RBI Assistant Recruitment 2026: ಆರ್‌ಬಿಐ ಅಸಿಸ್ಟೆಂಟ್ ನೇಮಕಾತಿ; 650 ಹುದ್ದೆಗಳು, ಕನ್ನಡದಲ್ಲೇ ಪರೀಕ್ಷೆ ಬರೆಯುವ ಅವಕಾಶ. ಅರ್ಹತೆ, ವಯೋಮಿತಿ, ವೇತನ, ಪರೀಕ್ಷಾ ಮಾದರಿ ಹಾಗೂ ಅರ್ಜಿ ಸಲ್ಲಿಕೆ ವಿವರಗಳನ್ನು ತಿಳಿದುಕೊಳ್ಳಿ…
ದೇಶದ ಅತ್ಯಂತ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ Reserve Bank of India (RBI)ನಲ್ಲಿ ಅಸಿಸ್ಟೆಂಟ್ ಹುದ್ದೆಗಳಿಗಾಗಿ ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Jobs) ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದೆ.
ಒಟ್ಟು 650 ಹುದ್ದೆಗಳಿದ್ದು, ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷವಾಗಿ ಬೆಂಗಳೂರು ಕಚೇರಿಯಲ್ಲಿ 24 ಹುದ್ದೆಗಳು ಲಭ್ಯವಿವೆ. ವಿಶೇಷವಾಗಿ ಕನ್ನಡ ಭಾಷೆ ಬಲ್ಲವರಿಗೆ ಇದು ವಿಶೇಷ ಅವಕಾಶವಾಗಿದೆ. ಈ ನೇಮಕಾತಿ (RBI Assistant Recruitment 2026) ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.
ಹುದ್ದೆಗಳ ವಿವರ (Vacancy Details)
- ಹುದ್ದೆ ಹೆಸರು: ಅಸಿಸ್ಟೆಂಟ್ (RBI Assistant)
- ಒಟ್ಟು ಹುದ್ದೆಗಳು: 650
- ಬೆಂಗಳೂರು ಕಚೇರಿ: 24 ಹುದ್ದೆಗಳು
ರಾಜ್ಯವಾರು ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅಭ್ಯರ್ಥಿಗಳು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಪರಿಣತಿ ಹೊಂದಿರಬೇಕು.
ವಿದ್ಯಾರ್ಹತೆ (Educational Qualification)
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduate Degree) ಪಡೆದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಕೇವಲ ಉತ್ತೀರ್ಣರಾದರೆ ಸಾಕಾಗುತ್ತದೆ.
ವಯೋಮಿತಿ (Age Limit)
- ಕನಿಷ್ಠ ವಯಸ್ಸು: 20 ವರ್ಷ
- ಗರಿಷ್ಠ ವಯಸ್ಸು: 28 ವರ್ಷ
- ಅಂದರೆ 20/02/1998 ರಿಂದ 01/02/2006 ರ ನಡುವೆ ಜನಿಸಿರಬೇಕು.
ವಯೋವಿನಾಯಿತಿ (Age Relaxation)
- ಪರಿಶಿಷ್ಟ ಜಾತಿ/ಪಂಗಡ: 5 ವರ್ಷ (ಗರಿಷ್ಠ 33 ವರ್ಷ)
- ಹಿಂದುಳಿದ ವರ್ಗ (OBC): 3 ವರ್ಷ (ಗರಿಷ್ಠ 31 ವರ್ಷ)
- ಅಂಗವಿಕಲರು (PwBD): 10 ವರ್ಷ
- ವಿಧವೆ/ಪರಿತ್ಯಕ್ತೆಯರು: ಗರಿಷ್ಠ 35 ವರ್ಷ
- ಮಾಜಿ ಸೈನಿಕರು (Ex-Servicemen): ಸೇವಾವಧಿ ಆಧಾರದಲ್ಲಿ ಗರಿಷ್ಠ 50 ವರ್ಷವರೆಗೆ ಅರ್ಜಿ ಸಲ್ಲಿಸಲು ಅವಕಾಶ
ಇದನ್ನೂ ಓದಿ: HESCOM Recruitment 2026- ಹೆಸ್ಕಾಂ ನೇಮಕಾತಿ 2026: 388 ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, ITI ಪಾಸಾದವರಿಗೆ ಅವಕಾಶ
ವೇತನ ಹಾಗೂ ಸೌಲಭ್ಯಗಳು (Salary & Benefits)
ಆರ್‌ಬಿಐ ಅಸಿಸ್ಟೆಂಟ್ ಹುದ್ದೆಯ ಮೂಲ ವೇತನ 29,000 ರೂ. ಆಗಿದ್ದು, ವಿವಿಧ ಭತ್ಯೆಗಳು (Allowances) ಸೇರಿ ಒಟ್ಟು ಸುಮಾರು 58,514 ರೂ. ವೇತನ ಲಭ್ಯವಾಗುತ್ತದೆ.
ಬ್ಯಾಂಕ್‌ನಿಂದ ವಸತಿ ಸೌಲಭ್ಯ ನೀಡದಿದ್ದಲ್ಲಿ ಮೂಲ ವೇತನದ 15% ಮನೆ ಬಾಡಿಗೆ ಭತ್ಯೆ (HRA) ನೀಡಲಾಗುತ್ತದೆ. ಜೊತೆಗೆ ವೈದ್ಯಕೀಯ ಸೌಲಭ್ಯ, ಪ್ರಯಾಣ ಭತ್ಯೆ ಹಾಗೂ ಇತರ ಸರ್ಕಾರಿ ಸೌಲಭ್ಯಗಳೂ ದೊರೆಯುತ್ತವೆ.
ಇದನ್ನೂ ಓದಿ: RTE Karnataka 2026-27: ಆರ್‌ಟಿಇ 2026-27 ಅರ್ಜಿ ಆಹ್ವಾನ | ಬಡ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಓದುವ ಅವಕಾಶ
ಆಯ್ಕೆ ಪ್ರಕ್ರಿಯೆ (Selection Process)
ಆರ್‌ಬಿಐ ಅಸಿಸ್ಟೆಂಟ್ ನೇಮಕಾತಿ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ:
- ಪೂರ್ವಭಾವಿ ಪರೀಕ್ಷೆ (Preliminary Exam)
- ಮುಖ್ಯ ಪರೀಕ್ಷೆ (Main Exam)
- ಭಾಷಾ ಪ್ರಾವೀಣ್ಯತೆ ಪರೀಕ್ಷೆ (Language Proficiency Test – LPT)
ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಮುಖ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ರಾಜ್ಯದ ಪ್ರಾದೇಶಿಕ ಭಾಷಾ ಪರೀಕ್ಷೆ ಬರೆಯಬೇಕು. ಅಂತಿಮವಾಗಿ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಪರೀಕ್ಷಾ ಮಾದರಿ (Exam Pattern)
ಪೂರ್ವಭಾವಿ ಪರೀಕ್ಷೆ (Prelims Exam Pattern):
- ಒಟ್ಟು 100 ಅಂಕಗಳು – 60 ನಿಮಿಷ
- ಇಂಗ್ಲಿಷ್ ಭಾಷೆ – 30 ಪ್ರಶ್ನೆಗಳು (30 ಅಂಕ)
- ಸಂಖ್ಯಾತ್ಮಕ ಸಾಮರ್ಥ್ಯ (Numerical Ability) – 35 ಪ್ರಶ್ನೆಗಳು
- ತಾರ್ಕಿಕ ಸಾಮರ್ಥ್ಯ (Reasoning Ability) – 35 ಪ್ರಶ್ನೆಗಳು
ಮುಖ್ಯ ಪರೀಕ್ಷೆ (Mains Exam Pattern):
- ಒಟ್ಟು 200 ಅಂಕಗಳು – 135 ನಿಮಿಷ
- ರೀಸನಿಂಗ್ – 40 ಪ್ರಶ್ನೆಗಳು
- ಇಂಗ್ಲಿಷ್ – 40 ಪ್ರಶ್ನೆಗಳು
- ಸಂಖ್ಯಾತ್ಮಕ ಸಾಮರ್ಥ್ಯ – 40 ಪ್ರಶ್ನೆಗಳು
- ಸಾಮಾನ್ಯ ಜ್ಞಾನ (General Awareness) – 40 ಪ್ರಶ್ನೆಗಳು
- ಕಂಪ್ಯೂಟರ್ ಜ್ಞಾನ – 40 ಪ್ರಶ್ನೆಗಳು
ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕಗಳ ನೆಗೆಟಿವ್ ಮಾರ್ಕಿಂಗ್ (Negative Marking) ಇರುತ್ತದೆ.
ಇದನ್ನೂ ಓದಿ: BESCOM Apprenticeship Recruitment- ಬೆಸ್ಕಾಂ ನೇಮಕಾತಿ 2026: 520 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ
ಈ ನೇಮಕಾತಿಯ ವಿಶೇಷತೆ ಎಂದರೆ, ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ (Kannada Medium Exam) ಪರೀಕ್ಷೆ ಬರೆಯುವ ಅವಕಾಶವಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಇದು ದೊಡ್ಡ ಅನುಕೂಲವಾಗಿದೆ. ಆದರೆ ಭಾಷಾ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪರಿಣತಿ ಹೊಂದಿರಬೇಕು.
ಪರೀಕ್ಷಾ ಶುಲ್ಕ (Application Fee)
- SC/ST/PwBD/Ex-Servicemen – ₹50
- ಸಾಮಾನ್ಯ ಹಾಗೂ ಇತರ ಅಭ್ಯರ್ಥಿಗಳು – ₹450
ಆನ್‌ಲೈನ್ ಪೂರ್ವ ತರಬೇತಿ (Pre-Exam Training)
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಬ್ಯಾಂಕ್ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ (Pre-Exam Training) ನೀಡಲಾಗುತ್ತದೆ. ಆಸಕ್ತರು ಸಂಬಂಧಿತ ಪ್ರಾದೇಶಿಕ ಆರ್‌ಬಿಐ ಕಚೇರಿಗೆ ಇಮೇಲ್ ಮೂಲಕ ಮಾಹಿತಿ ನೀಡಬೇಕು.
ಇದನ್ನೂ ಓದಿ: KMF SHIMUL Recruitment- ಕೆಎಂಎಫ್ 194 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಶಿಮುಲ್ ಹಾಲು ಒಕ್ಕೂಟ ನೇಮಕಾತಿ
ಕರ್ನಾಟಕದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಸಂಬಳದ ಸರ್ಕಾರಿ ಉದ್ಯೋಗ (Government Bank Job) ಬಯಸುವವರಿಗೆ ಆರ್‌ಬಿಐ ಅಸಿಸ್ಟೆಂಟ್ ನೇಮಕಾತಿ ಸುವರ್ಣಾವಕಾಶವಾಗಿದೆ.
ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶವಿರುವುದು ಕರ್ನಾಟಕದ ಅಭ್ಯರ್ಥಿಗಳಿಗೆ ಹೆಚ್ಚುವರಿ ಲಾಭ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಪ್ರಮುಖ ದಿನಾಂಕಗಳು (Important Dates)
- ಅರ್ಜಿ ಸಲ್ಲಿಕೆ ಕೊನೆಯ ದಿನ: ಮಾರ್ಚ್ 8, 2026
- ಪೂರ್ವಭಾವಿ ಪರೀಕ್ಷೆ: ಏಪ್ರಿಲ್ 11, 2026
- ಮುಖ್ಯ ಪರೀಕ್ಷೆ: ಜೂನ್ 7, 2026
- ಅರ್ಜಿ ತಿದ್ದುಪಡಿ ದಿನಾಂಕ: ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಅಧಿಸೂಚನೆ: Download
ಅರ್ಜಿ ಲಿಂಕ್: Apply Now
ಅಧಿಕೃತ ವೆಬ್‌ಸೈಟ್: rbi.org.in
Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.