10ನೇ ತರಗತಿ 60% ರಿಸೆಲ್ಟ್ ಮಾಡಿದ ವಿದ್ಯಾರ್ಥಿಗಳಿಗೆ ₹15,000 ಧನಸಹಾಯ | ಈಗಲೇ ಅರ್ಜಿ ಸಲ್ಲಿಸಿ… NextGen Edu Scholarship 2024-25

Spread the love

NextGen Edu Scholarship 2024-25 : 10ನೇ ತರಗತಿ ಉತ್ತೀರ್ಣರಾಗಿ 11ನೇ ತರಗತಿಗೆ ಪ್ರವೇಶ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾಗಿರುವ NextGen Edu ಸ್ಕಾಲರ್‌ಶಿಪ್ 2024-25 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ದೇಶಾದ್ಯಂತ ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ ದಾಖಲಾದ 11ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಇವೈ ಗ್ಲೋಬಲ್ ಡೆಲಿವರಿ ಸರ್ವೀಸಸ್ (EY GDS) ಸಂಸ್ಥೆಯು ಈ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಶಿಕ್ಷಣವನ್ನು ಮುಂದುವರಿಸಲು ವರ್ಷಕ್ಕೆ 15,000 ರೂಪಾಯಿ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.

ಕರ್ನಾಟಕ ವಿದ್ಯಾಧನ್ : ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ 75,000 ರೂಪಾಯಿ ಆರ್ಥಿಕ ನೆರವು | ಜೂನ್ 30ರೊಳಗೇ ಅರ್ಜಿ ಹಾಕಿ Karnataka Vidyadhan Scholarship

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಭಾರತದಾದ್ಯಂತ ಯಾವುದೇ ಖಾಸಗಿ ಅಥವಾ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಗತಿ ಪೂರೈಸಿ 11ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶೀಪ್ ಪಡೆಯಲು ಅರ್ಹರಾಗಿರುತ್ತಾರೆ. 10ನೇ ತರಗತಿಯಲ್ಲಿ ಕನಿಷ್ಠ 60% ಗಳಿಸಿರಬೇಕು. 3 ಲಕ್ಷ ರೂಪಾಯಿ ವರೆಗಿನ ಕುಟುಂಬದ ವಾರ್ಷಿಕ ಆದಾಯವನ್ನು ಹೊಂದಿರಬೇಕು.

ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ಸ್ಥಳಗಳಿಂದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಈ ವಿದ್ಯಾರ್ಥಿವೇತನವು ಎಲ್ಲರಿಗೂ ಮುಕ್ತವಾಗಿದ್ದು; ಹುಡುಗಿಯರು, ಏಕ ಪೋಷಕ ಮಕ್ಕಳು, ಅನಾಥರು, ಲಿಂಗತ್ವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು PwD ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಇದೆ.

NextGen Edu Scholarship 2024-25

ಪಿಯುಸಿ ಪಾಸಾದವರಿಗೆ 2,500 ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಒಟ್ಟು ವೇತನ ₹10.4 ಲಕ್ಷ Agniveer Recruitment 2024

ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು?
  • 10ನೇ ತರಗತಿ ಅಂಕಪಟ್ಟಿ
  • ಸರ್ಕಾರ ನೀಡಿದ ವಿಳಾಸ ಪುರಾವೆ (ಆಧಾರ್ ಕಾರ್ಡ್)
  • ಕುಟುಂಬದ ಆದಾಯದ ಪುರಾವೆ (ಆದಾಯ ಪ್ರಮಾಣ ಪತ್ರ)
  • ಕಾಲೇಜು ಪ್ರವೇಶದ ಪುರಾವೆ
  • ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
  • ಇತ್ತೀಚಿನ ಛಾಯಾಚಿತ್ರ

8,000+ ಕೇಂದ್ರ ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ Central Government Jobs

ಅರ್ಜಿ ಸಲ್ಲಿಕೆ ಹೇಗೆ?

ಮೊದಲಿಗೆ ನಾವು ಲೇಖನದ ಕೊನೆಯಲ್ಲಿ ನೀಡಿರುವ ಅಧಿಕೃತ ವಿದ್ಯಾರ್ಥಿವೇತನ ಪುಟಕ್ಕೆ ಭೇಟಿ ನೀಡಿ. ಪುಟದ ಬಲ ತುದಿಯಲ್ಲಿ ಕಾಣುವ Apply Now ಬಟನ್ ಅನ್ನು ಕ್ಲಿಕ್ ಮಾಡಿ ನೇರವಾಗಿ ಅಲ್ಲಿ ಕೇಳಲಾದ ವಿವರ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ಒಂದು ವೇಳೆ ನೀವು ಈ ವಿದ್ಯಾರ್ಥಿವೇತನ ಪುಟಕ್ಕೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವವರು ಆಗಿದ್ದರೆ ನಿಮ್ಮ ಇಮೇಲ್ ಖಾತೆ ಅಥವಾ ಮೊಬೈಲ್ ಸಂಖ್ಯೆಯೊ೦ದಿಗೆ ನೋಂದಾಯಿಸಿಕೊಳ್ಳಬಹುದು. ಅದರ ಲಿಂಕ್ ಕೂಡ ಲೇಖನದ ಕೊನೆಯಲ್ಲಿದೆ ಗಮನಿಸಿ.

ಆನಂತರ ‘NextGen Edu Scholarship 2024-25’ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ, ಸಂಬAಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿದ ಬಳಿಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Submit/ಸಲ್ಲಿಸು’ ಬಟನ್ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಕೆಯ ಕೊನೆಯ ದಿನ : 26 ಜೂನ್ 2024

ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ನಿಮ್ಮ ಮೊಬೈಲ್‌ನಲ್ಲೇ ಮಾಡಿ | ಸೆಪ್ಟೆಂಬರ್ 14ರ ವರೆಗೆ ಮಾತ್ರ ಈ ಅವಕಾಶ myAadhaar Online Update


Spread the love
WhatsApp Group Join Now
Telegram Group Join Now

1 thought on “10ನೇ ತರಗತಿ 60% ರಿಸೆಲ್ಟ್ ಮಾಡಿದ ವಿದ್ಯಾರ್ಥಿಗಳಿಗೆ ₹15,000 ಧನಸಹಾಯ | ಈಗಲೇ ಅರ್ಜಿ ಸಲ್ಲಿಸಿ… NextGen Edu Scholarship 2024-25”

Leave a Comment

error: Content is protected !!