Sleep Health Benefits- ಈ ರೀತಿ ನಿದ್ರೆ ಮಾಡಿದರೆ ಅರ್ಧ ಕಾಯಿಲೆಗಳೇ ವಾಸಿ | ನಿದ್ರೆಯಲ್ಲಿದೆ ಆರೋಗ್ಯದ ರಹಸ್ಯ

Spread the love

WhatsApp Group Join Now
Telegram Group Join Now

ನಿದ್ರೆ (Sleep) ಎಷ್ಟು ಬೇಕು? ಎಷ್ಟು ಸಾಕು? ಮನುಷ್ಯನ ನಿದ್ರೆಯ ಅವಶ್ಯಕತೆ ಎಷ್ಟು? ಸರಿಯಾಗಿ ನಿದ್ರೆ ಮಾಡುವುದರಿಂದ (Sleep Health Benefits) ಆಗುವ ಲಾಭಗಳೇನು? ಅತೀ ನಿದ್ರೆಯಿಂದ ಏನಾಗುತ್ತದೆ? ನಿದ್ರಾಹೀನ ಸಮಸ್ಯೆಗೆ (Insomnia problem) ಏನು ಮಾಡಬೇಕು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

ವಿಜ್ಞಾನ ಎಷ್ಟೇ ಮುಂದುವರಿದರೂ ಇಂದಿಗೂ ನಿದ್ರೆಯ ಬಗ್ಗೆ ನಮ್ಮ ಅರಿವು ಅತ್ಯಲ್ಪ. `ನಿದ್ದೆ ಬರುವುದರಿಂದ ನಿದ್ದೆ ಮಾಡುತ್ತೇವೆ’ ಎಂದು ಕೊನೆಗೆ ಹೇಳುವವರೇ ಹೆಚ್ಚು. ಆದರೆ ನಿದ್ದೆಯು ಪ್ರತಿ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ನಿದ್ದೆ ಸಂಪೂರ್ಣವಾಗಿದ್ದರೆ ಮಾತ್ರ ನಾವು ಖುಷಿಯಾಗಿರಲು ಸಾಧ್ಯ.

ನಿದ್ರೆ ಎಂದರೇ…

ನಿದ್ದೆ ಎಂದರೇ ಮನಸ್ಸು ಮತ್ತು ದೇಹವು ದಿನದ ಕಾರ್ಯಗಳಿಂದ ಅಂದರೆ ದೈಹಿಕ ಚಲನವಲನ, ಯೋಚನೆ ಮುಂತಾದವುಗಳಿAದ ನಿವೃತ್ತಿ ಪಡೆದು, ಮುಂದಿನ ದಿನದ ಕಾರ್ಯಗಳಿಗೆ ತನ್ನನ್ನು ರೆಡಿ ಮಾಡಿಕೊಳ್ಳುವ ಕ್ರಿಯೆ. ಈ ಕ್ರಿಯೆ ನಿಯಮಿತವಾಗಿ ನಡೆಯದಿದ್ದರೆ ಮನುಷ್ಯ ಮನುಷ್ಯನಾಗಿಯೇ ಇರುವುದಿಲ್ಲ.

ಚಿಂತೆ, ದುಗುಡ, ಒತ್ತಡದಿಂದಾಗಿ ಕೆಲವರು ನಿದ್ರಾಹೀನತೆಯ ಸಮಸ್ಯೆ ಅನುಭವಿಸಿದರೆ, ಮತ್ತೆ ಕೆಲವರಿಗೆ ಕೆಲಸದ ಬ್ಯೂಸಿ, ಅಧಿಕ ಚಟುವಟಿಕೆಯಿಂದಾಗಿ ಸರಿಯಾಗಿ ನಿದ್ರೆ ಮಾಡಲಾಗದ ದುಃಸ್ಥಿತಿ. ಹೀಗಾಗಿ ಇಂದು ನಿದ್ರಾತಜ್ಞರು, ಚಿಕಿತ್ಸಕರಿಗೆ ಎಲ್ಲಿಲ್ಲದ ಬೇಡಿಕೆ.

ನಿದ್ದೆ ಮಾಡಿಸಲೆಂದೇ ಸಾವಿರಾರು ಆ್ಯಪ್‌ಗಳು ತಲೆ ಎತ್ತಿಕೊಂಡಿವೆ. ನಿದ್ರೆ ಅಳೆಯಲು ಕೈಗಡಿಯಾರ, ದಿಂಬಿನಡಿ ಇಡುವ ತಾಂತ್ರಿಕ ಸಾಧನಗಳು ಹತ್ತು ಹಲವು. ಇದು ಬರಿಯ ಊಹಾಪೋಹ ಇರಬಹುದೆಂದು ಸುತ್ತಮುತ್ತ ವಿಚಾರಿಸಿದರೆ, ಇವುಗಳನ್ನು ಬಳಸುವವರು ಕಡಿಮೆಯೇನಿಲ್ಲ.

Welfare Schemes- ಉಚಿತ ಎಲೆಕ್ಟ್ರಿಕ್ ಸ್ಕೂಟರ್, ಲ್ಯಾಪ್‌ಟಾಪ್ ಮತ್ತು ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ

ಇದು ಇಡೀ ಜಗತ್ತಿನ ಸಮಸ್ಯೆ

ಅಮೆರಿಕಾದಲ್ಲಿ ಶೇ.35ರಷ್ಟು ಜನರಿಗೆ ನಿದ್ರೆಯ ಸಮಸ್ಯೆ ಇದೆ ಎನ್ನುತ್ತದೆ, ಅಲ್ಲಿನ ಸೆಂಟರ್ ಫಾರ್ ಡಿಸೀಸ್ ಕಂಡ್ರೋಲ್ ಅಂಡ್ ಪ್ರಿವೆನ್ಷನ್. ನಿದ್ರೆಯ ಕಾರಣಕ್ಕೇ ಹತ್ತು ಲಕ್ಷ ಕೋಟಿ ಡಾಲರ್‌ಗಳಷ್ಟು ಅಮೆರಿಕಾಕ್ಕೆ ನಷ್ಟವಾಗುತ್ತಿದೆ ಎನ್ನಲಾಗುತ್ತಿದೆ. ಈ ಸಮಸ್ಯೆ ಕೇವಲ ಅಮೆರಿಕಕ್ಕಷ್ಟೆ ಸಂಬಂಧಿಸಿದ್ದಲ್ಲ, ಇಡೀ ಜಗತ್ತಿನ ಎಲ್ಲೆಡೆ ಕಾಡುವ ಸಮಸ್ಯೆಯಾಗಿದೆ.

ಭಗವದ್ಗೀತೆಯು ಯೋಗವೆಂದರೆ ನಿದ್ರೆ ಮತ್ತು ಎಚ್ಚರಗಳ ಸಾಮರಸ್ಯ ಎನ್ನುತ್ತದೆ. ಸರಿಯಾಗಿ ನಿದ್ರೆ ಮಾಡುವಂತಾದರೆ, ಭ್ರಾಂತಿರೋಗವನ್ನು ಶೇ.50ರಷ್ಟು ಕಡಿಮೆ ಮಾಡಬಹುದು ಎನ್ನುತ್ತದೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನ.

ನಿದ್ರೆ ಎಷ್ಟು ಬೇಕು? ಎಷ್ಟು ಸಾಕು? ಮನುಷ್ಯನ ನಿದ್ರೆಯ ಅವಶ್ಯಕತೆ ಎಷ್ಟು? ಸರಿಯಾಗಿ ನಿದ್ರೆ ಮಾಡುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ...
Sleep Health Benefits
ನಿದ್ರಾಭಂಗವೇ ವಿವಿಧ ರೋಗಗಳಿಗೆ ಕಾರಣ

ಇತ್ತೀಚಿನ ವಿವಿಧ ಮಾನಸಿಕ ರೋಗಗಳಿಗೆ ಪ್ರಮುಖ ಕಾರಣವೇ ನಿದ್ರಾಭಂಗ. ಅವುಗಳ ಪಟ್ಟಿಯಲ್ಲಿ ಅಲ್ಜೈಮರ್ಸ್, ಡಿಮೇನ್ಸಿಯಾ ಕೂಡ ಸೇರಿವೆ. ಹದಿನೈದು ದಿನಗಳಷ್ಟು ಸಮಯ ನಿದ್ರಾಭಂಗವಾದ ಇಲಿಗಳು ಸಾಯುತ್ತವೆ ಎನ್ನುವುದು ಪ್ರಯೋಗಗಳಿಂದ ತಿಳಿದು ಬಂದಿದೆ. ನಿದ್ರಾಭಂಗವಾದ ಇಲಿಗಳು ಅತ್ಮಹತ್ಯೆ ಮಾಡಿಕೊಂಡಿರುವುದು ಇನ್ನೊಂದು ಪ್ರಯೋಗದಲ್ಲಿ ವರದಿಯಾಗಿದೆ. ಇದಕ್ಕೆ ಮಾನವನು ಹೊರತಾಗಿಲ್ಲ.

ನಿದ್ರಾಭಂಗದಿಂದ ಪ್ರಪಂಚದಲ್ಲಿ ಆಗಿರುವ ಅನಾಹುತಗಳ ಪಟ್ಟಿಗೆ ಭೋಪಾಲ್ ಅನಿಲ ದುರಂತ, ಚರ್ನೊಬೈಲ್ ಅಣುಸ್ಥಾವರ ದುರಂತ, ಎಕ್ಸಾನ್ ಕಚ್ಚಾ ತೈಲ ದುರಂತ, ಅನೇಕ ವಿಮಾನ ದುರಂತ ಮತ್ತು ಕೈಗಾರಿಕ ಅನಾಹುತಗಳು ಜೊತೆಗೆ ನಿತ್ಯ ಕಾಣುತ್ತಿರುವ ಅಪಘಾತಗಳು ಸೇರಿವೆ.

Karnataka Labour Minimum Wage- ರಾಜ್ಯದ ಎಲ್ಲಾ ಕಾರ್ಮಿಕರಿಗೂ ಭರ್ಜರಿ ಸಂಬಳ ಏರಿಕೆ | ಯಾರಿಗೆ ಎಷ್ಟು ಸಂಬಳ? ಸಂಪೂರ್ಣ ಮಾಹಿತಿ ಇಲ್ಲಿದೆ…

ನಾವು ಎಷ್ಟು ನಿದ್ರೆ ಮಾಡಬೇಕು?

ಪ್ರತಿ ವ್ಯಕ್ತಿಯೂ ಸರಾಸರಿ ಒಂದನೇ ಮೂರು ಭಾಗದ ಆಯುಷ್ಯವನ್ನು ನಿದ್ದೆಯಲ್ಲಿಯೇ ಕಳೆಯುತ್ತಾನೆ. ನಾವು ನೂರು ವರ್ಷ ಬದುಕಿದರೆ ಅದರಲ್ಲಿ 36 ವರ್ಷಗಳು ನಿದ್ರೆಯಲ್ಲಿ ಕಳೆದಿರುತ್ತದೆ. `ನ್ಯು ಸೈನ್ಟಿಸ್ಟ್’ ವರದಿ ಪ್ರಕಾರ ವಯಸ್ಸಿಗೆ ಅನುಸಾರ ದಿನದ ನಿದ್ರೆ ಪ್ರಮಾಣ ಹೀಗಿದೆ:

  • 1-3 ವರ್ಷದ ಮಗುವಿಗೆ 11 ರಿಂದ 14 ಗಂಟೆ
  • 1-12 ವರ್ಷದವರಿಗೆ 9 ರಿಂದ 11 ಗಂಟೆ
  • ವಯಸ್ಕರಿಗೆ ದಿನಕ್ಕೆ ಸುಮಾರು ಏಳು ಗಂಟೆ
  • ಅದಕ್ಕೂ ಮೇಲ್ಪಟ್ಟವರಿಗೆ 7 ರಿಂದ 9 ಗಂಟೆ
ನಿದ್ದೆಯಿಂದಾಗುವ ಲಾಭಗಳು

ಸಮರ್ಪಕವಾಗಿ ನಿದ್ದೆ ಮಾಡುವುದರಿಂದ ಆಗುವ ಲಾಭಗಳು ಒಂದೆರಡಲ್ಲ. ನಿದ್ರೆಯಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜ್ಞಾಪಕಶಕ್ತಿ ತೀವ್ರವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಮನಸ್ಸು ಸಂತೋಷದಿಂದ ಇರುತ್ತದೆ. ದೇಹವು ಚಟುವಟಿಕೆಯಿಂದ ಕೂಡಿರುತ್ತದೆ. ನಿದ್ರೆಯಿಂದ ಶ್ರಮ, ಆಯಾಸ ನಿವಾರಣೆಯಾಗುತ್ತದೆ.

ಸರಿಯಾದ ನಿದ್ದೆಯೂ ಚಯಾಪಚಯವನ್ನು ಜಾಸ್ತಿ ಮಾಡಿ ದೇಹಕ್ಕೆ ಮತ್ತು ಮನಸ್ಸಿಗೆ ಪುಷ್ಟಿಯನ್ನು ಕೊಡುತ್ತದೆ. ಮೆದುಳಿನಲ್ಲಿ ಉಂಟಾಗುವ ಕಲ್ಮಶಗಳನ್ನು ಹೊರಹಾಕುವ ಕೆಲಸ ನಿದ್ರೆಯ ಸಮಯದಲ್ಲಿ ನಡೆಯುತ್ತದೆ. ಆದರೆ ಎಚ್ಚರವಿರಲಿ, ನಿದ್ರೆ ಆರೋಗ್ಯಕ್ಕೆ ಒಳ್ಳೆಯದು ಅಂತ ನಿಗದಿತ ಅವಧಿಗಿಂತ ಹೆಚ್ಚು ನಿದ್ರಿಸಿದಲ್ಲಿ ದೇಹದಲ್ಲಿ ಆಲಸ್ಯ, ಮೈಕೈ ನೋವು, ನಿರಾಸಕ್ತಿ, ಸುಸ್ತು ಕಾಣಿಸಿಕೊಳ್ಳುತ್ತದೆ.

WhatsApp Group Join Now
Telegram Group Join Now

Low Interest Loans- ಇನ್ಮುಂದೆ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ | ಮತ್ತೆ ರೆಪೋ ದರ ಇಳಿಸಿದ ಆರ್‌ಬಿಐ

ನಿದ್ರಾಭಂಗಕ್ಕೆ ಪರಿಹಾರ ತಂತ್ರಗಳು

ಈಗೀಗ ನಿದ್ರಾ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ನಿದ್ರಾ ಉದ್ಯಮವೂ ಬೆಳೆಯುತ್ತಿದೆ. ಸಾಮಾನ್ಯ ನಿದ್ರಾ ಸಮಸ್ಯೆ ಕಾಡುತ್ತಿದ್ದಲ್ಲಿ ಈ ಕೆಳಗಿನ ತಂತ್ರ ಅನುಸರಿಸಿ:

  • ಪಾದ ಹಾಗೂ ತಲೆಯ ಭಾಗಕ್ಕೆ ಅಭ್ಯಂಜನ ಮಾಡಿಕೊಳ್ಳುವುದು
  • ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು
  • ಮಲಗುವ ಮೊದಲು ಹಾಲಿಗೆ ಸ್ವಲ್ಪ ಬೆಲ್ಲವನ್ನು ಬೆರೆಸಿ ಸೇವಿಸುವುದು
  • ಮನಸ್ಸಿಗೆ ಆಸಕ್ತಿ ಇರುವಂತಹ ವಿಚಾರದ ಬಗ್ಗೆ ಓದುವುದು
  • ಚಿಂತನೆ ಮಾಡುವುದು, ಲಘು ಸಂಗೀತವನ್ನು ಕೇಳುವುದು
  • ಸ್ವಲ್ಪ ಹೊತ್ತು ಧ್ಯಾನ ಮಾಡುವುದು
  • ಎರಡು ಕಣ್ಣುಗಳಿಗೆ ಗುಲಾಬಿ ಜಲ ಅಥವಾ ಹಾಲಿನಿಂದ ಮಸಾಜ್ ಮಾಡಿಕೊಳ್ಳುವುದು

ಹೀಗೆ ವಿವಿಧ ಕ್ರಮಗಳಿಂದ ನಿದ್ರಾಭಂಗವನ್ನು ನಿವಾರಿಸಿಕೊಳ್ಳಬಹುದು. ಆದರೆ ಈ ಕ್ರಮಗಳಿಗೂ ಉಪಶಮನವಾಗದಿದ್ದರೆ ವೈದ್ಯರ ಸಲಹೆ ಮೇರೆಗೆ ಮುನ್ನಡೆಯುವುದು ಕ್ಷೇಮಕರ.

PMAY Scheme- ಸ್ವಂತ ಮನೆ ಕನಸಿಗೆ ಸರ್ಕಾರದ ನೆರವು | ನಿಮ್ಮದೇ ಆದ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿಗಾಗಿ ಹೀಗೆ ಅರ್ಜಿ ಹಾಕಿ…


Spread the love
error: Content is protected !!