ಇಂದು KSEAB 2025ನೇ ಸಾಲಿನ ಪಿಯುಸಿ ಪರೀಕ್ಷೆ-3ರ ಫಲಿತಾಂಶವನ್ನು (PUC Exam 3 Result 2025) ಅಧಿಕೃತವಾಗಿ ಪ್ರಕಟಿಸಿದೆ. ರಿಸಲ್ಟ್ ನೋಡುವ ವಿಧಾನ ಮತ್ತು ಫಲಿತಾಂಶದ ವಿವರಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-3 (Supplementary / Improvement) ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಜುಲೈ 01) ಅಧಿಕೃತವಾಗಿ ಪ್ರಕಟಿಸಿದೆ.
ಇಂದು ಮಧ್ಯಾಹ್ನ 1 ಗಂಟೆಗೆ ಫಲಿತಾಂಶ ಲಿಂಕ್ ವೆಬ್‌ಸೈಟ್‌ನಲ್ಲಿ ಸಕ್ರಿಯವಾಗಲಿದ್ದು; ವಿದ್ಯಾರ್ಥಿಗಳು ತಮ್ಮ ರೂಲ್ ನಂಬರ್ ಮತ್ತು ಜನ್ಮ ದಿನಾಂಕದ ಮೂಲಕ ಸರಳವಾಗಿ ಫಲಿತಾಂಶವನ್ನು ಪರಿಶೀಲಿಸಬಹುದು. ಈ ಬಾರಿ ಪರೀಕ್ಷೆ-3 ಫಲಿತಾಂಶದಲ್ಲಿ ಶೇ.20.22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫಲಿತಾಂಶದ ಪ್ರಮುಖ ವಿವರಗಳು
2025ನೇ ಸಾಲಿನ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಕಳೆದ ಜೂನ್ 9ರಿಂದ 20ರ ವರೆಗೆ ಪರೀಕ್ಷೆ-3 ಆಯೋಜಿಸಲಾಗಿತ್ತು. ಈ ಪರೀಕ್ಷೆಗೆ 1,11,002 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಇವರಲ್ಲಿ 22,446 ಮಂದಿ (ಶೇ.20.22) ಉತ್ತೀರ್ಣರಾಗಿದ್ದಾರೆ.
ಕಳೆದ (2024) ವರ್ಷದ ಪರೀಕ್ಷೆ-3 ಫಲಿತಾಂಶ ಶೇ.22.5 ಆಗಿತ್ತು. ಹೀಗಾಗಿ ಈ ಬಾರಿ ಫಲಿತಾಂಶ ಶೇ.2.28ರಷ್ಟು ಕುಸಿತಗೊಂಡಿದೆ. 2024ರಲ್ಲಿ ಪರೀಕ್ಷೆ-3 ಬರೆದವರು 71,716 ಜನರಾಗಿದ್ದರೆ, ಈ ಬಾರಿ ಬರೆದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ (ಸುಮಾರು 40,000 ಹೆಚ್ಚು) ಹೆಚ್ಚಾಗಿದೆ. ಇದರಿಂದ ಫಲಿತಾಂಶದ ಪ್ರಾಮುಖ್ಯತೆಯೂ ಈ ಬಾರಿ ಮತ್ತಷ್ಟು ಹೆಚ್ಚಾಗಿದೆ.

ಅಂಕ ಸುಧಾರಣೆಗಾಗಿ ಪರೀಕ್ಷೆ ಬರೆದವರ ಸಾಧನೆ
ಅಂಕ ಸುಧಾರಣೆಗೆ (Improvement) ಹಾಜರಾದ ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಕಂಡುಬAದಿದೆ. 17,398 ವಿದ್ಯಾರ್ಥಿಗಳು ಅಂಕ ಸುಧಾರಣೆಗೆ ಹಾಜರಾಗಿದ್ದರು. ಅವರಲ್ಲಿ 11,937 ಮಂದಿ ಉತ್ತೀರ್ಣರಾಗಿದ್ದಾರೆ.
ಈ ವಿದ್ಯಾರ್ಥಿಗಳಲ್ಲಿ 7,420 ಮಂದಿ ತಮ್ಮ ಹಿಂದಿನ ಅಂಕಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಇದು ಅಂಕ ಸುಧಾರಣೆ ಪರೀಕ್ಷೆಯ ಉದ್ದೇಶವನ್ನು ಯಶಸ್ವಿಯಾಗಿ ಸಾಧಿಸಿರುವುದನ್ನು ತೋರಿಸುತ್ತದೆ.
ಎಲ್ಲಾ ಪರೀಕ್ಷೆಗಳ ಒಟ್ಟು ಫಲಿತಾಂಶ
2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1, ಪರೀಕ್ಷೆ-2 ಮತ್ತು ಪರೀಕ್ಷೆ-3 ಸೇರಿ ಕ್ರೋಡೀಕೃತ ಒಟ್ಟು ಫಲಿತಾಂಶ ಹೀಗಿದೆ:
- ಒಟ್ಟು ಹಾಜರಾದವರು: 7,09,968 ವಿದ್ಯಾರ್ಥಿಗಳು
- ಒಟ್ಟು ಉತ್ತೀರ್ಣರಾದವರು: 5,66,636 ವಿದ್ಯಾರ್ಥಿಗಳು
- ಒಟ್ಟು ಉತ್ತೀರ್ಣ ಪ್ರಮಾಣ: ಶೇ.79.81
ಫಲಿತಾಂಶವನ್ನು ಪರಿಶೀಲಿಸುವ ವಿಧಾನ
ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿಯೇ ಸುಲಭವಾಗಿ ಫಲಿತಾಂಶವನ್ನು ಪರಿಶೀಲಿಸಬಹುದು:
ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಅಧಿಕೃತ ವೆಬ್‌ಸೈಟ್ karresults.nic.in ತೆರೆಯಿರಿ.
ಅಲ್ಲಿ ‘2025 ದ್ವಿತೀಯ ಪಿಯುಸಿ ಪರೀಕ್ಷೆ – 2ರ ಫಲಿತಾಂಶ ಪ್ರಕಟಣೆ / II PUC EXAM-2 RESULT 2025 announced on 01/07/2025’ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ರೂಲ್ ನಂಬರ್ (Roll Number) ಮತ್ತು ಜನ್ಮ ದಿನಾಂಕ ನಮೂದಿಸಿ. Submit ಬಟನ್ ಒತ್ತಿದ ನಂತರ ನಿಮ್ಮ ಫಲಿತಾಂಶ ಪರದೆಯ ಮೇಲೆ ತೋರಿಸಲಾಗುತ್ತದೆ. ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್‌ಔಟ್ ತೆಗೆದು ಭವಿಷ್ಯದ ದಾಖಲೆಗಾಗಿ ಇಟ್ಟುಕೊಳ್ಳಿ.
ಈ ವರ್ಷ ಹೆಚ್ಚುವರಿ ವಿದ್ಯಾರ್ಥಿಗಳು ಪರೀಕ್ಷೆ-3ರಲ್ಲಿ ಹಾಜರಾದರೂ ಫಲಿತಾಂಶ ಶೇ.20.22 ಮಾತ್ರ ಇದೆ. ಆದರೆ, ಸುಧಾರಣೆಗೆ ಹಾಜರಾದವರಲ್ಲಿ ಹೆಚ್ಚಿನವರು ಅಂಕ ಹೆಚ್ಚಿಸಿಕೊಂಡಿರುವುದು ಉತ್ಸಾಹಕಾರಿಯಾಗಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ, ಎಲ್ಲ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ!
ಅಧಿಕೃತ ವೆಬ್‌ಸೈಟ್ ಲಿಂಕ್: karresults.nic.in