Mobile Canteen Subsidy- ಮೊಬೈಲ್ ಕ್ಯಾಂಟೀನ್ ತೆರೆಯಲು ಅರ್ಜಿ ಆಹ್ವಾನ | 4 ಲಕ್ಷ ರೂ. ಸಹಾಯಧನ

ನಿರುದ್ಯೋಗಿಗಳು ಮೊಬೈಲ್ ಕ್ಯಾಂಟೀನ್ (Mobile Canteen Subsidy) ಸ್ವಯಂ ಉದ್ಯೋಗ ಆರಂಭಿಸಲು ರಾಜ್ಯ ಸರ್ಕಾರ 4 ಲಕ್ಷ ರೂ. ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ನಿರುದ್ಯೋಗಿ ಯುವಕ/ಯುವತಿಯರನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಅನೇಕ ಸ್ವಯಂ ಉದ್ಯೋಗ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಪೈಕಿ ‘ಉದ್ಯಮಶೀಲತಾ ಅಭಿವೃದ್ಧಿ ಯೋಜನೆ’ ಕೂಡ ಒಂದಾಗಿದೆ.
ಸಮಾಜ ಕಲ್ಯಾಣ ಇಲಾಖೆ ಮೂಲಕ ಅನುಷ್ಠಾನಗೊಳಿಸಿರುವ ಸದರಿ ಯೋಜನೆಯಡಿ ಮೊಬೈಲ್ ಕ್ಯಾಂಟೀನ್ ಆರಂಭಿಸಲು 4 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಈ ಸಹಾಯಧನ ಪಡೆಯುವುದು ಹೇಗೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ವಿವರವನ್ನು ಇಲ್ಲಿ ಗಮನಿಸೋಣ…
ಅರ್ಹತಾ ಮಾನದಂಡ ಮತ್ತು ಸಹಾಯಧನ ಮೊತ್ತ
ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳಿಂದ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ನಿಗಮಗಳ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿಯ ನಿರುದ್ಯೋಗಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.
ನಿರುದ್ಯೋಗಿಗಳಿಗೆ ಫಾಸ್ಟ್ ಫುಡ್ ಟ್ರಕ್ ಟ್ರೇಲರ್, ಮೊಬೈಲ್ ಕಿಚನ್ ಘಟಕವನ್ನು ಆರಂಭಿಸಲು ಘಟಕ ವೆಚ್ಚದ ಶೇ.75ರಷ್ಟು ಅಥವಾ ಗರಿಷ್ಠ 4 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ ನೀಡಲಾಗುತ್ತದೆ.

ಯಾರೆಲ್ಲ ಅರ್ಹರು?
ಕರ್ನಾಟಕ ನಿವಾಸಿಯಾಗಿರುವ, ಪರಿಶಿಷ್ಟ ಜಾತಿಗೆ ಸೇರಿರುವ ಹಾಗೂ 21ರಿಂದ 50 ವರ್ಷದೊಳಗಿನ ನಿರುದ್ಯೋಗಿಗಳು ಅರ್ಜಿ ಸಲ್ಲಿಸಬಹುದು.
ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದ ಅರ್ಜಿದಾರರಿಗೆ 1.5 ಲಕ್ಷ ಹಾಗೂ ನಗರ ಪ್ರದೇಶದವರಿಗೆ 2 ಲಕ್ಷ ರೂ. ಮಿತಿಯಲ್ಲಿರಬೇಕು.
ಅರ್ಜಿದಾರರು ಅಥವಾ ಅರ್ಜಿದಾರರ ಕುಟುಂಬದವರು ಈ ಹಿಂದೆ ನಿಗಮ ಅಥವಾ ಸರ್ಕಾರದಿಂದ 1 ಲಕ್ಷ ರೂ. ಮೇಲ್ಪಟ್ಟು ಸೌಲಭ್ಯ ಪಡೆದಿದ್ದರೆ ಅಂಥವರು ಈ ಸೌಲಭ್ಯ ಪಡೆಯಲು ಅರ್ಹರಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಮೊಬೈಲ್ ಕ್ಯಾಂಟೀನ್ ಸಹಾಯಧನ ಪಡೆಯಲು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸರ್ಕಾರದ ಸೇವಾ ಸಿಂಧು ಜಾಲತಾಣದ ಮೂಲಕ ನಿಮ್ಮ ಹತ್ತಿರದ ಗ್ರಾಮ ಓನ್, ಕರ್ನಾಟಕ ಓನ್ ಹಾಗೂ ಬೆಂಗಳೂರು ಓನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆಗೆ ಅರ್ಜಿದಾರರ ಆಧಾರ್ ಕಾರ್ಡ್, ಡ್ರೈವಿಂಗ್ ಲೇಸೆನ್ಸ್, ಬ್ಯಾಂಕ್ ಪಾಸ್ ಬುಕ್, ಅರ್ಜಿದಾರರ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಮೊಬೈಲ್ ನಂಬರ್’ನಂತಹ ಪ್ರಮುಖ ದಾಖಲೆಗಳು ಬೇಕು.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-09-2025
- ಸಹಾಯವಾಣಿ ಸಂಖ್ಯೆ: 9482200400
- ಅರ್ಜಿ ಲಿಂಕ್: karnataka.gov.in
Dairy Farming Subsidy- ಹಸು-ಎಮ್ಮೆ ಖರೀದಿಗೆ ₹1.25 ಲಕ್ಷ ಸಹಾಯಧನ | ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ