7th pay Commission Complete Information : ನಾಳೆ ಜುಲೈ 4ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ರಾಜ್ಯ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ 7ನೇ ವೇತನ ಆಯೋಗದ ವರದಿ ಅನುಷ್ಠಾಗೊಳಿಸುವ ಬಗ್ಗೆ ಪ್ರಮುಖ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಈಚೇಗೆ ಸರಕಾರಿ ನೌಕರರ ಸಂಘಗಳ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಮಾಡಿಕೊಂಡ ಸಂದರ್ಭದಲ್ಲಿ ಏಳನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಸಚಿವರು ಅನೌಪಚಾರಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಆಯೋಗದ ವರದಿಯನ್ನು ಆದಷ್ಟು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು.
7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ತುಟ್ಟಿ ಭತ್ಯೆ, ಸೇವಾ ಭತ್ಯೆ ಸೇರಿ ಹಲವಾರು ಶಿಫಾರಸುಗಳ ವರದಿಯನ್ನು ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಯರಾದ ಸುಧಾಕರ್ ರಾವ್ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದು, ಯಾವ ಭತ್ಯೆಗಳನ್ನು ಎಷ್ಟಕ್ಕೆ ಏರಿ ಮಾಡಬೇಕು ಎಂಬ ಶಿಫಾರಸ್ಸಿನ ವರದಿಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಸ್ವಂತ ಮನೆಗಾಗಿ ಗೃಹ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ Types of Home Loan
ಸಾಮೂಹಿಕ ವಿಮಾ ಯೋಜನೆಯ ಮಾಸಿಕ ವಂತಿಕೆ ಎಷ್ಟಕ್ಕೆ ಏರಿಕೆಯಾಗಲಿದೆ?
ರಾಜ್ಯದ 7ನೇ ವೇತನ ಆಯೋಗದ ಶಿಫಾರಸಿನ ವರದಿಯ ಪ್ರಕಾರ, ಗ್ರೂಪ್ ‘ಎ’ ವರ್ಗದವರಿಗೆ ಇದ್ದ ಸಾಮೂಹಿಕ ವಿಮಾ ಯೋಜನೆಯ ಮಾಸಿಕ ವಂತಿಕೆಯು ಪ್ರಸ್ತುತ 480 ರೂಪಾಯಿ ಇದ್ದು ಪರಿಷ್ಕೃತ ವಂತಿಕೆಯು 720 ರೂಪಾಯಿಗೆ ಏರಿಕೆಯಾಗಲಿದೆ. ಅದೇ ಗ್ರೂಪ್ ‘ಬಿ’ ವರ್ಗದವರಿಗೆ 360 ರೂ. ಯಿಂದ 540 ರೂ. ಗೆ, ಗ್ರೂಪ್ ಸಿ ವರ್ಗದವರಿಗೆ 240 ರೂ. ಯಿಂದ 480 ರೂ. ಮತ್ತು ಗ್ರೂಪ್ ಡಿ ವರ್ಗದವರಿಗೆ 120 ರೂ. ಏರಿಕೆಯಾಗಲಿದೆ.
ವೈದ್ಯಕೀಯ ಭತ್ಯೆ Medical Allowance
ಸದ್ಯಕ್ಕೆ ಗ್ರೂಪ್ ಸಿ ಮತ್ತು ಡಿ ವರ್ಗದ ನೌಕರರ ವೈದ್ಯಕೀಯ ಭತ್ಯೆಯು 200 ರೂ. ಇದೆ. 7ನೇ ವೇತನ ಆಯೋಗದ ವರದಿಯ ಪ್ರಕಾರ ಇದಕ್ಕೆ 300 ರೂ. ಸೇರಿಸಲು ಶೀಫಾರಸು ಮಡಲಾಗಿದ್ದು; ವೈದ್ಯಕೀಯ ಭತ್ಯೆಯು 200 ರೂ. ನಿಂದ 500 ರೂ. ಗೆ ಏರಿಕೆಯಾಗಲಿದೆ.
ಅದೇ ರೀತಿ 7ನೇ ವೇತನ ಆಯೋಗದ ಶಿಫಾರಸ್ಸಿನ ಪರಿಸ್ಕೃತ ವರದಿಯಲ್ಲಿ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆ ಎರಡು ಪಟ್ಟು ಏರಿಕೆಗೆ ಶಿಫಾರಸು ಮಾಡಲಾಗಿದೆ. ಈಗ ಸರ್ಕಾರಿ ನೌಕರರ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯು 1000 ರೂ. ಇದ್ದು; ಇದನ್ನು 2000 ರೂ. ಗೆ ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ.
7ನೇ ವೇತನ ಆಯೋಗ ಜಾರಿ | ಜುಲೈ 4ಕ್ಕೆ ಸರಕಾರಿ ನೌಕರರಿಗೆ ಸಿಹಿಸುದ್ದಿ karnataka 7th Vetana Ayoga
ಮನೆ ಬಾಡಿಗೆ ಭತ್ಯೆ House Rent Allowance
7ನೇ ವೇತನ ಆಯೋಗದ ಶಿಫಾರಸಿನ ವರದಿಯಲ್ಲಿ ಸರಕಾರಿ ನೌಕರರನ್ನು ಮೂರು ವರ್ಗದಲ್ಲಿ ವಿಂಗಡಿಸಿ, ಈ ಕೆಳಗಿನಂತೆ ಮನೆ ಬಾಡಿಗೆ ಭತ್ಯೆ ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
- ಎ ವರ್ಗ : 25 ಲಕ್ಷಕ್ಕೆ ಮೇಲ್ಪಟ್ಟ ‘ಎ’ ವರ್ಗದ ನೌಕರರಿಗೆ ಮನೆ ಬಾಡಿಗೆ ಭತ್ಯೆಯು ಮೂಲವೇತನದ ಶೇಕಡ 30ರಷ್ಟು.
- ಬಿ ವರ್ಗ : 5 ಲಕ್ಷ ದಿಂದ 25 ಲಕ್ಷದ ಒಳಗಿ£ ‘ಬಿ’ ವರ್ಗದ ನೌಕರರಿಗೆ ಮೂಲವೇತನದ ಶೇಕಡ 20ರಷ್ಟು.
- ಸಿ ವರ್ಗ : 5 ಲಕ್ಷಕ್ಕಿಂತ ಕಡಿಮೆ ಇರುವ ‘ಸಿ’ ವರ್ಗದವವರ ಮನೆ ಬಾಡಿಗೆ ಭತ್ಯೆಯು ಮೂಲವೇತನದ ಶೇಕಡ 15ರಷ್ಟು.
ಪ್ರಭಾರ ಭತ್ಯೆ, ನಿಯೋಜನೆ ಭತ್ಯೆ/ಅನ್ಯ ಸೇವೆ ಭತ್ಯೆ
7ನೇ ವೇತನ ಆಯೋಗದ ಶಿಫಾರಸಿನ ವರದಿಯಲ್ಲಿ ನೌಕರರ ಮೂಲ ವೇತನದ ಶೇಕಡ 15ರಷ್ಟು ಹಣವನ್ನು ಪ್ರಭಾರ ಭತ್ಯೆಯಾಗಿ ನೀಡಬೇಕು. ಮೂಲವೇತನದ ಶೇ.5ರಷ್ಟು ಹಾಗೂ ಗರಿಷ್ಠ ರೂ.2000 ಹೆಚ್ಚುವರಿ ಹಣವನ್ನು ನಿಯೋಜನೆ ಭತ್ಯೆ/ ಅನ್ಯ ಸೇವೆ ಭತ್ಯೆಯಾಗಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ.
ಮೇಲೆ ಸೂಚಿಸಲಾಗಿರುವ ಭತ್ಯೆಗಳನ್ನು ಸೇರಿದಂತೆ ಹಲವಾರು ಭತ್ಯೆಗಳನ್ನು ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ. 7ನೇ ವೇತನ ಆಯೋಗದ ಈ ಶಿಫಾರಸು ವರದಿಯನ್ನು ಯಥಾವತ್ ಅನುಷ್ಠಾನಗೊಳಿಸಬೇಕು ಎನ್ನುವುದು ಸರಕಾರಿ ನೌಕರರ ಬೇಡಿಕೆಯಾಗಿದೆ. ಇದಕ್ಕೆ ಸರಕಾರ ಈಗಾಗಲೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು; ಜುಲೈ 4ರ ಸಚಿವ ಸಂಪುಟದ ಸಭೆಯ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ.
3 thoughts on “ಸರಕಾರಿ ನೌಕರರ ಸಂಬಳ, ಭತ್ಯೆ ಏರಿಕೆಯ ಸಂಪೂರ್ಣ ಮಾಹಿತಿ | 7ನೇ ವೇತನ ಆಯೋಗದ ಶಿಫಾರಸುಗಳು 7th pay Commission Complete Information”