2026ರ ಗ್ರಹಗತಿಗಳು ಪ್ರತಿಯೊಂದು ರಾಶಿಗೂ ವಿಭಿನ್ನ ಅನುಭವಗಳನ್ನು ನೀಡಲಿವೆ. 12 ರಾಶಿಗಳಿಗೂ ಸಂಬಂಧಿಸಿದಂತೆ 2026ರ ವಾರ್ಷಿಕ ಭವಿಷ್ಯ (2026 Varshika Bhavishya) ಇಲ್ಲಿದೆ…
ಹೊಸ ವರ್ಷ ಆರಂಭವಾದಾಗಲೆಲ್ಲಾ ನಮ್ಮಲ್ಲಿ ಎಲ್ಲರಲ್ಲೂ ಒಂದೇ ಪ್ರಶ್ನೆ; ಈ ವರ್ಷ ಹೇಗಿರಲಿದೆ? ಶುಭವೇ? ಸವಾಲುಗಳೇ? ಕೆಲವರಿಗೆ ಪ್ರಗತಿ, ಗೌರವ ಮತ್ತು ಆರ್ಥಿಕ ಲಾಭದ ವರ್ಷವಾಗಿದ್ದರೆ, ಇನ್ನೂ ಕೆಲವರಿಗೆ ತಾಳ್ಮೆ, ಪರಿಶ್ರಮ ಮತ್ತು ಎಚ್ಚರಿಕೆಯ ಅವಶ್ಯಕತೆ ಹೆಚ್ಚಿರಲಿದೆ. ಇಗೋ, 12 ರಾಶಿಗಳಿಗೂ ಸಂಬಂಧಿಸಿದಂತೆ 2026ರ ವಾರ್ಷಿಕ ಭವಿಷ್ಯ ಇಲ್ಲಿದೆ.
Aries Horoscope 2026 – ಮೇಷ ರಾಶಿ
ಮೇಷ ರಾಶಿಯವರಿಗೆ 2026 ಮಿಶ್ರ ಫಲಿತಾಂಶಗಳನ್ನು ನೀಡುವ ವರ್ಷ. ಆರಂಭದಲ್ಲಿ ಅಡೆತಡೆಗಳು ಮತ್ತು ಸ್ಪರ್ಧೆ ಹೆಚ್ಚಾಗಬಹುದು. ಆದರೆ ತಾಳ್ಮೆ ಹಾಗೂ ಶ್ರಮವನ್ನು ಕೈ ಬಿಡದೆ ಮುಂದುವರಿದರೆ ವರ್ಷದ ಕೊನೆಯಲ್ಲಿ ಸ್ಥಿರತೆ ಕಾಣಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಒಳಿತು.

ಆರೋಗ್ಯದ ಕಡೆ ಗಮನವಿರಲಿ, ವಿಶೇಷವಾಗಿ ರಕ್ತದೊತ್ತಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸರಾಸರಿ ಫಲಿತಾಂಶಗಳು ದೊರೆಯಲಿವೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಸ್ಪರ್ಧೆ ಹೆಚ್ಚಾಗಿದ್ದರೂ ಪ್ರಯತ್ನಗಳು ಕ್ರಮೇಣ ಫಲ ನೀಡುತ್ತವೆ.
Taurus Horoscope 2026 – ವೃಷಭ ರಾಶಿ
ವೃಷಭ ರಾಶಿಯವರಿಗೆ ವರ್ಷದ ಆರಂಭ ಸ್ವಲ್ಪ ನಿಧಾನಗತಿಯದ್ದಾಗಿರಬಹುದು. ಆದರೆ ಮಧ್ಯಂತರದಿಂದ ಪರಿಸ್ಥಿತಿಗಳು ಅನುಕೂಲಕರವಾಗುತ್ತವೆ. ಉದ್ಯೋಗದಲ್ಲಿ ಸ್ಥಿರತೆ ಹೆಚ್ಚಾಗಲಿದ್ದು, ಹೊಸ ಅವಕಾಶಗಳ ಜೊತೆಗೆ ಜವಾಬ್ದಾರಿಗಳೂ ಹೆಚ್ಚಾಗುತ್ತವೆ. ವ್ಯಾಪಾರ ಮಾಡುವವರಿಗೆ ಸ್ಪರ್ಧೆಯ ನಡುವೆಯೂ ಲಾಭದ ಸೂಚನೆಗಳಿವೆ.

ಆರ್ಥಿಕ ಸ್ಥಿತಿ ನಿರೀಕ್ಷೆಯಂತೆ ಇರುತ್ತದೆ. ಆದರೆ ಖರ್ಚು ನಿಯಂತ್ರಣ ಅಗತ್ಯ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಹೊರತುಪಡಿಸಿ ದೊಡ್ಡ ತೊಂದರೆಗಳಿಲ್ಲ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವರ್ಷದ ಅಂತ್ಯದ ವೇಳೆಗೆ ನಿಮ್ಮ ಹೆಸರು, ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗುತ್ತದೆ.
Gemini Horoscope 2026- ಮಿಥುನ ರಾಶಿ
2026 ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ವರ್ಷ. ಗೌರವ, ಖ್ಯಾತಿ ಮತ್ತು ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ಹೊಸ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡ ಇರಬಹುದು, ಆದರೆ ಅದನ್ನು ಸಮರ್ಥವಾಗಿ ಎದುರಿಸಿದರೆ ಯಶಸ್ಸು ನಿಮ್ಮದಾಗುತ್ತದೆ.

ಕುಟುಂಬ ಸದಸ್ಯರ ಬೆಂಬಲ ಸದಾ ಇರುತ್ತದೆ. ಆತ್ಮೀಯರೊಂದಿಗೆ ಸಂಬಂಧಗಳು ಸುಧಾರಿಸುತ್ತವೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಕಾಳಜಿ ಅಗತ್ಯ.
Cancer Horoscope 2026 – ಕರ್ಕಾಟಕ
ವರ್ಷದ ಆರಂಭದಲ್ಲಿ ಕೆಲಸ ಕಾರ್ಯಗಳಲ್ಲಿ ವಿಳಂಬ ಮತ್ತು ಆರ್ಥಿಕ ಒತ್ತಡ ಎದುರಾಗಬಹುದು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಹಳೆಯ ಸಾಲಗಳು ಕಾಡುವ ಸಾಧ್ಯತೆ ಇದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ಅಗತ್ಯ, ವಿಶೇಷವಾಗಿ ಮೇಲಾಧಿಕಾರಿಗಳೊಂದಿಗೆ ಮಾತನಾಡುವಾಗ ಸಂಯಮ ವಹಿಸಬೇಕು.

ವರ್ಷದ ಮಧ್ಯಭಾಗದಿಂದ ಪರಿಸ್ಥಿತಿಯಲ್ಲಿ ಕ್ರಮೇಣ ಬದಲಾವಣೆ ಕಾಣಲಿದೆ. ಆದಾಯದಲ್ಲಿ ನಿಧಾನವಾದರೂ ಸ್ಥಿರವಾದ ಹೆಚ್ಚಳವಾಗಲಿದೆ. ಸ್ಥಗಿತಗೊಂಡ ಕೆಲಸಗಳು ಮತ್ತೆ ಆರಂಭವಾಗುವ ಸೂಚನೆಗಳಿವೆ.
Leo Horoscope 2026 – ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವರ್ಷ ಮಿಶ್ರ ಅನುಭವಗಳನ್ನು ನೀಡಲಿದೆ. ವರ್ಷದ ಆರಂಭದಲ್ಲಿ ಕೆಲಸಗಳಲ್ಲಿ ವಿಳಂಬವಾಗಬಹುದು, ಈ ಸಮಯದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದಿರುವುದು ಮುಖ್ಯ. ಉದ್ಯೋಗದಲ್ಲಿ ವೃತ್ತಿಪರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹೊಸ ಜವಾಬ್ದಾರಿ ಅಥವಾ ಸ್ಥಾನಬದಲಾವಣೆಯ ಸಾಧ್ಯತೆ ಇದೆ.

ಉದ್ಯಮಿಗಳಿಗೆ ಆರಂಭದಲ್ಲಿ ಅಡೆತಡೆಗಳಿದ್ದರೂ ವರ್ಷದ ದ್ವಿತೀಯಾರ್ಧದಲ್ಲಿ ಲಾಭದಾಯಕ ಫಲಿತಾಂಶಗಳು ದೊರೆಯುತ್ತವೆ. ಆದಾಯ ಮತ್ತು ಖರ್ಚು ಸಮಾನವಾಗಿರುತ್ತದೆ, ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
Virgo Horoscope 2026 – ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುವ ವರ್ಷ. ಹೆಚ್ಚಿನ ಪರಿಶ್ರಮ ಮಾಡಿದಷ್ಟು ಹೆಚ್ಚಿನ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಳ್ಳುವುದು ಒಳಿತು.

ಕುಟುಂಬದಲ್ಲಿ ಸಣ್ಣಮಟ್ಟದ ಕಲಹಗಳ ಸಂಭವ ಇದ್ದರೂ ತಾಳ್ಮೆಯಿಂದ ಅವನ್ನು ನಿಭಾಯಿಸಬಹುದು. ಅಯಾಸ, ನಿದ್ರಾಹೀನತೆ ಹಾಗೂ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ವರ್ಷದ ಅಂತ್ಯದ ವೇಳೆಗೆ ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ.
Libra Horoscope 2026 – ತುಲಾ ರಾಶಿ
ತುಲಾ ರಾಶಿಯವರಿಗೆ ಈ ವರ್ಷ ಶತ್ರುಗಳ ಕಾಟ, ಸಾಲಬಾಧೆ ಮತ್ತು ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಕೆಲಸಗಳಲ್ಲಿ ವಿಳಂಬವಾದರೂ ಅಡೆತಡೆಗಳು ಕ್ರಮೇಣ ದೂರವಾಗುತ್ತವೆ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ.

ಹೂಡಿಕೆ ವಿಷಯದಲ್ಲಿ ಎಚ್ಚರಿಕೆ ಅಗತ್ಯ, ಏಕೆಂದರೆ ಖರ್ಚುಗಳು ಹೆಚ್ಚಾಗಬಹುದು. ದೀರ್ಘಕಾಲದಿಂದ ಬಾಕಿ ಉಳಿದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯುತ್ತವೆ.
Scorpio Horoscope 2026 – ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಗೃಹ ಸಂಬಂಧಿತ ವ್ಯವಹಾರಗಳು ನಿಧಾನಗತಿಯಲ್ಲಿರುತ್ತವೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳಿತು. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಮತ್ತು ಗೌರವ ದೊರೆಯುವ ಸಾಧ್ಯತೆ ಇದೆ. ಹೊಸ ಹೂಡಿಕೆಗಳ ಮೇಲೆ ಸೂಕ್ಷ್ಮ ಗಮನ ಅಗತ್ಯ.

ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅವು ವರ್ಷದ ಅಂತ್ಯದ ವೇಳೆಗೆ ಬಗೆಹರಿಯುತ್ತವೆ. ಆರೋಗ್ಯದ ವಿಷಯದಲ್ಲಿ ವಿಶೇಷ ಜಾಗರೂಕತೆ ವಹಿಸಬೇಕು.
Sagittarius Horoscope 2026 – ಧನು ರಾಶಿ
2026 ಧನು ರಾಶಿಯವರಿಗೆ ಬಹುತೇಕ ಎಲ್ಲ ರೀತಿಯಿಂದಲೂ ಉತ್ತಮ ವರ್ಷ. ವೃತ್ತಿಪರ ಮತ್ತು ವ್ಯವಹಾರಿಕ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು. ಆರ್ಥಿಕವಾಗಿ ಇದು ಲಾಭದಾಯಕ ವರ್ಷವಾಗಲಿದೆ. ಹೊಸ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ಉದ್ಯೋಗಿಗಳಿಗೆ ಹೊಸ ಅವಕಾಶಗಳು ತಾವಾಗಿಯೇ ಬರುತ್ತವೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ಅಗತ್ಯ. ಮಕ್ಕಳ ಪ್ರಗತಿ ಸಂತಸ ನೀಡುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಅವಕಾಶವೂ ಇದೆ.
Capricorn Horoscope 2026 – ಮಕರ ರಾಶಿ
ಮಕರ ರಾಶಿಯವರಿಗೆ 2026 ಹೊಸ ಅವಕಾಶಗಳ ಬಾಗಿಲು ತೆರೆಯುವ ವರ್ಷ. ಆರ್ಥಿಕ ಸ್ಥಿರತೆ ಕಂಡುಬರುತ್ತದೆ. ಹೂಡಿಕೆ ಮಾಡುವವರಿಗೆ ವರ್ಷದ ಮಧ್ಯಭಾಗದಲ್ಲಿ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಆರೋಗ್ಯ ಸಂಬಂಧಿತ ಸಣ್ಣ ಸಮಸ್ಯೆಗಳನ್ನು ಹೊರತುಪಡಿಸಿ ದೊಡ್ಡ ತೊಂದರೆಗಳಿಲ್ಲ.

ಕುಟುಂಬದಲ್ಲಿ ಶಾಂತಿ ಮತ್ತು ಸಮತೋಲನ ಹೆಚ್ಚಾಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಹೊಸದನ್ನು ಆರಂಭಿಸಲು ವರ್ಷದ ದ್ವಿತೀಯಾರ್ಧ ಅನುಕೂಲಕರ.
Aquarius Horoscope 2026 – ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ವರ್ಷ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಆರ್ಥಿಕ ಸ್ಥಿರತೆ ಸಾಧಿಸುವ ಸಾಧ್ಯತೆ ಇದೆ. ಜೀವನದಲ್ಲಿ ಜವಾಬ್ದಾರಿ ಮತ್ತು ಸ್ಥಿರತೆ ಹೆಚ್ಚಾಗುತ್ತದೆ. ಕಠಿಣ ಪರಿಶ್ರಮ ಮತ್ತು ಮೇಲಾಧಿಕಾರಿಗಳ ಬೆಂಬಲದಿಂದ ಬಡ್ತಿ ದೊರೆಯಬಹುದು.

ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಅಥವಾ ಹೊಸ ಜವಾಬ್ದಾರಿಗಳನ್ನು ಸ್ವೀಕರಿಸಲು ಇದು ಸೂಕ್ತ ಸಮಯ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆಯ ಕೊರತೆ ಕಾಣಬಹುದು. ದೂರದ ಪ್ರಯಾಣದ ಸೂಚನೆಗಳಿವೆ.
Pisces Horoscope 2026 – ಮೀನ ರಾಶಿ
ಮೀನ ರಾಶಿಯವರಿಗೆ 2026 ಕಠಿಣ ಪರಿಶ್ರಮ, ತಾಳ್ಮೆ ಮತ್ತು ಆತ್ಮಾವಲೋಕನದ ವರ್ಷ. ಶನಿಯ ಲಗ್ನ ಪ್ರಭಾವದಿಂದ ಕೆಲಸಗಳಲ್ಲಿ ವಿಳಂಬ ಮತ್ತು ದೈಹಿಕ ಆಯಾಸ ಎದುರಾಗಬಹುದು. ಆದರೆ ಸಮಯದೊಂದಿಗೆ ಸ್ಥಿರತೆ ಕಂಡುಬರುತ್ತದೆ.

ಗುರುವಿನ ಬಲ ಹೆಚ್ಚಾಗುವುದರಿಂದ ಧೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಹೊಸ ಆಲೋಚನೆಗಳು ರೂಪಗೊಳ್ಳುತ್ತವೆ. ಶತ್ರುಗಳು ದುರ್ಬಲಗೊಳ್ಳುತ್ತಾರೆ, ವಿವಾದಗಳು ಬಗೆಹರಿಯುತ್ತವೆ. ಸಾಲಗಳಿಂದ ಮುಕ್ತಿ ಪಡೆಯುವ ಸಾಧ್ಯತೆ ಇದೆ.
ಹಕ್ಕುತ್ಯಾಗ (Disclaimer): ಮೇಲೆ ನೀಡಿರುವ ಮಾಹಿತಿಯು ವಿವಿಧ ಜ್ಯೋತಿಷ್ಯ ಮೂಲಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳ ಆಧಾರಿತವಾಗಿದೆ. mahitimane.com ಈ ಮಾಹಿತಿಯ ಖಚಿತತೆಯನ್ನು ಅನುಮೋದಿಸುವುದಿಲ್ಲ. ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ವೈಯಕ್ತಿಕ ನಿರ್ಧಾರಗಳಿಗಾಗಿ ದಯವಿಟ್ಟು ಅರ್ಹ ಜ್ಯೋತಿಷ್ಯ ಅಥವಾ ವೃತ್ತಿಪರರ ಸಲಹೆ ಪಡೆಯಿರಿ.