Record Rainfall May 2025-ಒಂದು ವಾರ ಮಳೆ ಬಿಡುವು | ಮೇ ತಿಂಗಳು ರಾಜ್ಯದಲ್ಲಿ 54 ವರ್ಷದಲ್ಲೇ ದಾಖಲೆಯ ಮಳೆ

Spread the love

ರಾಜ್ಯದಲ್ಲಿ ರಚ್ಚೆ ಹಿಡಿದು ಸುರಿದ ಮಳೆ (Record Rainfall May 2025) ಒಂದು ವಾರ ಬಿಡುವು ಕೊಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತ ಸಂಪೂರ್ನ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಈ ವರ್ಷದ ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಅಪರೂಪದ ರೀತಿಯಲ್ಲಿ ಸಂಭವಿಸಿದ್ದು, 54 ವರ್ಷಗಳ ಮಳೆಯ ದಾಖಲೆಯನ್ನೇ ಮುರಿದಿದೆ. 2025ರ ಮೇ ತಿಂಗಳಲ್ಲಿ ಬಿದ್ದ ಮಳೆಯ ಪ್ರಮಾಣವು ರಾಜ್ಯದ ವಿವಿಧೆಡೆಗಳಲ್ಲಿ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ.

ವಾಯುಭಾರ ಕುಸಿತ, ಸಮುದ್ರ ಮಟ್ಟದಲ್ಲಿ ಶಾಖದ ವ್ಯತ್ಯಾಸ ಹಾಗೂ ನೈಋತ್ಯದಿಂದ ವೇಗವಾಗಿ ಚಲಿಸಿದ್ದ ಮುಂಗಾರು ಮಾರುತಗಳು ಈ ಭಾರೀ ಮಳೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದ ನೈಋತ್ಯ ಮುಂಗಾರು ಈ ಬಾರಿ ಮುಂಚಿತವಾಗಿಯೇ ಪ್ರವೇಶಿಸಿದೆ.

Vidyadhan Scholarship 2025- SSLC ನಂತರ ಪಿಯುಸಿ, ಪದವಿ ಶಿಕ್ಷಣಕ್ಕೆ ₹75,000 ವರೆಗೆ ಆರ್ಥಿಕ ನೆರವು | ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಒಂದೇ ತಿಂಗಳಲ್ಲಿ ಶೇಕಡಾ 206ರಷ್ಟು ಅಧಿಕ ಮಳೆ

ರಾಜ್ಯದ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿಅಂಶಗಳ ಪ್ರಕಾರ, ಈ ಬಾರಿ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಯ ಸರಾಸರಿ 116 ಮಿ.ಮೀ. ಮಳೆಯ ಬದಲು 283.3 ಮಿ.ಮೀ. ಮಳೆ ಬಿದ್ದಿದೆ. ಇದು ಶೇಕಡಾ 144ರಷ್ಟು ಹೆಚ್ಚು ಮಳೆಯಾಗಿದೆ.

ವಿಶೇಷವೆಂದರೆ, ಮೇ ಒಂದೇ ತಿಂಗಳಲ್ಲಿ 70.2 ಮಿ.ಮೀ. ವಾಡಿಕೆಯ ಬದಲು 214 ಮಿ.ಮೀ. ಮಳೆಯಾಗಿದೆ. ಇದು ಶೇಕಡಾ 206ರಷ್ಟು ಹೆಚ್ಚು. ಈ ಮೂಲಕ 1971ರಿಂದ ಇಲ್ಲಿಯ ವರೆಗಿನ ಪೂರ್ವ ಮುಂಗಾರು ದಾಖಲೆಗಳಲ್ಲಿ 2025ರ ಮೇ ಮಳೆ ದಾಖಲೆ ಬರೆದಿದೆ.

ರಾಜ್ಯದಲ್ಲಿ ರಚ್ಚೆ ಹಿಡಿದು ಸುರಿದ ಮಳೆ ಒಂದು ವಾರ ಬಿಡುವು ಕೊಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತ ಸಂಪೂರ್ನ ಮಾಹಿತಿ ಇಲ್ಲಿದೆ...
Record Rainfall May 2025 Karnataka
ಒಂದು ವಾರ ಮಳೆ ಬಿಡುವು

ಮೇ 30ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಒಳನಾಡು ಜಿಲ್ಲೆಗಳಲ್ಲಿ, ಅತಿ ಸಾಧಾರಣ ಅಥವಾ ಒಣ ಹವಾಮಾನ ಇರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಬಿತ್ತನೆಗೆ ಸಿದ್ಧತೆ ನಡೆಸಲು ರೈತರಿಗೆ ಸೂಕ್ತ ಸಮಯವಾಗಿದೆ.

ಜೂನ್ 1ರಿಂದ 4ರ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ ಕಾಣಿಸಬಹುದು. ಹವಾಮಾನ ಇಲಾಖೆಯ ವರದಿ ಪ್ರಕಾರ:

  • ಜೂನ್ 1-2: ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್
  • ಜೂನ್ 3-4: ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್

ಜೂನ್ 1ರಿಂದ 7ರ ವರೆಗೆ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಹಜ ಮಳೆಯ ಸಾಧ್ಯತೆ ಇದೆ. ಇವು ಪ್ರವಾಸೋದ್ಯಮ, ಮೀನುಗಾರಿಕೆ ಮತ್ತು ಕೃಷಿಗೆ ಸಂಬAಧಿಸಿದ ಎಲ್ಲ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತವೆ.

e-Swathu Property Details- ನಿಮ್ಮ ಆಸ್ತಿಯ ಇ-ಸ್ವತ್ತು ದಾಖಲೆಯನ್ನು ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಿರಿ

ರೈತರಿಗೆ ವರದಾನವಾದ ಪೂರ್ವ ಮುಂಗಾರು ಮಳೆ

ಈ ವರ್ಷದ ಭಾರೀ ಮಳೆಯ ಪರಿಣಾಮದಿಂದ ನದಿಗಳು, ಜಲಾಶಯಗಳು, ಕೆರೆ-ಕಟ್ಟೆಗಳು ಮತ್ತೆ ಜೀವ ತುಂಬಿಕೊAಡಿವೆ. ಇದು ಬರುವ ಮುಂಗಾರು ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಪಶುಪಾಲನೆ, ಕುಡಿಯುವ ನೀರಿನ ಪೂರೈಕೆ ಮತ್ತು ಗ್ರೀನ್‌ಹೌಸ್ ಕೃಷಿಗೆ ಬೇಕಾದ ನೀರಿನ ದೃಷ್ಟಿಯಿಂದ ಈ ಮಳೆ ವರದಾನವಾಗಿದೆ.

ಈ ವರ್ಷದ ಪೂರ್ವ ಮುಂಗಾರು ಮಳೆಯು ಕೃಷಿ ಚಟುವಟಿಕೆಗೆ ತಾತ್ಕಾಲಿಕವಾಗಿ ವಿಳಂಬ ತಂದಿರಬಹುದಾದರೂ, ಇದರಿಂದ ಉಂಟಾದ ಜಲಸಂಪತ್ತಿನ ಪೂರಣ ಮತ್ತು ಮಣ್ಣಿನ ತೇವಾಂಶ ದೀರ್ಘಾವಧಿಯಲ್ಲಿ ರೈತರಿಗೆ ಉಪಕಾರಿಯಾಗಲಿದೆ. ಇದೀಗ ಒಂದು ವಾರ ಮಳೆ ಕಡಿಮೆಯಾಗಲಿರುವ ಕಾರಣ, ರೈತರು ಬಿತ್ತನೆ ಚಟುವಟಿಕೆಗೆ ಸಜ್ಜಾಗಲು ಅನುಕೂಲಕರವಾಗಿದೆ.

Ration Card Raddu- ರೇಷನ್ ಕಾರ್ಡ್ ರದ್ದು | ಸಿಎಂ ಖಡಕ್ ಸೂಚನೆ | ನಿಮ್ಮ ಕಾರ್ಡ್ ರದ್ದಾಗಿದೆಯಾ? ಈಗಲೇ ಚೆಕ್ ಮಾಡಿ


Spread the love
WhatsApp Group Join Now
Telegram Group Join Now
error: Content is protected !!