7ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಸಿಗುವ ಸಾಲ ಮತ್ತು ಮುಂಗಡ ಸೌಲಭ್ಯಗಳು 7th Pay Commission Advances for Govt Employees

Spread the love

7th Pay Commission Advances for Govt Employees : ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ (7th Pay Commission Pension) ಶಿಫಾರಸುಗಳು ಜಾರಿಯಾಗಿದ್ದು; ರಾಜ್ಯ ಸರ್ಕಾರಿ ನೌಕರರ ಸಂಬಳ, ಭತ್ಯೆ, ಪಿಂಚಣಿ ಸೌಲಭ್ಯಗಳು ಪರಿಷ್ಕರಣೆಯಾಗಿದೆ. ಇದೇ ಆಗಸ್ಟ್ ತಿಂಗಳಿನಿ೦ದ ಸರ್ಕಾರಿ ನೌಕರರಿಗೆ ಪರಿಷ್ಕೃತ ವೇತನ ಭತ್ಯೆ, ಪಿಂಚಣಿ ಸೌಲಭ್ಯಗಳು ಸಿಗಲಿವೆ.

WhatsApp Group Join Now
Telegram Group Join Now

ಅದೇ ರೀತಿ ಸರ್ಕಾರಿ ನೌಕರರಿಗೆ ಸಿಗುವ ಸಾಲ ಹಾಗೂ ಮುಂಗಡ ಸೌಲಭ್ಯಗಳೂ ಪರಿಷ್ಕರಣೆಯಾಗಿದ್ದು; ಪ್ರಚಲಿತದಲ್ಲಿರುವ ಮುಂಗಡಗಳು ಹಾಗೂ 7ನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಪರಿಷ್ಕರಣೆಯಾದ ಸಾಲ ಹಾಗೂ ಮುಂಗಡ ಹಣದ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: 7ನೇ ವೇತನ ಆಯೋಗದ ಪ್ರಯೋಜನ ಯಾವೆಲ್ಲ ನೌಕರರಿಗೆ ಸಿಗಲಿದೆ? | ಸರ್ಕಾರಿ ನೌಕರರು, ನಿವೃತ್ತ ನೌಕರರ ಸಮಗ್ರ ಪಟ್ಟಿ ಇಲ್ಲಿದೆ… Govt employees covered by 7th Pay Commission

ಏನಿದು ನೌಕರರ ಮುಂಗಡ ಸೌಲಭ್ಯ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ನೌಕರರಿಗಾಗಿ ವಿವಿಧ ಸಾಲಗಳು ಮತ್ತು ಮುಂಗಡಗಳನ್ನು ಮಂಜೂರು ಮಾಡುತ್ತವೆ. ನೌಕರರ ವೇತನ ಮತ್ತು ಉಳಿತಾಯಗಳು ಕಡಿಮೆಯಿದ್ದು, ಬ್ಯಾಂಕುಗಳು ಮತ್ತು ವಾಣಿಜ್ಯ ಲೇವಾದೇವಿ ಸಂಸ್ಥೆಗಳು ಸುಲಭವಾಗಿ ಸಾಲ ನೀಡದೇ ಇದ್ದಾಗ ನೌಕರರ ದೊಡ್ಡ ಮಟ್ಟದ ವೆಚ್ಚಗಳನ್ನು ಭರಿಸಲು ಈ ಮುಂಗಡಗಳು ಸಹಾಯಕವಾಗುತ್ತವೆ. ಪ್ರಚಲಿತದಲ್ಲಿರುವ ಮುಂಗಡಗಳು ಈ ಕೆಳಗಿನಂತಿವೆ:

  • ಹಬ್ಬಗಳ ಮುಂಗಡ
  • ಮೋಟಾರು ಕಾರು ಖರೀದಿ ಮುಂಗಡ
  • ಮೋಟಾರು ಸೈಕಲ್, ಸ್ಕೂಟರ್ ಖರೀದಿ ಮುಂಗಡ
  • ಬೈಸಿಕಲ್, ಇ-ಬೈಸಿಕಲ್ ಖರೀದಿ ಮುಂಗಡ
  • ಕAಪ್ಯೂಟರ್ ಖರೀದಿ ಮುಂಗಡ
  • ಮನೆ ನಿರ್ಮಾಣ, ಮನೆ ಖರೀದಿ ಮುಂಗಡ

ಮೇಲ್ಕಾಣಿಸಿದ ಪ್ರಚಲಿತ ಮುಂಗಡಗಳ ವಿವರ ಹಾಗೂ 7ನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಪರಿಷ್ಕರಣೆಯಾದ ಮುಂಗಡಗಳ ಮಾಹಿತಿಯನ್ನು ಇಲ್ಲಿ ನೋಡೋಣ…

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಹೆಚ್ಚುವರಿ ಸಂಬಳ ಎಷ್ಟು? ಹೀಗೆ ಚೆಕ್ ಮಾಡಿ… Karnataka Govt Employees Salary Calculation

ಹಬ್ಬಗಳ ಮುಂಗಡ

ಸರ್ಕಾರವು ಇತ್ತೀಚಿಗೆ ಹಬ್ಬದ ಮುಂಗಡವನ್ನು ರೂ.10,000 ಗಳಿಂದ ರೂ.25,000 ಗಳಿಗೆ ಹೆಚ್ಚಿಸಿದೆ. ಈ ಮುಂಗಡ ಹಣಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ. 10 ತಿಂಗಳ ಕಂತುಗಳಲ್ಲಿ ಮರುಪಾವತಿಸಲು ಅವಕಾಶವಿರುತ್ತದೆ. ಈ ಮುಂಗಡವನ್ನು ಇತ್ತೀಚೆಗಷ್ಟೆ ಪರಿಷ್ಕರಿಸಿರುವುದರಿಂದ 7ನೇ ವೇತನ ಆಯೋಗವು ಹಬ್ಬದ ಮುಂಗಡಕ್ಕೆ ಸಂಬ೦ಧಿಸಿದ ಯಾವುದೇ ಶಿಫಾರಸುಗಳನ್ನು ಮಾಡಿರುವುದಿಲ್ಲ.

ಮೋಟಾರು ಕಾರು ಖರೀದಿ ಮುಂಗಡ

ಸದ್ಯಕ್ಕೆ ರೂ. 67,550 ಅಥವಾ ಮೇಲ್ಪಟ್ಟ ಮೂಲ ವೇತನ ಪಡೆಯುತ್ತಿರುವ ಸಿಬ್ಬಂದಿಯು ಕಾರು ಖರೀದಿಗಾಗಿ ಗರಿಷ್ಠ ರೂ.3.00 ಲಕ್ಷಗಳ ಮಿತಿಗೊಳಪಟ್ಟು 16 ತಿಂಗಳ ಮೂಲ ವೇತನದಷ್ಟು ಮುಂಗಡವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಮುಂಗಡವನ್ನು ವಾರ್ಷಿಕ ಶೇ.12.50 ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಅಸಲನ್ನು 100 ತಿಂಗಳುಗಳು ಮತ್ತು ಬಡ್ಡಿಯನ್ನು 20 ತಿಂಗಳುಗಳಲ್ಲಿ ಮರುಪಾವತಿಸಲು ಅವಕಾಶವಿರುತ್ತದೆ.

ಪ್ರಸ್ತುತ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು internal combustion (IC) ಇಂಜಿನ್‌ಗಳ ವಾಹನಗಳಿಗೆ ಗರಿಷ್ಠ ಮಿತಿಯನ್ನು ರೂ.6 ಲಕ್ಷಗಳಿಗೆ ಪರಿಷ್ಕರಣೆಯೊಂದಿಗೆ ಈಗಿರುವಂತೆ 16 ತಿಂಗಳ ಪರಿಷ್ಕೃತ ಮೂಲ ವೇತನದಷ್ಟು ಮುಂಗಡವನ್ನು ಮಂಜೂರು ಮಾಡಲು ಇನೇ ವೇತನ ಆಯೋಗವು ಶಿಫಾರಸು ಮಾಡಿದೆ.

ವಿದ್ಯುತ್ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಐಸಿ ಇಂಜಿನ್‌ಗಳಿಗೆ ಅನ್ವಯವಾಗುವ ಅರ್ಹತೆ ಮತ್ತು ಮರುಪಾವತಿ ಷರತ್ತುಗಳೊಂದಿಗೆ ಗರಿಷ್ಠ ರೂ.10 ಲಕ್ಷಗಳ ಮಿತಿಗೊಳಪಟ್ಟು ವಿದ್ಯುತ್ ವಾಹನ ಖರೀದಿಗಾಗಿ ಮುಂಗಡ ಹಣವನ್ನು ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಗಿಫ್ಟ್? | ಯಾರಿಗೆ ಎಷ್ಟು ಸಿಗಲಿದೆ ಡಿಎ? DA Gift for Govt Employees

7th Pay Commission Advances for Govt Employees
ಮೋಟಾರು ಸೈಕಲ್ /ಸ್ಕೂಟರ್ ಖರೀದಿ ಮುಂಗಡ

ರೂ.34,300 ಅಥವಾ ಮೇಲ್ಪಟ್ಟ ಮೂಲ ವೇತನವನ್ನು ಪಡೆಯುತ್ತಿರುವ ಸಿಬ್ಬಂದಿಯು, ಮೋಟಾರು ಸೈಕಲ್ / ಸ್ಕೂಟರ್ ಖರೀದಿಸಲು ವಾರ್ಷಿಕ ಶೇ.11.50ರ ಬಡ್ಡಿ ದರದಲ್ಲಿ ಗರಿಷ್ಠ ರೂ.50,000ಗಳ ಮಿತಿಗೊಳಪಟ್ಟು ಮೂಲ ವೇತನದ 8 ತಿಂಗಳ ವರೆಗಿನ ಮುಂಗಡಕ್ಕೆ ಅರ್ಹರಾಗಿರುತ್ತಾರೆ. ಅಸಲನ್ನು 60 ತಿಂಗಳಲ್ಲಿ ಮತ್ತು ಬಡ್ಡಿಯನ್ನು 12 ತಿಂಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಐಸಿ ಇಂಜಿನ್‌ಗಳಿರುವ ದ್ವಿಚಕ ವಾಹನಗಳಿಗಾಗಿ ಪರಿಷ್ಕೃತ ಗರಿಷ್ಠ ಮೊತ್ತ ರೂ.80,000ಗಳ ಮಿತಿಗೊಳಪಟ್ಟು ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳೊ೦ದಿಗೆ 8 ತಿಂಗಳ ಪರಿಷ್ಕೃತ ಮೂಲ ವೇತನದ ಮುಂಗಡವನ್ನು ಮಂಜೂರು ಮಾಡಲು ಆಯೋಗವು ಶಿಫಾರಸ್ಸು ಮಾಡಿದೆ.

ಐಸಿ ಇಂಜನ್‌ಗಳಿರುವ ದ್ವಿಚಕ್ರ ವಾಹನಗಳಿಗೆ ಅನ್ವಯವಾಗುವ ಅರ್ಹತೆ ಮತ್ತು ಮರುಪಾವತಿ ಷರತ್ತುಗಳೊಂದಿಗೆ ಗರಿಷ್ಠ ರೂ.1.25 ಲಕ್ಷಗಳ ಮಿತಿಗೊಳಪಟ್ಟು ವಿದ್ಯುತ್ ದ್ವಿಚಕ್ರ ವಾಹನಗಳನ್ನು ಖರೀದಿಸುವುದಕ್ಕಾಗಿ ಮುಂಗಡ ಹಣದ ಪ್ರಮಾಣವನ್ನು ಹೆಚ್ಚಿಸಲು ಸಹ ಆಯೋಗವು ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: ನೌಕರರಿಂದ ಸರ್ಕಾರಕ್ಕೆ 3 ಬೇಡಿಕೆ ಈಡೇರಿಕೆಗೆ ಮನವಿ ಸಮರ್ಪಣೆ | ಏನೀ ಹೊಸ ಬೇಡಿಕೆಗಳು? ಸಂಪೂರ್ಣ ಮಾಹಿತಿ ಇಲ್ಲಿದೆ… Karnataka Govt employees New demands

ಬೈಸಿಕಲ್/ ಇ-ಬೈಸಿಕಲ್ ಖರೀದಿ ಮುಂಗಡ

ರೂ.28,950 ಅಥವಾ ಮೇಲ್ಪಟ್ಟ ಮೂಲ ವೇತನ ಪಡೆಯುವ ಸಿಬ್ಬಂದಿಯು ಬೈಸಿಕಲ್ ಖರೀದಿಗಾಗಿ ವಾರ್ಷಿಕ ಶೇ.9ರ ಬಡ್ಡಿ ದರದಲ್ಲಿ 20 ತಿಂಗಳ ಮೂಲ ವೇತನದ ವರೆಗೆ, ಗರಿಷ್ಠ ರೂ.3000ಗಳ ಮಿತಿಗೊಳಪಟ್ಟು ಮುಂಗಡ ಹಣಕ್ಕೆ ಅರ್ಹರಾಗಿರುತ್ತಾರೆ. ಅಸಲು ಹಣವನ್ನು 20 ತಿಂಗಳುಗಳಲ್ಲಿ ಮತ್ತು ಬಡ್ಡಿ ಹಣವನ್ನು 10 ತಿಂಗಳುಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಚಾಲ್ತಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಬೈಸಿಕಲ್ ಖರೀದಿಗಾಗಿ ರೂ.10,000ಗಳ ಗರಿಷ್ಠ ಮಿತಿಯೊಂದಿಗೆ ಪರಿಷ್ಕೃತ ಮೂಲ ವೇತನದ 20 ತಿಂಗಳುಗಳ ಮುಂಗಡವನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡಿದೆ. ಇನ್ನು ವಿದ್ಯುತ್ ಬೈಸಿಕಲ್‌ನ್ನು ಖರೀದಿಸಲು ಗರಿಷ್ಠ ಮಿತಿ ರೂ.30,000 ಗಳಿಗೆ ಮುಂಗಡದ ಪ್ರಮಾಣವನ್ನು ಹೆಚ್ಚಿಸಲು ಆಯೋಗ ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಪರಿಷ್ಕೃತ ಪಿಂಚಣಿ ಹಣವೆಷ್ಟು? ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ…. 7th pay pension calculator

ಕಂಪ್ಯೂಟರ್ ಖರೀದಿ ಮುಂಗಡ

ರೂ.39,800 ಅಥವಾ ಮೇಲ್ಮಟ್ಟ ಮೂಲ ವೇತನ ಪಡೆಯುವ ಸಿಬ್ಬಂದಿಯು ಕಂಪ್ಯೂಟರ್ ಖರೀದಿಗಾಗಿ ವಾರ್ಷಿಕ ಶೇ.8.50 ಬಡ್ಡಿ ದರದಲ್ಲಿ ಮೂಲ ವೇತನದ 72 ತಿಂಗಳ ವರೆಗಿನ ಗರಿಷ್ಠ ಮೊತ್ತ ರೂ.40,000 ಮಿತಿ ಅಥವಾ ಕಂಪ್ಯೂಟರ್ ದರ ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತದ ಮುಂಗಡವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಸಲನ್ನು 72 ತಿಂಗಳುಗಳಲ್ಲಿ (ಗರಿಷ್ಠ) ಮತ್ತು ಬಡ್ತಿಯನ್ನು 28 ತಿಂಗಳುಗಳಲ್ಲಿ (ಗರಿಷ್ಠ) ಮರು ಪಾವತಿಸಬೇಕಾಗುತ್ತದೆ.

72 ತಿಂಗಳುಗಳ ಪರಿಷ್ಕೃತ ಮೂಲ ವೇತನವನ್ನು ಉಳಿಸಿಕೊಂಡು, ಗರಿಷ್ಠ ರೂ.60,000 ಗಳಿಗೆ ಮುಂಗಡವನ್ನು ಪರಿಷ್ಕರಿಸಲು ಆಯೋಗವು ಶಿಫಾರಸ್ಸು ಮಾಡಿದೆ ಮತ್ತು ಅಸಲನ್ನು 36 ತಿಂಗಳಲ್ಲಿ (ಗರಿಷ್ಠ) ಮತ್ತು ಬಡ್ಡಿಯನ್ನು (ಗರಿಷ್ಠ) 12 ತಿಂಗಳಲ್ಲಿ ಮರುಪಾವತಿಸುವ ಷರತ್ತನ್ನು ವಿಧಿಸಲಾಗಿದೆ.

ಅದೇ ರೀತಿ ಸೋಲಾರ್ ವಾಟರ್ ಹೀಟರ್ ಮುಂಗಡ, ಸೋಲಾರ್ ಕುಕ್ಕರ್ ಮುಂಗಡ, ಮೊಪೆಡ್ ಮುಂಗಡ ಮತ್ತು ಮೋಟಾರು ವಾಹನ ದುರಸ್ತಿ ಮುಂಗಡ, ಉಪಕರಣಗಳ ಮುಂಗಡಗಳನ್ನು ಮುಂದುವರೆಸದೇ ಇರುವುದಕ್ಕೆ ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ ಆಗಲಿದೆ? ನಿಮ್ಮ ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ… 7th Pay Commission Calculation

ಮನೆ ನಿರ್ಮಾಣ, ಮನೆ ಖರೀದಿ ಮುಂಗಡ

ಮನೆ ನಿರ್ಮಾಣ ಅಥವಾ ಮನೆ ಖರೀದಿಗಾಗಿ 70 ತಿಂಗಳ ಮೂಲ ವೇತನವನ್ನು ಗ್ರೂಪ್ ‘ಎ’ ವರ್ಗದ ನೌಕರರು ಗರಿಷ್ಠ ರೂ.40 ಲಕ್ಷಗಳ ವರೆಗೆ ಮತ್ತು ಇತರೆ ವರ್ಗದ ನೌಕರರು ರೂ.25 ಲಕ್ಷಗಳ ವರೆಗೆ ಶೇ.8.50 ಬಡ್ಡಿ ದರದಲ್ಲಿನ ಮುಂಗಡಕ್ಕೆ ಅರ್ಹರಾಗಿರುತ್ತಾರೆ. ಅಸಲನ್ನು ಗರಿಷ್ಟ 180 ತಿಂಗಳಲ್ಲಿ ಮತ್ತು ಬಡ್ಡಿಯನ್ನು ಗರಿಷ್ಟ 60 ತಿಂಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಮನೆ ನಿರ್ಮಾಣ ಅಥವಾ ಮನೆ ಖರೀದಿಗಾಗಿ 70 ತಿಂಗಳ ಪರಿಷ್ಕೃತ ಮೂಲ ವೇತನವನ್ನು ಉಳಿಸಿಕೊಂಡು ಗ್ರೂಪ್ ‘ಎ’ ವರ್ಗದ ನೌಕರರಿಗೆ ಗರಿಷ್ಠ ರೂ.65 ಲಕ್ಷ ಮತ್ತು ಇತರೆ ವರ್ಗಗಳ ನೌಕರರಿಗೆ ರೂ.40 ಲಕ್ಷಗಳ ಮಿತಿಗೊಳಪಟ್ಟು ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳೊ೦ದಿಗೆ ಮುಂಗಡದ ಪ್ರಮಾಣವನ್ನು ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡಿದೆ.

Source: State 7th Commission Report Volume-1

ಇದನ್ನೂ ಓದಿ: ಸರಕಾರಿ ನೌಕರರ ಸಂಬಳ, ಭತ್ಯೆ ಏರಿಕೆಯ ಸಂಪೂರ್ಣ ಮಾಹಿತಿ | 7ನೇ ವೇತನ ಆಯೋಗದ ಶಿಫಾರಸುಗಳು 7th pay Commission Complete Information


Spread the love
WhatsApp Group Join Now
Telegram Group Join Now
error: Content is protected !!