ಮೇ 31ರೊಳಗೆ ಕೆವೈಸಿ ಮಾಡದಿದ್ದರೆ ಎಲ್‌ಪಿಜಿ ಸಿಲಿಂಡರ್ ರದ್ದಾಗುತ್ತಾ? ಇಲ್ಲಿದೆ ಅಸಲಿ ಮಾಹಿತಿ… No deadline for eKYC in LPG

Spread the love

No deadline for eKYC in LPG : ಎಲ್‌ಪಿಜಿ ಅಡುಗೆ ಅನಿಲ ಕುರಿತ ಸುದ್ದಿಯೊಂದು ಸದ್ದು ಮಾಡುತ್ತಿದೆ. ‘ಇದೇ ಮೇ 31ರೊಳಗೆ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ಸಂಪರ್ಕ ರದ್ದಾಗಲಿದೆ. ಗ್ಯಾಸ್ ಸಬ್ಸಿಡಿ ಕೂಡ ಬಂದ್ ಆಗಲಿದೆ’ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಇದೇ ರೀತಿಯ ಫುಕಾರು ಕಳೆದ ಡಿಸೆಂಬರ್’ನಲ್ಲೂ ಕೇಳಿ ಬಂದಿತ್ತು. ಆಗ ವಿವಿಧ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರುಗಳು ಈ ಬಗ್ಗೆ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದರು.

WhatsApp Group Join Now
Telegram Group Join Now

ಇದೀಗ ಪುನಃ ಅದೇ ರೀತಿಯ ಗಾಳಿಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಹಾಗಿದ್ದರೆ ಗಡುವಿನೊಳಗೆ ಕೆವೈಸಿ ಪೂರ್ಣಗೊಳಿಸದಿದ್ದರೆ ನಿಜಕ್ಕೂ ಎಲ್‌ಪಿಜಿ ಸಂಪರ್ಕ ರದ್ದಾಗುತ್ತದಾ? ಮೇ 31ರ ಗಡುವಿನ ನಂತರ ಸಿಲಿಂಡರ್ ಪೂರೈಕೆಯಲ್ಲಿ ತೊಂದರೆಯಾಗುತ್ತದಾ? ಸಿಲಿಂಡರ್ ಸಬ್ಸಿಡಿ ನಿಂತು ಹೋಗುತ್ತದಾ? ಈ ಸುದ್ದಿ ನಿಜವಾ? ಅಥವಾ ಕೇವಲ ವದಂತಿಯಾ? ಎಂಬ ಪ್ರಶ್ನೆ ಹಲವರಲ್ಲಿ ಕೇಳಿ ಬರುತ್ತಿವೆ.

No deadline for eKYC in LPG
ಏನಿದು ಗ್ಯಾಸ್ ಸಿಲಿಂಡರ್ ಕೆವೈಸಿ ಗಡುವು?

ಕೇಂದ್ರ ಪೆಟ್ರೋಲಿಯಂ ಸಚಿವಾಲಯ (Ministry of Petroleum and Natural Gas) ಬಹಳ ಹಿಂದೆಯೇ ಗ್ಯಾಸ್ ಸಿಲಿಂಡರ್ ಕೆವೈಸಿ ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಆನಂತರ ಕೇಂದ್ರ ಸರಕಾರ ಹಲವು ಬಾರಿ ಎಲ್‌ಪಿಜಿ ಅನಿಲ ಬಳಸುವ ಗ್ರಾಹಕರು ಕೆವೈಸಿ ಪೂರ್ಣಗೊಳಿಸಲು ಸೂಚಿಸುತ್ತ ಬಂದಿದೆ. ಆದರೆ, ಇನ್ನೂ ಅನೇಕರು ಕೆವೈಸಿ ಮಾಡುವ ಗೋಜಿಗೆ ಹೋಗಿಲ್ಲ.

ಹಾಗಂತ ಕೆವೈಸಿ (eKYC) ಕಡ್ಡಾಯವಾಗಿದೆಯಾದರೂ ಯಾವುದೇ ರೀತಿಯ ಗಡುವು ನಿಗದಿಯಾಗಿಲ್ಲ ಎಂಬ ಮಾಹಿತಿ ಇದೆ. ಇ-ಕೆವೈಸಿ ಪೂರ್ಣಗೊಳಿಸಲು ಮೇ 31 ಕೊನೆಯ ದಿನಾಂಕ ಎಂದು ವರದಿಗಳು ಬಂದಿದ್ದರೂ, ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಮೇ 31ರ ಗಡುವು ಹಾಗೂ ಜೂನ್ 1ರಿಂದ ಎಲ್‌ಪಿಜಿ ಅನಿಲ ಸಂಬ೦ಧಿಸಿದ೦ತೆ ನಿಯಮ ಬದಲಾವಣೆಯಾಗುವ ಸುದ್ದಿಗಳು ಕೇವಲ ವದಂತಿ ಅಷ್ಟೇ ಎನ್ನಲಾಗುತ್ತಿದೆ.

ಇ-ಕೆವೈಸಿ ಕಡ್ಡಾಯವೇಕೆ?

ಗ್ಯಾಸ್ ಸಿಲಿಂಡರ್ ಬಳಸುವ ಎಲ್ಲ ಗ್ರಾಹಕರೂ ಕೆವೈಸಿ ಪೂರ್ಣಗೊಳಿಸಿದರೆ ಗ್ರಾಹಕರ ಮಾಹಿತಿಯು ಸರ್ಕಾರದ ಬಳಿ ಇರುತ್ತದೆ. ಇದರಿಂದ ನಕಲಿ ಸಂಪರ್ಕಗಳು ಬಹಿರಂಗಗೊಳ್ಳುತ್ತವೆ. ಆಗ ಕಪ್ಪು ಮಾರುಕಟ್ಟೆ, ಕಾಳದಂಧೆಗೆ ಕಡಿವಾಣ ಬೀಳುತ್ತದೆ. ಇದರಿಂದ ಸರ್ಕಾರಕ್ಕೆ ಲಾಭವಾಗುವುದರ ಜೊತೆಗೆ ಕಡು ಬಡವರಿಗೆ ಸರಿಯಾದ ಸಮಯದಲ್ಲಿ ಗ್ಯಾಸ್ ಸಿಲಿಂಡರ್’ಗಳು ಸಿಗುತ್ತವೆ.

ಸದ್ಯಕ್ಕೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 300 ರೂಪಾಯಿ ಸಬ್ಸಿಡಿಯನ್ನು ಕೇಂದ್ರದಿ೦ದ ಸಿಗುತ್ತಿದೆ. 903 ರೂಪಾಯಿ ಬೆಲೆಯ ಸಿಲಿಂಡರ್ ಉಜ್ವಲ ಫಲಾನುಭವಿಗಳಿಗೆ ಕೇವಲ 600 ರೂಪಾಯಿಗೆ ಸಿಗುತ್ತಿದೆ. ಈ ಸೌಲಭ್ಯ ನಿರಂತರವಾಗಿ ಸಿಗಬೇಕೆಂದರೆ ಕೆವೈಸಿ ಮಾಡಬೇಕಾಗುತ್ತದೆ. ಇದಕ್ಕೆ ಯಾವುದೇ ಗಡುವು ಇಲ್ಲ. ಆದರೆ ಕೆವೈಸಿ ಮಾಡುವುದು ಉತ್ತಮ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ಪ್ರಕಟಣೆ
ಉಚಿತ ಮತ್ತು ಸುಲಭವಾಗಿ ಮಾಡಿ ಕೆವೈಸಿ

ನಿರ್ದಿಷ್ಟವಾಗಿ ಗ್ರಾಹಕರ ಆಧಾರ್ ಅನ್ನು ಪರಿಶೀಲಿಸಿ ಬಯೋಮೆಟ್ರಿಕ್ಸ್ ತೆಗೆದುಕೊಳ್ಳುವ ಮೂಲಕ ಅಡಿಗೆ ಅನಿಲ ವಿತರಣಾ ಸಿಬ್ಬಂದಿ ಇ-ಕೆವೈಸಿಯನ್ನು ಪೂರ್ಣಗೊಳಿಸುತ್ತಾರೆ. ಮಾಹಿತಿ ಪ್ರಕಾರ ಎಲ್‌ಪಿಜಿ ಸಂಪರ್ಕದೊ೦ದಿಗೆ ಆಧಾರ್ ಲಿಂಕ್ ಮಾಡಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಇದೊಂದು ಉಚಿತ ಮತ್ತು ಸುಲಭದ ಪ್ರಕ್ರಿಯೆ.

ಇಂಡೇನ್ ಗ್ಯಾಸ್ ಹೊಂದಿರುವವರು ಇಂಡಿಯನ್ ಆಯಿಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಇ-ಕೆವೈಸಿ ಸುಲಭವಾಗಿ ಪೂರ್ಣಗೊಳಿಸಬಹುದು. ಇತರೆ ಅನಿಲ ಸಂಪರ್ಕ ಹೊಂದಿರುವವರು ಸಂಬ೦ಧಪಟ್ಟ ಗ್ಯಾಸ್ ಡೀಲರ್ ಬಳಿಗೆ ಹೋಗಿ ಎಲ್‌ಪಿಜಿ ಸಿಲಿಂಡರ್’ಗಾಗಿ ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು. ಆದಷ್ಟು ಬೇಗ ಕರವೈಸಿ ಪೂರ್ಣಗೊಳಿಸಿ…


Spread the love
WhatsApp Group Join Now
Telegram Group Join Now
error: Content is protected !!