PM Usha Scholarship 2024 Govt of india : ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯವು ಕೊಡಮಾಡಲ್ಪಡುವ ವಿದ್ಯಾರ್ಥಿವೇತನಕ್ಕೆ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿ ಉಷಾ ವಿದ್ಯಾರ್ಥಿವೇತನ 2024-24ನೇ (Prime Minister Usha Scholarship 2024-24) ಸಾಲಿನ ಈ ಸ್ಕಾಲರ್‌ಶಿಪ್ ಯೋಜನೆಯಡಿ ಒಟ್ಟು 52,000 ರೂಪಾಯಿ ಆರ್ಥಿಕ ನೆರವು (Financial Assistance) ಸಿಗಲಿದ್ದು; ಅರ್ಹ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಶಿಕ್ಷಣ ಪೂರೈಸಿ ಆರ್ಥಿಕ ತೊಂದರೆ ಕಾರಣಕ್ಕೆ ಮುಂದಿನ ವ್ಯಾಸಂಗ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ವರದಾನವಾಗಿದೆ. ಹಾಗಿದ್ದರೆ ಪಿಎಂ ಉಷಾ ವಿದ್ಯಾರ್ಥಿವೇತನ ಪಡೆಯುವುದು ಹೇಗೆ? ಅರ್ಹತೆಗಳೇನು? ಅರ್ಜಿ ಸಲ್ಲಿಕೆ ಹೇಗೆ? ಸಿಗುವ ಮೊತ್ತ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ವಿದ್ಯಾರ್ಥಿವೇತನ ಪಡೆಯಲು ಅರ್ಹತೆಗಳೇನು?
ಕೇಂದ್ರ ಸರ್ಕಾರದ ಈ ವಿದ್ಯಾರ್ಥಿವೇತನ ಪಡೆಯಲು 12ನೇ ತರಗತಿಯನ್ನು ಶೇ.80ಕ್ಕಿಂತ ಹೆಚ್ಚಿನ ಅಂಕದೊAದಿಗೆ ತೇರ್ಗಡೆ ಹೊಂದಿ, ಮೂರು ವರ್ಷಗಳ ಸ್ನಾತಕ ಪದವಿ ಅಧ್ಯಯನ ಮಾಡಲಿಚ್ಚಿಸುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ವಿದ್ಯಾರ್ಥಿವೇತನ ಪಡೆಯಲು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.
ಮೇಲ್ಕಣಿಸಿದ ಅರ್ಹತಯುಳ್ಳ ಎಲ್ಲಾ ವರ್ಗದ ವಿದ್ಯಾರ್ಥಿಗಳೂ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಸ್ಕಾಲರ್‌ಶಿಪ್ ಪೋರ್ಟಲ್ ಮೂಲಕ ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್’ನಲ್ಲಿ (National Scholarship Portal – NSP) ನೋಂದಣಿ ಮಾಡಿಕೊಂಡು, ಫ್ರೆಶ್ ಬ್ಯಾಚ್ ಮತ್ತು ನವೀಕೃತ ಬ್ಯಾಚ್‌ನ ಅರ್ಜಿಗಳನ್ನು ಸಲ್ಲಿಸಬಹುದು.
ಇದನ್ನೂ ಓದಿ: ಸರ್ಕಾರಿ ಪಿಯು ಕಾಲೇಜ್ ಲೆಕ್ಚರರ್ ಹುದ್ದೆಗಳಿಗೆ ಅರ್ಜಿ | 814 ಹುದ್ದೆಗಳ ನೇಮಕ PU Lecturer Recruitment 2024
ಪಿಎಂ ಉಷಾ ವಿದ್ಯಾರ್ಥಿವೇತನದ ಆರ್ಥಿಕ ನೆರವು ಹೇಗೆ?
ಗಮವಾರ್ಹವೆಂದರೆ ಪಿಎಂ ಉಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆಯಾದರೂ ಒಟ್ಟಿಗೆ 52,000 ರೂಪಾಯಿ ಒಂದೇ ಬಾರಿಗೆ ಲಭ್ಯವಾಗುವುದಿಲ್ಲ.
ಈ ಆರ್ಥಿಕ ನೆರವು ಮೂರು ಹಂತಗಳಲ್ಲಿ ಸಿಗಲಿದ್ದು; ಮೊದಲನೇ ವರ್ಷದಲ್ಲಿ 12,000 ರೂಪಾಯಿ, 2ನೇ ವರ್ಷ ಮತ್ತು 3ನೇ ವರ್ಷದಲ್ಲಿ ತಲಾ 20,000 ರೂಪಾಯಿ ಸೇರಿ ಮೂರು ವರ್ಷಗಳಲ್ಲಿ ಒಟ್ಟು 52,000 ರೂಪಾಯಿ ನೆರವು ಸಿಗಲಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
- ಪಿಯುಸಿ ಅಂಕಪಟ್ಟಿ
- ಪದವಿ ಶಿಕ್ಷಣಕ್ಕೆ ಸೇರಿದ ದಾಖಲೆ
- ಇ-ಮೇಲ್ ವಿಳಾಸ
- ಮೊಬೈಲ್ ನಂಬರ್
- ವಿದ್ಯಾರ್ಥಿಯ ಭಾವಚಿತ್ರ
ಅರ್ಜಿ ಸಲ್ಲಿಕೆ ಹೇಗೆ?
ಈ ವಿದ್ಯಾರ್ಥಿವೇತನ ಪಡೆಯಲಿಚ್ಛಿಸುವ ಅರ್ಹ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆಗಾಗಿಯೇ ಮೀಸಲಾಗಿರುವ ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ (ಎನ್‌ಎಸ್‌ಪಿ) ಲಿಂಕ್ ಬಳಸಿಕೊಂಡು ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಎನ್‌ಎಸ್‌ಪಿ ಸ್ಕಾಲರ್‌ಶಿಪ್ ಪೋರ್ಟಲ್ ಲಿಂಕ್ ಲೇಖನದ ಕೊನೆಯಲ್ಲಿ ನೀಡಲಾಗಿದೆ.
ಅಲ್ಲಿ ಕ್ಲಿಕ್ ಮಾಡಿದರೆ ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕಾಣುವ ‘Students’ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ, ಮತ್ತೊಂದು ಪುಟ ತೆರೆಯುತ್ತದೆ.
ಅಲ್ಲಿ ಕಾಣುವ ‘Apply For Scholarship’ಆಯ್ಕೆಯ ಕೆಳಗಿರುವ ‘Login’ ಮೇಲೆ ಕ್ಲಿಕ್ ಮಾಡಿ. ಆಗ ತೆರೆದುಕೊಳ್ಳುವ ವೆಬ್‌ಪುಟದ ಮೇಲ್ಭಾಗದಲ್ಲಿ ಕಾಣುವ ‘Register’ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ನೀಡಲಾದ ಗೈಡ್‌ಲೈನ್ಸ್ ಓದಿಕೊಳ್ಳಿಕೊಳ್ಳಿ.
ನಂತರ ಹಂತ ಹಂತವಾಗಿ ಮೊಬೈಲ್ ನಂಬರ್, ಆಧಾರ್ ನಂಬರ್ ನಮೂದಿಸಿ, ಮೊಬೈಲ್’ಗೆ ಬರುವ OTP ಹಾಗೂ Captcha Code Enter ಮಾಡಿ, eKYC ಪೂರೈಸುವ ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ. ಆನಂತರ ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 31-10-2024
- ಉಚಿತ ಸಹಾಯವಾಣಿ : 080-23311330
- ಅರ್ಜಿ ಸಲ್ಲಿಕೆ ಲಿಂಕ್ : Apply ಮಾಡಿ