myAadhaar Online Update : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಮತ್ತೆ ಆಧಾರ್ ಕಾರ್ಡ್ ಅಪ್ಡೇಟ್ ಗಡುವವನ್ನು ವಿಸ್ತರಣೆ ಮಾಡಿದೆ. ನಿಮ್ಮ ಆಧಾರ್ ಕಾರ್ಡ್’ನ್ನು ಉಚಿತವಾಗಿ ನವೀಕರಣ ಮಾಡಿಕೊಳ್ಳಲು ಸೆಪ್ಟೆಂಬರ್ 14ರ ವರೆಗೂ ಅವಕಾಶ ನೀಡಲಾಗಿದೆ.
ನಿಗದಿತ ಗಡುವಿನ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ದರೆ ಬಹುತೇಕ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಷ್ಟವಾಗಲಿದೆ. ಹೀಗಾಗಿ ಗಡುವಿನ ಒಳಗೇ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳುವುದು ಕ್ಷೇಮಕರ.
ಈ ಗಡುವಿನ ಒಳಗೇ ಅಪ್ಡೇಟ್ ಮಾಡಿ…
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್ ವಂಚನೆಯನ್ನು ತಡೆಯುವ ಭಾಗವಾಗಿ (Unique Identification Authority of India -UIDAI) ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.
ಉಚಿತ ಆಧಾರ್ ಅಪ್ಡೇಟ್’ಗೆ ಕಳೆದ ಜೂನ್ 14, 2024 ಕೊನೆಯ ದಿನವಾಗಿತ್ತು. ಇದೀಗ ಈ ಅವಧಿಯನ್ನು ಸೆಪ್ಟೆಂಬರ್ 14, 2024ರ ವರೆಗೂ ವಿಸ್ತರಿಸಲಾಗಿದೆ. ಹತ್ತಿರದ ಆಧಾರ್ ಸೆಂಟರ್ಗೆ ಹೋಗಿ ನಿಮ್ಮ ಆಧಾರ್ ವಿವರ ಅಪ್ಡೇಟ್ ಮಾಡಬಹುದು. ಅದಕ್ಕೆ ನಿರ್ದಿಷ್ಟ ಶುಲ್ಕ ಇರುತ್ತದೆ. ಹೆಚ್ಚಿನ ಶುಲ್ಕ ತೆರಬೇಕಾಗಿಲ್ಲ.
ಆಧಾರ್ ಅಪ್ಡೇಟ್ ಯಾರು ಮಾಡಿಕೊಳ್ಳಬೇಕು?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ಯೋಜನೆಗಳಿಗೆ ಆಧಾರ್ ದೃಢೀಕರಣ ಅಗತ್ಯವಾಗಿದೆ. ಆಧಾರ್ ಕಾರ್ಡ್’ನಲ್ಲಿನ ವಿಳಾಸ ಇತ್ಯಾದಿ ಮಾಹಿತಿ ಸಮರ್ಪಕವಾಗಿ ಅಪ್‌ಡೇಟ್ ಆಗಿರಬೇಕಾಗುತ್ತದೆ. ಆಧಾರ್ ಡೇಟಾಬೇಸ್ ಸಂಗ್ರಹದಲ್ಲೂ ವ್ಯಕ್ತಿಯ ಕುರಿತು ಇತ್ತೀಚಿನ ಮಾಹಿತಿ ದಾಖಲೆಗೆ ಅಗತ್ಯವಾಗಿದೆ.
ಹೀಗಾಗಿ ಆಧಾರ್ ದಾಖಲಾತಿ ದಿನಾಂಕದಿAದ ಪ್ರತಿ 10 ವರ್ಷಗಳು ಪೂರ್ಣಗೊಂಡ ನಂತರ, ಗುರುತಿನ ಪುರಾವೆ (POI) ಮತ್ತು ವಿಳಾಸದ ಪುರಾವೆಯನ್ನು ಸಲ್ಲಿಸುವ ಮೂಲಕ ಆಧಾರ್‌ನಲ್ಲಿ ತಮ್ಮ ಪೂರಕ ದಾಖಲೆಗಳನ್ನು ಒಮ್ಮೆಯಾದರೂ ಅಪ್ಡೇಟ್ ಮಾಡಿಕೊಳ್ಳಬೇಕು.
ಮೊಬೈಲ್‌ನಲ್ಲೇ ಮಾಡಿ ಆಧಾರ್ ಅಪ್ಡೇಟ್ ಮಾಡಿ…
ಮೊಬೈಲ್‌ನಲ್ಲಿಯೇ ಮೈ ಆಧಾರ್ (https://uidai.gov.in/en/) ಜಾಲತಾಣಕ್ಕೆ ಭೇಟಿ ನೀಡುವ ಮೂಲಕವೂ ಅಪ್ಡೇಟ್ ಮಾಡಲು ಅವಕಾಶವಿದೆ.ಆನ್‌ಲೈನ್‌ನಲ್ಲಿ ಮೈ ಆಧಾರ್ ಪೋರ್ಟಲ್ ಅಥವಾ ಮೈ ಆಧಾರ್ ಆ್ಯಪ್‌ನಲ್ಲಿ ‘ಅಪ್ಡೇಟ್ ಡಾಕ್ಯುಮೆಂಟ್’ ಎಂಬ ಹೊಸ ಫೀಚರ್ ಅನ್ನು ಪ್ರಾಧಿಕಾರ ನೀಡಿದೆ.
ಆಧಾರ್ ತಿದ್ದುಪಡಿಗಳನ್ನು ಮಾಡಲು ಎಡಿಟ್ ಎಂಬ ಆಯ್ಕೆಯನ್ನೂ ನೀಡಲಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ತಿದ್ದುಪಡಿಯನ್ನು ಖಚಿತಪಡಿಸಿಕೊಳ್ಳಬೇಕು. ಸ್ವತಃ ನೀವೇ ಮೊಬೈಲ್’ನಲ್ಲಿ ಆಧಾರ್ ಅಪ್ಡೇಟ್ ಮಾಡಲು ತೊಂದರೆಯಾದರೆ ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಿ ಸುಲಭವಾಗಿ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.
ನಿಮ್ಮ ಆಧಾರ್ ಅಪ್ಡೇಟ್ ಡೈರೆಕ್ಟ್ ಲಿಂಕ್: ಇಲ್ಲಿ ಒತ್ತಿ