SSLC Result 2025- ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊಸ ಅಪ್ಡೇಟ್ | 10th ಪಾಸಾಗಲು ಶೇ.35ರಷ್ಟು ಅಂಕ ಕಡ್ಡಾಯ

Spread the love

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ (SSLC Result 2025) ನಿರೀಕ್ಷೆಯಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದೀಗ ನಿರ್ಣಾಯಕ ಘಳಿಗೆ ಸಮೀಪಿಸುತ್ತಿದ್ದು; ರಿಸೆಲ್ಟ್ ಕುರಿತ ಹೊಸ ಅಪ್ಡೇಟ್ (Exam Result Update) ಇಲ್ಲಿದೆ…

WhatsApp Group Join Now
Telegram Group Join Now

2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ರಾಜ್ಯದ 8.96 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಇದೀಗ ಶಿಕ್ಷಣ ಸಚಿವರು ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಫಲಿತಾಂಶ ಕುರಿತು ಹೊಸ ಮಾಹಿತಿ ನೀಡಿದ್ದಾರೆ.

ಈ ವರ್ಷ ಗ್ರೇಸ್ ಮಾರ್ಕ್ಸ್ ಇಲ್ಲ!

ಈ ವರ್ಷದ ಪ್ರಮುಖ ಬದಲಾವಣೆ ಎಂದರೆ, ಕೃಪಾಂಕ ಅಥವಾ ಗ್ರೇಸ್ ಮಾರ್ಕ್ಸ್ ಈ ಸಲ ಇಲ್ಲ. ಕಳೆದ ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಸಹಾಯವಾಗಲೆಂದು ಸಡಿಲ ಮೌಲ್ಯಮಾಪನ ನಿಯಮಗಳನ್ನು ಅನುಸರಿಸಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಹಿನ್ನೆಲೆ, ಕೋವಿಡ್ ಪೂರ್ವದ ಮೌಲ್ಯಮಾಪನ ವಿಧಾನಗಳು ಮರು ಜಾರಿಗೆ ಬಂದಿವೆ.

ಇದಕ್ಕಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (ಕೆಎಸ್‌ಇಎಬಿ) ಈ ಬಾರಿ ನಿಖರ ಮತ್ತು ಪ್ರಾಮಾಣಿಕ ಮೌಲ್ಯಮಾಪನಕ್ಕೆ ಆದ್ಯತೆ ನೀಡಿದ್ದು, ಶೈಕ್ಷಣಿಕ ಮಟ್ಟದಲ್ಲಿ ಶಿಸ್ತು ತರಲು ಮುಂದಾಗಿದೆ. ವಿದ್ಯಾರ್ಥಿಗಳು ಶೇಕಡಾ 35 ಅಂಕಗಳನ್ನು ಗಳಿಸಿದರೆ ಮಾತ್ರ ಉತ್ತೀರ್ಣರಾಗಲು ಸಾಧ್ಯ ಎಂಬ ಮಾಹಿತಿಯನ್ನು ನೀಡಲಾಗಿದೆ.

Karnataka Govt Order- ಸರ್ಕಾರಿ ನೌಕರರಿಗೆ ಮಹತ್ವದ ಆದೇಶ | ನಿವೃತ್ತಿ ಅಂಚಿನಲ್ಲಿರುವ ಈ ನೌಕರರ ವಿರುದ್ಧ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಎಚ್ಚರಿಕೆ…

ಎಸ್‌ಎಸ್‌ಎಲ್‌ಸಿ ರಿಸೆಲ್ಟ್ ಯಾವಾಗ?

ರಾಜ್ಯದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಯು ಮಾರ್ಚ್ 21ರಿಂದ ಪ್ರಾರಂಭವಾಗಿ ಏಪ್ರಿಲ್ 4ರ ವರೆಗೆ ನಡೆದು ಮುಕ್ತಾಯಗೊಂಡಿದೆ. ರಾಜ್ಯದ 15,881 ಶಾಲೆಗಳ ವಿದ್ಯಾರ್ಥಿಗಳು ಒಟ್ಟು 8,96,447 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ.

2025ನೇ ಸಾಲಿನ ವಾರ್ಷಿಕ ಎಸ್‌ಎಸ್‌ಎಸ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಣೆ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಆ ಪ್ರಕಾರ ಬರಲಿರುವ ಮೇ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ರಿಸೆಲ್ಟ್ ಹೊರ ಬೀಳುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಮೌಲ್ಯಮಾಪನ ಕಾರ್ಯವೂ ವೇಗವಾಗಿ ನಡೆಯುತ್ತಿದೆ.

ಹಳೆಯ ವ್ಯವಸ್ಥೆ ಮರು ಜಾರಿ

2019ಕ್ಕೂ ಮೊದಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಲು ಶೇಕಡಾ 35 ಅಂಕ ಅಗತ್ಯವಿತ್ತು. 2020-2022 ಅವಧಿಯಲ್ಲಿ ಕೋವಿಡ್ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ಶೈಕ್ಷಣಿಕ ಪರಿಹಾರ ರೂಪದಲ್ಲಿ ಪಾಸಾಗಲು ಶೇ.25 ಅಂಕ ಸೀಮಿತಗೊಳಿಸಲಾಗಿತ್ತು. ಜೊತೆಗೆ 5-10 ಅಂಕಗಳ ವರೆಗೆ ಗ್ರೇಸ್ ಮಾರ್ಕ್ಸ್’ಗಳನ್ನು ಕೂಡ ನೀಡಲಾಗುತ್ತಿತ್ತು.

ಆದರೆ, ಈ ಬಾರಿ ಈ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಈ ವರ್ಷ ಯಾವುದೇ ರೀತಿಯ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ. ನಿಷ್ಠೆಯಿಂದ ಓದಿದ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ನ್ಯಾಯ ನೀಡುತ್ತದೆ. ಶೈಕ್ಷಣಿಕ ಶಿಸ್ತಿಗೆ ದಕ್ಕೆ ಬಾರದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…

ವಿದ್ಯಾರ್ಥಿಗಳಿಗೆ ಸಲಹೆ

ಈ ವರ್ಷ ವೆಬ್‌ಕಾಸ್ಟಿಂಗ್ ತಂತ್ರಜ್ಞಾನ ಬಳಸಿ ಪರೀಕ್ಷೆ ವಿಧಾನವನ್ನು ಮತ್ತಷ್ಟು ಪ್ರಾಮಾಣಿಕಗೊಳಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಫಲಿತಾಂಶದ ಬಗ್ಗೆ ತೀವ್ರ ಒತ್ತಡ ಇರಿಸಿಕೊಳ್ಳದೆ, ಮಿತವಾದ ನಿರೀಕ್ಷೆಗಳನ್ನು ಹೊಂದಿ. ಫಲಿತಾಂಶ ಏನೇ ಆದರೂ, ಮುಂದಿನ ಹಂತದ ಪೂರಕ ಪರೀಕ್ಷೆ ಹಾಗೂ ಪಿಯು ಪ್ರವೇಶ ತೀರ್ಮಾನವನ್ನು ತಾಳ್ಮೆಯಿಂದ ಮಾಡಿಕೊಳ್ಳಿ.

ಫಲಿತಾಂಶ ಪ್ರಕಟವಾದ ನಂತರ, ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳ ವೇಳಾಪಟ್ಟಿ ಕೂಡಾ ಹೊರಬೀಳಲಿದೆ. ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಮಯ, ಶುಲ್ಕ, ಅರ್ಜಿ ವಿಧಾನಗಳ ಬಗ್ಗೆ ಮಂಡಳಿಯ ವೆಬ್‌ಸೈಟ್‌ನಲ್ಲಿ ಸಿಗಲಿದೆ. ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ.

SSLC Result 2025- ಎಸ್ಸೆಸ್ಸೆಲ್ಸಿ ಫಲಿತಾಂಶ | ಶಿಕ್ಷಣ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!