ಎಸ್‌ಬಿಐ ಸ್ತ್ರೀ ಶಕ್ತಿ ಪ್ಯಾಕೇಜ್ (SBI Stree Shakti Package Loan) ಮೂಲಕ ಮಹಿಳೆಯರಿಗೆ ₹10 ಲಕ್ಷವರೆಗೆ ಮೇಲಾಧಾರ ರಹಿತ ಸಾಲ ಸೌಲಭ್ಯ. ಅರ್ಹತೆ, ಬಡ್ಡಿದರ, ದಾಖಲೆಗಳು ಮತ್ತು ಅರ್ಜಿ ವಿಧಾನ ಸಂಪೂರ್ಣ ಮಾಹಿತಿ…
ಮಹಿಳಾ ಸಬಲೀಕರಣ (Women Empowerment) ಎಂಬುದು ಕೇವಲ ಘೋಷಣೆಯಾಗದೆ, ಕಾರ್ಯರೂಪಕ್ಕೆ ಬರಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ.
ಅದರಲ್ಲೂ ಕರ್ನಾಟಕದಲ್ಲಿ ಮಹಿಳೆಯರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳು (Five Guarantee Schemes) ಯಶಸ್ವಿಯಾಗಿ ಅನುಷ್ಠಾನಗೊಂಡಿವೆ.
ಇದೇ ಸಾಲಿನಲ್ಲಿ, ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (State Bank of India – SBI) ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಸ್ತ್ರೀ ಶಕ್ತಿ ಪ್ಯಾಕೇಜ್’ (Stree Shakti Package) ಎಂಬ ವಿಶೇಷ ಸಾಲ ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯ ಮೂಲಕ ಮಹಿಳೆಯರು ಯಾವುದೇ ಆಸ್ತಿ ಮೇಲಾಧಾರವಿಲ್ಲದೆ (Collateral Free Loan) ಉದ್ಯಮ ಆರಂಭಿಸಲು ಅವಕಾಶ ದೊರೆಯುತ್ತದೆ.
ಸ್ತ್ರೀ ಶಕ್ತಿ ಪ್ಯಾಕೇಜ್ ಎಂದರೇನು? (What is SBI Stree Shakti Package?)
ಎಸ್‌ಬಿಐ ಸ್ತ್ರೀ ಶಕ್ತಿ ಪ್ಯಾಕೇಜ್ ಎನ್ನುವುದು ಮಹಿಳೆಯರನ್ನು ಸ್ವ-ಉದ್ಯೋಗ (Self Employment) ಹಾಗೂ ಉದ್ಯಮಶೀಲತೆ (Women Entrepreneurship) ಕಡೆಗೆ ಪ್ರೇರೇಪಿಸುವ ಸಾಲ ಯೋಜನೆಯಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶ, ಮಹಿಳೆಯರು ಮನೆಯಲ್ಲಿಯೇ ಅಥವಾ ಸಣ್ಣ ಮಟ್ಟದಲ್ಲಿ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬುದಾಗಿದೆ.
ಗೃಹ ಉದ್ಯಮಗಳು (Home Based Business), ಸಣ್ಣ ವ್ಯಾಪಾರ (Small Business), ವೃತ್ತಿಪರ ಸೇವೆಗಳು (Professional Services) ಆರಂಭಿಸಲು ಈ ಸಾಲ ಅತ್ಯಂತ ಸಹಾಯಕವಾಗಿದೆ.
ಇದನ್ನೂ ಓದಿ: KMF SHIMUL Recruitment- ಕೆಎಂಎಫ್ 194 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಶಿಮುಲ್ ಹಾಲು ಒಕ್ಕೂಟ ನೇಮಕಾತಿ
ಯೋಜನೆಯಲ್ಲಿ ಲಭ್ಯವಿರುವ ಪ್ರಮುಖ ಸೌಲಭ್ಯಗಳು (Key Benefits)
ಸ್ತ್ರೀ ಶಕ್ತಿ ಪ್ಯಾಕೇಜ್‌ನಲ್ಲಿ ಮಹಿಳೆಯರಿಗೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ.
ಮಹಿಳೆಯರು ₹25 ಲಕ್ಷದವರೆಗೆ (Up to ₹25 Lakh Loan) ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು.
ಕೆಲವು ವೃತ್ತಿಪರ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ₹50 ಲಕ್ಷದವರೆಗೆ (Loan up to ₹50 Lakh) ಸಾಲ ಸೌಲಭ್ಯವೂ ಲಭ್ಯ.
ಸಾಲದ ಮೊತ್ತ ₹2 ಲಕ್ಷಕ್ಕಿಂತ ಹೆಚ್ಚಿದ್ದರೆ ಸಾಮಾನ್ಯ ಬಡ್ಡಿದರಕ್ಕಿಂತ ಶೇ.0.5% ರಷ್ಟು ಕಡಿಮೆ ಬಡ್ಡಿ (Interest Rate Concession) ವಿಧಿಸಲಾಗುತ್ತದೆ.
ಗರಿಷ್ಠ ₹10 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಆಸ್ತಿ, ಮನೆ ಪತ್ರ ಅಥವಾ ಶೂರಿಟಿ ಅಗತ್ಯವಿಲ್ಲ (Collateral Free Loan up to ₹10 Lakh).
ಈ ಸಾಲವನ್ನು ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ (CGTMSE – Credit Guarantee Fund Trust) ಅಡಿಯಲ್ಲಿ ಮಂಜೂರು ಮಾಡಲಾಗುತ್ತದೆ.
ಇದನ್ನೂ ಓದಿ: SBI Recruitment 2026- ಬೆಂಗಳೂರು ಎಸ್‌ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕನ್ನಡ ಬಲ್ಲವರಿಗೆ ಭರ್ಜರಿ ಅವಕಾಶ

ಯಾರಿಗೆ ಈ ಯೋಜನೆ ಅನ್ವಯಿಸುತ್ತದೆ? (Who Can Apply?)
ಈ ಯೋಜನೆ ವಿವಿಧ ವೃತ್ತಿ ಹಾಗೂ ವ್ಯಾಪಾರಗಳಲ್ಲಿ ತೊಡಗಿರುವ ಮಹಿಳೆಯರಿಗೆ ಮೀಸಲಾಗಿದೆ. ಉದಾಹರಣೆಗೆ:
- ಬೀದಿ ಬದಿ ವ್ಯಾಪಾರಿಗಳು
- ಚಿಲ್ಲರೆ ವ್ಯಾಪಾರಿಗಳು
- ಕೃಷಿ ಆಧಾರಿತ ಉದ್ಯಮಗಳು
- ವೈದ್ಯರು, ದಂತ ವೈದ್ಯರು)
- ಬ್ಯೂಟಿ ಪಾರ್ಲರ್, ಸಲೂನ್ ಉದ್ಯಮ
- ಕೈಗಾರಿಕಾ ಹಾಗೂ ಗೃಹ ಉದ್ಯಮಗಳು
ಸಾಲದ ಪ್ಯಾಕೇಜ್‌ಗಳ ವಿವರ (Loan Amount Details)
ಸ್ತ್ರೀ ಶಕ್ತಿ ಪ್ಯಾಕೇಜ್ ಅಡಿಯಲ್ಲಿ ವಿವಿಧ ಉದ್ಯಮಗಳಿಗೆ ಅನುಗುಣವಾಗಿ ಸಾಲದ ಮೊತ್ತ ನಿಗದಿಪಡಿಸಲಾಗಿದೆ.
- ಚಿಲ್ಲರೆ ವ್ಯಾಪಾರ ಮಾಡುವ ಮಹಿಳೆಯರಿಗೆ ₹50,000 ರಿಂದ ₹2 ಲಕ್ಷದವರೆಗೆ ಸಾಲ (ಖeಣಚಿiಟ ಃusiಟಿess ಐoಚಿಟಿ).
- ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‌ಗಳು (CA), ವೃತ್ತಿಪರ ಉದ್ಯಮಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ₹50,000 ರಿಂದ ₹25 ಲಕ್ಷದವರೆಗೆ ಸಾಲ ಸೌಲಭ್ಯ.
ಯಾವ ಉದ್ಯಮಗಳಿಗೆ ಸಾಲ ಸೌಲಭ್ಯ ಸಿಗುತ್ತದೆ? (Eligible Businesses)
ಈ ಯೋಜನೆಯಡಿ ಕೆಳಕಂಡ ಉದ್ಯಮಗಳಿಗೆ ಸಾಲ ಪಡೆಯಬಹುದು:
- ಸಿದ್ಧ ಉಡುಪುಗಳ ತಯಾರಿಕೆ
- ಬಟ್ಟೆ ವ್ಯಾಪಾರ
- ಡೈರಿ ಉತ್ಪನ್ನಗಳ ಮಾರಾಟ
- ಮೊಟ್ಟೆ ಮತ್ತು ಕೋಳಿ ವ್ಯಾಪಾರ
- ಬೀಜ, ಗೊಬ್ಬರ ಹಾಗೂ ಕೃಷಿ ಉತ್ಪನ್ನಗಳ ಮಾರಾಟ
- ಮನೆಯಲ್ಲಿಯೇ ತಯಾರಿಸುವ ದಿನಬಳಕೆ ವಸ್ತುಗಳು
- ಗುಡಿ ಕೈಗಾರಿಕೆಗಳು
ಇದನ್ನೂ ಓದಿ: Bele Vime- ನಿಮಗೆ ಬೆಳೆ ವಿಮೆ ಹಣ ಜಮೆ ಆಗುತ್ತಿಲ್ಲವೇ? ಹೀಗೆ ಮಾಡಿ ಹಣ ಬರುತ್ತೆ…
ಸಾಲ ಪಡೆಯಲು ಬೇಕಾದ ಪ್ರಮುಖ ದಾಖಲೆಗಳು (Required Documents)
ಸ್ತ್ರೀ ಶಕ್ತಿ ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ:
- ಆಧಾರ್ ಕಾರ್ಡ್ (Aadhaar Card)
- ಪ್ಯಾನ್ ಕಾರ್ಡ್ (PAN Card)
- ಮತದಾರರ ಗುರುತಿನ ಚೀಟಿ (Voter ID)
- ವಿದ್ಯುತ್ ಬಿಲ್ ಅಥವಾ ವಿಳಾಸದ ಪುರಾವೆ (Address Proof)
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ (Passport Size Photo)
- ಉದ್ಯಮದ ನೋಂದಣಿ ಪತ್ರ (Business Registration Certificate)
ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ
ಅರ್ಜಿ ಸಲ್ಲಿಸುವ ವಿಧಾನ (How to Apply for SBI Stree Shakti Loan?)
ಸ್ತ್ರೀ ಶಕ್ತಿ ಪ್ಯಾಕೇಜ್ ಪಡೆಯಲು ಆನ್‌ಲೈನ್ ಅರ್ಜಿ ವ್ಯವಸ್ಥೆ ಇಲ್ಲ. ಅರ್ಜಿ ಸಲ್ಲಿಸಲು ಮಹಿಳೆಯರು:
ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡಬೇಕು. ಬ್ಯಾಂಕ್ ಅಧಿಕಾರಿಗಳಿಂದ ಯೋಜನೆಯ ಮಾಹಿತಿ ಪಡೆದು ಅರ್ಜಿ ಫಾರಂ ಭರ್ತಿ ಮಾಡಬೇಕು.
ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಮತ್ತು ಅರ್ಹತೆ ದೃಢಪಟ್ಟ ಬಳಿಕ ಸಾಲ ಮಂಜೂರಾಗುತ್ತದೆ (Loan Approval Process).
ಒಟ್ಟಾರೆ ಯಾವುದೇ ಆಸ್ತಿ ಮೇಲಾಧಾರವಿಲ್ಲದೆ ₹10 ಲಕ್ಷದವರೆಗೆ ಸಾಲ ಸಿಗುವ ಎಸ್‌ಬಿಐ ಸ್ತ್ರೀ ಶಕ್ತಿ ಪ್ಯಾಕೇಜ್ (SBI Women Loan Scheme) ಮಹಿಳೆಯರಿಗೆ ಅತ್ಯುತ್ತಮ ಅವಕಾಶವಾಗಿದೆ. ಸರಿಯಾದ ಯೋಜನೆ ಮತ್ತು ಪರಿಶ್ರಮ ಇದ್ದರೆ ಈ ಸಾಲ ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.