50 lakh ration card cancellation : ಅನರ್ಹ ಬಿಪಿಎಲ್ ರೇಷನ್ ಕಾರ್ಡ್ (Ineligible BPL card) ರದ್ದು ಕಾರ್ಯ ಚುರುಕುಗೊಂಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ರಾಜ್ಯದಲ್ಲಿ ನಕಲಿ ದಾಖಲೆ ನೀಡಿ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಕುಟುಂಬಗಳ ಶೋಧ ಕಾರ್ಯಕ್ಕೆ ಇಳಿದಿದ್ದು; ಇಷ್ಟರಲ್ಲೇ ಎಲ್ಲಾ ಅನರ್ಹ ಬಿಪಿಎಲ್ ಕಾರ್ಡ್’ಗಳೂ ರದ್ದಾಗಲಿವೆ.
ಈ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರು ಅರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡುವ ದಿಸೆಯಲ್ಲಿ ಸಂಬ೦ಧಪಟ್ಟ ಎಲ್ಲಾ ಇಲಾಖೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿರುವ ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಡ್ ಪಡೆದವರು ಸಿಕ್ಕಿ ಬೀಳಲಿದ್ದಾರೆ ಎಂದಿದ್ದಾರೆ.
ಹಾಗಾದರೆ ಈತನಕ ರದ್ದಾದ ಬಿಪಿಎಲ್ ಕಾರ್ಡ್’ಗಳೆಷ್ಟು? ರದ್ದಾಗಬೇಕಿರುವ ಕಾರ್ಡ್’ಗಳೆಷ್ಟು? ನಕಲಿ ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಶಿಕ್ಷೆ ಏನು? ಯಾವೆಲ್ಲ ಬಿಪಿಎಲ್ ರೇಷನ್ ಕಾರ್ಡ್ಗಳು ಎಪಿಎಲ್ ರೂಪ ಪಡೆಯಲಿವೆ? ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…
ನಿಯಮ ಉಲ್ಲಂಘಿಸಿದವರ ಶೋಧ
ತೀರಾ ಬಡ ಕುಟುಂಬಗಳಿಗೆ೦ದು ಮೀಸಲಾಗಿರುವ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಪಡೆಯಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಆದರೆ ರಾಜ್ಯದಲ್ಲಿ ಲಕ್ಷಾಂತರ ಜನ ಉಳ್ಳವರು ಈ ಮಾನದಂಡಗಳಿಗೆ ವಿರುದ್ಧವಾಗಿ ಸುಳ್ಳು ದಾಖಲೆಗಳನ್ನು ನೀಡಿ, ಅಂತ್ಯೋದಯ ಹಾಗೂ ಪಿಎಲ್ ಕಾರ್ಡ್ ಪಡೆದಿದ್ದಾರೆ.
ಆಹಾರ ಇಲಾಖೆ ಬಹಳ ಹಿಂದಿನಿ೦ದಲೂ ಇಂಥವರ ಶೋಧ ಕಾರ್ಯ ನಡೆಸುತ್ತಿದೆ. ಆದಾಯ ತೆರಿಗೆ ಪಾವತಿಸುವವರು, ಐಷಾರಾಮಿ ವಾಹನ ಹೊಂದಿರುವವರು, 3 ಹೆಕ್ಟೇರ್’ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರು, ಸರಕಾರಿ ನೌಕರಿಯಲ್ಲಿರುವವರು, ಬಾಡಿಗೆ ಮನೆಗಳನ್ನು ಹೊಂದಿರುವವರನ್ನು ಶೋಧಿಸಿ ಅಂಥರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್’ಗಳನ್ನು ರದ್ದುಪಡಿಸಲಾಗಿದೆ.
ಸಿಕ್ಕಿ ಬಿದ್ದರೆ ಶಿಕ್ಷೆ ಏನು?
ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದವರು ಖುದ್ದಾಗಿ ಕಾರ್ಡ್ ಹಿಂತಿರುಗಿಸಬೇಕು. ತಾವಾಗೇ ಹಿಂತಿರುಗಿಸದಿದ್ದರೆ ಸರ್ಕಾರ ಅಂಥವರನ್ನು ಪತ್ತೆ ಮಾಡುತ್ತದೆ. ಆಗ ಸಿಕ್ಕಿ ಬಿದ್ದರೆ ಕಾರ್ಡ್ ರದ್ದಾಗುವುದು ಮಾತ್ರವಲ್ಲ, ದಂಡ, ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.
ಶೋಧ ಕಾರ್ಯದಲ್ಲಿ ಸಿಕ್ಕಿ ಬೀಳುವವರಿಗೆ ನಕಲಿ ರೇಷನ್ ಕಾರ್ಡ್ ಬಳಸಿಕೊಂಡು ಈತನಕ ಎಷ್ಟು ಪಡಿತರ ಧಾನ್ಯ ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಕೆಜಿಗೆ 35 ರೂಪಾಯಿನಂತೆ ವಸೂಲಿ ಮಾಡಲಾಗುತ್ತದೆ. ಜೊತೆಗೆ ಕ್ರಿಮಿನಲ್ ಕೇಸ್ ಕೂಡ ದಾಖಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.
ಅನರ್ಹ ಬಿಪಿಎಲ್ ಕಾರ್ಡ್’ಗಳಿಗೆ ಎಪಿಎಲ್ ರೂಪ
ಇನ್ನೊಂದೆಡೆ ಆಹಾರ ಸಚಿವ ಮುನಿಯಪ್ಪ ಅವರು ‘ಅರ್ಹರಲ್ಲದವರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂತಹ ಕಾರ್ಡ್ಗಳನ್ನು ರದ್ದುಪಡಿಸುವುದಿಲ್ಲ. ಬದಲಿಗೆ ಎಪಿಎಲ್ ಆಗಿ ಪರಿವರ್ತಿಸುತ್ತೇವೆ’ ಎಂದಿದ್ದಾರೆ. ಈಗಾಗಲೇ 2018 ರಿಂದ 2020ರ ವರೆಗೆ 12.47 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ.
ಈ ತನಕ 9,301 ಅಂತ್ಯೋದಯ, 10,18,963 ಬಿಪಿಎಲ್ ಕಾರ್ಡ್’ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದ್ದು; ಇನ್ನೂ ಅರ್ಹತೆ ಇಲ್ಲದ 2.18 ಲಕ್ಷಕ್ಕೂ ಹೆಚ್ಚು ಮಂದಿ ಎಪಿಎಲ್ ಕಾರ್ಡ್ಗಳನ್ನು ಪಡೆದಿದ್ದಾರೆ. ಅವುಗಳ ರದ್ದತಿ ಕಾರ್ಯವೂ ಚುರುಕುಗೊಂಡಿದೆ.
ಇದನ್ನೂ ಓದಿ: ಮನೆ ಮನೆಗೂ ಸೂರ್ಯ ಘರ್ ಉಚಿತ ಸೋಲಾರ್ ವಿದ್ಯುತ್ | ಈಗಲೇ ಅರ್ಜಿ ಸಲ್ಲಿಸಿ… Free Solar Rooftop Yojana 2024
50 ಲಕ್ಷ ನಕಲಿ ರೇಷನ್ ಕಾರ್ಡ್ ರದ್ದು!
ಆಹಾರ ಇಲಾಖೆ ಮಾಹಿತಿ ಪ್ರಕಾರ ನಕಲಿ ದಾಖಲೆಗಳನ್ನು ನೀಡಿ ಪಡೆದಿರುವ 12.47 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಇವುಗಳಲ್ಲಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕಾರ್ಡ್ಗಳು ರದ್ದಾಗಿವೆ. ಇತ್ತ ದಕ್ಷಿಣ ಕನ್ನಡ, ಚಿತ್ರದುರ್ಗ, ವಿಜಯಪುರ, ಮೈಸೂರು ಜಿಲ್ಲೆಗಳಲ್ಲಿ ಸರಿಸುಮಾರು ಒಂದು ಲಕ್ಷ ಕಾರ್ಡ್’ಗಳು ರದ್ದುಗೊಂಡಿವೆ ಎನ್ನಲಾಗುತ್ತಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅನರ್ಹ ಪಡಿತರ ಚೀಟಿ ತಡೆಗೆ ಪ್ರತಿಯೊಬ್ಬರಿಗೂ ಇ-ಕೆವೈಸಿ (ಆಧಾರ್ ದೃಢೀಕರಣ) ಕಡ್ಡಾಯಗೊಳಿಸಲಾಗಿದೆ. ಆಧಾರ್ ದೃಢೀಕರಣದಲ್ಲಿಯೇ ಅನರ್ಹರು ಸುಲಭವಾಗಿ ಬೀಳುತ್ತಿದ್ದಾರೆ. ಹೀಗೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಿದರೆ ರಾಜ್ಯಾದ್ಯಂತ ಬರೋಬ್ಬರಿ 50 ಲಕ್ಷ ನಕಲಿ ರೇಷನ್ ಕಾರ್ಡ್’ಗಳು ರದ್ದಾಗಲಿವೆ ಎನ್ನಲಾಗುತ್ತಿದೆ.
1 thought on “ರಾಜ್ಯಾದ್ಯಂತ 50 ಲಕ್ಷ ರೇಷನ್ ಕಾರ್ಡ್ ರದ್ದು | ನಿಮ್ಮ ಕಾರ್ಡ್ ಈ ಪಟ್ಟಿಯಲ್ಲಿದೆಯಾ? 50 lakh ration card cancellation”