National Livestock Mission Scheme : ಪಶುಪಾಲನಾ ಕ್ಷೇತ್ರ ಇಂದು ಕೃಷಿ ಕ್ಷೇತ್ರದಷ್ಟೇ ಗ್ರಾಮೀಣ ಉದ್ಯೋಗ ಸೃಷ್ಠಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿಗೆ ಪೂರಕವಾದ ಪಶುಪಾಲನಾ ವಲಯದಲ್ಲಿ (Animal husbandry sector) ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸುವ ಹಿನ್ನಲೆಯಲ್ಲಿ ಹಲವು ಯೋಜನೆಗಳನ್ನು ಅನುಷ್ಠಾಗೊಳಿಸಿವೆ. ಈ ಪೈಕಿ ಕೇಂದ್ರ ಸರಕಾರದ ‘ರಾಷ್ಟ್ರೀಯ ಜಾನುವಾರು ಮಿಷನ್’ (National Livestock Mission- NLM) ಯೋಜನೆಯೂ ಒಂದಾಗಿದೆ.
ಕುರಿ, ಮೇಕೆ, ಕೋಳಿ, ಪಶು ಆಹಾರ ಮತ್ತು ಮೇವು ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರನ್ನು ಸ್ವಯಂ ಸಕ್ರಿಯಗೊಳಿಸುವುದು ಹಾಗೂ ಈ ಕ್ಷೇತ್ರದಲ್ಲಿ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ‘ರಾಷ್ಟ್ರೀಯ ಜಾನುವಾರು ಮಿಷನ್’ ಯೋಜನೆ ಜಾರಿಗೊಳಿಸಿದೆ.
ಸದರಿ ಯೋಜನೆಯು 2021-22ನೇ ಸಾಲಿನಿಂದ 2025-26ನೇ ಸಾಲಿನ ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಘಟಕ ವೆಚ್ಚದ ಮೂಲ ಬಂಡಾವಳದಲ್ಲಿ ಶೇ.50ರಷ್ಟು ಸಹಾಯಧನವನ್ನು ಎರಡು ಕಂತುಗಳಲ್ಲಿ ಒದಗಿಸಲಾಗುತ್ತದೆ.
ಯೋಜನಾ ಘಟಕಗಳ ವಿವರ
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ‘ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ’ದಡಿಯಲ್ಲಿ (NLM – EDEG) ಗ್ರಾಮೀಣ ಕೋಳಿ ಸಾಕಾಣಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ಲಭ್ಯವಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದಾಗಿದೆ.
ಈ ಯೋಜನೆಯಡಿ ಈ ಕೆಳಕಂಡ ಪಶುಸಂಗೋಪನಾ ಚಟುವಟಿಕೆಗಳನ್ನು ಉದ್ಯಮಶೀಲ ಕಾರ್ಯಕ್ರಮಗಳನ್ನಾಗಿ ಕೈಗೊಳ್ಳಲು (ಯಾವುದಾದರೂ ಒಂದು ಚಟುವಟಿಕೆಗೆ ಮಾತ್ರ) ಯೋಜನಾ ವೆಚ್ಚದ ಶೇ.50ರಷ್ಟು, ಸಾಲ ಸೌಲಭ್ಯ ಹಾಗೂ ತಾಂತ್ರಿಕ ಸಹಾಯವನ್ನು ನೀಡಲಾಗುವುದು. ಯೋಜನೆ ಮಾರ್ಗಸೂಚಿ ಹೀಗಿವೆ:
ಕೆಳಗಿನ ವರ್ಗಗಳು ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು
- ಜಂಟಿ ಹೊಣೆಗಾರಿಕೆ ಗುಂಪು
- ಸ್ವ-ಸಹಾಯ ಗುಂಪುಗಳು
- ವೈಯಕ್ತಿಕ ಉದ್ಯಮಿಗಳು
- ರೈತ ಉತ್ಪಾದಕರ ಸಂಸ್ಥೆಗಳು
- ಸೆಕ್ಷನ್ 8 ಕಂಪನಿಗಳು
- ಖಾಸಗಿ ಕಂಪನಿಗಳು
- ರೈತರ ಸಹಕಾರ ಸಂಘ
ಸಲ್ಲಿಸಬೇಕಾದ ದಾಖಲಾತಿಗಳು
- ಯೋಜನಾ ವರದಿ (DPR)
- ಭೂ ದಾಖಲೆಗಳು (RTC-Land records)
- ಘಟಕ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದ ಜಿಪಿಎಸ್ ಫೋಟೋ (Projectsite Photo)
- ಪಾನ್ ಕಾರ್ಡ್ (PAN)
- ಆಧಾರ್ ಕಾರ್ಡ್ (Aadhar)
- ಚುನಾವಣೆ ಗುರುತಿನ ಚೀಟಿ (Voter ID)
- 3 ವರ್ಷಗಳ ಆದಾಯ ತೆರಿಗೆ ಪಾವತಿಸಿರುವ ವರದಿ (Last 3 years IT returns)
- ಕಳೆದ 6 ತಿಂಗಳ ಬ್ಯಾಂಕ್ ವಹಿವಾಟು ವಿವರ (Bank A/c Cstatement for last 6 months)
- ರದ್ದುಪಡಿಸಿದ ಬ್ಯಾಂಕ್ ಚೆಕ್ ಹಾಳೆ (Cancelled cheque)
- ಪಾಸ್ ಪೋರ್ಟ್ ಅಳತೆಯ ಫೋಟೋ (Applicant passport size photo)
- ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ (Education certificate)
- ತರಬೇತಿ ಪ್ರಮಾಣ ಪತ್ರ (Training certificate)
- ಅನುಭವ ಹೊಂದಿರುವ ಕುರಿತು ಪ್ರಮಾಣ ಪತ್ರ (Fxperience certificate/letter)
ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಅರ್ಹತೆಗೆ ತಕ್ಕಂತೆ ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅನುದಾನ ಲಭ್ಯತೆ ನೋಡಿಕೊಂಡು ಯೋಜನೆಯಡಿ ಸೂಕ್ತ ರೀತಿಯಲ್ಲಿ ಸಹಾಯಧನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಜಿಲ್ಲಾ ಉಪ ನಿರ್ದೇಶಕರು / ಸಹಾಯಕ ನಿರ್ದೇಶಕರು ತಾಲ್ಲೂಕು ಮಟ್ಟ, ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ಇಲ್ಲವೇ ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ 82771 00200ಗೆ ಸಂಪರ್ಕಿಸಬಹುದು.
2 thoughts on “ಕೋಳಿ ಸಾಕಾಣಿಕೆಗೆ ₹25 ಲಕ್ಷ, ಕುರಿ-ಮೇಕೆ, ಹಂದಿ ಸಾಕಾಣಿಕೆಗೆ ₹50 ಲಕ್ಷ ಸಹಾಯಧನ | ಎನ್‌ಎಲ್‌ಎಂ ಯೋಜನೆಯಡಿ ಅರ್ಜಿ ಸಲ್ಲಿಸಿ… National Livestock Mission Scheme”