CBSE 10th 12th Result 2025- ಸಿಬಿಎಸ್‌ಇ SSLC-PUC ಫಲಿತಾಂಶ ಈ ದಿನ ಪ್ರಕಟ | ಮಹತ್ವದ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

ಸಿಬಿಎಸ್‌ಇ (CBSE) 10ನೇ ಮತ್ತು 12ನೇ ತರಗತಿಯ ಫಲಿತಾಂಶ (CBSE 10th 12th Result 2025) ಪ್ರಕಟಣೆ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದ್ದು; ಈ ಕುರಿತ ಹೊಸ ಅಪ್ಡೇಟ್ ಇಲ್ಲಿದೆ…

2025ನೇ ಸಾಲಿನ ಸಿಬಿಎಸ್‌ಇ (CBSE – Central Board of Secondary Education) ಬೋರ್ಡ್ ಪರೀಕ್ಷೆಗಳ ಫಲಿತಾಂಶಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಈ ಸಲ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ಕಳೆದ ವರ್ಷವನ್ನು ಮೀರಿ ದಾಖಲೆ ಮೂಡಿಸಿದ್ದಾರೆ.

ಇದೀಗ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ ಫಲಿತಾಂಶದ ಕುರಿತು ಮಹತ್ವದ ಮಾಹಿತಿಗಳು ಲಭ್ಯವಾಗುತ್ತಿದ್ದು, ಇದೇ ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ. 10ನೇ ಮತ್ತು 12ನೇ ತರಗತಿ ಫಲಿತಾಂಶಗಳು ಒಂದೇ ದಿನ ಬಿಡುಗಡೆಯಾಗುವ ಸಾಧ್ಯತೆಯಿದೆ.

SSLC 2-3 Exam Dates- ಎಸ್‌ಎಸ್‌ಎಲ್‌ಸಿ ಫೇಲಾದವರಿಗೆ ಮತ್ತೆರಡು ಅವಕಾಶ | ಮರುಪರೀಕ್ಷೆ ವೇಳಾಪಟ್ಟಿ ಇಲ್ಲಿದೆ…

ಸಿಬಿಎಸ್‌ಇ ಪರೀಕ್ಷೆ ಕುರಿತ ಮಾಹಿತಿ

2025ನೇ ಸಾಲಿನಲ್ಲಿ ಕಳೆದ ಫೆಬ್ರವರಿ 15 ರಿಂದ ಮಾರ್ಚ್ 1ರ ವರೆಗೆ 10ನೇ ತರಗತಿ ಪರೀಕ್ಷೆಗಳು ನಡೆದವು. ಅದೇರೀತಿ 12ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15ರಿಂದ ಏಪ್ರಿಲ್ 4ರ ವರೆಗೆ ನಡೆದಿದ್ದವು. 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 10ನೇ ತರಗತಿಗೆ ಸುಮಾರು 24.12 ಲಕ್ಷ ಹಾಗೂ 12ನೇ ತರಗತಿಗೆ 17.88 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಕಳೆದ ವರ್ಷದ 12ನೇ ತರಗತಿಯ ಒಟ್ಟಾರೆ ಉತ್ತೀರ್ಣ ಶೇಕಡಾವಾರು 87.98ರಷ್ಟಿತ್ತು. ಇದು ಹಿಂದಿನ ವರ್ಷಕ್ಕಿಂತ (2023) ಉತ್ತಮವಾಗಿತ್ತು. ಇನ್ನು 10ನೇ ತರಗತಿಯ ಉತ್ತೀರ್ಣ ಶೇಕಡಾವಾರು 93.60%ಕ್ಕೆ ಏರಿತ್ತು. ಇದು ಹಿಂದಿನ ವರ್ಷಕ್ಕಿಂತ 0.48% ಸುಧಾರಣೆಯಾಗಿದೆ.

ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶ ಪ್ರಕಟಣೆ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದ್ದು; ಈ ಕುರಿತ ಹೊಸ ಅಪ್ಡೇಟ್ ಇಲ್ಲಿದೆ...
CBSE 10th & 12th Result 2025
ಪ್ರತೀ ವರ್ಷ ಮೇ ತಿಂಗಳಲ್ಲಿ ಫಲಿತಾಂಶ

ಸಿಬಿಎಸ್‌ಇ ಫಲಿತಾಂಶಗಳನ್ನು ಸಾಮಾನ್ಯವಾಗಿ ಮೇ ಎರಡನೇ ವಾರದಲ್ಲಿ ಪ್ರಕಟಿಸಲಾಗುತ್ತದೆ. ಆ ಪ್ರಕಾರ ಕಳೆದ ವರ್ಷದ ಮೇ 13, 2024ರಂದು ಫಲಿತಾಂಸ ಪ್ರಕಟವಾಗಿತ್ತು. ಆದರೆ, ಈ ವರ್ಷ ಇನ್ನೂ ಸಿಬಿಎಸ್‌ಇ ಮಂಡಳಿಯು ಫಲಿತಾಂಶ ದಿನಾಂಕ ಮತ್ತು ಸಮಯದ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಒಮ್ಮೆ ಘೋಷಿಸಿದ ನಂತರ, ವಿದ್ಯಾರ್ಥಿಗಳು ತಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ, ಪ್ರವೇಶ ಕಾರ್ಡ್ ಐಡಿ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ತಮ್ಮ ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಯ ತಾತ್ಕಾಲಿಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

NEET-UG Exam 2025- ಮೇ 4ರಂದು ರಾಜ್ಯದಾದ್ಯಂತ ವೈದ್ಯಕೀಯ ಪ್ರವೇಶ ಪರೀಕ್ಷೆ | ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಮಾಹಿತಿ ಇಲ್ಲಿದೆ…

ಈ ವರ್ಷದ ಸಿಬಿಎಸ್‌ಇ ಫಲಿತಾಂಶ ಯಾವಾಗ?

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) ಸಾಮಾನ್ಯವಾಗಿ, 10ನೇ ತರಗತಿ ಫಲಿತಾಂಶ ಹಾಗೂ 12ನೇ ತರಗತಿಯ ಫಲಿತಾಂಶಗಳನ್ನು ಒಂದೇ ದಿನ ಪ್ರಕಟಿಸುತ್ತದೆ. ಈ ವರ್ಷ ಕೂಡ ಮಂಡಳಿಯು ಮತ್ತೆ ಅದೇ ತಂತ್ರವನ್ನು ಅನುಸರಿಸುತ್ತದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಮಂಡಳಿ (CBSE) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಇದೇ ಮೇ 5, 2025ರಂದು ಪ್ರಕಟಿಸುವ ಸಾಧ್ಯತೆಯಿದೆ. ಅಧಿಕೃತವಾದ ಫಲಿತಾಂಶದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬುದು.

ಹಂತ 1: ಮೊದಲಿಗೆ ಅಧಿಕೃತ CBSE ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.ಮುಖಪುಟದಲ್ಲಿ ‘CBSE 10ನೇ ಫಲಿತಾಂಶ 2025’ ಅಥವಾ ‘CBSE 12ನೇ ಫಲಿತಾಂಶ 2025’ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 2: ನಿಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ, ಪರೀಕ್ಷಾ ಕೇಂದ್ರ ಸಂಖ್ಯೆ ಮತ್ತು ಪ್ರವೇಶ ಕಾರ್ಡ್ ಐಡಿಯನ್ನು ನಮೂದಿಸಿ. ಆಗ ನಿಮ್ಮ CBSE ಫಲಿತಾಂವು ಪರದೆಯ ಮೇಲೆ ತೆರೆದುಕೊಳ್ಳುತ್ತದೆ.

WhatsApp Group Join Now
Telegram Group Join Now

ಅಂತ 3: ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಬಳಕೆಗಾಗಿ ಪ್ರಿಂಟ್‌ಔಟ್ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ.

Free Cycle Scheme- ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ: ಯಾರಿಗೆಲ್ಲ ಸಿಗಲಿದೆ ಈ ಅವಕಾಶ? | ಸಂಪೂರ್ಣ ಮಾಹಿತಿ ಇಲ್ಲಿದೆ…

ಎಸ್‌ಎಂಎಸ್ ಮೂಲಕ ಪರೀಶೀಲನೆ ಹೇಗೆ?

ಅಧಿಕೃತ ವೆಬ್‌ಸೈಟ್ ಸರಿಯಾಗಿ ಲೋಡ್ ಆಗದಿದ್ದರೆ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳದಿದ್ದರೆ, ಅಭ್ಯರ್ಥಿಗಳು ತಮ್ಮ ಮೊಬೈಲ್ ಫೋನ್‌ನಲ್ಲಿ ಎಸ್‌ಎಂಎಸ್ (SMS) ಮೂಲಕ ಸಹ ಫಲಿತಾಂಶವನ್ನು ನೋಡಬಹುದು.

ಅದಕ್ಕಾಗಿ ಎಸ್‌ಎಂಎಸ್ ಅಪ್ಲಿಕೇಶನ್’ನಲ್ಲಿ CBSE12 <Roll Number> <Date of Birth> <School Number> <Centre Number> ಸಂದೇಶವನ್ನು ಟೈಪ್ ಮಾಡಿ.

ನಂತರ 7738299899ಗೆ ಎಸ್‌ಎಂಎಸ್ ಕಳುಹಿಸಿದರೆ, ನಿಮ್ಮ ಫಲಿತಾಂಶವನ್ನು ಪ್ರಕ್ರಿಯೆಗೊಳಿಸಿದ ನಂತರ ನಿಮ್ಮ ಫೋನ್‌ನಲ್ಲಿ ಎಸ್‌ಎಂಎಸ್ ಮೂಲಕ ಫಲಿತಾಂಶದ ಮಾಹಿತಿ ಪಡೆಯುತ್ತೀರಿ.

ಫಲಿತಾಂಶ ವೀಕ್ಷಣೆಯ ಅಧಿಕೃತ ವೆಬ್‌ಸೈಟ್‌ಗಳು
  1. cbse.gov.in
  2. cbseresults.nic.in
  3. digilocker.gov.in

SSLC Topper Laptop Scheme- ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ | ಈ ಯೋಜನೆಯ ಲಾಭ ಯಾರಿಗೆಲ್ಲ ಸಿಗಲಿದೆ?


Spread the love
error: Content is protected !!