ಕೇಂದ್ರ ಸರ್ಕಾರವು ನೌಕರರಿಗೆ (Govt Employees) ಹೊಸ ರಜೆ ನೀತಿ (New Leave Policy 202) ಘೋಷಿಸಿದ್ದು; ಇದೇ ಜುಲೈನಿಂದ ನೌಕರರಿಗೆ ವರ್ಷಕ್ಕೆ 42 ರಜೆ ಅನ್ವಯವಾಗಲಿವೆ. ಈ ಕುರಿತ ಮಾಹಿತಿ ಇಲ್ಲಿದೆ…
ಸರ್ಕಾರಿ ನೌಕರರಿಗಾಗಿ ಬಹು ನಿರೀಕ್ಷಿತ ಹೊಸ ರಜೆ ನೀತಿಯನ್ನು ಜುಲೈ 1, 2025ರಿಂದ ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ವಿಶೇಷ ರಜೆಯ ಪ್ರಯೋಜನವನ್ನು ದೇಶದ ಲಕ್ಷಾಂತರ ಸರ್ಕಾರಿ ನೌಕರರು ಪಡೆಯಲಿದ್ದಾರೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು (DoPT) ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕೇಂದ್ರ ಸರಕಾರದ ಕಾಯಂ ನೌಕರರಿಗೆ ವರ್ಷಕ್ಕೆ 42 ಹೆಚ್ಚುವರಿ ರಜೆಗಳು (special leave) ನೀಡಲಾಗುವುದು ಎಂದು ತಿಳಿಸಿದೆ.
Education Loan- ₹10 ಲಕ್ಷದಿಂದ ₹60 ಲಕ್ಷದ ವರೆಗೆ ಶಿಕ್ಷಣ ಸಾಲ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಹೊಸ ರಜೆ ನೀತಿಯ ಹಿನ್ನಲೆ
2020-2022ರ ಅವಧಿಯಲ್ಲಿ ಕೊರೊನಾ ವೈರಸ್ ಮಹಾಮಾರಿಗೆ ದೇಶವೇ ತತ್ತರಿಸಿದೆ. ಈ ಸಮಯದಲ್ಲಿ, ಬಹುತೇಕ ಕೇಂದ್ರ ಸರ್ಕಾರಿ ನೌಕರರು ತಮ್ಮ ನಿತ್ಯ ಕಾರ್ಯವೈಖರಿಯನ್ನು ಬದಲಾಗಿಸಿ, ಹಲವೊಮ್ಮೆ ನಿಗದಿತ ಸಮಯಕ್ಕೂ ಮೀರಿ ಕಾರ್ಯನಿರ್ವಹಿಸಿದ್ದರು.
ಇಂತಹ ಆಪತ್ತಿನ ಕಾಲದಲ್ಲಿ ಆರೋಗ್ಯ, ಭದ್ರತೆ, ತುರ್ತು ಸೇವೆಗಳು, ಪಡಿತರ ವಿತರಣೆ ಮುಂತಾದ ಅನೇಕ ಕಾರ್ಯಕ್ಷೇತ್ರಗಳಲ್ಲಿ ನೌಕರರು ಮುಂದೆ ನಿಂತು ದೇಶ ಸೇವೆ ಮಾಡಿದ ಹಿನ್ನಲೆಯಲ್ಲಿ, ಅವರ ಶ್ರಮಕ್ಕೆ ಪ್ರತಿಫಲವಾಗಿ ಈ ರಜೆಗಳನ್ನು ನೀಡಲು ಸರ್ಕಾರ ನಿರ್ಧಾರ ಮಾಡಿದೆ.

ಯಾರು ಈ ಸೌಲಭ್ಯ ಪಡೆಯುತ್ತಾರೆ?
ಈ ಹೊಸ ರಜೆ ನೀತಿಯು ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಪ್ರಮುಖ ಅರ್ಹತಾ ನಿಯಮಗಳು ಈ ಕೆಳಗಿನಂತಿವೆ:
- ಕಾಯಂ ಸೇವೆಯಲ್ಲಿ ಇರುವ ಕೇಂದ್ರ ಸರ್ಕಾರಿ ನೌಕರರು ಮಾತ್ರ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ.
- ಗುತ್ತಿಗೆ ಆಧಾರಿತ (Contract Basis) ಅಥವಾ ಅರೆಕಾಲಿಕ (part-time) ನೌಕರರಿಗೆ ಈ ಹೆಚ್ಚುವರಿ ರಜೆಗಳು ಅನ್ವಯಿಸುವುದಿಲ್ಲ.
- ನೌಕರರು ಈ ರಜೆ ಪಡೆಯಲು, ಕನಿಷ್ಠ ಒಂದು ವರ್ಷ ಸೇವೆ ಪೂರೈಸಿರಬೇಕು ಎಂಬ ಶರತ್ತು ಇದೆ.
42 ಹೆಚ್ಚುವರಿ ರಜೆಗಳು ಹೇಗೆ ಅನ್ವಯವಾಗುತ್ತವೆ?
ಈಗಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ವರ್ಷಕ್ಕೆ 08 ಸಾಮಾನ್ಯ ರಜೆ (CL– Casual Leave), 30 ಆರ್ಜಿತ ರಜೆ (EL– Earned Leave) ಹಾಗೂ ಅಗತ್ಯವಿದ್ದಾಗ ವೈದ್ಯಕೀಯ (ML– Medical Leave) ರಜೆಗಳು ಅನ್ವಯವಾಗುತ್ತಿವೆ.
ಮೇಲ್ಕಾಣಿಸಿದ ರಜೆಗಳ ಹೊರತಾಗಿ ಈಗ ಜುಲೈನಿಂದ ಹೊಸ 42 ಹೆಚ್ಚುವರಿ ರಜೆಗಳನ್ನು ನೀಡಲಾಗುತ್ತದೆ. ಈ ರಜೆಗಳು ನಿರ್ದಿಷ್ಟ ಷರತ್ತುಗಳಡಿಯಲ್ಲಿ ಬಳಸಬಹುದಾಗಿದ್ದು, ರಜೆಗಳನ್ನು ಬಳಸುವ ಪ್ರಕ್ರಿಯೆ ಮತ್ತು ನಿಯಮಗಳ ಬಗ್ಗೆ ಇನ್ನೂ ಸುವ್ಯವಸ್ಥಿತ ಮಾರ್ಗಸೂಚಿ ಪ್ರಕಟವಾಗಬೇಕಿದೆ.
ಈ ಹೊಸ ರಜೆ ನೀತಿಯು ಕೇವಲ ಅಧಿಕೃತ ಸೌಲಭ್ಯವಲ್ಲ. ಇದು ನೌಕರರ ಶ್ರಮ, ಸೇವೆ, ನಿಷ್ಠೆ ಹಾಗೂ ಸಮಾಜದ ಬಳಿಗೆ ನಿಲ್ಲುವ ಭಾವನೆಗೆ ಸರ್ಕಾರ ನೀಡಿದ ಮಾನವೀಯ ಪುರಸ್ಕಾರವಾಗಿದೆ. ಇದು ನೌಕರರ ಕೆಲಸದ ನಿಷ್ಠೆ ಹೆಚ್ಚಿಸುವುದಷ್ಟೇ ಅಲ್ಲ, ಕೆಲಸದ ಸಂತೋಷವನ್ನೂ ವೃದ್ಧಿಸುತ್ತವೆ ಎಂಬ ನಿರೀಕ್ಷೆ ಇದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.