Ration Card e-KYC- ರೇಷನ್ ಕಾರ್ಡುದಾರರಿಗೆ ಸರ್ಕಾರದ ಎಚ್ಚರಿಕೆ | ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಕಾರ್ಡ್ ರದ್ದು | ಮಹತ್ವದ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳು ಜೂನ್ 30ರೊಳಗೆ ಇ-ಕೆವೈಸಿ (Ration Card e-KYC) ಮಾಡುವಂತೆ ರಾಜ್ಯ ಸರ್ಕಾರ ಗಡುವು ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಸರ್ಕಾರವು ಎಲ್ಲ ಪಡಿತರ ಚೀಟಿ (Ration Card) ಹೊಂದಿರುವ ಫಲಾನುಭವಿಗಳಿಗೆ ಮಹತ್ವದ ಸೂಚನೆಯನ್ನು ನೀಡಿದ್ದು, ಎಲ್ಲಾ ಸದಸ್ಯರ ಇ-ಕೆವೈಸಿ ಪ್ರಕ್ರಿಯೆನ್ನು ಜೂನ್ 30, 2025ರೊಳಗೆ ಪೂರ್ಣಗೊಳಿಸುವಂತೆ ಆದೇಶಿಸಿದೆ. ಈ ಗಡುವು ಮೀರಿ ಇ-ಕೆವೈಸಿ ಮಾಡಿಸದ ಫಲಾನುಭವಿಗಳ ಪಡಿತರ ಚೀಟಿಯು ರದ್ದಾಗುವ ಸಾಧ್ಯತೆ ಇದೆ.

ಹೆಚ್ಚುವರಿ ಆದಾಯ ಹೊಂದಿರುವವರು, ನಕಲಿ ದಾಖಲೆಗಳ ಮೂಲಕ ಪಡಿತರ ಸೌಲಭ್ಯ ಪಡೆದುಕೊಂಡವರು ಹಾಗೂ ಸರ್ಕಾರಿ ನೌಕರರು ಇತ್ಯಾದಿ ಅನರ್ಹ ವ್ಯಕ್ತಿಗಳು ರೇಷನ್ ಕಾರ್ಡ್ ಮೂಲಕ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇಂಥವರನ್ನು ಹೊರಗಿಡುವ ಉದ್ದೇಶದಿಂದ ಸರ್ಕಾರ ಈ ಕ್ರಮಕೈಗೊಂಡಿದೆ.

Subsidy Schemes 2025- ಲಿಂಗಾಯತ, ಒಕ್ಕಲಿಗ, ಕುರುಬರಿಗೆ ಭರ್ಜರಿ ಸರ್ಕಾರಿ ಸಬ್ಸಿಡಿ ಯೋಜನೆಗಳು | 2025ನೇ ಸಾಲಿನ ಯೋಜನೆಗಳಿಗೆ ಅರ್ಜಿ ಆಹ್ವಾನ

ಇ-ಕೆವೈಸಿ ಎಂದರೇನು? ಯಾಕೆ ಇದು ಕಡ್ಡಾಯವಾಗಿದೆ?

ಇ-ಕೆವೈಸಿ (Electronic Know Your Customer) ಎನ್ನುವುದು ಪಡಿತರ ಚೀಟಿಗೆ ಸಂಬAಧಿಸಿದ ಮೂಲ ಮಾಹಿತಿ ಪರಿಶೀಲನೆ ಪ್ರಕ್ರಿಯೆ. ಇದರಲ್ಲಿ ಪ್ರತಿಯೊಬ್ಬ ಸದಸ್ಯನ ಆಧಾರ್ ಕಾರ್ಡ್ ವಿವರಗಳು, ಬೆರಳಚ್ಚು ಪ್ರಮಾಣೀಕರಣ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಈ ಪ್ರಕ್ರಿಯೆಯು ಡಿಜಿಟಲ್ ತಂತ್ರಾಂಶದ ಮೂಲಕ ನಿಖರವಾಗಿರುತ್ತದೆ. ಇದರಿಂದ ನಕಲಿ ಅಥವಾ ಡುಪ್ಲಿಕೇಟ್ ಕಾರ್ಡ್ಗಳನ್ನು ತಡೆಯಲು ಸಾಧ್ಯವಾಗುತ್ತದೆ. ಇದರಿಂದ ಅನರ್ಹ ಫಲಾನುಭವಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳು ಜೂನ್ 30ರೊಳಗೆ ಇ-ಕೆವೈಸಿ ಮಾಡುವಂತೆ ರಾಜ್ಯ ಸರ್ಕಾರ ಗಡುವು ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
Ration Card e-KYC Karnataka 2025 June 30 Last Date
ಜೂನ್ 30ರೊಳಗೆ ಇ-ಕೆವೈಸಿ ಮಾಡಿಸಿ…

ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಈ ವರ್ಷದ ಜೂನ್ 30ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಈ ದಿನಾಂಕದ ಬಳಿಕ ಇನ್ನೂ ಇ-ಕೆವೈಸಿ ಮಾಡಿಸದ ಫಲಾನುಭವಿಗಳಿಗೆ ಪಡಿತರ ಧಾನ್ಯ ವಿತರಣೆಯನ್ನು ನಿಲ್ಲಿಸಲಾಗುವುದು. ಕಾರ್ಡ್ ರದ್ದು ಪಟ್ಟಿ ಸೇರಬಹುದು. ಇತರ ಸರ್ಕಾರಿ ಯೋಜನೆಗಳ ಪ್ರಯೋಜನಗಳಿಗೂ ನಿರಾಕರಣೆಯಾಗಬಹುದು.

e-Swathu Abhiyana- ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಅಭಿಯಾನ | ಇನ್ನು ಸ್ವತ್ತು ವಿತರಣೆ ಮತ್ತಷ್ಟು ಸುಲಭ

ಇ-ಕೆವೈಸಿ ಪ್ರಕ್ರಿಯೆ ಹೇಗೆ ಮಾಡಿಸಬೇಕು?

ಇದು ಬಹಳ ಸರಳವಾದ ಪ್ರಕ್ರಿಯೆ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ. ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್’ಗಳ ಪ್ರತಿಗಳು (ಎಲ್ಲ ಸದಸ್ಯರದು), ಸಕ್ರಿಯ ಮೊಬೈಲ್ ನಂಬರ್, ಜಾತಿ ಪ್ರಮಾಣ ಪತ್ರ (ಅರ್ಹರಿದ್ದರೆ) ಹಾಗೂ ಅನಿಲ ಸಂಪರ್ಕ ಹೊಂದಿದರೆ ಗ್ರಾಹಕ ಸಂಖ್ಯೆ, ಇವುಗಳನ್ನು ಕೊಂಡೊಯ್ಯಬೇಕು.

ಅAಗಡಿದಾರರು ನಿಮ್ಮ ಬೆರಳಚ್ಚು ಪಡೆಯುತ್ತಾರೆ ಮತ್ತು ತಕ್ಷಣ ಡಿಜಿಟಲ್ ಮೂಲಕ ಇ-ಕೆವೈಸಿ ಪ್ರಕ್ರಿಯೆ ನಡೆಸುತ್ತಾರೆ. ಈ ಸೇವೆ ಪೂರ್ಣವಾಗಿ ಉಚಿತವಾಗಿದ್ದು ಇದಕ್ಕಾಗಿ ಯಾವುದೇ ಶುಲ್ಕವನ್ನು ಕೊಡಬೇಕಾಗಿಲ್ಲ.

ಇ-ಕೆವೈಸಿ ಆಗಿರುವುದನ್ನು ಚೆಕ್ ಮಾಡುವುದು ಹೇಗೆ?

ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಮುಗಿದಿದೆಯೇ ಎಂಬುದನ್ನು ನೋಡಲು ಆಹಾರ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ. ಅದಕ್ಕಾಗಿ ಮೊದಲಿಗೆ Ration Card E-KYC Status ಕ್ಲಿಕ್ ಮಾಡಿ.

ಆಹಾರ ಇಲಾಖೆ ತಂತ್ರಾಂಶ ತೆರೆದುಕೊಳ್ಳುತ್ತದೆ. ಅಲ್ಲಿ ‘ಇ-ಸ್ಥಿತಿ’ ಕಾಲಮ್ಮಿನಲ್ಲಿ ಕಾಣುವ ‘ಹಾಲಿ ಪಡಿತರ ಚೀಟಿಯ ಸ್ಥಿತಿ’ ಬಟನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡಿನ ಸ್ಥಿತಿ ಮತ್ತು ಇ-ಕೆವೈಸಿ (e-KYC Status) ಮುಗಿದಿದೆಯೇ ಎಂಬ ಮಾಹಿತಿ ತಕ್ಷಣವೇ ಲಭ್ಯವಾಗುತ್ತದೆ.

Pending Payment Released- ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ 2000 ರೂ. ಬಾಕಿ ಹಣ ಬಿಡುಗಡೆ | ನಿಮಗೆ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ

ಇ-ಕೆವೈಸಿ ಮಾಡಿಸದಿದ್ದರೆ ಏನಾಗಬಹುದು?
  • ಪಡಿತರ ಚೀಟಿ ಅಮಾನ್ಯವಾಗಬಹುದು
  • ಪಡಿತರ ಧಾನ್ಯ ವಿತರಣೆಗೆ ತಡೆ
  • ಇತರ ಸರ್ಕಾರಿ ಯೋಜನೆಗಳ ಪ್ರಯೋಜನ ಬಂದ್
  • ಮತ್ತೆ ಕಾರ್ಡ್ ಪಡೆಯಲು ಪ್ರತ್ಯೇಕ ಪ್ರಕ್ರಿಯೆ ಅನುಸರಿಸಬೇಕಾಗಬಹುದು

ಈಗಲೇ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ, ಬೇಕಾದ ದಾಖಲೆಗಳೊಂದಿಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ. ಇದು ನಿಮಗೆ ಮತ್ತು ನಿಮ್ಮ ಕುಟುಂಬದ ಆಹಾರ ಭದ್ರತೆಗೆ ಬಹಳ ಮಹತ್ವದ್ದಾಗಿದೆ. ಸರಕಾರದಿಂದ ಸಿಗುವ ಸೌಲಭ್ಯ ಮುಂದುವರೆಯಲು ಇದು ಅವಶ್ಯಕ.

Karnataka Free Tailoring Machine- ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now


Spread the love
error: Content is protected !!