ಭಾರತೀಯ ರೈಲ್ವೆ ಮತ್ತೊಂದು ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 9,970 ಅಸಿಸ್ಟೆಂಟ್ ಲೋಕೋ ಪೈಲಟ್ (Assistant Loco Pilot – ALP) ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕ ಮಂಡಳಿ (RRB) ಏಪ್ರಿಲ್ 12ರಂದು ಅಧಿಸೂಚನೆ ಹೊರಡಿಸಿದೆ.
ದೇಶದ 20 ರೈಲ್ವೆ ವಲಯಗಳಲ್ಲಿ ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಆಸಕ್ತರು ಮತ್ತು ಅರ್ಹರು ಮೇ 11, 2025ರ ವರೆಗೆ ಅವಕಾಶ ನೀಡಲಾಗಿದ್ದು; ರೈಲ್ವೆಯಲ್ಲಿ ಉದ್ಯೋಗ ಅರಸುವ ಅಭ್ಯರ್ಥಿಗಳಿಗೆ ಇದೊಂದು ಮಹತ್ವದ ಅವಕಾಶವಾಗಿದೆ.
ಅರ್ಜಿ ಸಲ್ಲಿಕೆಗೆ ಅರ್ಹತೆಗಳೇನು?
ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ಕನಿಷ್ಠ ಎಸ್ಸೆಸ್ಸೆಲ್ಸಿ ಜೊತೆಗೆ ಐಟಿಐ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಮೆಕಾನಿಕ್, ಟರ್ನರ್ ಮಷಿನಿಸ್ಟ್, ಎಲೆಕ್ಟ್ರಿಕಲ್, ಏರ್ ಕಂಡೀಷನಿಂಗ್, ಎಲೆಕ್ಟ್ರಾನಿಕ್ಸ್ ಹೀಟ್ ಎಂಜಿನ್ ಅಥವಾ ಅಟೊಮೊಬೈಲ್ ಸೇರಿದಂತೆ ಯಾವುದೇ ಟ್ರೇಡ್‌ಗಳಲ್ಲಿ ಐಟಿಐ ತೇರ್ಗಡೆಯಾದವರು ಅರ್ಜಿ ಸಲ್ಲಿಸುವ ಅವಕಾಶವಿದೆ.
ಒಂದು ವೇಳೆ ಅಭ್ಯರ್ಥಿಗಳು ಎಂಜನಿಯರಿಂಗ್ ಪದವೀಧರರು ಆಗಿದ್ದರೂ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. 18ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

BPL Ration Card- 2.86 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…
ಅರ್ಜಿ ಶುಲ್ಕ ಎಷ್ಟು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಶೇಷಚೇತನರು, ಮಹಿಳೆಯರು, ತೃತೀಯ ಲಿಂಗಿಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ರೂ. ಹಾಗೂ ಉಳಿದವರು 500 ರೂ. ಅರ್ಜಿ ಶುಲ್ಕ ಪಾವತಿಬೇಕು. ಇದಲ್ಲಿ 250 ರೂ. ಶುಲ್ಕವನ್ನು ಸಂಪೂರ್ಣವಾಗಿ ಅಭ್ಯರ್ಥಿಗಳಿಗೆ ಹಿಂತಿರುಗಿಸಲಾಗುತ್ತದೆ. 500 ರೂ. ಶುಲ್ಕ ಪಾವತಿಸಿದ ವಿವಿಧ ವರ್ಗಗಳ ಅಭ್ಯರ್ಥಿ ಪರೀಕ್ಷೆಯ ನಂತರ 400 ರೂ. ಅನ್ನು ರೀಫಂಡ್ ಮಾಡಲಾಗುತ್ತದೆ.
ಆಯ್ಕೆ ವಿಧಾನ ಹೇಗೆ?
ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಎರಡು ಹಂತಗಳ ಸಿಬಿಟಿ, ಮೂರನೇ ಹಂತದಲ್ಲಿ ಕಂಪ್ಯೂಟರ್ ಬೇಸ್ಡ್ ಅಪ್ಟಿಟ್ಯೂಡ್ ಟೆಸ್ಟ್, ಡಾಕ್ಯುಮೆಂಟ್ ವೆರಿಫಿಕೇಶನ್ ಮತ್ತು ಮೆಡಿಕಲ್ ಎಕ್ಸಾಮಿನೇಷನ್ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಕನ್ನಡ ಸೇರಿದಂತೆ 13 ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ದೇಶದ 20 ಆರ್‌ಆರ್‌ಬಿಗಳು ನೇಮಕಾತಿ ನಡೆಸುವುದಾಗಿ ತಿಳಿಸಿರುವ ಅಧಿಸೂಚನೆಯಲ್ಲಿ ಬೆಂಗಳೂರು ಆರ್ ಆರ್‌ಬಿ ಹೆಸರು ಪ್ರಸ್ತಾಪಿಸಲಾಗಿಲ್ಲ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿ ಸಲ್ಲಿಸುವುದು ಒಳ್ಳೆಯದು.
- ಅಧಿಸೂಚನೆ: Download
- ಅರ್ಜಿ ಲಿಂಕ್: Click Here
ಈ ಜಿಲ್ಲೆಗಳ 917 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, PUC ಪಾಸಾದ ಮಹಿಳೆಯರಿಗೆ ಭರ್ಜರಿ ಅವಕಾಶ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.