Ration Card eKYC- ರೇಷನ್ ಕಾರ್ಡ್ ಹೊಂದಿರುವರರಿಗೆ ಸರ್ಕಾರದ ಪ್ರಮುಖ ಎಚ್ಚರಿಕೆ | ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಮಹತ್ವದ ಸೂಚನೆ ನೀಡಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ರೇಷನ್ ಕಾರ್ಡ್ ರದ್ದತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು; ಪ್ರತೀ ತಿಂಗಳೂ ಸಾವಿರಾರು ರೇಷನ್ ಕಾರ್ಡುಗಳು ರದ್ದಾಗುತ್ತಿವೆ. ಹೀಗೆ ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಆಹಾರ ಇಲಾಖೆ ತಂತ್ರಾಂಶದಲ್ಲಿ ಪ್ರಕಟಿಸಲಾಗುತ್ತಿದೆ.

ಇ-ಕೆವೈಸಿ ಕಡ್ಡಾಯ

ಸರಕಾರದ ‘ಮಿತಿ’ಯನ್ನು ಮೀರಿ ವಾರ್ಷಿಕ ಆದಾಯ ಹೊಂದಿದವರು, ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ಉದ್ಯೋಗಿಗಳು, ನಕಲಿ ದಾಖಲೆ ನೀಡಿ ರೇಷನ್ ಕಾರ್ಡ್ ಪಡೆದವರನ್ನು ನಿರ್ದಾಕ್ಷಿಣ್ಯವಾಗಿ ಪಡಿತರ ಸೌಲಭ್ಯದಿಂದ ಹೊರಗಿಡಲಾಗುತ್ತಿದೆ.

ಅನರ್ಹ ಫಲಾನುಭವಿಗಳು ಪಡಿತರ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಈಗ ಇ-ಕೆವೈಸಿ ಪ್ರಕ್ರಿಯೆ ಕೂಡ ಒಂದಾಗಿದೆ. ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅಂಥವರನ್ನು ಪಡಿತರ ವ್ಯವಸ್ಥೆಯಿಂದ ಹೊರಗಿಡಲು ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ.

PMFME Subsidy Scheme- ಮಹಿಳೆಯರು, ರೈತರಿಗೆ ₹15 ಲಕ್ಷ ಸಹಾಯಧನ | ಸಣ್ಣ ಉದ್ಯಮ ಸ್ಥಾಪನೆಗೆ ಆರ್ಥಿಕ ನೆರವು | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಇ-ಕೆವೈಸಿ ಎಂದರೆ ಏನು? ಇದನ್ನು ಏಕೆ ಮಾಡಿಸಬೇಕು?

ಇ-ಕೆವೈಸಿ (eKYC- Electronic Know Your Customer) ಅರ್ಹ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ಪ್ರಕ್ರಿಯೆಯಾಗಿದೆ. ಇದರಿಂದ ಪಡಿತರ ಚೀಟಿದಾರರ ಗುರುತನ್ನು ನಿಖರವಾಗಿ ದೃಢಪಡಿಸಲಾಗುತ್ತದೆ. ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಮಾಹಿತಿ – ಹೆಸರು, ಮೂಲ ದಾಖಲೆಗಳು ಮತ್ತು ಬೆರಳಚ್ಚುಗಳನ್ನು ಪರಿಶೀಲಿಸಿ, ಡಿಜಿಟಲ್ ತಂತ್ರಾಂಶದಲ್ಲಿ ನವೀಕರಿಸಲಾಗುತ್ತದೆ.

ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಮಹತ್ವದ ಸೂಚನೆ ನೀಡಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ...
Ration Card eKYC Deadline
ಜಿಲ್ಲಾಧಿಕಾರಿಗಳ ಮೂಲಕ ಮುನ್ನೆಚ್ಚರಿಕೆ ಪ್ರಕಟಣೆ

ಸರ್ಕಾರದ ಅಧಿಸೂಚನೆಯಂತೆ ಇ-ಕೆವೈಸಿ ಪ್ರಕ್ರಿಯೆಯನ್ನು ಏಪ್ರಿಲ್ 30, 2025ರೊಳಗೆ ಸಂಪೂರ್ಣಗೊಳಿಸಬೇಕಾಗಿದೆ. ಈ ಗಡುವನ್ನು ಮೀರುವುದರಿಂದ, ನೀವು ಅಥವಾ ನಿಮ್ಮ ಕುಟುಂಬದವರು ಪಡಿತರ ಪಡೆಯಲು ಅಸಾಧ್ಯವಾಗಬಹುದು.

ಏಪ್ರಿಲ್ 30ರೊಳಗೆ ನಿಗಧಿತ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಸಲ್ಲಿಸಲು ರಾಜ್ಯಾದ್ಯಂತ ಆಯಾ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಪ್ರಕಟಣೆ ಹೊರಡಿಸಿದೆ. ಇ-ಕೆವೈಸಿಗೆ ಹಾಜರಾಗುವಾಗ ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು:

  • ರೇಷನ್ ಕಾರ್ಡ್ (ಪಡಿತರ ಚೀಟಿ)
  • ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್
  • ಒಂದು ಪ್ರಸ್ತುತ ಸಕ್ರಿಯ ಮೊಬೈಲ್ ನಂಬರ್
  • ಎಸ್ಸಿ/ಎಸ್ಟಿ ಅಥವಾ ಇತರೆ ಮೀಸಲಾತಿಗೆ ಹೊಂದಿದವರಿಗೆ ಜಾತಿ ಪ್ರಮಾಣ ಪತ್ರ
  • ಅನಿಲ ಸಂಪರ್ಕ ಇದ್ದರೆ ಗ್ರಾಹಕ ಸಂಖ್ಯೆ

Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…

ಇ-ಕೆವೈಸಿ ಪ್ರಕ್ರಿಯೆ ಹೇಗೆ ಮಾಡಬೇಕು?

ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ. ರೇಷನ್ ಕಾರ್ಡ್ ಮತ್ತು ಸದಸ್ಯರ ಆಧಾರ್ ವಿವರಗಳನ್ನು ನೀಡಿ. ಅಂಗಡಿದಾರರು, ನಿಮ್ಮ ಬೆರಳಚ್ಚು ಪಡೆದು ಡಿಜಿಟಲ್ ತಂತ್ರಾಂಶದ ಮೂಲಕ ಇ-ಕೆವೈಸಿ ಮಾಡುತ್ತಾರೆ. ಈ ಸೇವೆ ಪೂರ್ಣವಾಗಿ ಉಚಿತವಾಗಿದೆ. ಯಾವುದೇ ಶುಲ್ಕ ಕೊಡಬೇಕಾಗಿಲ್ಲ.

ಇ-ಕೆವೈಸಿ ಆಗಿರುವುದನ್ನು ಚೆಕ್ ಮಾಡುವುದು ಹೇಗೆ?

ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಮುಗಿದಿದೆಯೇ ಎಂಬುದನ್ನು ನೋಡಲು ಆಹಾರ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ. ಅದಕ್ಕಾಗಿ ಮೊದಲಿಗೆ Ration Card E-KYC Status ಇಲ್ಲಿ ಕ್ಲಿಕ್ ಮಾಡಿ.

ಆಹಾರ ಇಲಾಖೆ ತಂತ್ರಾಂಶ ತೆರೆದುಕೊಳ್ಳುತ್ತದೆ. ಅಲ್ಲಿ ‘ಇ-ಸ್ಥಿತಿ’ ಕಾಲಮ್ಮಿನಲ್ಲಿ ಕಾಣುವ ‘ಹಾಲಿ ಪಡಿತರ ಚೀಟಿಯ ಸ್ಥಿತಿ’ ಬಟನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡಿನ ಸ್ಥಿತಿ ಮತ್ತು ಇ-ಕೆವೈಸಿ (e-KYC Status) ಮುಗಿದಿದೆಯೇ ಎಂಬ ಮಾಹಿತಿ ತಕ್ಷಣವೇ ಲಭ್ಯವಾಗುತ್ತದೆ.

SSLC Result 2025- ಎಸ್ಸೆಸ್ಸೆಲ್ಸಿ ಫಲಿತಾಂಶ | ಶಿಕ್ಷಣ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?

ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿ ಸಲ್ಲಿಸದಿದ್ದರೆ, ನಿಮ್ಮ ಪಡಿತರ ಚೀಟಿ ರದ್ದಾಗುವ ಸಾಧ್ಯತೆ ಇದೆ. ಪಡಿತರ ಧಾನ್ಯ ವಿತರಣೆಯು ಸ್ಥಗಿತಗೊಳ್ಳಬಹುದು. ಮುಂದಿನ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನೀವು ಅರ್ಹರಲ್ಲ ಎಂದು ಪರಿಗಣಿಸಬಹುದು.

WhatsApp Group Join Now
Telegram Group Join Now

ಇದು ಸರಳ ಪ್ರಕ್ರಿಯೆಯಾಗಿದ್ದು; ಸರಕಾರದಿಂದ ನಿಮ್ಮ ಕುಟುಂಬಕ್ಕೆ ನೀಡಲಾಗುವ ಆಹಾರ ಧಾನ್ಯ ಸೌಲಭ್ಯವು ನಿರಂತರವಾಗಿರಲು, ನಿಮ್ಮ ಮಾಹಿತಿ ನಿಖರವಾಗಿರಬೇಕು. ಆದ್ದರಿಂದ, ನ್ಯಾಯಬೆಲೆ ಅಂಗಡಿಗೆ ತೆರಳಿ, ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ, ನಿಮ್ಮ ಕಾರ್ಡ್ ಸುಸ್ಥಿತಿಯಲ್ಲಿ ಇರುವುದು ಖಚಿತಪಡಿಸಿಕೊಳ್ಳಿ.

Ration Card Ineligible List- ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯಾ? ತಾಲೂಕುವಾರು ಅನರ್ಹರ ರೇಷನ್ ಕಾರ್ಡ್ ಪಟ್ಟಿ ಇಲ್ಲಿದೆ…


Spread the love
error: Content is protected !!