಗ್ರಾಮ ಪಂಚಾಯತಿ ಹುದ್ದೆಗಳ ನೇಮಕ | ನಿಮ್ಮೂರ ಪಂಚಾಯ್ತಿಯಲ್ಲೇ ಕೆಲಸ | ಖಾಲಿ ಹುದ್ದೆಗಳ ವಿವರ ಇಲ್ಲಿದೆ… Gram Panchayat Recruitment 2024

ಏನಿದು ಪಿಎಂ ಘರ್ ಯೋಜನೆ?

ಕಳೆದ 2024ರ ಫೆಬ್ರವರಿ 13ರಂದು ಜಾರಿಗೆ ಬಂದಿರುವ ಪಿಎಂ ಸೂರ್ಯ ಘರ್ ಯೋಜನೆಯು ಭಾರತದಲ್ಲಿ ಸೌರಶಕ್ತಿಯ ಬಳಕೆ ಹೆಚ್ಚಿಸುವುದರೊಂದಿಗೆ ಜನರ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. 2024-25ನೇ ಸಾಲಿನಲ್ಲಿ ಈ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ದೊರಕಲು 10,000 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.

ಸದರಿ ರೂಫ್ ಟಾಪ್ ಸೋಲಾರ್ ವ್ಯವಸ್ಥೆಯಿಂದ 25 ವರ್ಷ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. 5 ವರ್ಷಗಳ ನಿರ್ವಹಣಾ ಗ್ಯಾರಂಟಿಯನ್ನು (Maintenance guarantee) ಕೂಡ ನೀಡಲಾಗುತ್ತದೆ. ಪ್ರತಿ ತಿಂಗಳು 300 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸಿಗಲಿದೆ. ಇದರ ನಿರ್ವಹಣೆ ಅತ್ಯಂತ ಸುಲಭವಾಗಿದ್ದು; ಛಾವಣಿ ಸ್ಥಳ ಸದ್ಭಳಕೆಯಾಗಲಿದೆ.

1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕಕ್ಕೆ 30 ಸಾವಿರ ರೂಪಾಯಿ, 2 ಕಿ.ವ್ಯಾ.ಗೆ 60 ಸಾವಿರ ರೂಪಾಯಿ ಮತ್ತು 3 ಕಿ. ವ್ಯಾ.ಗೆ 78 ಸಾವಿರ ಸಬ್ಸಿಡಿ ದೊರೆಯಲಿದೆ. ಒಂದು ವೇಳೆ ಅಗತ್ಯತೆಗಿಂತ ಹೆಚ್ಚುವರಿ ವಿದ್ಯುತ್ ತಯಾರಿಸಿದರೆ ಅದನ್ನು ಮಾರಾಟ ಮಾಡಿ ಆದಾಯ ಕೂಡ ಗಳಿಸಬಹುದಾಗಿದೆ.

ಕುರಿ-ಮೇಕೆ ಸಾಕಾಣಿಕೆಗೆ ಕುರಿ ನಿಗಮದಿಂದ ಸಿಗುವ ಸಬ್ಸಿಡಿ ಸೌಲಭ್ಯಗಳು Karnataka Sheep and Goat Board facilities

ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?
  • ಸ್ವಂತ ಮನೆ ಹೊಂದಿರಬೇಕು.
  • ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿ ಮೇಲಿರಬಾರದು.
  • 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆಯಾಗಿರಬೇಕು.
  • ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿರಬಾರದು.
  • ಬ್ಯಾಂಕ್ ಖಾತೆಯು ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು.
ಅರ್ಜಿ ಸಲ್ಲಿಸಲು ಏನೆಲ್ಲ ಬೇಕು?
  • ಮೊಬೈಲ್ ನಂಬರ್
  • ಅರ್ಜಿದಾರನ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ವೋಟರ್ ಐಡಿ
  • ಪ್ಯಾನ್ ಕಾರ್ಡ್
  • ಕಳೆದ ಆರು ತಿಂಗಳ ವಿದ್ಯುತ್ ಬಿಲ್
  • ಅರ್ಜಿದಾರರ ಭಾವಚಿತ್ರ
  • ಬ್ಯಾಂಕ್ ಪಾಸ್ ಬುಕ್
  • ಆದಾಯ ಪ್ರಮಾಣ ಪತ್ರ ಹಾಗೂ ವಿಳಾಸ ದೃಢೀಕರಣ ಪತ್ರ
  • ಮನೆಗೆ ಸಂಬ೦ಧಿಸಿದ ದಾಖಲೆಗಳು
PM Surya Ghar Muft Bijli Yojana 2024

ಸ್ವಂತ ಮನೆಗಾಗಿ ಗೃಹ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ Types of Home Loan

ಅರ್ಜಿ ಹೇಗೆ ಸಲ್ಲಿಸಬೇಕು?

ನಾವು ಕೆಳಗೆ ನೀಡಿರುವ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  • PM – SURYA GHAR: MUFT BIJLI YOJANA National Portalನ ಹೋಂ ಪೇಜ್‌ನಲ್ಲಿ ಕಾಣುವ  Apply for rooftop ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಕೇಳಲಾಗುವ ಅರ್ಜಿದಾರನಿಗೆ ಸಂಬ೦ಧಿಸಿದ ಮಾಹಿತಿಯನ್ನು ನಮೂದಿಸಿ, ನೆಕ್ಸ್ಟ್ ಎಂಬ ಆಯ್ಕೆಯನ್ನು ಒತ್ತಿದರೆ ರೆಜಿಸ್ಟ್ರೇಷನ್ ಪೇಜ್ ತೆಗೆದುಕೊಳ್ಳುತ್ತದೆ.
  • ರಿಜಿಸ್ಟ್ರೇಷನ್ ಪೇಜ್’ನಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಅರ್ಜಿ ಸಲ್ಲಿಕೆಯ ಬಳಿಕ ವಿದ್ಯುತ್ ಸರಬರಾಜು ಕಂಪನಿಯಿ೦ದ ಅನುಮೋದನೆ ಬಂದ ನಂತರ ಗ್ರಾಹಕರಿಂದ ಪ್ಲಾಂಟ್ ಪಡೆದು ಅಳವಡಿಸಿಕೊಳ್ಳಬೇಕು.
  • ಪ್ಲಾಂಟ್ ಅಳವಡಿಸಿಕೊಂಡ ನಂತರ ಸಂಬ೦ಧಿಸಿದ ಮಾಹಿತಿಯನ್ನು ಸಬ್ಮಿಟ್ ಮಾಡಿ ನೆಟ್ ಮೀಟರ್’ಗೆ ಅರ್ಜಿ ಸಲ್ಲಿಸಬೇಕು. ಆನಂತರ ವಿದ್ಯುತ್ ಸರಬರಾಜು ಕಂಪನಿಯವರು ತಪಾಸಣೆ ನಡೆಸಿ ಪ್ರಮಾಣ ಪತ್ರ ನೀಡುತ್ತಾರೆ.
  • ಪ್ರಮಾಣ ಪತ್ರ ದೊರೆತ ನಂತರ ಬ್ಯಾಂಕ್ ಖಾತೆ ವಿವರ ಹಾಗೂ ರದ್ದಾದ ಚೆಕ್ ಅನ್ನು ವೆಬ್‌ಸೈಟ್ ಮುಖಾಂತರ ಸಬ್ಮಿಟ್ ಮಾಡಿದರೆ, ಅರ್ಜಿದಾರನ ಖಾತೆಗೆ 30 ದಿನಗಳ ಒಳಗಾಗಿ ಸಬ್ಸಿಡಿ ಹಣ ಜಮೆಯಾಗುತ್ತದೆ.

ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್: Apply Now

PUC, SSLC ಪಾಸಾದವರಿಗೆ ಸರ್ಕಾರಿ LKG-UKG ಶಾಲೆ ಶಿಕ್ಷಕರು ಮತ್ತು ಆಯಾ ಹುದ್ದೆಗಳ ನೇಮಕಾತಿ | ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿ ಇಲ್ಲಿದೆ… Govt LKG UKG Teachers Recruitment 2024

Join WhatsApp Channel

Spread the love
WhatsApp Group Join Now
Telegram Group Join Now

9 thoughts on “ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ… PM Surya Ghar Muft Bijli Yojana 2024”

  1. Their website is not working properly.In application edit option there’s is not proper action from their side.Even if we raise a ticket there’s no response.Poor service

    Reply

Leave a Comment

error: Content is protected !!