PM Yasasvi Scholarship 2025- ಕೇಂದ್ರ ಸರ್ಕಾರದಿಂದ ₹3.72 ಲಕ್ಷ ವರೆಗೆ ವಿಶೇಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ | 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ

Spread the love

ಕೇಂದ್ರ ಸರ್ಕಾರ ‘ಪಿಎಂ ಯಶಸ್ವಿ ವಿದ್ಯಾರ್ಥಿವೇತನ 2025’ (PM Yasasvi Scholarship 2025) ಯೋಜನೆ ಅಡಿಯಲ್ಲಿ ಸ್ಕಾಲರ್‌ಶಿಪ್ ನೀಡಲು ಅರ್ಜಿ ಆಹ್ವಾನಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ 2025’ ಅನ್ನು ಘೋಷಿಸಿದ್ದು, ಇದರಡಿಯಲ್ಲಿ ತಲಾ ₹3.72 ಲಕ್ಷ ವರೆಗೆ ಶಿಷ್ಯವೇತನ ನೀಡಲಾಗುತ್ತದೆ.

ಈ ಯೋಜನೆಯು ವಿದ್ಯಾರ್ಥಿಗಳು ಹೈಸ್ಕೂಲ್‌ನಿಂದ ಆರಂಭಿಸಿ ಕಾಲೇಜು ಮಟ್ಟದವರೆಗೆ ಉತ್ತಮವಾಗಿ ಓದುತ್ತಿದ್ದರೆ ಹಣಕಾಸು ತೊಂದರೆಗಳಿಲ್ಲದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ದಾರಿ ಮಾಡಿಕೊಡುತ್ತದೆ.

KCET Seat Blocking- ಸಿಇಟಿ ಸೀಟ್ ಬ್ಲಾಕಿಂಗ್ | ವಿದ್ಯಾರ್ಥಿಗಳಿಗೆ ಕೆಇಎ ಎಚ್ಚರಿಕೆ | ಬೇಕಾಬಿಟ್ಟಿ ಆಪ್ಷನ್ ಎಂಟ್ರಿಗೆ ಬ್ರೇಕ್

ಈ ವಿದ್ಯಾರ್ಥಿವೇತನಕ್ಕೆ ಯಾರೆಲ್ಲ ಅರ್ಹರು?

ಈ ಯೋಜನೆ ಹಿಂದುಳಿದ ವರ್ಗಗಳು (OBC), ಆರ್ಥಿಕವಾಗಿ ಹಿಂದುಳಿದ ವರ್ಗಗಳು (EBC), ಡಿನೋಟಿಫೈಡ್ ಅಲೆಮಾರಿ ಬುಡಕಟ್ಟುಗಳು (DNT) ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ.

ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹3.5 ಲಕ್ಷಕ್ಕಿಂತ ಕಡಿಮೆ ಇರಬೇಕು. 9, 10, 11 ಅಥವಾ 12ನೇ ತರಗತಿಯ ವಿದ್ಯಾರ್ಥಿಗಳು ಮಾತ್ರ ಅರ್ಹರು. ಸರ್ಕಾರಿ ಅಥವಾ ಸರ್ಕಾರದ ಅನುಮೋದಿತ ಶಾಲೆ/ಕಾಲೇಜುಗಳಲ್ಲಿ ಓದುತ್ತಿರಬೇಕು. ಕನಿಷ್ಠ 75% ಹಾಜರಾತಿ ಹೊಂದಿರಬೇಕು.

ಕೇಂದ್ರ ಸರ್ಕಾರ ‘ಪಿಎಂ ಯಶಸ್ವಿ ವಿದ್ಯಾರ್ಥಿವೇತನ 2025’ ಯೋಜನೆ ಅಡಿಯಲ್ಲಿ ಸ್ಕಾಲರ್‌ಶಿಪ್ ನೀಡಲು ಅರ್ಜಿ ಆಹ್ವಾನಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
PM Yasasvi Scholarship 2025
ವಿದ್ಯಾರ್ಥಿವೇತನ ಮೊತ್ತವೆಷ್ಟು?

ತರಗತಿ, ಪ್ರತಿಭೆ, ಓದುವ ಕಾಲೇಜಿಗೆ ಅನುಗುಣವಾಗಿ ವಿದ್ಯಾರ್ಥಿವೇತನ ಮೊತ್ತವನ್ನು ನಿಗದಿಪಡಿಸಲಾಗಿದ್ದು; ಆಯಾ ವರ್ಗಗಳಿಗೆ ಅನುಗುಣವಾದ ಮೊತ್ತ ಈ ಕೆಳಗಿನಂತಿದೆ:

  • 9ರಿಂದ 10 ತರಗತಿ ವರೆಗಿನ ಸಾಮಾನ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹4,000 ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾರ್ಷಿಕ ₹75,000 ವರೆಗೆ
  • 11ರಿಂದ 12ನೇ ತರಗತಿ ವರೆಗಿನ ಸಾಮಾನ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹5,000 ರಿಂದ ₹20,000 ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾರ್ಷಿಕ ₹1,25,000 ವರೆಗೆ
  • ಪದವಿ/ಪಿಜಿ ಸಾಮಾನ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹2,00,000 ರಿಂದ ₹3,72,000 ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೂರಕ ವೆಚ್ಚ ಸೇರಿದಂತೆ ಮೊತ್ತ ನಿಗದಿ
  • ಹೆಣ್ಣುಮಕ್ಕಳಿಗೆ ಶಿಷ್ಯವೇತನದಲ್ಲಿ ಶೇ.30% ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಶೇ.5% ಮೀಸಲು ನಿಗದಿಪಡಿಸಲಾಗಿದೆ. ಫ್ರೀಶಿಪ್ ಕಾರ್ಡ್ ಹೊಂದಿದವರಿಗೆ ಟ್ಯೂಷನ್ ಹಾಗೂ ಹಾಸ್ಟೆಲ್ ಶುಲ್ಕಕ್ಕೆ ವಿನಾಯಿತಿ

SSLC Exam New Rules- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇನ್ನು ಭಾರೀ ಸುಲಭ | 2026ರಿಂದ ಹೊಸ ನಿಯಮ ಜಾರಿ | ಇಲ್ಲಿದೆ ಸಂಪೂರ್ಣ ಮಾಹಿತಿ…

ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಇತ್ತೀಚಿನ ಪಾಸ್‌ಪೋರ್ಟ್ ಸೈಸ್ ಫೋಟೋ
  • ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರಗಳು
  • ಇಮೇಲ್ ಹಾಗೂ ಮೊಬೈಲ್ ಸಂಖ್ಯೆ
  • ಇತ್ತೀಚಿನ ಅಂಕಪಟ್ಟಿ
  • ನಿವಾಸ ಪುರಾವೆ
ಅರ್ಜಿ ಸಲ್ಲಿಕೆ ಹೇಗೆ?

scholarships.gov.in ವೆಬ್‌ಸೈಟ್ ಗೆ ಭೇಟಿ ನೀಡಿ, New Registration ಆಯ್ಕೆ ಮಾಡಿ ಮತ್ತು ವಿವರ ಭರ್ತಿ ಮಾಡಿ.

ಲಾಗಿನ್ ಮಾಡಿ Apply for Scholarship ಕ್ಲಿಕ್ ಮಾಡಿ, PM YASASVI Scholarship ಆಯ್ಕೆಮಾಡಿ. ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿ, ದಾಖಲೆಗಳು ಅಪ್ಲೋಡ್ ಮಾಡಿ. ಕೊನೆಗೆ ಅರ್ಜಿಯನ್ನು ಸಲ್ಲಿಸಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿ

PMFME Scheme- ಊರಲ್ಲೇ ಉದ್ಯಮ ಸ್ಥಾಪಿಸಲು 15 ಲಕ್ಷ ರೂ. ಸಹಾಯಧನ | ರೈತರು, ಮಹಿಳೆಯರು, ಯುವಕರಿಂದ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು
  • ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನ: 31 ಆಗಸ್ಟ್ 2025
  • ಅರ್ಜಿ ಪರಿಶೀಲನೆ ಪ್ರಕ್ರಿಯೆ ಆರಂಭ: 15 ಸೆಪ್ಟೆಂಬರ್ 2025
ಆಯ್ಕೆ ಪ್ರಕ್ರಿಯೆ ಹೇಗೆ?

ಹಿಂದಿನ ವರ್ಷಗಳಲ್ಲಿ ಯಶಸ್ವಿ ಎಂಟ್ರನ್ಸ್ ಟೆಸ್ಟ್ (YET) ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ 2025ರಿಂದ ಹೊಸ ಮಾರ್ಗಸೂಚಿಯ ಪ್ರಕಾರ, ಪ್ರವೇಶ ಪರೀಕ್ಷೆ ರದ್ದುಪಡಿಸಲಾಗಿದೆ. ವಿದ್ಯಾರ್ಥಿಗಳನ್ನು ಅರ್ಹತಾ ಪ್ರಮಾಣಗಳ ಆಧಾರದ ಮೇಲೆ ನೇರವಾಗಿ ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಥಿಗಳ ಖಾತೆಗೆ ನೇರ ಹಣ ಜಮಾ

ಅರ್ಹರಾದ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (Direct Benefit Transfer -DBT) ಮೂಲಕ ಶಿಷ್ಯವೇತನ ಜಮೆ ಮಾಡಲಾಗುತ್ತದೆ. ಈ ಮೂಲಕ ಹಣ ಸರಾಸರಿ ಪ್ರಕ್ರಿಯೆಗಳಲ್ಲಿ ಕಾಲಹರಣವಾಗದೆ ನೇರವಾಗಿ ಲಾಭಾಂಶದ ರೂಪದಲ್ಲಿ ವಿದ್ಯಾರ್ಥಿಗೆ ತಲುಪುತ್ತದೆ.

ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನವಂಬರ್-ಡಿಸೆಂಬರ್ ವೇಳೆಗೆ ಹಣವನ್ನು ಪಡೆಯಲು ಈಗಲೇ ಅರ್ಜಿ ಸಲ್ಲಿಸಿ…

Anganwadi LKG UKG Classes- ಅಕ್ಟೋಬರ್‌ನಿಂದ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭ | ಟೀಚರ್ ನೇಮಕಾತಿ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!