Pradhan Mantri Awas Yojana- ಪ್ರಧಾನ ಮಂತ್ರಿ ಆವಾಸ್ ಯೋಜನೆ ₹2.50 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ | ಮನೆ ನಿರ್ಮಾಣಕ್ಕೆ ಸರ್ಕಾರದ ನೆರವು

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 (Pradhan Mantri Awas Yojana) ಅಡಿಯಲ್ಲಿ ಸ್ವಂತ ಮನೆ ಕಟ್ಟಲು ₹2.50 ಲಕ್ಷದ ವರೆಗೆ ಆರ್ಥಿಕ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ನಗರ ಪ್ರದೇಶದ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಮನೆ ನಿರ್ಮಿಸಲು, ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಹಕಾರದಿಂದ ಸಹಾಯಧನ ನೀಡಲಿದೆ. ಈ ಯೋಜನೆಯಡಿ 1 ಕೋಟಿ ಕುಟುಂಬಗಳಿಗೆ ಮನೆ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ.
ಅರ್ಹತಾ ಮಾನದಂಡಗಳು
- ಭಾರತೀಯ ನಾಗರಿಕರಾಗಿರಬೇಕು. ಕುಟುಂಬದ ಯಾರೂ ಈಗಾಗಲೇ ಸರ್ಕಾರದ ಯೋಜನೆಯಲ್ಲಿ ಮನೆ ಪಡೆದಿರಬಾರದು
- ಅರ್ಜಿದಾರರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS/LIG/MIG) ಸೇರಿರಬೇಕು
- ಈಗಾಗಲೇ ಸ್ವಂತ ಮನೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ
- ವಿಧವೆಯರು, ಒಂಟಿ ಮಹಿಳೆಯರು, ವಿಕಲಾಂಗರು, ಹಿರಿಯ ನಾಗರಿಕರು, ಟ್ರಾನ್ಸ್ಜೆಂಡರ್‌ಗಳು, ಎಸ್‌ಸಿ/ಎಸ್‌ಟಿ ಸಮುದಾಯದವರು, ದಿನಗೂಲಿಗಾರರು, ಬೀದಿ ವ್ಯಾಪಾರಿಗಳು, ಕೊಳಗೇರಿ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಕುಟುಂಬದ ಆದಾಯ ಮಿತಿಗಳು
- EWS (Economically Weaker Section): ವಾರ್ಷಿಕ ಆದಾಯ ₹3 ಲಕ್ಷದ ವರೆಗೆ
- LIG (Low Income Group): ವಾರ್ಷಿಕ ಆದಾಯ ₹3-6 ಲಕ್ಷ
- MIG (Middle Income Group): ವಾರ್ಷಿಕ ಆದಾಯ ₹6-9 ಲಕ್ಷ

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಫೋಟೋ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ವಿಧಾನ
ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಸಮೀಪದ CSC ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್‌ಸೈಟ್ pmaymis.gov.inಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಂತಗಳು
- ಹಂತ 1: ಅಧಿಕೃತ ವೆಬ್‌ಸೈಟ್ pmaymis.gov.in ತೆರೆಯಿರಿ
- ಹಂತ 2: ಮೆನು ಬಾರ್‌ನಲ್ಲಿ Citizen Assessment ಆಯ್ಕೆ ಮಾಡಿ
- ಹಂತ 3: ನೀವು ಹೊಂದಿರುವ ವರ್ಗದ ಪ್ರಕಾರ – Benefit Under Other 3 Components ಕ್ಲಿಕ್ ಮಾಡಿ
- ಹಂತ 4: ರಾಜ್ಯ, ನಗರ ಸ್ಥಳ, ವಾರ್ಷಿಕ ಆದಾಯ ಮಾಹಿತಿ ನಮೂದಿಸಿ
- ಹಂತ 5: ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ದೃಢಪಡಿಸಿ
- ಹಂತ 6: ಅರ್ಜಿ ಫಾರ್ಮ್’ನಲ್ಲಿ ಕೇಳುವ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿ
- ಹಂತ 7: ಅಗತ್ಯ ದಾಖಲೆಗಳು ಅಪ್ಲೋಡ್ ಮಾಡಿ
- ಹಂತ 8: “Submit” ಬಟನ್ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಿದ ನಂತರ ಪ್ರಸ್ತಾವನೆ ಪರಿಶೀಲನೆ ನಡೆಯುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಮುಂದಿನ ಹಂತದ ಮೆಸೆಜ್, ಕಾಲ್ ಮೂಲಕ ಮಾಹಿತಿ ತಿಳಿಸಲಾಗುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ನಿಮ್ಮ ಮನೆಯ ಕನಸು ನನಸಾಗಿಸಲು ಉತ್ತಮ ಅವಕಾಶವಾಗಿದೆ. ಅರ್ಹರಾಗಿರುವವರು ಶೀಘ್ರ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ…
ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್: pmaymis.gov.in