ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದು; ಈ ಸಮಯದಲ್ಲಿ ‘ಗೃಹಲಕ್ಷ್ಮಿ ಯೋಜನೆ’ಯ (Gruhalakshmi Scheme) ಬಾಕಿ ಮೂರು ಕಂತುಗಳ ಹಣ (Pending Payment) ಜಮಾ ಬಗ್ಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ…
‘ಗೃಹಲಕ್ಷ್ಮಿ ಯೋಜನೆ’ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಪ್ರತಿ ತಿಂಗಳು ರೂ. 2,000 ನಗದು ಸಹಾಯವನ್ನು ನೀಡಲಾಗುತ್ತಿದೆ. ಆದರೆ, ಕಳೆದ ಮೂರು ತಿಂಗಳಿನಿಂದ ಈ ಯೋಜನೆಯ ಹಣ ಬಿಡುಗಡೆ ವಿಳಂಬವಾಗಿದ್ದು, ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ.
ಇದೀಗ ರಾಜ್ಯ ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯಂತೆ ಬಾಕಿ ಉಳಿದ ಹಣವನ್ನು ಇದೇ ತಿಂಗಳಲ್ಲಿ (ಮೇ-2025) ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಬಾಕಿ ಕಂತುಗಳು ಒಂದೇ ತಿಂಗಳಲ್ಲಿ ಜಮಾ
ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದ್ದು, ಇದರ ಅಡಿಯಲ್ಲಿ ರಾಜ್ಯದ ಪಡಿತರ ಚೀಟಿ ಹೊಂದಿರುವ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು ನಗದು ಸಹಾಯ ನೀಡಲಾಗುತ್ತದೆ.
ಈ ಯೋಜನೆಯನ್ನು 2023ರ ಆಗಸ್ಟ್ನಲ್ಲಿ ಆರಂಭಿಸಲಾಗಿದ್ದು, ಇದೇ 2025ರ ಮೇ ತಿಂಗಳಿಗೆ ಈ ಯೋಜನೆ ಎರಡು ವರ್ಷವನ್ನು ಪೂರೈಸಲಿದೆ. ಈ ಹಿನ್ನಲೆಯಲ್ಲಿ ಬಾಕಿ ಉಳಿದಿರುವ ಎಲ್ಲಾ ಕಂತುಗಳ ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿ.

ಯಾಕೆ ಹಣ ಬಾಕಿ ಉಳಿದಿತ್ತು?
2025ರ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಈ ಯೋಜನೆಯಡಿಯಲ್ಲಿ ಹಣ ಬಿಡುಗಡೆಯಾಗಿಲ್ಲ. ಇದರ ಪ್ರಮುಖ ಕಾರಣಗಳು ಹೀಗಿವೆ:
- ರಾಜ್ಯದ ಆರ್ಥಿಕ ಬಿಕ್ಕಟ್ಟು ಮತ್ತು ಅನುದಾನದ ಕೊರತೆ
- ತಾಂತ್ರಿಕ ದೋಷಗಳು ಮತ್ತು ಡಾಟಾ ಪರಿಶೀಲನೆ ವಿಳಂಬ
- ಬ್ಯಾಂಕ್ ಖಾತೆಗಳ ಲಿಂಕ್ ಸಮಸ್ಯೆ ಅಥವಾ ಆಧಾರ್-ಡಿಬಿಟಿ ಮ್ಯಾಚಿಂಗ್ ದೋಷ
Inactive Bank Account Close- ಅನಗತ್ಯ ಬ್ಯಾಂಕ್ ಖಾತೆ ಕ್ಲೋಸ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಬಾಕಿ ಹಣ ಯಾವಾಗ ಜಮಾ ಆಗಲಿದೆ?
2025ರ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಈ ಬಾಕಿ ಉಳಿದಿರುವ ಮೂರು ತಿಂಗಳ (ಜನವರಿ, ಫೆಬ್ರವರಿ, ಮಾರ್ಚ್) ಹಣವನ್ನು ಒಟ್ಟು ರೂ. 6,000 ರೂಪಾಯಿಗಳನ್ನು ಹಂತ ಹಂತವಾಗಿ ಜಮಾ ಮಾಡಲು ತೀರ್ಮಾನಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಈ ಕುರಿತಂತೆ ಅಧಿಕೃತವಾಗಿ ಪ್ರಕಟಣೆ ನೀಡಿದ್ದಾರೆ.
ಸರ್ಕಾರದ ಮಾಹಿತಿ ಪ್ರಕಾರ, ಮೇ – 2025 ತಿಂಗಳ ಕೊನೆಯ ವಾರದೊಳಗೆ ಹಣವನ್ನು ಹಂತ ಹಂತವಾಗಿ ಜಮಾ ಮಾಡುವ ಉದ್ದೇಶವಿದೆ. ಪ್ರತಿದಿನ ನೂರಾರು ಫಲಾನುಭವಿಗಳ ಖಾತೆಗಳಿಗೆ ಡಿಬಿಟಿ (DBT) ಮೂಲಕ ರೂ. 2,000/- ರೂ.ಗಳಂತೆ ಮೂರು ಕಂತುಗಳಲ್ಲಿ ಹಣ ಜಮಾ ಆಗಲಿದೆ.
ಈಗಾಗಲೇ ಈ ಯೋಜನೆಯಡಿ ನಿಮಗೆ ಹಣ ಜಮೆಯಾಗಿದ್ದರೆ, ನಿಮ್ಮ ಖಾತೆಗೆ ಬಾಕಿ ಉಳಿದಿರುವ ರೂ. 6,000/- ಈ ತಿಂಗಳ ಕೊನೆಯೊಳಗೆ ಜಮಾ ಆಗುವ ಸಾಧ್ಯತೆ ಇದೆ. ನಿಮ್ಮ ಪಾವತಿ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಯಾವುದೇ ಸಮಸ್ಯೆಯಿದ್ದರೆ ಹತ್ತಿರದ ಗ್ರಾಮ ಒನ್ ಅಥವಾ ತಾಲೂಕು ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ.
ಹಣ ಜಮಾ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು?
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣವನ್ನು ಪಡೆಯುತ್ತಿರುವ ಫಲಾನುಭವಿಗಳು ಮೊದಲು ಈ ಲಿಂಕ್ ಮೂಲಕ Google Play Storeಗೆ ಹೋಗಿ ‘DBT Karnataka’ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಮೊಬೈಲ್ ನಂಬರ್’ಗೆ ಬರುವ ಓಟಿಪಿ ಅನ್ನು ಹಾಕಿ ಬಳಕೆದಾರ ಐಡಿ ಮತ್ತು ಪಾಸ್’ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗಿನ್ ಆಗಿ ‘ಪಾವತಿ ಸ್ಥಿತಿ’ ಅಥವಾ ‘Payment Status’ ಬಟನ್ ಮೇಲೆ ಕ್ಲಿಕ್ ಮಾಡಿ ಪ್ರತಿ ತಿಂಗಳು ಜಮಾ ಆಗಿರುವ ಹಣದ ಸಂಪೂರ್ಣ ವಿವರವನ್ನು ಪಡೆಯಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.