Rajiv Gandhi Panchayat Raj Fellowship 2024 : ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಆಯುಕ್ತರ ಕಚೇರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ರಾಜ್ಯ ಸರ್ಕಾರದ (Government of Karnataka) ವತಿಯಿಂದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಪದವಿ ವಿದ್ಯಾರ್ಹತೆ ಹೊಂದಿರುವ ಅರ್ಹ ಮತ್ತು ಅನುಭವವುಳ್ಳ ಯುವ ವೃತ್ತಿಪರರು ಅರ್ಜಿ ಸಲ್ಲಸಬಹುದಾಗಿದೆ. ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ (Rajiv Gandhi Panchayat Raj Fellowship) ನೇಮಕಾತಿ ಕುರಿತ ವಿವರ ಇಲ್ಲಿದೆ…
ನೇಮಕಾತಿ ಸಂಕ್ಷಿಪ್ತ ವಿವರ
- ನೇಮಕಾತಿ ಸಂಸ್ಥೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
- ಹುದ್ದೆಗಳ ಹೆಸರು : ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್
- ಉದ್ಯೋಗ ಸ್ಥಳ : ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು
ವಿದ್ಯಾರ್ಹತೆ ಏನು?
ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಗ್ರಾಮೀಣಾಭಿವೃದ್ಧಿ, ಸಮಾಜಸೇವೆ ಅಥವಾ ಪಬ್ಲಿಕ್ ಪಾಲಿಸಿ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಪದವಿ ಅಭ್ಯರ್ಥಿಗಳಿಗೆ 1-2 ವರ್ಷ ಅನುಭವ ಕಡ್ಡಾಯ. ಎಂ.ಫಿಲ್ ಅಥವಾ ಪಿಎಚ್.ಡಿ ಮುಗಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವಯೋಮಿತಿ, ಸೇವಾವಧಿ ಮತ್ತು ಗೌರವಧನದ ವಿವರ
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಜಿಲ್ಲೆಗೆ ತಲಾ ಒಬ್ಬೊಬ್ಬರಂತೆ ಒಟ್ಟು 07 ಫೆಲೋಶಿಪ್’ಗಳಿವೆ. ಎರಡು ವರ್ಷ ಸೇವಾವಧಿ ಹೊಂದಿರುವ ಫೆಲೋಶಿಪ್’ಗಳಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಗರಿಷ್ಠ 32 ವರ್ಷ ಮೀರಿರಬಾರದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಅನುಷ್ಠಾನಗೊಳಲಾಗುವ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್’ಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ 60,000 ರೂಪಾಯಿ ವೇತನದ (Stipend) ಜೊತೆಗೆ 1,500 ರೂಪಾಯಿ ಪ್ರಯಾಣ ಭತ್ಯೆ ನೀಡಲಾಗುವುದು.
ನೇಮಕ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಕೆ ವಿವರ
ಅಭ್ಯರ್ಥಿಗಳನ್ನು ಮೆರಿಟ್ ಕಮ್ ಆ್ಯಪ್ಟಿಟ್ಯೂಡ್ ಅಸೆಸ್‌ಮೆಂಟ್, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಇದೇ ಸೆಪ್ಟೆಂಬರ್ 09 ಕೊನೆಯ ದಿನಾಂಕವಾಗಿದೆ. ಆಸಕ್ತರು ಸೆಪ್ಟೆಂಬರ್ 09ರ ಒಳಗೆ ಸಲ್ಲಿಬೇಕಿದೆ.
ಆಸಕ್ತ ಅಭ್ಯರ್ಥಿಗಳು ವಿವರವಾದ ಅಧಿಸೂಚನೆಯನ್ನು https://prcrdpr.karnataka.gov.in/ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಬಹುದು ಅದೇ ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಲಾದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅಪ್ಲಿಕೇಶನ್ ಪೋರ್ಟಲ್ ದಿನಾಂಕ: 02-09-2024 ರಿಂದ 09-09-2024ರ ವರೆಗೆ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಆಯುಕ್ತರ ಕಚೇರಿ ಸಹಾಯಕ ನಿರ್ದೇಶಕರಾದ ಜಗದೀಶ್ ಕೆ.ಎಸ್ ಅವರನ್ನು (ಮೊಬೈಲ್ ಸಂಖ್ಯೆ: 9740790530) ಸಂಪರ್ಕಿಸಬಹುದಾಗಿದೆ.
ಅಧಿಸೂಚನೆ (Notification) : Download