October 2025 Holidays- ಅಕ್ಟೋಬರ್ ತಿಂಗಳಿನಲ್ಲಿ ಸಾಲು ಸಾಲು ಸರ್ಕಾರಿ ರಜೆ | ಯಾರಿಗೆ ಎಷ್ಟೆಷ್ಟು ರಜೆ? ಸಂಪೂರ್ಣ ಮಾಹಿತಿ ಇಲ್ಲಿದೆ…
October 2025 Holidays List

2025ರ ಅಕ್ಟೋಬರ್ ತಿಂಗಳಿನಲ್ಲಿ (October 2025 Holidays) ಸಾಲು ಸಾಲು ಹಬ್ಬ ಮತ್ತು ಸರ್ಕಾರಿ ರಜೆಗಳಿದ್ದು; ಈ ತಿಂಗಳಿನಲ್ಲಿ ವಲಯವಾರು ಇರುವ ರಜೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
2025ರ ಅಕ್ಟೋಬರ್ ತಿಂಗಳು ರಜೆಗಳ ಸರಣಿಯನ್ನೇ ಹೊತ್ತು ತಂದಿದೆ. ಸಾಲು ಸಾಲು ಸರ್ಕಾರಿ ರಜೆ, ಹಬ್ಬಗಳ ರಜೆಗಳು ಬರಲಿದ್ದು; ಸರ್ಕಾರಿ ನೌಕರರಿಗೆ, ಶಾಲಾ ಮಕ್ಕಳಿಗೆ, ಬ್ಯಾಂಕ್ ಉದ್ಯೋಗಿಗಳಿಗೆ, ಐಟು-ಬಿಟಿ ಹಾಗೂ ಖಾಸಗಿ ಉದ್ಯೋಗಿಗಳಿಗೆ ರಜೆಗಳ ಸರಣಿಯೇ ಸಿಗಲಿದೆ.
ಹಾಗಾದರೆ ಅಕ್ಟೋಬರ್ ತಿಂಗಳಿನಲ್ಲಿ ಸರ್ಕಾರಿ ರಜೆಗಳೆಷ್ಟು? ಹಬ್ಬಗಳ ರಜೆಗಳೆಷ್ಟು? ಬ್ಯಾಂಕುಗಳಿಗೆ ರಜೆಗಳೆಷ್ಟು? ಶಾಲೆ-ಕಾಲೇಜು ಹಾಗೂ ಖಾಸಗಿ ಕಂಪನಿಗಳಿಗೆ ಎಷ್ಟೆಷ್ಟು ರಜೆಗಳು ಸಿಗಲಿವೆ? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಅಕ್ಟೋಬರ್ ತಿಂಗಳ ರಜೆಗಳ ಪಟ್ಟಿ
ಕರ್ನಾಟಕದಲ್ಲಿ ಈಗಾಗಲೇ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದೆ. ಈ ರಜೆ ಅಕ್ಟೋಬರ್ 07ರ ವರೆಗೂ ಮುಂದುವರೆಯಲಿದೆ. ಪ್ರಮುಖ ಹಬ್ಬಗಳಾದ ದಸರಾ ಹಾಗೂ ದೀಪಾವಳಿ ಕೂಡ ಅಕ್ಟೋಬರ್ ತಿಂಗಳಿನಲ್ಲಿಯೇ ಬರಲಿವೆ. ಅಕ್ಟೋಬರ್ ತಿಂಗಳಿನಲ್ಲಿ ಲಭ್ಯವಿರುವ ವಲಯವಾರು ರಜೆಗಳ ಪಟ್ಟಿ ಈ ಕೆಳಗಿನಂತಿದೆ:
- ಸರ್ಕಾರಿ ರಜೆಗಳು: 05
- ಬ್ಯಾಂಕ್ ರಜೆಗಳು: 11
- ಐಟಿ-ಬಿಟಿ, ಖಾಸಗಿ ಕಂಪನಿ ರಜೆಗಳು: 13
- ಶಾಲಾ-ಕಾಲೇಜು ರಜೆಗಳು: 12

ಸರ್ಕಾರಿ ರಜಾ ದಿನಗಳು
- ಅಕ್ಟೋಬರ್ 01: ಆಯುಧ ಪೂಜೆ
- ಅಕ್ಟೋಬರ್ 02: ಗಾಂಧಿ ಜಯಂತಿ/ ದಸರಾ ವಿಜಯದಶಮಿ
- ಅಕ್ಟೋಬರ್ 07: ವಾಲ್ಮೀಕಿ ಜಯಂತಿ
- ಅಕ್ಟೋಬರ್ 20: ನರಕ ಚತುದರ್ಶಿ
- ಅಕ್ಟೋಬರ್ 22: ಬಲಿಪಾಡ್ಯ/ ದೀಪಾವಳಿ
- ಇವುಗಳ ಜೊತೆಗೆ ನಾಲ್ಕು ಭಾನುಗಳು
ಬ್ಯಾಂಕ್ ರಜಾ ದಿನಗಳು
- ಅಕ್ಟೋಬರ್ 01: ಆಯುಧ ಪೂಜೆ
- ಅಕ್ಟೋಬರ್ 02: ಗಾಂಧಿ ಜಯಂತಿ/ ದಸರಾ ವಿಜಯದಶಮಿ
- ಅಕ್ಟೋಬರ್ 05: ಭಾನುವಾರ
- ಅಕ್ಟೋಬರ್ 07: ವಾಲ್ಮೀಕಿ ಜಯಂತಿ
- ಅಕ್ಟೋಬರ್ 11: ಎರಡನೇ ಶನಿವಾರ
- ಅಕ್ಟೋಬರ್ 12: ಭಾನುವಾರ
- ಅಕ್ಟೋಬರ್ 19: ಭಾನುವಾರ
- ಅಕ್ಟೋಬರ್ 20: ನರಕ ಚತುದರ್ಶಿ
- ಅಕ್ಟೋಬರ್ 22: ಬಲಿಪಾಡ್ಯ/ ದೀಪಾವಳಿ
- ಅಕ್ಟೋಬರ್ 25: ನಾಲ್ಕನೇ ಶನಿವಾರ
- ಅಕ್ಟೋಬರ್ 26: ಭಾನುವಾರ
ಶಾಲಾ ಮಕ್ಕಳ ರಜಾ ದಿನಗಳು
- ಅಕ್ಟೋಬರ್ 07ರ ವರೆಗೆ: ದಸರಾ ರಜೆ
- ದೀಪಾವಳಿಗೆ : 02 ದಿನ ರಜೆ
- ಭಾನುವಾರಗಳು : 03 ದಿನ ರಜೆ
ಐಟಿ ಮತ್ತು ಖಾಸಗಿ ಕಂಪನಿ ರಜಾ ದಿನಗಳು
ಅಕ್ಟೋಬರ್ 1 ಹಾಗೂ 2ರಂದು ದಸರಾ ಮತ್ತು ಗಾಂಧಿ ಜಯಂತಿ ನಿಮಿತ್ತ ಎರಡು ದಿನ ರಜೆ ಸಿಗಲಿದೆ. ಈ ಉದ್ಯೋಗಿಗಳು ಅಕ್ಟೋಬರ್ 3ರಂದು ರಜೆ ಹಾಕಿದರೆ ನಂತರ ಬರುವ ಶನಿವಾರ ಮತ್ತು ಭಾನುವಾರ ಸೇರಿ ಒಟ್ಟು 05 ದಿನ ಸರಣಿ ರಜೆ ಸಿಗಲಿವೆ.
ಇನ್ನು ದೀಪಾವಳಿ ಹಬ್ಬಕ್ಕೆ ಐಟಿ ಕಂಪನಿಗಳು ಸೇರಿದಂತೆ ಬಹುತೇಕ ಖಾಸಗಿ ವಲಯ ಅಕ್ಟೋಬರ್ 20, 21 ಮತ್ತು 24ರಂದು ರಜೆ ನೀಡಲಿವೆ. ಅದಕ್ಕೂ ಮುಂಚೆ ಶನಿವಾರ, ಭಾನುವಾರಗಳು ಇರುವುದರಿಂದ ಈ ವಾರ ಕೂಡ 05 ದಿನ ರಜೆ ಸಿಗುತ್ತವೆ.