Village Administrative Officer New Recruitment 2024 : ಕಂದಾಯ ಇಲಾಖೆಯಿಂದ ಮತ್ತೆ 1,000 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನದ ಸೂಚನೆ ಹೊರಬಿದ್ದಿದೆ. ಕಳೆದ ತಿಂಗಳಷ್ಟೇ 1,000 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಇದೀಗ ಮತ್ತೆ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ರಾಜ್ಯಾದ್ಯಂತ ಕಂದಾಯ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಎಲ್ಲಾ ಸೇವೆಗಳು ಮತ್ತು ಯೋಜನೆಗಳು ಸಮರ್ಪಕವಾಗಿ ದೊರೆಯಲು ಗ್ರಾಮ ಆಡಳಿತ ಅಧಿಕಾರಿಗಳ (ಗ್ರಾಮ ಲೆಕ್ಕಾಧಿಕಾರಿ) ಪಾತ್ರ ಮಹತ್ವದ್ದಾಗಿದೆ. ಆದರೆ ರಾಜ್ಯದಲ್ಲಿ ಅನೇಕ ಹುದ್ದೆಗಗಳು ಖಾಲಿ ಇದ್ದು ಇವುಗಳ ಭರ್ತಿಗಾಗಿ ಕಂದಾಯ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದೆ. ಈಗ ಮತ್ತೊಂದು ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ.
ವಿಶೇಷವೆಂದರೆ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ (Village Administrative Officer) ಜೊತೆಗೆ ಸರ್ವೆಯರ್ ಹುದ್ದೆಗಳ ಭರ್ತಿಗೂ ಕಂದಾಯ ಇಲಾಖೆ ಮುಂದಾಗಿದೆ. ರಾಜ್ಯಾದ್ಯಂತ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರ್ವೆ ಕೆಲಸಗಳು ವಿಳಂಬವಾಗುತ್ತಿರುವ ಕಾರಣದಿಂದಾಗಿ ಇದನ್ನು ತಪ್ಪಿಸಲು ಮತ್ತೆ ಸರ್ವೆಯರ್ (Land Surveyor) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕಂದಾಯ ಇಲಾಖೆಯು ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವರಾದಂತಹ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನು?
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಹಾಗೂ ಸರ್ವೆಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.
ಮಾಸಿಕ ಸಂಬಳ ಎಷ್ಟು ಇರುತ್ತದೆ?
ಗ್ರಾಮ ಆಡಳಿತ ಅಧಿಕಾರಿ ಅಥವಾ ಗ್ರಾಮ ಲೆಕ್ಕಾಧಿಕಾರಿಯಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹21,000 ರಿಂದ ₹42,000 ವರೆಗೆ ಸಂಬಳ ಇರುತ್ತದೆ.
ಸರ್ವೆಯರ್ ಅಥವಾ ಭೂಮಾಪಕರ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಮಾಸಿಕ ₹23,500 ರಿಂದ ₹47,650 ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಈಗಾಗಲೇ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಹಾಗೂ 364 ಸರ್ವೆಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿದ ನಂತರ ಶೀಘ್ರದಲ್ಲಿಯೇ ಈ ಹೊಸ ಹುದ್ದೆಗಳ ನೇಮಕಾತಿ ಆರಂಭವಾಗಲಿದೆ.
ಈಗಾಗಲೇ ನಡೆಯುತ್ತಿರುವ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸಲು ಸಾಧ್ಯವಾಗದೇ ಇರುವಂತಹ ಅಭ್ಯರ್ಥಿಗಳು, ಈ ಮುಂದಿನ ಹೊಸ ನೇಮಕಾತಿಗೆ ಈಗಿನಿಂದಲೇ ಪರೀಕ್ಷೆ ತಯಾರಿ ಆರಂಭಿಸಿ ಈ ಸರ್ಕಾರಿ ಹುದ್ದೆಗಳನ್ನು ನಿಮ್ಮದಾಗಿಸಿಕೊಳ್ಳಿ.
ರೈತರ 2 ಲಕ್ಷ ರೂಪಾಯಿ ಸಾಲಮನ್ನಾ | ₹31 ಸಾವಿರ ಕೋಟಿ ಅನುದಾನ Farmers Loan Waiver