ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸೌಲಭ್ಯ ನೀಡಲು ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ (Vidyasiri Post Matric Scholarship 2025-26) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ….
ಶಿಕ್ಷಣ ಮುಂದುವರಿಸಲು ಆರ್ಥಿಕ ಅಡಚಣೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2025-26ನೇ ಸಾಲಿನ ‘ವಿದ್ಯಾಸಿರಿ’ (Vidyasiri) ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಊಟ ಹಾಗೂ ವಸತಿ ಸಹಾಯ ನೀಡಲಾಗುತ್ತದೆ. ವಿಶೇಷವಾಗಿ ಮೆಟ್ರಿಕ್ ನಂತರದ ವೃತ್ತಿಪರ ಹಾಗೂ ತಾಂತ್ರಿಕ ಕೋರ್ಸ್’ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಬಹಳ ಉಪಯುಕ್ತ ಯೋಜನೆಯಾಗಿದೆ.
Another Opportunity for Students- ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ
ಈ ಹಿಂದೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಡಿಸೆಂಬರ್ 20, 2025 ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಆದರೆ ಅನೇಕ ವಿದ್ಯಾರ್ಥಿಗಳ ಮನವಿ ಹಿನ್ನೆಲೆಯಲ್ಲಿ ಸರ್ಕಾರವು ಅರ್ಜಿ ಸಲ್ಲಿಕೆಯ ಅವಧಿಯನ್ನು ಜನವರಿ 31, 2026ರ ವರೆಗೆ ವಿಸ್ತರಿಸಿದೆ.
ಹೀಗಾಗಿ ಇನ್ನೂ ಅರ್ಜಿ ಸಲ್ಲಿಸದೇ ಇರುವ ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ತಕ್ಷಣವೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.
What is the Vidyasiri Scheme?- ವಿದ್ಯಾಸಿರಿ ಯೋಜನೆ ಎಂದರೇನು?
ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ದಾರಿಯಲ್ಲಿ ಬೆಂಬಲ ನೀಡುವ ಉದ್ದೇಶದಿಂದ ‘ವಿದ್ಯಾಸಿರಿ’ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಕೆಳಕಂಡ ಸೌಲಭ್ಯಗಳನ್ನು ಒದಗಿಸಲಾಗುತ್ತದೆ:
- ಶುಲ್ಕ ಮರುಪಾವತಿ (Fee Reimbursement)
- ಊಟ ಸಹಾಯ (Food Assistance)
- ವಸತಿ ಸಹಾಯ (Hostel Facility)
ಈ ಮೂಲಕ ಶಿಕ್ಷಣ ಮುಂದುವರಿಸಲು ಹಣಕಾಸಿನ ಅಡಚಣೆ ಅಡ್ಡಿಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ.

Who Can Apply?- ಯಾರು ಅರ್ಜಿ ಸಲ್ಲಿಸಬಹುದು?
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳು, ಪ್ರವರ್ಗ-1 ವಿದ್ಯಾರ್ಥಿಗಳು ಹಾಗೂ ಅಲೆಮಾರಿ / ಅರೆಅಲೆಮಾರಿ ವರ್ಗದ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
Educational Eligibility- ಶೈಕ್ಷಣಿಕ ಅರ್ಹತೆ
- ಮೆಟ್ರಿಕ್ ನಂತರದ ಕೋರ್ಸ್’ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಪಿಯುಸಿ ಹಾಗೂ ಸಾಮಾನ್ಯ ಪದವಿ ಕೋರ್ಸುಗಳ (BA, BSc, B.Com) ವಿದ್ಯಾರ್ಥಿಗಳಿಗೆ ಈ ಯೋಜನೆಗೆ ಅನ್ವಯಿಸುವುದಿಲ್ಲ.
- ವೃತ್ತಿಪರ, ತಾಂತ್ರಿಕ, ಡಿಪ್ಲೊಮಾ, ಐಟಿಐ, ಇಂಜಿನಿಯರಿಂಗ್, ನರ್ಸಿಂಗ್, ಪ್ಯಾರಾಮೆಡಿಕಲ್, ಇತರೆ ಮೆಟ್ರಿಕ್ ನಂತರದ ಕೋರ್ಸ್’ಗಳು ಅರ್ಹ.
Documents Required to Apply- ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಅರ್ಜಿದಾರರ ಆಧಾರ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್’ನಲ್ಲಿ ಇರುವಂತೆ ಹೆಸರು
- ಮೊಬೈಲ್ ನಂಬರ್
- ಇ-ಮೇಲ್ ಐಡಿ
- 10ನೇ ತರಗತಿ ನೋಂದಣಿ ಸಂಖ್ಯೆ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರದ RD ಸಂಖ್ಯೆ
- ವಿಕಲಚೇತನ ವಿದ್ಯಾರ್ಥಿಗಳಿದ್ದಲ್ಲಿ UDID ಗುರುತಿನ ಸಂಖ್ಯೆ
- ವಿದ್ಯಾರ್ಥಿ ವಾಸವಿರುವ ಜಿಲ್ಲೆ, ತಾಲ್ಲೂಕು, ವಿಧಾನಸಭಾ ಕ್ಷೇತ್ರ ಹಾಗೂ ಮನೆ ವಿಳಾಸ
- ಕಾಲೇಜು ದಾಖಲಾತಿ / ನೋಂದಣಿ ಸಂಖ್ಯೆ
- ಸಂಬಂಧಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ)
- ಹಾಸ್ಟೆಲ್ ವಿವರಗಳು (ವಸತಿ ಸಹಾಯ ಪಡೆಯಲು ಬಯಸಿದಲ್ಲಿ)
ಇದನ್ನೂ ಓದಿ: Zero Interest Agriculture Loan- ರೈತರಿಗೆ ಶೂನ್ಯ ಬಡ್ಡಿ ಕೃಷಿ ಸಾಲ: ಯಾರಿಗೆ, ಹೇಗೆ ಸಿಗುತ್ತದೆ? ಸಂಪೂರ್ಣ ಮಾಹಿತಿ…
Don’t Miss This Opportunity- ಈ ಅವಕಾಶ ತಪ್ಪದೇ ಬಳಸಿಕೊಳ್ಳಿ
ವಿದ್ಯಾಸಿರಿ ಯೋಜನೆ ಮೆಟ್ರಿಕ್ ನಂತರ ಶಿಕ್ಷಣ ಮುಂದುವರಿಸಲು ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಿಜಕ್ಕೂ ವರದಾನವಾಗಿದೆ. ಹಣದ ಕೊರತೆಯಿಂದ ಶಿಕ್ಷಣ ಕೈಬಿಡುವ ಪರಿಸ್ಥಿತಿ ಬರಬಾರದೆಂಬ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.
ನೀವು ಅಥವಾ ನಿಮ್ಮ ಪರಿಚಯದವರು ಅರ್ಹರಾಗಿದ್ದರೆ, ಈ ಮಾಹಿತಿಯನ್ನು ತಪ್ಪದೇ ಹಂಚಿಕೊಳ್ಳಿ ಮತ್ತು 2026ರ ಜನವರಿ 31ರೊಳಗೆ ಅರ್ಜಿ ಸಲ್ಲಿಸಿ ಸರ್ಕಾರದ ಈ ಸೌಲಭ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜನವರಿ 2026
ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ
ಇದೇ ರೀತಿ ಇನ್ನಷ್ಟು ಸ್ಕಾಲರ್‌ಶಿಪ್, ಸರ್ಕಾರಿ ಯೋಜನೆಗಳು ಮತ್ತು ಶಿಕ್ಷಣ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…
- ಅರ್ಜಿ ಲಿಂಕ್: Apply Now
- ಅಧಿಕೃತ ವೆಬ್‌ಸೈಟ್: ssp.postmatric.karnataka.gov.in / bcwd.karnataka.gov.in
- ಸಹಾಯವಾಣಿ ಸಂಖ್ಯೆ: 8050770005