ಸರ್ಕಾರಿ ಪಿಯು ಕಾಲೇಜ್ ಲೆಕ್ಚರರ್ ಹುದ್ದೆಗಳಿಗೆ ಅರ್ಜಿ | 814 ಹುದ್ದೆಗಳ ನೇಮಕ PU Lecturer Recruitment 2024

Spread the love

PU Lecturer Recruitment 2024 : ಕರ್ನಾಟಕ ರಾಜ್ಯ ಸರ್ಕಾರವು, ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ (Government Pre-University College) ಅಗತ್ಯವಿರುವ 814 ಉಪನ್ಯಾಸಕರ (Lecturer) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಯಾವ ವಿಷಯದ ಉಪನ್ಯಾಸಕರ ಎಷ್ಟು ಹುದ್ದೆಗಳ ಖಾಲಿ ಇವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾಗಿದ ಮಧು ಬಂಗಾರಪ್ಪ ಅವರು ಪಿಯು ಉಪನ್ಯಾಸಕರ ನೇಮಕಾತಿ ಕುರಿತು ಅಧಿಕೃತ ಮಾಹಿತಿಯನ್ನು ಹಂಚಿಕೊAಡಿದ್ದು, ರಾಜ್ಯದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 4,259 ಉಪನ್ಯಾಸಕರ ಹುದ್ದೆಗಳು ಕೊರತೆಯಿದ್ದು ಇವುಗಳಲ್ಲಿ ಸದ್ಯಕ್ಕೆ 814 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿದೆ ಎಂದಿದ್ದಾರೆ.

ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು, ವಿಷಯವಾರು ಖಾಲಿ ಇರುವ ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿಂಗಡಣೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: 7ನೇ ವೇತನ ಆಯೋಗ ಜಾರಿ ಸರ್ಕಾರಿ ಆದೇಶ : ಸರಕಾರಿ ನೌಕರರಿಗೆ ಆಗಸ್ಟ್ ನಿಂದ ಸಿಗುವ ಸವಲತ್ತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ… Govt Employees Revised Pay Scale List

ಪಿಯು ಉಪನ್ಯಾಸಕರ ಹುದ್ದೆಗಳ ವಿವರ

ಕರ್ನಾಟಕ ರಾಜ್ಯ ಸರ್ಕಾರವು ಸದ್ಯಕ್ಕೆ 814 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಿದ್ದು ಹುದ್ದೆಗಳ ವಿಂಗಡಣೆಯನ್ನು ಈ ಕೆಳಗಿನಂತೆ ಮಾಡಿದೆ:

  • ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಲ್ಲಿ : 778 ಹುದ್ದೆಗಳು
  • ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ : 36 ಹುದ್ದೆಗಳು
ವಿಷಯವಾರು ಉಪನ್ಯಾಸಕರ ಖಾಲಿ ಹುದ್ದೆಗಳು
  • ಕನ್ನಡ ಉಪನ್ಯಾಸಕರು : 105
  • ರಾಜ್ಯಶಾಸ್ತ್ರ : 79
  • ಮನಃಶಾಸ್ತ್ರ ಉಪನ್ಯಾಸಕರು : 02
  • ಗಣಕ ವಿಜ್ಞಾನ ಉಪನ್ಯಾಸಕರು : 06
  • ವಾಣಿಜ್ಯಶಾಸ್ತ್ರ : 100
  • ಅರ್ಥಶಾಸ್ತ್ರ : 184
  • ಇತಿಹಾಸ : 124
  • ಇಂಗ್ಲೀಷ್ ಉಪನ್ಯಾಸಕರು : 125
  • ಭೂಗೋಳಶಾಸ್ತ್ರ : 20
  • ಸಮಾಜಶಾಸ್ತ್ರ ಉಪನ್ಯಾಸಕರು : 79

ಇದನ್ನೂ ಓದಿ: ಅಂಗನವಾಡಿ LKG-UKG ಟೀಚರ್ ನೇಮಕಾತಿ: ಹೇಗೆ ನಡೆಯಲಿದೆ ನೇಮಕ ಪ್ರಕ್ರಿಯೆ? ಸಚಿವರ ಮಹತ್ವದ ಮಾಹಿತಿ… Anganwadi LKG UKG Teacher Recruitment 2024

PU Lecturer Recruitment 2024
ಪಿಯು ಕಾಲೇಜು ಉಪನ್ಯಾಸಕರ ವೇತನ, ಶೈಕ್ಷಣಿಕ ಅರ್ಹತೆಗಳು

ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಸ್ನಾತಕೋತ್ತರ ಪದವಿ ಮುಗಿಸಿ ಬಿಎಡ್ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪಿಯು ಉಪನ್ಯಾಸಕ ಹುದ್ದೆಗಳಿಗೆ ವೇತನ ಶ್ರೇಣಿ ಬೇಸಿಕ್ ಪೇ 22,800 ರೂಪಾಯಿ ಇದ್ದು; ಇತರೆ ಭತ್ಯೆಗಳು ಸೇರಿ 43,280 ರೂಪಾಯಿ ವರೆಗೂ ಮಾಸಿಕ ಸಂಬಳ ಸಿಗುತ್ತದೆ. ಇದರ ಜೊತೆಗೆ ಮನೆ ಬಾಡಿಗೆ ಭತ್ಯೆ ಹುದ್ದೆ ಪ್ರದೇಶದ ಮೇಲೆ ವ್ಯತ್ಯಾಸದಿಂದ ಇರುತ್ತದೆ.

ಇದನ್ನೂ ಓದಿ: ನವೋದಯ ಉಚಿತ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ | 6-12ನೇ ತರಗತಿ ವರೆಗೂ ವಸತಿ, ಊಟೋಪಚಾರ ಸಹಿತ ಸಂಪೂರ್ಣ ಉಚಿತ ಶಿಕ್ಷಣ JNV Entrance Exam Application 2024

ನೇಮಕಾತಿ ಪ್ರಕ್ರಿಯೆ ಹೇಗೆ?

ಪದವಿ ಪೂರ್ವ ಕಾಲೇಜುಗಳಲ್ಲಿ ಕೊರತೆ ಹಾಗೂ ಅಗತ್ಯವಿರುವ ಉಪನ್ಯಾಸಕರ ಹುದ್ದೆಗಳ ನೇಮಕಾತಿಯನ್ನು ಎರಡು ಹಂತದಲ್ಲಿ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲನೇ ಹಂತದಲ್ಲಿ ಅಭ್ಯರ್ಥಿಗಳಿಗೆ TET ಪರೀಕ್ಷೆ ಹಾಗೂ ಎರಡನೇ ಹಂತದಲ್ಲಿ CET ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ಈ ಮೊದಲು ಪಿಯು ಲೆಕ್ಚರರ್ ಹುದ್ದೆಗಳನ್ನು ಕೆಇಎ ಮೂಲಕ ನೇಮಕ ನಡೆಸಲಾಗುತ್ತಿತ್ತು. ಆ ಪ್ರಕಾರ ಈಗಲೂ ಕೂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗುತ್ತದೆ. ಆಗ ಅಭ್ಯರ್ಥಿಗಳು ವೆಬ್‌ಸೈಟ್’ಗೆ  http://kea.kar.nic.in ಭೇಟಿ ಅರ್ಜಿ ಸಲ್ಲಿಸಬೇಕು.

ಕರ್ನಾಟಕ ಸರ್ಕಾರಿ ಉದ್ಯೋಗ ಪಡೆಯುವ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಸಿಹಿ ಸುದ್ದಿಯಾಗಿದ್ದು, ಶೀಘ್ರದಲ್ಲಿಯೇ ಅಧಿಕೃತ ಅಧಿಸೂಚನೆ ಹೊರಬೀಳುವ ಸಂಪೂರ್ಣ ಸಾಧ್ಯತೆಗಳಿವೆ. ನೇಮಕಾತಿ ಪರೀಕ್ಷೆಗೆ ಅಗತ್ಯ ಇರುವ ಸಂಪೂರ್ಣ ತಯಾರಿಯನ್ನು ಅಭ್ಯರ್ಥಿಗಳು ಈಗಿನಂದಲೇ ಪ್ರಾರಂಭಿಸಿ ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಿ…

ಪಿಯು ಕಾಲೇಜ್ ಉಪನ್ಯಾಸಕರ ನೇಮಕಾತಿ ಕುರಿತ ನಿರಂತರ ಅಪ್ಡೆಟ್’ಗಾಗಿ ಮಾಹಿತಿಮನೆ ಫಾಲೋ ಮಾಡಿ…

ಇದನ್ನೂ ಓದಿ: SSLC ಪಾಸಾದವರಿಗೆ ಕರ್ನಾಟಕದಲ್ಲಿ 1,940 ಪೋಸ್ಟ್ ಮ್ಯಾನ್ ಹುದ್ದೆಗಳು | ಯಾವ ಜಿಲ್ಲೆಗೆ ಎಷ್ಟು ಹುದ್ದೆ? ಇಲ್ಲಿದೆ ಮಾಹಿತಿ… Karnataka Post Master Recruitment 2024


Spread the love
WhatsApp Group Join Now
Telegram Group Join Now

2 thoughts on “ಸರ್ಕಾರಿ ಪಿಯು ಕಾಲೇಜ್ ಲೆಕ್ಚರರ್ ಹುದ್ದೆಗಳಿಗೆ ಅರ್ಜಿ | 814 ಹುದ್ದೆಗಳ ನೇಮಕ PU Lecturer Recruitment 2024”

Leave a Comment

error: Content is protected !!