ಕೇವಲ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆರ್‌ಬಿಐನಲ್ಲಿ 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿಗೆ (RBI Office Attendant Recruitment 2026) ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಬ್ಯಾಂಕ್ ಉದ್ಯೋಗ ಎಂದರೆ ಹೆಚ್ಚಿನವರು ಪದವಿ, ಪಿಜಿ ಓದಿರಬೇಕು ಎಂದು ಭಾವಿಸುತ್ತಾರೆ. ಆದರೆ ಈ ಸಾಮಾನ್ಯ ಕಲ್ಪನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಭರ್ಜರಿ ಬ್ರೇಕ್ ಹಾಕಿದೆ.
ಕೇವಲ 10ನೇ ತರಗತಿ (SSLC) ಪಾಸಾದ ಅಭ್ಯರ್ಥಿಗಳಿಗಾಗಿ ಆರ್‌ಬಿಐ ಇದೀಗ ಆಫೀಸ್ ಅಟೆಂಡೆಂಟ್ (Office Attendant – Group D) ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.
ಕೇಂದ್ರ ಸರ್ಕಾರದ ಈ ಉದ್ಯೋಗದಲ್ಲಿ ಕಾಯಂ ನೇಮಕಾತಿ, ಉತ್ತಮ ಸಂಬಳ, ಭವಿಷ್ಯ ಭದ್ರತೆ ಮತ್ತು ಸೌಲಭ್ಯಗಳು ದೊರೆಯಲಿವೆ. ಅದರಲ್ಲೂ ಕನ್ನಡ ಬಲ್ಲ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಅವಕಾಶ ಲಭ್ಯವಿರುವುದು ವಿಶೇಷ.
RBI Recruitment Overview – ನೇಮಕಾತಿಯ ಸಂಕ್ಷಿಪ್ತ ಮಾಹಿತಿ
- ಸಂಸ್ಥೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)
- ಹುದ್ದೆಯ ಹೆಸರು: ಆಫೀಸ್ ಅಟೆಂಡೆಂಟ್ (Office Attendant – Group D)
- ಒಟ್ಟು ಹುದ್ದೆಗಳು: 572
- ಬೆಂಗಳೂರು ಕಚೇರಿಯಲ್ಲಿ ಖಾಲಿ ಹುದ್ದೆಗಳು: 16
- ಉದ್ಯೋಗ ಸ್ವರೂಪ: ಕೇಂದ್ರ ಸರ್ಕಾರದ ಕಾಯಂ ಉದ್ಯೋಗ
RBI Office Attendant Salary – ಆರ್‌ಬಿಐ ಆಫೀಸ್ ಅಟೆಂಡೆಂಟ್ ವೇತನ ಎಷ್ಟು?
ಹುದ್ದೆ ಗ್ರೂಪ್-ಡಿ ಆಗಿದ್ದರೂ, ಆರ್‌ಬಿಐ ನೀಡುವ ಸಂಬಳ ಮತ್ತು ಸೌಲಭ್ಯಗಳು ತುಂಬಾ ಆಕರ್ಷಕವಾಗಿವೆ. ಮಾಸಿಕ ವೇತನ ವಿವರ ಹೀಗಿದೆ:
- ಮೂಲ ವೇತನ: ₹24,250/-
- ಒಟ್ಟು ತಿಂಗಳ ಸಂಬಳ: ಡಿಎ, ಎಚ್‌ಆರ್‌ಎ, ಸಾರಿಗೆ ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ಸೇರಿಸಿ ಆರಂಭಿಕವಾಗಿ ಸುಮಾರು ₹46,029/- ಕೈಗೆ ಸಿಗಲಿದೆ
ಇದು 10ನೇ ತರಗತಿ ಪಾಸಾದವರಿಗೆ ದೊರೆಯುವ ಅತ್ಯುತ್ತಮ ಸಂಬಳದ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Karnataka CET Application Started 2026- ಸಿಇಟಿ ಅರ್ಜಿ ಸಲ್ಲಿಕೆೆ ಆರಂಭ | ಕೆಇಎ ಮಹತ್ವದ ಮಾಹಿತಿ ಇಲ್ಲಿದೆ…
Who Can Apply? – ಯಾರು ಅರ್ಜಿ ಸಲ್ಲಿಸಬಹುದು?
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಈ ನಿಯಮಗಳನ್ನು ತಪ್ಪದೆ ಗಮನಿಸಿ.
ವಿದ್ಯಾರ್ಹತೆ (Educational Qualification): ಅಭ್ಯರ್ಥಿಯು ಯಾವುದೇ ಮಾನ್ಯ ಮಂಡಳಿಯಿAದ 10ನೇ ತರಗತಿ (SSLC) ಪಾಸಾಗಿರಬೇಕು. ಪದವಿ (Degree) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಹರಲ್ಲ.
01-01-2026ರೊಳಗೆ ಪದವಿ ಮುಗಿಸಿರುವವರು ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಲು ಅವಕಾಶವಿಲ್ಲ. ಡಿಗ್ರಿ ಆಗಿರುವುದನ್ನು ಮರೆಮಾಚಿ ಅರ್ಜಿ ಹಾಕಿದರೆ ದಾಖಲೆ ಪರಿಶೀಲನೆ ವೇಳೆ ನೇರವಾಗಿ ಅನರ್ಹಗೊಳಿಸಲಾಗುತ್ತದೆ.
ವಯೋಮಿತಿ (Age Limit): ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 25 ವರ್ಷದ ಒಳಗಿನವರು ಆರ್‌ಬಿಐ ಆಫೀಸ್ ಅಟೆಂಡೆAಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ ಸಡಿಲಿಕೆ (Age relaxation): ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಭಾಷಾ ಜ್ಞಾನ (Language Requirement): ಬೆಂಗಳೂರು ಕಚೇರಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
ಇದನ್ನೂ ಓದಿ: 1 BHK Flat ₹9.7 Lakhs- ಸರ್ಕಾರದಿಂದ ಕೇವಲ ₹9.7 ಲಕ್ಷಕ್ಕೆ 1 ಬಿಎಚ್‌ಕೆ ಫ್ಲಾಟ್ | ಅರ್ಜಿ ಆಹ್ವಾನ
Application Fee – ಅರ್ಜಿ ಶುಲ್ಕ ಎಷ್ಟು?
- ಸಾಮಾನ್ಯ / ಒಬಿಸಿ / EWS : ₹450/- + 18% GST
- ಎಸ್‌ಸಿ / ಎಸ್‌ಟಿ : ₹150/- (ಇಂಟಿಮೇಷನ್ ಚಾರ್ಜಸ್ ಮಾತ್ರ)

Important Dates – ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: 15 ಜನವರಿ 2026
- ಅರ್ಜಿ ಸಲ್ಲಿಸಲು ಕೊನೆಯ ದಿನ: 04 ಫೆಬ್ರವರಿ 2026
- ಆನ್‌ಲೈನ್ ಪರೀಕ್ಷೆ: 28 ಫೆಬ್ರವರಿ ಮತ್ತು 01 ಮಾರ್ಚ್ 2026
Selection Process – ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಆನ್‌ಲೈನ್ ಪರೀಕ್ಷೆ: ರೀಸನಿಂಗ್, ಇಂಗ್ಲಿಷ್ ಭಾಷೆ, ಸಾಮಾನ್ಯ ಜ್ಞಾನ, ಸಂಖ್ಯಾ ಸಾಮರ್ಥ್ಯ ವಿಷಯಗಳ ಕುರಿತು ಒಟ್ಟು 120 ಪ್ರಶ್ನೆಗಳ 120 ಅಂಕಗಳನ್ನೊಳಗೊಂಡ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ.
ಭಾಷಾ ಪರೀಕ್ಷೆ (LPT): ಆನ್‌ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಇದು ಕಡ್ಡಾಯ ಹಂತವಾಗಿದ್ದು; ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಹುದ್ದೆ ಸಿಗುವುದಿಲ್ಲ.
Exam Centres in Karnataka – ಕರ್ನಾಟಕದ ಪರೀಕ್ಷಾ ಕೇಂದ್ರಗಳು
- ಬೆಂಗಳೂರು
- ಬೆಳಗಾವಿ
- ಕಲಬುರಗಿ
- ಹುಬ್ಬಳ್ಳಿ
- ಮಂಗಳೂರು
- ಮೈಸೂರು
- ಶಿವಮೊಗ್ಗ
- ಉಡುಪಿ
ಇದನ್ನೂ ಓದಿ: KSCCF Recruitment 2026- ಪಿಯುಸಿ, ಪದವಿಧರರಿಗೆ ಸಹಕಾರ ಮಹಾ ಮಂಡಳಿಯಲ್ಲಿ ಉದ್ಯೋಗಾವಕಾಶ | ಅರ್ಜಿ ಆಹ್ವಾನ
Who Should NOT Apply? – ಯಾರು ಅರ್ಜಿ ಹಾಕಬಾರದು?
ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ‘ನನ್ನದು ಎಸ್‌ಎಸ್‌ಎಲ್‌ಸಿ ಮಾತ್ರ ಆಗಿದೆ’ ಎಂದು ಸುಳ್ಳು ಮಾಹಿತಿ ನೀಡಿ ಅರ್ಜಿ ಹಾಕಬೇಡಿ. ದಾಖಲೆ ಪರಿಶೀಲನೆಯ ಸಮಯದಲ್ಲಿ ಡಿಗ್ರಿ ಪತ್ತೆಯಾದರೆ, ಯಾವುದೇ ಹಂತದಲ್ಲಾದರೂ ನಿಮ್ಮ ಅಭ್ಯರ್ಥಿತ್ವ ರದ್ದು ಮಾಡಲಾಗುತ್ತದೆ.
Who Must Apply? – ಯಾರು ಅರ್ಜಿ ಹಾಕಲೇಬೇಕು?
ಕೇವಲ SSLC / PUC ಓದಿ, ಬ್ಯಾಂಕ್ ಉದ್ಯೋಗದ ಕನಸು ಹೊಂದಿರುವವರು ಹಾಗೂ ಕಡಿಮೆ ವಿದ್ಯಾರ್ಹತೆಯಲ್ಲಿ ಉತ್ತಮ ಸಂಬಳದ ಸರ್ಕಾರಿ ಉದ್ಯೋಗ ಬೇಕೆನ್ನುವವರು ತಪ್ಪದೇ ಅರ್ಜಿ ಹಾಕಿ.
ಇಂತಹವರಿಗೆ ಇದು ಜೀವನ ಬದಲಿಸುವ ಸುವರ್ಣಾವಕಾಶ. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಸರಿಯಾದ ಮಾಹಿತಿ ನೀಡಿ ಮಾತ್ರ ಅರ್ಜಿ ಸಲ್ಲಿಸಿ.
Read Official Notification Carefully – ಅಧಿಕೃತ ಅಧಿಸೂಚನೆ ಪೂರ್ಣವಾಗಿ ಓದಿ
ಅರ್ಜಿ ಸಲ್ಲಿಸುವ ಮೊದಲು ಆರ್‌ಬಿಐ ಬಿಡುಗಡೆ ಮಾಡಿದ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಅಕ್ಷರಶಃ ಓದುವುದು ಅತ್ಯಂತ ಮುಖ್ಯ. ವಯೋಮಿತಿ, ವಿದ್ಯಾರ್ಹತೆ, ಭಾಷಾ ಜ್ಞಾನ, ಪರೀಕ್ಷಾ ವಿಧಾನ ಸೇರಿದಂತೆ ಪ್ರತಿಯೊಂದು ನಿಯಮವನ್ನು ತಿಳಿದುಕೊಂಡು ಅರ್ಜಿ ಹಾಕಿದರೆ ಮುಂದಿನ ಹಂತಗಳಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಈ ಭಾರತೀಯ ರಿಸರ್ವ್ ಬ್ಯಾಂಕ್ ಫಲಕ ಎದುರು ಹೊಸ ನೇಮಕಾತಿಯಾದ ಯುವ ಆಫೀಸ್ ಅಟೆಂಡೆಂಟ್ ನಗುಮುಖದಲ್ಲಿ ನಿಂತAತಿರುವ ಅಗಲವಾದ ಫೋಟೋಗ್ರಫಿ ಚಿತ್ರ ರಚಿಸಿ
Important Links – ಪ್ರಮುಖ ಲಿಂಕುಗಳು
- ಅಧಿಸೂಚನೆ: Download
- ಆನ್‌ಲೈನ್ ಅರ್ಜಿ: Apply Now
- ಅಧಿಕೃತ ವೆಬ್‌ಸೈಟ್: rbi.org.in
Agniveer Vayu Recruitment 2026- ಪಿಯುಸಿ, ಡಿಪ್ಲೊಮಾ ಅಭ್ಯರ್ಥಿಗಳಿಗೆ ವಾಯುಪಡೆ ಅಗ್ನಿವೀರರ್ ಹುದ್ದೆಗಳು

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.