ಬ್ಯಾಂಕ್ ಶಾಖೆಗೆ ಹೋಗದೇ ನಿಮಿಷಗಳಲ್ಲಿ ಸಾಲ ಪಡೆಯುವ ಸುಲಭ ಮಾರ್ಗವನ್ನು ಎಸ್ಬಿಐ ಒದಗಿಸಿದೆ. ಎಸ್ಬಿಐ ಡಿಜಿಟಲ್ ಪರ್ಸನಲ್ ಲೋನ್ (SBI Digital Personal Loan) ಮಾಹಿತಿ ಇಲ್ಲಿದೆ…
ಇಂದಿನ ವೇಗದ ಬದುಕಿನಲ್ಲಿ ತುರ್ತು ಹಣಕಾಸಿನ ಅಗತ್ಯ ಯಾರಿಗೂ ಯಾವಾಗ ಬೇಕಾದರೂ ಎದುರಾಗಬಹುದು. ವೈದ್ಯಕೀಯ ವೆಚ್ಚವಾಗಲಿ, ಮಕ್ಕಳ ಶಿಕ್ಷಣವಾಗಲಿ, ಮದುವೆ ಖರ್ಚಾಗಲಿ ಅಥವಾ ಇತರ ಅನಿರೀಕ್ಷಿತ ಸಂದರ್ಭಗಳಾಗಲಿ ಹಣದ ಅವಶ್ಯಕತೆ ಬಂದಾಗ ಬ್ಯಾಂಕ್ ಶಾಖೆಗಳಿಗೆ ಅಲೆಯುವುದು, ದಾಖಲೆಗಳನ್ನು ಸಂಗ್ರಹಿಸುವುದು ಬಹುತೇಕ ಜನರಿಗೆ ದೊಡ್ಡ ತಲೆನೋವಾಗುತ್ತದೆ.
ಈ ಸಮಸ್ಯೆಯನ್ನು ಸರಳಗೊಳಿಸುವ ಉದ್ದೇಶದಿಂದ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India -SBI) ಸಂಪೂರ್ಣ ಡಿಜಿಟಲ್ ಪರ್ಸನಲ್ ಲೋನ್ (SBI Digital Personal Loan) ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದೆ. ಇದರ ಮೂಲಕ ಈಗ ಸಾಲ ಪಡೆಯಲು ಬ್ಯಾಂಕ್ ಶಾಖೆಗೆ ಹೋಗುವ ಅವಶ್ಯಕತೆಯೇ ಇಲ್ಲ.
ಇದನ್ನೂ ಓದಿ: February New Ration Card Application- ಫೆಬ್ರವರಿಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ | ಆಹಾರ ಸಚಿವರ ಮಹತ್ವದ ಮಾಹಿತಿ
Real Time Express Credit Scheme – ‘ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್’ ಏನು ಈ ಯೋಜನೆ?
ಎಸ್ಬಿಐ ಜಾರಿಗೆ ತಂದಿರುವ Real Time Express Credit ಎಂಬ ಈ ಡಿಜಿಟಲ್ ಲೋನ್ ಯೋಜನೆ, ತುರ್ತು ಹಣಕಾಸಿನ ಅಗತ್ಯಗಳಿಗೆ ತಕ್ಷಣದ ಪರಿಹಾರ ನೀಡುವ ಉದ್ದೇಶ ಹೊಂದಿದೆ.
ಈ ಯೋಜನೆಯ ಪ್ರಮುಖ ವಿಶೇಷತೆ ಎಂದರೆ, ಸಾಲದ ಅರ್ಜಿ ಪ್ರಕ್ರಿಯೆಯಿಂದ ಹಿಡಿದು ಹಣ ಖಾತೆಗೆ ಜಮೆಯಾಗುವ ವರೆಗೂ ಎಲ್ಲವೂ ಮೊಬೈಲ್ನಲ್ಲೇ, ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ.
Loan via YONO App – ಯೋನೋ ಆಪ್ ಮೂಲಕ ಸಾಲ ಪಡೆಯುವುದು ಹೇಗೆ?
ಎಸ್ಬಿಐ ಗ್ರಾಹಕರಿಗೆ ಈಗಾಗಲೇ ಪರಿಚಿತವಾಗಿರುವ YONO ಮೊಬೈಲ್ ಆಪ್ ಈ ಡಿಜಿಟಲ್ ಲೋನ್ಗೆ ಮುಖ್ಯ ವೇದಿಕೆಯಾಗಿದೆ. ಯೋನೋ ಆಪ್ಗೆ ಲಾಗಿನ್ ಆದರೆ ಅರ್ಹ ಗ್ರಾಹಕರಿಗೆ ಲೋನ್ ಆಫರ್ ಸ್ವಯಂಚಾಲಿತವಾಗಿ ಕಾಣಿಸುತ್ತದೆ.
ಯಾವುದೇ ಫಾರಂ ತುಂಬುವ ಜಂಜಾಟ ಇಲ್ಲ. ಸಾಲಿನಲ್ಲಿ ನಿಲ್ಲುವ ಅಗತ್ಯವೂ ಇಲ್ಲ. ದಾಖಲೆಗಳನ್ನು ಬ್ಯಾಂಕ್ಗೆ ತೆಗೆದುಕೊಂಡು ಹೋಗುವ ಅವಶ್ಯಕತೆಯೂ ಇಲ್ಲ. ಆಫರ್ ಲಭ್ಯವಿದ್ದರೆ, ಗ್ರಾಹಕರು ಯೋನೋ ಆಪ್ನಲ್ಲೇ ಒಪ್ಪಿಗೆ ನೀಡಿ ಕೆಲವೇ ಕ್ಲಿಕ್ಗಳಲ್ಲಿ ಸಾಲ ಪ್ರಕ್ರಿಯೆ ಮುಗಿಸಬಹುದು.
ಇದನ್ನೂ ಓದಿ: Karnataka Cold Wave Warning- ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಚಳಿ | ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!
Eligibility Criteria – ಯಾರು ಈ ಡಿಜಿಟಲ್ ಲೋನ್ಗೆ ಅರ್ಹರು?
ಈ ಡಿಜಿಟಲ್ ಪರ್ಸನಲ್ ಲೋನ್ ಸೌಲಭ್ಯವು ಎಲ್ಲರಿಗೂ ಅನ್ವಯಿಸುವುದಿಲ್ಲ. ಮುಖ್ಯವಾಗಿ ಎಸ್ಬಿಐಯಲ್ಲಿ ಸ್ಯಾಲರಿ ಖಾತೆ ಹೊಂದಿರುವವರಿಗೆ ಮಾತ್ರ ಈ ಅವಕಾಶ ದೊರೆಯುತ್ತದೆ.
ಕೇಂದ್ರ ಸರ್ಕಾರಿ ನೌಕರರು, ರಾಜ್ಯ ಸರ್ಕಾರಿ ನೌಕರರು, ರಕ್ಷಣಾ ಇಲಾಖೆಯ ಸಿಬ್ಬಂದಿ, ಎಸ್ಬಿಐ ಮೂಲಕ ಸಂಬಳ ಪಡೆಯುವ ಆಯ್ದ ಕಾರ್ಪೊರೇಟ್ ಉದ್ಯೋಗಿಗಳು ಹಾಗೂ ಸ್ಯಾಲರಿ ಖಾತೆ ಮತ್ತು ಸ್ಥಿರ ಆದಾಯ ಇರುವವರಿಗೇ ಈ ಯೋಜನೆ ಉದ್ದೇಶಿಸಲಾಗಿದೆ.

ಇದನ್ನೂ ಓದಿ: 1.5 Lakh Kotak Kanya Scholarship- 1.5 ಲಕ್ಷ ರೂ. ಕೋಟಕ್ ಕನ್ಯಾ ವಿದ್ಯಾರ್ಥಿವೇತನ | ಈಗಲೇ ಅರ್ಜಿ ಹಾಕಿ…
Paperless Process & Instant Approval – ಕಾಗದರಹಿತ ಪ್ರಕ್ರಿಯೆ ಮತ್ತು ತ್ವರಿತ ಮಂಜೂರು
ಈ ಸಾಲದ ಪ್ರಕ್ರಿಯೆ ಸಂಪೂರ್ಣವಾಗಿ ಪೇಪರ್ಲೆಸ್ ಆಗಿದೆ. ಆಧಾರ್ ಆಧಾರಿತ ಒಟಿಪಿ ದೃಢೀಕರಣ. ಸಿಬಿಲ್ ಸ್ಕೋರ್ ಪರಿಶೀಲನೆ. ಡಿಜಿಟಲ್ ಇ-ಸೈನ್ ಹಂತಗಳು ಮುಗಿದ ತಕ್ಷಣವೇ, ಸಾಲದ ಮೊತ್ತ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಇದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ, ಪ್ರಕ್ರಿಯೆಯ ಪಾರದರ್ಶಕತೆಯೂ ಹೆಚ್ಚುತ್ತದೆ.
Loan Amount & Interest Rates – ಸಾಲದ ಮೊತ್ತ ಮತ್ತು ಬಡ್ಡಿದರ ವಿವರ
ಈ ಡಿಜಿಟಲ್ ಪರ್ಸನಲ್ ಲೋನ್ನಲ್ಲಿ ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹35 ಲಕ್ಷದ ವರೆಗೆ ಸಾಲ ಪಡೆಯಲು ಅವಕಾಶವಿದೆ. ಇದು ಖಾಸಗಿ ಸಾಲದಾತರಿಗಿಂತ ಹೆಚ್ಚು ಭದ್ರ ಮತ್ತು ವಿಶ್ವಾಸಾರ್ಹ ಆಯ್ಕೆಯಾಗಿದೆ.
ಎಸ್ಬಿಐಯ 2 ವರ್ಷದ MCLR ಆಧಾರಿತ ಬಡ್ಡಿದರ ನಿಗದಿಯಾಗಲಿದ್ದು; ಪಡೆದ ಸಾಲವು ಅವಧಿಯ ವರೆಗೆ ಬಡ್ಡಿದರ ಸ್ಥಿರವಾಗಿರುತ್ತದೆ ಯಾವುದೇ ಗುಪ್ತ ಶುಲ್ಕಗಳು ಅಥವಾ ಅಡಗಿದ ಖರ್ಚುಗಳಿಲ್ಲ.
CIBIL Score Importance – ಸಿಬಿಲ್ ಸ್ಕೋರ್ಗೆ ಎಷ್ಟು ಮಹತ್ವ?
ಸಾಲ ಮಂಜೂರಿನಲ್ಲಿ ಸಿಬಿಲ್ ಸ್ಕೋರ್ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ 650 – 700 ಅಥವಾ ಅದಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಇದ್ದರೆ ಸಾಲ ಮಂಜೂರು ಅತ್ಯಂತ ಸುಲಭ.
ಉತ್ತಮ ಕ್ರೆಡಿಟ್ ಇತಿಹಾಸ ಮತ್ತು ನಿಯಮಿತ ಆದಾಯವಿದ್ದರೆ ಹೆಚ್ಚಿನ ಮೊತ್ತದ ಸಾಲಕ್ಕೂ ಅರ್ಹರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
Why Choose SBI Digital Loan – ಏಕೆ ಎಸ್ಬಿಐ ಡಿಜಿಟಲ್ ಲೋನ್ ಆಯ್ಕೆ ಮಾಡಬೇಕು?
ಅಧಿಕ ಬಡ್ಡಿದರ ವಿಧಿಸುವ ಖಾಸಗಿ ಫೈನಾನ್ಸ್ ಕಂಪನಿಗಳು, ಚಿಟ್ಫಂಡ್ಗಳು ಅಥವಾ ಅಸಂಘಟಿತ ಸಾಲದಾತರತ್ತ ಹೋಗುವ ಬದಲು, ವಿಶ್ವಾಸಾರ್ಹ ಸರ್ಕಾರಿ ಬ್ಯಾಂಕ್ನಿಂದ ಡಿಜಿಟಲ್ ಮೂಲಕ ಸುರಕ್ಷಿತ ಮತ್ತು ಪಾರದರ್ಶಕ ರೀತಿಯಲ್ಲಿ ಸಾಲ ಪಡೆಯಲು ಇದು ಉತ್ತಮ ಅವಕಾಶ.
ಸ್ಯಾಲರಿ ಖಾತೆ ಹೊಂದಿರುವವರು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ತಮ್ಮ ತುರ್ತು ಹಣಕಾಸಿನ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಬಹುದಾಗಿದೆ.
Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.