SBI Home Loan Interest Rate Cut- ಇಂದಿನಿಂದ ಎಸ್‌ಬಿಐ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ | ಹೊಸ ನಿಯಮ ಜಾರಿ | ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ಇಂದಿನಿಂದ ಎಸ್‌ಬಿಐ ಬ್ಯಾಂಕ್ ಕಡಿಮೆ ಬಡ್ಡಿದರಕ್ಕೆ ಸಾಲ (SBI Home Loan Interest Rate Cut) ಒದಗಿಸಲಿದೆ. ಈ ಬಡ್ಡಿದರದ ಪ್ರಯೋಜನ ಯಾರಿಗೆಲ್ಲ ಸಿಗಲಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ದೇಶದ ಅತಿದೊಡ್ಡ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಲಕ್ಷಾಂತರ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗಷ್ಟೇ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು (0.50%) ಇಳಿಕೆ ಮಾಡಿದ್ದು, ಈ ಮೂಲಕ ಬಡ್ಡಿದರದ ಹೊರೆ ಕಡಿಮೆ ಮಾಡುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.

ಇದನ್ನು ಅನುಸರಿಸಿ ಎಸ್‌ಬಿಐ ಕೂಡಾ ತನ್ನ ಗೃಹಸಾಲ (Home Loan) ದರಗಳನ್ನು ಇಳಿಕೆ ಮಾಡಿದ್ದು, ಹೊಸ ದರಗಳು ಇಂದಿನಿAದಲೇ ಅಂದರೆ, 2025ರ ಜೂನ್ 15ರಿಂದಲೇ ಜಾರಿಯಾಗುತ್ತಿವೆ ಎಂದು ಬ್ಯಾಂಕ್ ಅಧಿಕೃತವಾಗಿ ಪ್ರಕಟಿಸಿದೆ. ಈ ಬದಲಾವಣೆಯಿಂದಾಗಿ ಹೊಸ ಹಾಗೂ ಹಳೆಯ ಗೃಹಸಾಲದ ಗ್ರಾಹಕರಿಗೆ ಕೂಡ ಬಡ್ಡಿದರ ಕಡಿತದ ಲಾಭ ಸಿಗಲಿದೆ.

Jeevajala Free Borewell Subsidy- ಜೀವಜಲ ಉಚಿತ ಬೋರ್‌ವೆಲ್ ಸಹಾಯಧನ | ಜೂನ್ 30ರೊಳಗೆ ಅರ್ಜಿ ಸಲ್ಲಿಸಿ ₹4.25 ಲಕ್ಷ ಸಹಾಯಧನ ಪಡೆಯಿರಿ

ಇಂದಿನಿಂದ ಬಡ್ಡಿದರ ಎಷ್ಟಿರುತ್ತದೆ?

ಎಸ್‌ಬಿಐ ಗೃಹಸಾಲದ ಬಡ್ಡಿದರವು ಈಗ ಗ್ರಾಹಕರ ಕ್ರೆಡಿಟ್ ಸ್ಕೋರ್ (CIBIL Score) ಮತ್ತು ಆಯ್ದ ಸಾಲದ ಅವಧಿಯ ಮೇಲೆ ಅವಲಂಬಿತವಾಗಿದ್ದು, ಇನ್ನುಮುಂದೆ ಶೇಕಡಾ 7.50 ರಿಂದ 8.45 ನಡುವೆ ಇರುತ್ತದೆ. ಈ ಬಡ್ಡಿದರ ಕಡಿತದಿಂದಾಗಿ ಗ್ರಾಹಕರ ಮಾಸಿಕ ಕಂತುಗಳು (EMI) ಕಡಿಮೆಯಾಗಲಿದ್ದು, ತಮ್ಮ ತಿಂಗಳಿಗೆ ಖರ್ಚಿನಲ್ಲಿ ಸಹ ಉಳಿತಾಯ ಮಾಡಿಕೊಳ್ಳಬಹುದು.

ರೆಪೊ ದರ ಕಡಿತ ಮುಖ್ಯ ಕಾರಣ

2025ರ ಜೂನ್ 6ರಂದು, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣದುಬ್ಬರ ನಿರ್ವಹಣಾ ನೀತಿಯ ಅಡಿಯಲ್ಲಿ ರೆಪೊ ದರವನ್ನು ಶೇಕಡಾ 6.00ರಿಂದ 5.50ಕ್ಕೆ ಇಳಿಕೆ ಮಾಡಿದೆ. ಇದರ ಪರಿಣಾಮವಾಗಿ ಬಹುತೇಕ ಬ್ಯಾಂಕುಗಳು ತಮ್ಮ ಸಾಲ ದರಗಳನ್ನು ತಿದ್ದುಪಡಿ ಮಾಡುತ್ತಿವೆ. ಎಸ್‌ಬಿಐ ಕೂಡ ಇದರ ಭಾಗವಾಗಿಯೇ ಈ ಬದಲಾವಣೆಯನ್ನು ಜಾರಿಗೆ ತಂದಿದೆ.

ಇಂದಿನಿಂದ ಎಸ್‌ಬಿಐ ಬ್ಯಾಂಕ್ ಕಡಿಮೆ ಬಡ್ಡಿದರಕ್ಕೆ ಸಾಲ ಒದಗಿಸಲಿದೆ. ಈ ಬಡ್ಡಿದರದ ಪ್ರಯೋಜನ ಯಾರಿಗೆಲ್ಲ ಸಿಗಲಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ...
SBI Home Loan Interest Rate Cut June 2025 Latest Update

ಎಸ್‌ಬಿಐ ನೀಡುವ ಗೃಹಸಾಲಗಳು ಮುಖ್ಯವಾಗಿ External Benchmark Lending Rate (EBLR) ಅಥವಾ Repo Linked Lending Rate (RLLR)ಗೆ ಲಿಂಕ್ ಮಾಡಲ್ಪಟ್ಟಿವೆ. ರೆಪೊ ದರದ ಮೇಲೆ ಆಧಾರಿತ ಈ ಬಡ್ಡಿದರ ವ್ಯವಸ್ಥೆ ಪ್ರತಿ ಬದಲಾವಣೆಯಲ್ಲೂ ನೇರವಾಗಿ ಪ್ರತಿಫಲಿಸುತ್ತದೆ.

ಈ ಹಿನ್ನೆಲೆಯಲ್ಲಿ ರೆಪೊ ದರ ಇಳಿಕೆಯಾಗುತ್ತಿದ್ದಂತೆ ಗ್ರಾಹಕರ EMI ಕೂಡ ಇಳಿಕೆಯಾಗುತ್ತದೆ. ಪ್ರಸ್ತುತ ಎಸ್‌ಬಿಐ ಇಬಿಎಲ್‌ಆರ್ ಶೇಕಡಾ 8.15 ಆಗಿದ್ದು, ಗ್ರಾಹಕರ ಸಿಬಿಲ್ ಸ್ಕೋರ್, ಸಾಲದ ಅವಧಿ ಮತ್ತು ಇತರ ಆಯ್ಕೆಗಳನ್ನು ಅವಲಂಬಿಸಿ ಬಡ್ಡಿದರ ಇಳಿಕೆ ಸಾಧ್ಯವಾಗುತ್ತದೆ.

Old Pension Scheme Karnataka- ರಾಜ್ಯ ಸರಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ | ಸರ್ಕಾರದ ಮಹತ್ವದ ಸೂಚನೆ

ಈ ಬಡ್ಡಿದರ ಯಾರಿಗೆ ಪ್ರಯೋಜನವಾಗಲಿದೆ?

ಈ ಬಡ್ಡಿದರ ಕಡಿತ ಫ್ಲೋಟಿಂಗ್ ಇಂಟರೆಸ್ಟ್ ರೇಟ್ (Floating Interest Rate) ಹೊಂದಿರುವ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ. ಯಾರು ಸ್ಥಿರ ಬಡ್ಡಿದರ (Fixed Rate) ಆಯ್ದುಕೊಂಡಿದ್ದಾರೋ, ಅವರ ಸಾಲದ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಆಗದು. ಆದ್ದರಿಂದ, ನೂತನ ಸಾಲಕ್ಕಾಗಿ ಅರ್ಜಿ ಹಾಕುವವರು ರೆಪೊ ಲಿಂಕ್ಡ್ ಅಥವಾ ಫ್ಲೋಟಿಂಗ್ ಬಡ್ಡಿದರ ಆಯ್ಕೆ ಮಾಡುವುದು ಹೆಚ್ಚು ಲಾಭಕಾರಿ.

CIBIL ಸ್ಕೋರ್ ಎಷ್ಟು ಮುಖ್ಯ?

ಹೆಚ್ಚು ಬಡ್ಡಿದರದ ಇಳಿಕೆಯಿಂದ ಲಾಭ ಪಡೆಯಲು, ಗ್ರಾಹಕರ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕಾಗುತ್ತದೆ. ಸಾಮಾನ್ಯವಾಗಿ 750ಕ್ಕೂ ಮೇಲ್ಪಟ್ಟ ಸ್ಕೋರ್ ಹೊಂದಿರುವವರಿಗೆ ಕಡಿಮೆ ಬಡ್ಡಿದರ ಲಭಿಸುತ್ತದೆ. CIBIL ಸ್ಕೋರ್ 300 ರಿಂದ 900ರ ಮಧ್ಯೆ ಇರುತ್ತದೆ. ಉತ್ಕೃಷ್ಟ ಸ್ಕೋರ್ ಹೊಂದಿದರೆ ಸಾಲ ಮಂಜೂರಿಗೂ ಹೆಚ್ಚು ಸಾಧ್ಯತೆ ಮತ್ತು ಕಡಿಮೆ EMI ಲಭಿಸುತ್ತದೆ.

MCLR ದರದಲ್ಲಿ ಬದಲಾವಣೆ ಇಲ್ಲ

ಎಂಪಿಎಲ್‌ಆರ್ ಎಂದರೆ Marginal Cost of Funds Based Lending Rate (MCLR). ಎಸ್‌ಬಿಐ ಈ ದರಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲವೆಂದು ತಿಳಿಸಿದೆ. ಪ್ರಸ್ತುತ ಒಅಐಖ ದರಗಳು ಹೀಗಿವೆ:

  • 1 ತಿಂಗಳ MCLR: ಶೇಕಡಾ 8.20%
  • 3 ತಿಂಗಳ MCLR: ಶೇಕಡಾ 8.55%
  • 6 ತಿಂಗಳ MCLR: ಶೇಕಡಾ 8.90%
  • 1 ವರ್ಷದ MCLR: ಶೇಕಡಾ 9.00%

ಒಅಐಖಗೆ ಲಿಂಕ್ ಮಾಡಲ್ಪಟ್ಟ ಸಾಲಗಳಿಗೆ ಈ ದರಗಳು ಜಾರಿಯಲ್ಲಿರುತ್ತವೆ.

Low Interest Home Loan- ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ಪಡೆಯುವ ಸರಳ ವಿಧಾನ | ಪ್ರಮುಖ ಬ್ಯಾಂಕುಗಳ ಪಟ್ಟಿ ಇಲ್ಲಿದೆ…

ಗೃಹಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು
  • ಗುರುತಿನ ದಾಖಲಾತಿ – ಆಧಾರ್ / ಪ್ಯಾನ್ ಕಾರ್ಡ್
  • ಆದಾಯದ ದಾಖಲೆ – ವೇತನ ರಸೀದು / ಐಟಿಆರ್
  • ಬ್ಯಾಂಕ್ ಸ್ಟೇಟ್ಮೆಂಟ್
  • ಆಸ್ತಿ ಸಂಬಂಧಿತ ದಾಖಲೆಗಳು
  • ಪಾಸ್ಪೋರ್ಟ್ ಸೈಜ್ ಫೋಟೋ

ಈ ಬಡ್ಡಿದರ ಇಳಿಕೆ ಬೆಳವಣಿಗೆ ಎಸ್‌ಬಿಐ ಗ್ರಾಹಕರಿಗೆ ದೀರ್ಘಾವಧಿಯಲ್ಲಿ ಹಣ ಉಳಿತಾಯ ಮಾಡುವ ಅತ್ಯುತ್ತಮ ಅವಕಾಶ ನೀಡುತ್ತದೆ. ಹೊಸ ಗೃಹಸಾಲ ಪಡೆಯಲು ಯೋಚಿಸುತ್ತಿರುವವರು ಅಥವಾ ಈಗಾಗಲೇ ಫ್ಲೋಟಿಂಗ್ ಬಡ್ಡಿದರದ ಅಡಿಯಲ್ಲಿ ಸಾಲ ಪಡೆದಿರುವವರು ಈ ಬದಲಾವಣೆಯಿಂದ ನೂತನ ಲಾಭ ಪಡೆದುಕೊಳ್ಳಬಹುದು.

Home Loan Low Interest Banks- ಕಡಿಮೆ ಬಡ್ಡಿಗೆ ಸಾಲ | ಯಾವ ಬ್ಯಾಂಕ್ ಉತ್ತಮ? | ಟಾಪ್ 10 ಬ್ಯಾಂಕುಗಳ ಪಟ್ಟಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!