TVS iQube Electric Scooter: ಪೆಟ್ರೋಲ್ ಟೆನ್ಶನ್‌ಗೆ ಬ್ರೇಕ್ | ಒಂದೇ ಚಾರ್ಜ್’ಗೆ ಬರೋಬ್ಬರಿ 212 ಕಿ.ಮೀ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಇಲ್ಲಿದೆ

Spread the love

WhatsApp Group Join Now
Telegram Group Join Now

TVS iQube Electric Scooter: ಒಂದೇ ಚಾರ್ಜ್’ಗೆ 212 ಕಿ.ಮೀ ಮೈಲೇಜ್ ನೀಡುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ, ಫೀಚರ್‌ಗಳು, ವೇರಿಯಂಟ್‌ಗಳು ಮತ್ತು ‘ಬ್ಯಾಟರಿ ಬಾಡಿಗೆ’ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಪ್ರತಿದಿನ ಬೆಳಿಗ್ಗೆ ಎದ್ದು ಪೆಟ್ರೋಲ್ ಬಂಕ್ ಕಡೆ ಹೋದಾಗಲೆಲ್ಲಾ ಏರುತ್ತಿರುವ ಬೆಲೆ ನೋಡಿ ಸುಸ್ತಾಗುತ್ತಿದೆಯೇ? ಜೇಬಿಗೆ ಬೀಳುತ್ತಿರುವ ಕತ್ತರಿಯನ್ನು ತಪ್ಪಿಸಲು ಹೊಸ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಖರೀದಿಸುವ ಆಲೋಚನೆ ನಿಮ್ಮಲ್ಲಿದ್ದರೆ, ಸದ್ಯ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಟಿವಿಎಸ್ ಐಕ್ಯೂಬ್ (TVS iQube) ಬಗ್ಗೆ ನೀವು ತಿಳಿಯಲೇಬೇಕು.

ಕೈಗೆಟುಕುವ ಬೆಲೆ, ಅದ್ಭುತ ರೇಂಜ್ (Driving Range) ಹಾಗೂ ಆಕರ್ಷಕ ಲುಕ್‌ನೊಂದಿಗೆ ಈ ಸ್ಕೂಟರ್ ಇಂದು ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿದೆ. ಜನಸಾಮಾನ್ಯರಿಗೆ ಈ ಸ್ಕೂಟರ್ ಏಕೆ ಇಷ್ಟವಾಗುತ್ತಿದೆ? ಇದರ ಹಿಂದಿನ ಅಸಲಿ ಕಾರಣಗಳೇನು? ಬನ್ನಿ, ವಿವರವಾಗಿ ತಿಳಿಯೋಣ.

ಇದನ್ನೂ ಓದಿ: SSLC Exam-1 Evaluation: ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಮೌಲ್ಯಮಾಪನ ಏಪ್ರಿಲ್ 8ರಿಂದ ಆರಂಭ | ಫಲಿತಾಂಶದ ಬಗ್ಗೆ ಮಹತ್ವದ ಮಾಹಿತಿ

ಮಾರಾಟದಲ್ಲಿ ಹೊಸ ದಾಖಲೆ (Record Breaking Sales)

ಯಾವುದೇ ಒಂದು ವಾಹನ ಎಷ್ಟು ಉತ್ತಮವಾಗಿದೆ ಎಂಬುದನ್ನು ಅದರ ಮಾರಾಟದ ಅಂಕಿ-ಅAಶಗಳೇ ಹೇಳುತ್ತವೆ. ಟಿವಿಎಸ್ ಐಕ್ಯೂಬ್ ವಿಚಾರದಲ್ಲಿ ಗ್ರಾಹಕರ ಪ್ರತಿಕ್ರಿಯೆ ನಿಜಕ್ಕೂ ಅದ್ಭುತವಾಗಿದೆ.

ಕಳೆದ ವರ್ಷದ (2025ರ) ಫೆಬ್ರವರಿಯಲ್ಲಿ ಸುಮಾರು 23,581 ಐಕ್ಯೂಬ್ ಸ್ಕೂಟರ್‌ಗಳು ಮಾರಾಟವಾಗಿದ್ದವು. ಆದರೆ, ಕೇವಲ ಒಂದು ವರ್ಷದಲ್ಲಿ, ಅಂದರೆ 2026ರ ಫೆಬ್ರವರಿ ವೇಳೆಗೆ ಈ ಸಂಖ್ಯೆ 38,054 ಯೂನಿಟ್‌ಗಳಿಗೆ ಜಿಗಿದಿದೆ!

ಕೇವಲ 12 ತಿಂಗಳಲ್ಲಿ 14,473 ಹೆಚ್ಚುವರಿ ಸ್ಕೂಟರ್‌ಗಳು ಸೇಲ್ ಆಗಿದ್ದು, ಇದು ಬರೋಬ್ಬರಿ 61.38% ರಷ್ಟು ದಾಖಲೆಯ ಏರಿಕೆ. ಈ ಮಟ್ಟದ ಬೇಡಿಕೆ ನೋಡಿದರೆ, ಜನರು ಎಲೆಕ್ಟ್ರಿಕ್ ವಾಹನಗಳ (EV Vehicles) ಕಡೆಗೆ ಎಷ್ಟು ವೇಗವಾಗಿ ವಾಲುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: Karnataka High Court Recruitment 2026: ಪದವೀಧರರಿಗೆ ಭರ್ಜರಿ ಅವಕಾಶ: ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳಿಗೆ ಅರ್ಜಿ ಆಹ್ವಾನ, 1 ಲಕ್ಷಕ್ಕೂ ಅಧಿಕ ಸಂಬಳ!

ಟಾಪ್-10 ಪಟ್ಟಿಯಲ್ಲಿರುವ ಏಕೈಕ ಎಲೆಕ್ಟ್ರಿಕ್ ಸ್ಕೂಟರ್! (Top Scooters in India)

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್-10 ಸ್ಕೂಟರ್‌ಗಳ ಪಟ್ಟಿಯನ್ನು ನೀವು ನೋಡಿದರೆ, ಅಲ್ಲಿ ಹೋಂಡಾ ಆಕ್ಟಿವಾ (Honda Activa), ಟಿವಿಎಸ್ ಜೂಪಿಟರ್ (TVS Jupiter) ಮತ್ತು ಸುಜುಕಿ ಆಕ್ಸೆಸ್ (Suzuki Access) ನಂತಹ ದೈತ್ಯ ಪೆಟ್ರೋಲ್ ವಾಹನಗಳ ದರ್ಬಾರು ಕಾಣುತ್ತದೆ.

ಆದರೆ, ವಿಶೇಷವೇನೆಂದರೆ ಈ ಘಟಾನುಘಟಿಗಳ ನಡುವೆ ಸ್ಪರ್ಧಿಸಿ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ (Best Electric Scooter)ಎಂದರೆ ಅದು ಟಿವಿಎಸ್ ಐಕ್ಯೂಬ್ ಮಾತ್ರ!

TVS iQube Electric Scooter
TVS iQube Electric Scooter

ಇದನ್ನೂ ಓದಿ: District Court Recruitment 2026: 10ನೇ ಪಾಸ್ ಆದವರಿಗೆ ಕೋರ್ಟ್‌ನಲ್ಲಿ ₹61,300 ಸಂಬಳದ ಜಾಬ್ | ಸಂಪೂರ್ಣ ಮಾಹಿತಿ ಇಲ್ಲಿದೆ

ನಿಮ್ಮ ಅಗತ್ಯಕ್ಕೆ ತಕ್ಕಂತೆ 3 ವೇರಿಯಂಟ್‌ಗಳು (Variants and Battery Range)

ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಎಲ್ಲರನ್ನೂ ಕಾಡುವ ದೊಡ್ಡ ಪ್ರಶ್ನೆ ‘ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ದೂರ ಹೋಗುತ್ತದೆ?’ ಎಂಬುದು. ಈ ‘ರೇಂಜ್ ಆತಂಕ’ವನ್ನು ದೂರ ಮಾಡಲು ಕಂಪನಿ ಮೂರು ವಿಭಿನ್ನ ಆಯ್ಕೆಗಳನ್ನು ನೀಡಿದೆ:

  • ಬೇಸ್ ಮಾಡೆಲ್ (Base Variant): ಇದು 2.2 kWh ನಿಂದ 3.5 kWh ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ನಗರದೊಳಗಿನ ದೈನಂದಿನ ಓಡಾಟಕ್ಕೆ ಇದು ಹೇಳಿ ಮಾಡಿಸಿದಂತಿದ್ದು, 94 ಕಿ.ಮೀ ನಿಂದ 145 ಕಿ.ಮೀ ವರೆಗೆ ರೇಂಜ್ ನೀಡುತ್ತದೆ.

  • ಐಕ್ಯೂಬ್ ಎಸ್ (iQube S): ಇದು ಮಿಡ್-ರೇಂಜ್ ಆವೃತ್ತಿಯಾಗಿದ್ದು, ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಸುಮಾರು 145 ಕಿ.ಮೀ ವರೆಗೆ ಸಲೀಸಾಗಿ ಸಾಗುತ್ತದೆ.

  • ಐಕ್ಯೂಬ್ ಎಸ್‌ಟಿ (iQube ST): ಇದು ಟಾಪ್-ಎಂಡ್ ವೇರಿಯಂಟ್ (Top End Model). ಇದು 5.3 kWh ಸಾಮರ್ಥ್ಯದ ದೊಡ್ಡ ಬ್ಯಾಟರಿ ಪ್ಯಾಕ್ (Battery Pack) ಹೊಂದಿದ್ದು, ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 212 ಕಿ.ಮೀ ರೇಂಜ್ ನೀಡುತ್ತದೆ! ಅಂದರೆ ಒಮ್ಮೆ ಚಾರ್ಜ್ ಮಾಡಿದರೆ ಬೆಂಗಳೂರಿನಿಂದ ಮೈಸೂರಿಗೆ ಆರಾಮಾಗಿ ಹೋಗಿ ಬರಬಹುದು!

ಇದನ್ನೂ ಓದಿ: Electric Scooter Under Rs 50000: 50 ಸಾವಿರ ರೂ.ಗೆ ಎಲೆಕ್ಟ್ರಿಕ್ ಸ್ಕೂಟರ್ | ಕಾಲೇಜು, ಆಫೀಸ್‌ಗೆ ಚಿಂತೆಯಿಲ್ಲದೆ ಓಡಾಡಿ

ಬೆಲೆ ಮತ್ತು ಆಕರ್ಷಕ ‘ಬ್ಯಾಟರಿ ಬಾಡಿಗೆ’ ಯೋಜನೆ (Price & EMI Offers)

ಟಿವಿಎಸ್ ಐಕ್ಯೂಬ್‌ನ ಆರಂಭಿಕ ಎಕ್ಸ್ಶೋರೂಂ ಬೆಲೆ (ಇx-Shoತಿಡಿoom Pಡಿiಛಿe) ಸುಮಾರು ₹1.08 ಲಕ್ಷಗಳಿಂದ ಶುರುವಾಗುತ್ತದೆ.

WhatsApp Group Join Now
Telegram Group Join Now

‘ಇದು ಸ್ವಲ್ಪ ದುಬಾರಿ ಆಯ್ತು’ ಎಂದು ಯೋಚಿಸುತ್ತಿದ್ದೀರಾ? ನಿಮಗಾಗಿಯೇ ಕಂಪನಿ ‘ಬ್ಯಾಟರಿ-ಆ್ಯಸ್-ಎ-ಸರ್ವಿಸ್’ (Battery-as-a-Service – BaaS) ಎಂಬ ಹೊಸ ಸ್ಕೀಮ್ ತಂದಿದೆ. ಈ ಯೋಜನೆಯಡಿ ನೀವು ಸ್ಕೂಟರ್ ಅನ್ನು ಕೇವಲ ₹59,999 ಪಾವತಿಸಿ ಖರೀದಿಸಬಹುದು.

ಇದನ್ನೂ ಓದಿ: OSM Vextra Electric Scooter Launch: ಖರ್ಚಿಲ್ಲದೆ 110 ಕಿ.ಮೀ ಓಡುವ ಕಡಿಮೆ ಬೆಲೆಯ ಹೊಸ ಸ್ಟೈಲಿಷ್ ಸ್ಕೂಟರ್ ಬಿಡುಗಡೆ

ಬ್ಯಾಟರಿಯನ್ನು ನೀವು ಖರೀದಿಸುವ ಬದಲು, ಅದಕ್ಕೆ ತಿಂಗಳಿಗೆ ಕೇವಲ ₹1,202 ಸಬ್‌ಸ್ಕ್ರಿಪ್ಷನ್ ಶುಲ್ಕ (Monthly Subscription) ಕಟ್ಟಿದರೆ ಸಾಕು. ಇದರಿಂದ ಸ್ಕೂಟರ್ ಖರೀದಿಸುವಾಗಿನ ಆರ್ಥಿಕ ಹೊರೆ (Financial Burden) ಒಮ್ಮೆಲೇ ಬೀಳುವುದಿಲ್ಲ.

ಕಡಿಮೆ ನಿರ್ವಹಣಾ ವೆಚ್ಚ, ಅತ್ಯುತ್ತಮ ಮೈಲೇಜ್, ಸ್ಮಾರ್ಟ್ ಫೀಚರ್‌ಗಳು ಮತ್ತು ವಿಶ್ವಾಸಾರ್ಹ ಬ್ರ‍್ಯಾಂಡ್ ವ್ಯಾಲ್ಯೂ (Brand Value) ಹೊಂದಿರುವ ಟಿವಿಎಸ್ ಐಕ್ಯೂಬ್, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಮಾರ್ಟ್ ಆಯ್ಕೆಯಾಗಿದೆ.

SBI Stree Shakti Package Loan: ಎಸ್‌ಬಿಐ ಸ್ತ್ರೀ ಶಕ್ತಿ ಪ್ಯಾಕೇಜ್ ಲೋನ್ | ಮಹಿಳೆಯರಿಗೆ ₹10 ಲಕ್ಷವರೆಗೆ ಮೇಲಾಧಾರ ರಹಿತ ಸಾಲ


Spread the love
error: Content is protected !!