Labor Board Facilities karbwwb karnataka : ಈ ಕಾರ್ಮಿಕರಿಗೆ 19 ಬಗೆಯ ಸಹಾಯಧನ ಸೌಲಭ್ಯವನ್ನು ಸರಕಾರ ನೀಡುತ್ತದೆ. ಈ ಸಹಾಯಧನ ಪಡೆಯಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು? ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು? ಇಲ್ಲಿದೆ ಮಾಹಿತಿ…
ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ (Karnataka Building Construction Workers) ಸುಧಾರಣೆಗಾಗಿ ಸರಕಾರ ಹಲವು ಸೌಲಭ್ಯಗಳನ್ನು ಅನುಷ್ಠಾನಗೊಳಿಸಿದೆ. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸುವ ಮೂಲಕ ಕಾರ್ಮಿಕರು ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಏನೆಲ್ಲ ಸೌಲಭ್ಯಗಳಿವೆ?
ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಮದುವೆ, ಹೆರಿಗೆ, ವೈದ್ಯಕೀಯ ಸಹಾಯಧನ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಅಂತ್ಯ ಸಂಸ್ಕಾರಕ್ಕೆ ಸಹಾಯಧನ ಸೇರಿ ಒಟ್ಟು 19 ರೀತಿಯ ಸೌಲಭ್ಯಗಳು ಸಿಗುತ್ತದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ಈ ಸೌಲಭ್ಯಗಳನ್ನು ಪಡೆಯಲು ಸುಮಾರು 51 ಬಗೆಯ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಅರ್ಹರಾಗಿರುತ್ತಾರೆ.
ವರ್ಷದ ಹನ್ನೆರಡು ತಿಂಗಳ ಅವಧಿಯಲ್ಲಿ ಕಟ್ಟಡ ಅಥವಾ ಇತರ ನಿರ್ಮಾಣ ಕೆಲಸಗಳಲ್ಲಿ ಕನಿಷ್ಠ 90 ದಿನ ತೊಡಗಿಸಿಕೊಂಡಿರುವ 18ರಿಂದ 60 ವಯೋಮಿತಿಯವರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ನೋಂದಣಿಗೆ ನಮೂನೆ 5-1ರಲ್ಲಿ ಅರ್ಜಿಯಲ್ಲಿ ಉದ್ಯೋಗ ದೃಢೀಕರಣ ಪತ್ರ ಅಥವಾ ಸ್ವಯಂ ದೃಢೀಕರಣ ಪತ್ರ, ಭಾವಚಿತ್ರ, ವಯಸ್ಸಿನ ದಾಖಲೆ, ತನ್ನ ಹಾಗೂ ಅವಲಂಬಿತ ಕುಟುಂಬದವರ ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿ ಸಲ್ಲಿಸಿದರೆ ನೋಂದಣಿಯಾಗಲಿದೆ. ಬಳಿಕ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಿಸಿಕೊಳ್ಳಬೇಕು.

ಮದುವೆ ಸಹಾಯಧನ ಸೌಲಭ್ಯ
ಕಾರ್ಮಿಕರ ಮದುವೆ ಅಥವಾ ಅವರ ಎರಡು ಮಕ್ಕಳ ಮದುವೆಗೆ ಕಟ್ಟಡ ಕಾರ್ಮಿಕ ಮಂಡಳಿಯು 60,000 ರೂಪಾಯಿ ಧನಸಹಾಯ ನೀಡುತ್ತದೆ. ಮಂಡಳಿಯ ವತಿಯಿಂದ ನೋಂದಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರು ತಮಗೂ ಹಾಗೂ ತಮ್ಮ ಮಕ್ಕಳ ಮದುವೆಗಾಗಿ ಸಹಾಯಧನ ಪಡೆಯಬಹುದು.
Government Schemes for Women : ಮಹಿಳೆಯರಿಗಾಗಿ ಇರುವ ವಿಶೇಷ ಸರಕಾರಿ ಯೋಜನೆಗಳು
ಮದುವೆ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಹೇಗೆ?
ಮಂಡಳಿಯ ಸೌಲಭ್ಯಗಳಲ್ಲಿ ಕಾರ್ಮಿಕರು ಅಥವಾ ಅವರ ಇಬ್ಬರೂ ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡುವ ಸಲುವಾಗಿ ಸಹಾಯಧನವನ್ನು ಘೋಷಿಸಿದೆ. ಈ ಸಹಾಯಧನವನ್ನು ಸರಕಾರದಿಂದ ಪಡೆಯಲು ಕಾರ್ಮಿಕರು ಈ ಕೆಳಗಿನ ಅರ್ಹತೆ ಮತ್ತು ದಾಖಲೆಗಳನ್ನು ಹೊಂದಿರಬೇಕು.
- ನೋಂದಣಿ ದಿನಾಂಕದಿ೦ದ ಮದುವೆ ದಿನಾಂಕದ ವರೆಗೆ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿಸರಬೇಕು.
- ಒಂದು ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯ ಪಡೆಯಲು ಅವಕಾಶವಿದೆ.
- ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
- ಮದುವೆಯ ದಿನಾಂಕದಿ೦ದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕಾರ್ಮಿಕ ಇಲಾಖೆ ಕಚೇರಿ ವಿಳಾಸ ಮತ್ತು ಸಂಪರ್ಕ ಸಂಖ್ಯೆಗೆ ಇಲ್ಲಿ ಕ್ಲಿಕ್ ಮಾಡಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.