Monsoon Forecast 2025- ಈ ವರ್ಷದ ಮುಂಗಾರು ಮಳೆ ಸೂಪರ್: ಹವಾಮಾನ ಇಲಾಖೆಯ ಮಹತ್ವದ ಮುನ್ಸೂಚನೆ

Spread the love

WhatsApp Group Join Now
Telegram Group Join Now

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ (Monsoon Forecast 2025) ವಾಡಿಕೆಗಿಂತಲೂ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Meteorological department forecast) ನೀಡಿದೆ…

2025ರ ನೈಋತ್ಯ ಮುಂಗಾರು ಹಂಗಾಮಿನಲ್ಲಿ ಭಾರತದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂಬ ಸ್ಪಷ್ಟ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದು ದೇಶದ ಕೃಷಿ ಚಟುವಟಿಕೆಗಳಿಗೆ ಹೊಸ ಉತ್ಸಾಹವನ್ನು ನೀಡುವ ಸುದ್ದಿಯಾಗಿದ್ದು, ರೈತ ಸಮುದಾಯದಲ್ಲಿ ಆಶಾಭಾವನೆ ಮೂಡಿಸಿದೆ.

ಈ ವರ್ಷ ಶೇ.105ರಷ್ಟು ಮಳೆ ಸಾಧ್ಯತೆ

ಭಾರತದ ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1ರಿಂದ ಸೆಪ್ಟೆಂಬರ್ 30ರ ವರೆಗೆ ಇರುತ್ತದೆ. ಈ ಅವಧಿಯಲ್ಲಿಯೇ ವರ್ಷಪೂರ್ತಿ ಕೃಷಿಗೆ ಬೇಕಾಗುವಷ್ಟು ನೀರು ಲಭ್ಯವಾಗುತ್ತದೆ.

ಸರಾಸರಿ ಪ್ರಮಾಣದಲ್ಲಿ ಶೇ.95ರಷ್ಟು ಮಳೆಯಾಗುವುದು ವಾಡಿಕೆ ಮಳೆ ಎಂದು ಅಂದಾಜಿಸಲಾಗುತ್ತದೆ. ಆದರೆ, ಈ ವರ್ಷ ಶೇ.105ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆ ಪ್ರಮಾಣವನ್ನು ಈ ಕೆಳಗಿನಂತೆ ವಗೀಕರಿಸಬಹುದು:

  • 90%ಕ್ಕಿಂತ ಕಡಿಮೆ ಮಳೆ- ಕೊರತೆ
  • 90%-95% ಮಳೆ- ವಾಡಿಕೆಗಿಂತ ಕಡಿಮೆ
  • 95%-105% ಮಳೆ- ವಾಡಿಕೆ ಪ್ರಮಾಣ
  • 105%-110% ಮಳೆ- ವಾಡಿಕೆಗಿಂತ ಹೆಚ್ಚು
  • 110% ಮೀರಿದರೆ- ಹೆಚ್ಚುವರಿ ಮಳೆ

ಹವಾಮಾನ ಇಲಾಖೆಯು 2025ನೆ ಸಾಲಿನ ಮುಂಗಾರು ಮಳೆಯ ಬಗ್ಗೆ ಶೇ.30ರಷ್ಟು ವಾಡಿಕೆಯಷ್ಟು ಮಳೆಯಾಗುವ ಸಾಧ್ಯತೆ, ಶೇ.33ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಹಾಗೂ ಶೇ.26ರಷ್ಟು ಹೆಚ್ಚುವರಿ ಮಳೆಯಾಗುವ ಸಾಧ್ಯತೆಯನ್ನು ಅಂದಾಜಿಸಿದೆ.

SSLC Result 2025- ಎಸ್ಸೆಸ್ಸೆಲ್ಸಿ ಫಲಿತಾಂಶ | ಶಿಕ್ಷಣ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ...
Monsoon Forecast 2025
ಕರ್ನಾಟಕದಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಲಿದೆ?

ಕರ್ನಾಟಕದ ಭೌಗೋಳಿಕ ವೈವಿಧ್ಯತೆಯ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣ ಸಹ ವಿಭಿನ್ನವಾಗಿರಲಿದೆ. ಹವಾಮಾನ ತಜ್ಞರು ಈ ಕೆಳಗಿನಂತೆ ಮುನ್ಸೂಚನೆ ನೀಡಿದ್ದಾರೆ:

ಉತ್ತರ ಕರ್ನಾಟಕ: ಈ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗುವ ನಿರೀಕ್ಷೆಯಿದೆ. ಬಳ್ಳಾರಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯಬಹುದೆಂದು ಅಂದಾಜಿಸಲಾಗಿದೆ.

ಕರಾವಳಿ ಜಿಲ್ಲೆಗಳು: ಸಮುದ್ರದ ಸಮೀಪ ಇರುವುದರಿಂದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆ ಮಟ್ಟದ ಮಳೆಯಾಗುವ ನಿರೀಕ್ಷೆ ಇದೆ.

ದಕ್ಷಿಣ ಒಳನಾಡು: ಇನ್ನು ದಕ್ಷಿಣ ಒಳನಾಡು ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ವಾಡಿಕೆಗಿಂತ ತುಸು ಹೆಚ್ಚಿನ ಮಳೆಯ ನಿರೀಕ್ಷೆ ಇದೆ.

ಬೆಂಗಳೂರಿನ ಭಾಗ: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾತಾವರಣದ ಬದಲಾವಣೆಯಿಂದ ಅನಿಯಮಿತ ಮಳೆಯಾಗುತ್ತಿದೆ. ಈ ವರ್ಷ ಇಲ್ಲಿ ವಾಡಿಕೆಯ ಮಟ್ಟದ ಮಳೆಯಾದರೂ ನಿರೀಕ್ಷೆ ಇದೆ.

Karnataka Weather Update- ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಏಳು ದಿನ ಮಳೆಯ ಅಬ್ಬರ | ಹವಾಮಾನ ಇಲಾಖೆ ಮುನ್ಸೂಚನೆ…

ಈ ವರ್ಷ ಅಧಿಕ ಮಳೆಗೆ ಕಾರಣವೇನು?

ಈ ವರ್ಷ ಮಳೆಯ ಪ್ರಮಾಣ ಹೆಚ್ಚಾಗುವ ಪ್ರಮುಖ ಕಾರಣವಾಗಿ ಹವಾಮಾನ ತಜ್ಞರು ಈ ಕೆಳಕಂಡ ಎರಡು ಅಂಶಗಳನ್ನು ಗುರುತಿಸಿದ್ದಾರೆ:

ಲಾ ನಿನಾ (La Nina) ತಟಸ್ಥ ಸ್ಥಿತಿ: ಲಾ ನಿನಾ ಪರಿಣಾಮದಿಂದ ಪೆಸಿಫಿಕ್ ಮಹಾಸಾಗರದ ತಾಪಮಾನ ಇಳಿಕೆಯಾಗುವ ಮೂಲಕ ಮಳೆ ಮಾಡುವ ಮೋಡಗಳ ಆವೃತ್ತಿ ಹೆಚ್ಚಾಗುತ್ತದೆ. 2024ರ ಕೊನೆಯಿಂದಲೇ ಈ ಸ್ಥಿತಿ ತಟಸ್ಥವಾಗಿದ್ದು, ಮಳೆಯ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿದೆ.

WhatsApp Group Join Now
Telegram Group Join Now

ಹಿಂದು ಮಹಾಸಾಗರದ ದ್ವಿಧ್ರುವಿ ಪರಿಸ್ಥಿತಿ (Indian Ocean Dipole – IOD): ಇದು ಕೂಡ ಈ ವರ್ಷ ತಟಸ್ಥವಾಗಿದೆ. ಈ ಪರಿಸ್ಥಿತಿಯಲ್ಲಿ ಇಂಡೋನೇಷ್ಯಾದ ಭಾಗ ಮತ್ತು ಆಫ್ರಿಕಾದ ಭಾಗದ ಮಧ್ಯೆ ಸಾಗರದ ತಾಪಮಾನ ವ್ಯತ್ಯಾಸ ವಾತಾವರಣದ ಚಲನೆಗೆ ಕಾರಣವಾಗುತ್ತದೆ. ಈ ಬಾರಿಯೂ ಇದು ಹೆಚ್ಚು ಮಳೆಯಾಗುವ ಭರವಸೆ ಮೂಡಿಸಿದೆ.

Free Electric Scooter- ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ | ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…

ಈ ವರ್ಷ ಇತರ ರಾಜ್ಯಗಳಲ್ಲಿ ಮಳೆ ಸ್ಥಿತಿ ಹೇಗೆ?

ಕರ್ನಾಟಕದ ಹೊರತಾಗಿ ತಮಿಳುನಾಡು, ಬಿಹಾರ, ಲಡಾಕ್, ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಒಟ್ಟಾರೆ 2025ರ ಮುಂಗಾರು ಕಾಲ ಹವಾಮಾನ ಕೃಷಿ ದೃಷ್ಟಿಯಿಂದ ಹಿತಕರವಾಗಿದೆ. ಸರ್ಕಾರ, ಕೃಷಿ ಇಲಾಖೆ ಮತ್ತು ರೈತರು ಈ ಮುನ್ಸೂಚನೆಗೆ ತಕ್ಕಂತೆ ಬಿತ್ತನೆ ಯೋಜನೆಗಳನ್ನು ರೂಪಿಸಿಕೊಂಡರೆ ಉತ್ತಮ ಇಳುವರಿ ಸಾಧ್ಯವಾಗುತ್ತದೆ.

Free Bus Pass Smart Card- ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ವಿತರಣೆ | ಬಸ್‌ಪಾಸ್ ಪಡೆಯಲು ಅರ್ಜಿ ಸಲ್ಲಿಕೆ ಹೇಗೆ?


Spread the love
error: Content is protected !!