
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ (KSRTC NWKRTC ITI Apprenticeship 2025) ಸಂಸ್ಥೆಯು, ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಶಿಶುಕ್ಷು ತರಬೇತಿ ಹುದ್ದೆಗಳಿಗೆ (Apprenticeship) ಅರ್ಜಿ ಆಹ್ವಾನಿಸಿದೆ…
ಐಟಿಐ ಪಾಸಾದ ಯುವಕರಿಗೆ ಪ್ರಾಯೋಗಿಕ ತರಬೇತಿ ನೀಡುವ ಮೂಲಕ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಶಿಶುಕ್ಷು ತರಬೇತಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ.
ಶಿಶುಕ್ಷು ತರಬೇತಿ ಹುದ್ದೆಗಳ ಭರ್ತಿ ಕುರಿತು ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ವಿಜಯಕುಮಾರ ಅವರು ಪ್ರಕಟಣೆ ನೀಡಿದ್ದು, ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಸಂದರ್ಶನದ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…
ಲಭ್ಯವಿರುವ ಹುದ್ದೆಗಳ ವಿವರ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟು ಶಿಶುಕ್ಷು 54 ಹುದ್ದೆಗಳು ಖಾಲಿಯಾಗಿದ್ದು, ಅವುಗಳನ್ನು ಎಲೆಕ್ಟ್ರಿಷಿಯನ್ (Electrician), ಫಿಟ್ಟರ್ (Fitter), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಮೆಕ್ಯಾನಿಕ್ ಡೀಸೆಲ್, ಎಂವಿಬಿಬಿ (Motor Vehicle Body Builder) ಕೋಪಾ (Computer Operator & Programming Assistant) ವಿವಿಧ ವೃತ್ತಿಗಳಲ್ಲಿ ಭರ್ತಿ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಕೆ ವಿಧಾನ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಶುಕ್ಷು ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ಮೊದಲಿಗೆ ಚಿಠಿಠಿಡಿeಟಿಣiಛಿeshiಠಿiಟಿಜiಚಿ.gov.iಟಿ ಪೋರ್ಟಲ್‌ಗೆ ಭೇಟಿ ನೀಡಿ.
ಹೊಸ ಅಭ್ಯರ್ಥಿಗಳು apprenticeshipindia.gov.in ಮೂಲಕ ಆನ್‌ಲೈನ್ ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ನೋಂದಾಯಿಸಿಕೊಂಡಿರುವವರು ಲಾಗಿನ್ ಮಾಡಿ, ವಾಕರಸಾ (NWKRTC) ಸಂಸ್ಥೆಯ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.
ನೇರ ಸಂದರ್ಶನದ ಮಾಹಿತಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಆರ್‌ಟಿಒ ಕಚೇರಿ ಪಕ್ಕದಲ್ಲಿರುವ ಹಾವೇರಿ ವಿಭಾಗೀಯ ಕಚೇರಿಗೆ ದಿನಾಂಕ 12-09-2025ರ ಬೆಳಗ್ಗೆ 10:00 ಗಂಟೆಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನಕ್ಕೆ ಹಾಜರಾಗುವ ವೇಳೆ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯ ಪ್ರಿಂಟ್‌ಔಟ್, ಐಟಿಐ ವಿದ್ಯಾರ್ಹತಾ ಪ್ರಮಾಣಪತ್ರ, ಗುರುತಿನ ಚೀಟಿ (ಆಧಾರ್ / ಪ್ಯಾನ್), ಪಾಸ್‌ಪೋರ್ಟ್ ಸೈಜ್ ಫೋಟೋಗಳ ಮೂಲ ಹಾಗೂ ದೃಢೀಕೃತ ಪ್ರತಿಗಳನ್ನು ತರಬೇಕು.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಕೊನೆ ದಿನಾಂಕ:
10-09-2025 ಸಂಜೆ 5:00 ಗಂಟೆ - ನೇರ ಸಂದರ್ಶನದ ದಿನಾಂಕ:
12-09-2025, ಬೆಳಗ್ಗೆ 10:00 ಗಂಟೆ
ತರಬೇತಿ ಅವಧಿ ಹಾಗೂ ಭತ್ಯೆ ಮಾಹಿತಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ನೇರವಾಗಿ ಹಾವೇರಿ ವಾಕರಸಾ ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬಹುದು.