1.5 Lakh Kotak Kanya Scholarship- 1.5 ಲಕ್ಷ ರೂ. ಕೋಟಕ್ ಕನ್ಯಾ ವಿದ್ಯಾರ್ಥಿವೇತನ | ಈಗಲೇ ಅರ್ಜಿ ಹಾಕಿ…

Spread the love

ಪಿಯುಸಿ ನಂತರದ ವೃತ್ತಿಪರ ಕೋರ್ಸುಗಳ ವ್ಯಾಸಂಗಕ್ಕೆ ಕೋಟಕ್ ಕನ್ಯಾ ವಿದ್ಯಾರ್ಥಿವೇತನ (1.5 Lakh Kotak Kanya Scholarship) ಯೋಜನೆಯಡಿ 1.5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಇಂದಿನ ದಿನಗಳಲ್ಲಿ ಶಿಕ್ಷಣವೆಂದರೆ ಕನಸು ಮಾತ್ರವಲ್ಲ, ಭವಿಷ್ಯ ನಿರ್ಮಾಣದ ಪ್ರಮುಖ ಸಾಧನ. ಆದರೆ ಆರ್ಥಿಕ ಅಡಚಣೆಗಳ ಕಾರಣದಿಂದ ಅನೇಕ ಪ್ರತಿಭಾನ್ವಿತ ಹೆಣ್ಣು ಮಕ್ಕಳು ತಮ್ಮ ಉನ್ನತ ಶಿಕ್ಷಣದ ಕನಸನ್ನು ಅರ್ಧದಲ್ಲೇ ನಿಲ್ಲಿಸಬೇಕಾಗುತ್ತದೆ.

ಇಂತಹ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳು ಮತ್ತು ಕೋಟಕ್ ಶಿಕ್ಷಣ ಪ್ರತಿಷ್ಠಾನಗಳ ಸಹಯೋಗದಲ್ಲಿ ಕೋಟಕ್ ಕನ್ಯಾ ವಿದ್ಯಾರ್ಥಿವೇತನ ಯೋಜನೆಯನ್ನು ರೂಪಿಸಲಾಗಿದೆ.

ಇದನ್ನೂ ಓದಿ: Amrutha Swabhimani Kurigahi Subsidy- ಕುರಿ-ಮೇಕೆ ಸಾಕಾಣಿಕೆಗೆ 43,750 ರೂ. ಸರ್ಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

Kotak Kanya Scholarship ಉದ್ದೇಶ

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ 12ನೇ ತರಗತಿಯ ನಂತರ ಎಂಜಿನಿಯರಿAಗ್, ಮೆಡಿಸಿನ್, ಡಿಸೈನ್, ವಾಸ್ತುಶಿಲ್ಪ ಮುಂತಾದ ವೃತ್ತಿಪರ ಕೋರ್ಸ್’ಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Kotak Kanya Scholarship ಮೊತ್ತವೆಷ್ಟು?

ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ 1.5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತದೆ. ನಿಯಮಗಳಿಗೆ ಒಳಪಟ್ಟಂತೆ ಪದವಿ ಪೂರ್ಣಗೊಳ್ಳುವವರೆಗೆ ಈ ಸಹಾಯ ಮುಂದುವರಿಯುತ್ತದೆ.

ಈ ಸಹಾಯಧನವನ್ನು ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ, ಇಂಟರ್ನೆಟ್ ವೆಚ್ಚ, ಸಾರಿಗೆ, ಲ್ಯಾಪ್‌ಟಾಪ್, ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿ ಸೇರಿ ಮುಂತಾದ ಶೈಕ್ಷಣಿಕ ವೆಚ್ಚಗಳಿಗೆ ಬಳಸಬಹುದು.

ಇದನ್ನೂ ಓದಿ: Morarji Desai Residential School Admission 2026-27- ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ | ಸಂಪೂರ್ಣ ಉಚಿತ ಶಿಕ್ಷಣ

Who Can Apply? – ಯಾರು ಅರ್ಜಿ ಸಲ್ಲಿಸಬಹುದು?

ಕರ್ನಾಟಕವೂ ಸೇರಿದಂತೆ ಭಾರತ ಯಾವುದೇ ರಾಜ್ಯದ ಅರ್ಹ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಬಹುದಾಗಿದೆ. 12ನೇ ತರಗತಿಯಲ್ಲಿ ಕನಿಷ್ಠ 75% ಅಂಕಗಳು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 6,00,000 ರೂ. ಗಿಂತ ಕಡಿಮೆ ಇರಬೇಕು.

2025-26 ಶೈಕ್ಷಣಿಕ ವರ್ಷದಲ್ಲಿ IIT, IIM, IISc (ಬೆಂಗಳೂರು) ಅಥವಾ AICTE / UGC ಮಾನ್ಯತೆ ಪಡೆದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಪದವಿ ಕೋರ್ಸುಗಳ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು. ಅರ್ಹ ಕೋರ್ಸ್’ಗಳು ಹೀಗಿವೆ:

  • ಎಂಜಿನಿಯರಿಂಗ್
  • MBBS
  • ಇಂಟಿಗ್ರೇಟೆಡ್ IIT (5 ವರ್ಷ)
  • ಇಂಟಿಗ್ರೇಟೆಡ್ MS–BS / BS–Research
  • ಡಿಸೈನ್
  • ವಾಸ್ತುಶಿಲ್ಪ – ಇತರ ಮಾನ್ಯತೆ ಪಡೆದ ವೃತ್ತಿಪರ ಕೋರ್ಸ್’ಗಳು

ಇದನ್ನೂ ಓದಿ: Karnataka Prize Money Scholarship- ಎಸ್ಸೆಸ್ಸೆಲ್ಸಿಯಿಂದ ಪಿಜಿ ವರೆಗಿನ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ₹50,000 ಪ್ರೈಜ್ ಮನಿ ಸ್ಕಾಲರ್‌ಶಿಪ್ | ಅರ್ಜಿ ಆಹ್ವಾನ

1.5 Lakh Kotak Kanya Scholarship
1.5 Lakh Kotak Kanya Scholarship

Documents Required for Application- ಅರ್ಜಿಗೆ ಅಗತ್ಯವಿರುವ ದಾಖಲೆಗಳು

  • 12ನೇ ತರಗತಿ ಅಂಕಪಟ್ಟಿ
  • ಪೋಷಕರ ಆದಾಯ ಪ್ರಮಾಣಪತ್ರ
  • 2025-26 ಶೈಕ್ಷಣಿಕ ವರ್ಷದ ಶುಲ್ಕ ರಸೀದಿ
  • ಕಾಲೇಜಿನಿಂದ ಪಡೆದ ಬೋನಾಫೈಡ್ / ಉತ್ತಮ ವಿದ್ಯಾರ್ಥಿ ಪ್ರಮಾಣಪತ್ರ
  • ಕಾಲೇಜು ಸೀಟು ಹಂಚಿಕೆ ಪತ್ರ
  • ಪ್ರವೇಶ ಪರೀಕ್ಷೆಯ ಅಂಕಪಟ್ಟಿ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
  • ಪೋಷಕರ ಮರಣ ಪ್ರಮಾಣಪತ್ರ (ಒಂಟಿ ಪೋಷಕರು / ಅನಾಥರಿಗೆ)
  • ಮನೆಯ ಛಾಯಾಚಿತ್ರಗಳು

ಇದನ್ನೂ ಓದಿ: Whatsapp Banking Services- ಈಗ ವಾಟ್ಸಾಪ್‌ನಲ್ಲೇ ಬ್ಯಾಂಕಿಂಗ್ ಸೇವೆ ಪಡೆಯಿರಿ | ವಿವಿಧ ಬ್ಯಾಂಕುಗಳ ವಾಟ್ಸಾಪ್ ನಂಬರ್ ಇಲ್ಲಿವೆ…

Application Process- ಅರ್ಜಿ ಸಲ್ಲಿಸುವ ವಿಧಾನ

ಕೋಟಕ್ ಕನ್ಯಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ತುಂಬಾ ಸರಳ. ಈ ಲೇಖನದ ಕೊನೆಯಲ್ಲಿ ಅಧಿಕೃತ ಅರ್ಜಿ ಲಿಂಕ್ ನೀಡಲಾಗಿದೆ. ಅದನ್ನು ಬಳಸಿಕೊಂಡು ಅರ್ಜಿ ಹಾಕಬಹುದಾಗಿದೆ.

ಹಂತ 1: ಮೊದಲಿಗೆ ಕೆಳಗೆ ನೀಡಲಾದ ಅಧಿಕೃತ ಅರ್ಜಿ ಲಿಂಕ್  Apply Now ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 2: Register ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ನೋಂದಣಿ ವಿವರಗಳನ್ನು ಭರ್ತಿ ಮಾಡಿ.
ಹಂತ 3:  Apply Now ಬಟನ್‌ಗೆ ನ್ಯಾವಿಗೇಟ್ ಮಾಡಿ ಮತ್ತು ಅದನ್ನು ಕ್ಲಿಕ್ ಮಾಡಿ.
ಹಂತ 4: ನಂತರ ಮೊಬೈಲ್ ನಂಬರ್ ನಮೂದಿಸಿ, ಕ್ಯಾಪ್ಚಾ ಹಾಕಿ ಲಾಗಿನ್ ಬಟನ್ ಒತ್ತಿ.
ಹಂತ 5: ಯಶಸ್ವಿ ಪರಿಶೀಲನೆಯ ನಂತರ, ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ, ಪುಟದ ಕೆಳಭಾಗದಲ್ಲಿರುವ ಚೆಕ್‌ಬಾಕ್ಸ್ ಅನ್ನು ಟಿಕ್ ಮಾಡಿ ಮತ್ತು ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 6: ಅಲ್ಲಿರುವ ಎಲ್ಲಾ ವಿವರಗಳನ್ನು ತುಂಬಿ ಮೇಲ್ಕಾಣಿಸಿದ ಅಗತ್ಯ ದಾಖಲಾತಿಗಳನು ಅಪ್‌ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: KCET 2026 Exam Timetable- 2026ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕ ನಿಗದಿ | ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…

WhatsApp Group Join Now
Telegram Group Join Now

ಅರ್ಜಿ ಸಲ್ಲಿಸುವ ಜನವರಿ 15, 2026 ಕೊನೆಯ ದಿನಾಂಕವಾಗಿದ್ದು; ತಡ ಮಾಡದೇ, ಅರ್ಹರಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ.

ಕೋಟಕ್ ಕನ್ಯಾ ವಿದ್ಯಾರ್ಥಿವೇತನವು ಸಾವಿರಾರು ಹೆಣ್ಣು ಮಕ್ಕಳ ಜೀವನದಲ್ಲಿ ಹೊಸ ಬೆಳಕು ತರಲು ಸಹಾಯ ಮಾಡುತ್ತಿದೆ. ನಿಮ್ಮಲ್ಲಿ ಪ್ರತಿಭೆ ಇದೆ ಆದರೆ ಆರ್ಥಿಕ ಅಡಚಣೆಗಳಿದ್ದರೆ, ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

ಅರ್ಜಿ ಲಿಂಕ್: Apply Now

Karnataka State Scholarship 2025-26- ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು | SSP ಮೂಲಕ ಈಗಲೇ ಅರ್ಜಿ ಹಾಕಿ…


Spread the love
error: Content is protected !!