SSLC ಪಾಸಾದವರಿಗೆ 1,500 ಪೊಲೀಸ್ ಹುದ್ದೆಗಳಿಗೆ ಅರ್ಜಿ | ಯಾವೆಲ್ಲ ಜಿಲ್ಲೆಗಳಿಗೆ ನೇಮಕ ನಡೆಯಲಿದೆ? KSRP SRPC Constable Recruitment 2024

Spread the love

KSRP SRPC Constable Recruitment 2024 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಇಲಾಖೆಯಲ್ಲಿ ವಿವಿಧ ಹಂತದ ಸುಮಾರು 17,000+ ಹುದ್ದೆಗಳು ಖಾಲಿ ಇದ್ದು; ಈ ಪೈಕಿ ಕೆಎಸ್‌ಆರ್‌ಪಿ ಹಾಗೂ ಎಸ್‌ಆರ್‌ಪಿಸಿ ಪಡೆಯಲ್ಲಿ ಖಾಲಿ ಇರುವ 1,500 ಹುದ್ದೆಗಳ ಭರ್ತಿ ಇಲಾಖೆ ಮುಂದಾಗಿದೆ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (Karnataka State Reserve Police- KSRP) ಹಾಗೂ ವಿಶೇಷ ಮೀಸಲು ಪೊಲೀಸ್ ಪಡೆಯಲ್ಲಿ (Special Reserve Police Force- SRPC) ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ರಾಜ್ಯ ಸರಕಾರ ಈಗಾಗಲೇ ಈ ಎರಡೂ ಪಡೆಯ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ.

ರಾಜ್ಯ ಸರಕಾರ (Karnataka State Govt) ಹೊರಡಿಸಿರುವ ಆದೇಶದ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ವಿವಿಧ ಮೀಸಲು ಪಡೆಗಳ ಕಮಾಂಡೆ೦ಟ್‌ಗಳಿ೦ದ ಸಮಗ್ರ ವಿವರಗಳನ್ನು ಕೋರಿದೆ.

ಪಿಎಂ ಆವಾಸ್ ಯೋಜನೆಯಡಿ ಮೂರು ಕೋಟಿ ಕುಟುಂಬಗಳಿಗೆ ಸ್ವಂತ ಮನೆ | ಹೀಗೆ ಅರ್ಜಿ ಸಲ್ಲಿಸಿ… Pradhan Mantri Awas Yojana 2024

ಹುದ್ದೆಗಳ ವಿವರ
  • ಕಲ್ಯಾಣ ಕರ್ನಾಟಕೇತರ ಹುದ್ದೆಗಳು : 886
  • ಕಲ್ಯಾಣ ಕರ್ನಾಟಕ ವೃಂದ ಹುದ್ದೆಗಳು : 614
  • ಒಟ್ಟು ಹುದ್ದೆಗಳು : 1,500
ಕ್ರೀಡಾಪಟುಗಳಿಗೆ ಮೀಸಲಾತಿ

ಒಟ್ಟು 1,500 ಹುದ್ದೆಗಳಲ್ಲಿ 30 ಹುದ್ದೆಗಳನ್ನು ಪ್ರತಿಭಾವಂತ ಕ್ರೀಡಾ ಪಟುಗಳಿಗಾಗಿ ಮೀಸಲಿಡಲಾಗಿದೆ. ಇದರಲ್ಲಿ 12 ಹುದ್ದೆಗಳು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗಾಗಿ ನಿಗದಿಪಡಿಸಲಾಗಿದೆ. ಒಟ್ಟಾರೆ ಅನುಮೋದನೆ ನೀಡಲಾದ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲು ನೇರ ಮತ್ತು ಸಮತಲ ವರ್ಗೀಕರಣವನ್ನು ನೀಡುವಂತೆ ಕಮಾಂಡೆ೦ಟ್‌ಗಳಿಗೆ ನಿರ್ದೇಶನ ನೀಡಲಾಗಿದೆ.

KSRP SRPC Constable Recruitment 2024
ಯಾವೆಲ್ಲ ಜಿಲ್ಲೆಗಳಿಗೆ ನೇಮಕಾತಿ ನಡೆಯಲಿದೆ?

ಈಗ ಅನುಮೋದನೆಗೊಂಡಿರುವ ಕೆಎಸ್‌ಆರ್‌ಪಿ ಹಾಗೂ ಎಸ್‌ಆರ್‌ಪಿಸಿ ಪಡೆಯ 1,500 ಖಾಲಿ ಹುದ್ದೆಗಳನ್ನು ಈ ಕೆಳಕಂಡ ವಿವಿಧ ಜಿಲ್ಲೆಗಳ ಮೀಸಲು ಪೊಲೀಸ್ ಘಟಕಗಳಿಗೆ ನೇಮಕಾತಿ ನಡೆಸಲಾಗುತ್ತೆ :

  • ಮಂಗಳೂರು
  • ಶಿವಮೊಗ್ಗ
  • ಶಿಗ್ಗಾವಿ
  • ಹಾಸನ
  • ಬೆ೦ಗಳೂರು
  • ಬೆಳಗಾವಿ
  • ಮೈಸೂರು
  • ಕಲಬುರಗಿ
  • ತುಮಕೂರು
  • ಮುನಿರಾಬಾದ್

ಸೂರ್ಯ ಘರ್ ಯೋಜನೆಗೆ ಅಧಿಕೃತ ಚಾಲನೆ | ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ… PM Surya Ghar Muft Bijli Yojana 2024

ಈ ಹುದ್ದೆಗಳ ವಿದ್ಯಾರ್ಹತೆ, ವಯೋಮಿತಿ ವಿವರ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಹಾಗೂ ವಿಶೇಷ ಮೀಸಲು ಪೊಲೀಸ್ ಪಡೆಯ (ಸ್ಪೆಷಲ್ ಆರ್‌ಪಿಸಿ) ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ಎರಡೂ ಹುದ್ದೆಗಳಿಗೆ ನಿಗದಿಪಡಿಸಿದ ದೈಹಿಕ ಅರ್ಹತೆ ಉಳ್ಳವರಾಗಿರಬೇಕು.

ವಯೋಮಿತಿ ವಿವರ ನೋಡುವುದಾದರೆ ಕೆಎಸ್‌ಆರ್‌ಪಿ ಮತ್ತು ಎಸ್‌ಆರ್‌ಪಿಸಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಪಿಯುಸಿ ಪಾಸಾದವರಿಗೆ ಕೃಷಿ ಇಲಾಖೆಯ ಸರ್ಕಾರಿ ಹುದ್ದೆಗಳು | ಟೈಪಿಸ್ಟ್, ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಶೀಘ್ರ ನೇಮಕಾತಿ Karnataka Agriculture Dept Recruitment 2024

ಪೋಲಿಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳೆಷ್ಟು?

ಕಳೆದ 2023ರ ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಸಿ. ಎನ್. ಪೊಲೀಸ್ ಇಲಾಖೆ ನೇಮಕಾತಿ ಕುರಿತು ಪ್ರಶ್ನೆ ಮಾಡಿದ್ದರು. ಗೃಹ ಸಚಿವರು ಇದಕ್ಕೆ ಉತ್ತರ ನೀಡಿದ್ದು; ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ವಿವರ ನೀಡಿದ್ದರು.

ಗೃಹ ಸಚಿವರ ಮಾಹಿತಿಯಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ವೃಂದಗಳ ಒಟ್ಟು 1,13,502 ಒಟ್ಟು ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 95,674 ಅಧಿಕಾರಿ/ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ 17,828 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವರು ಹೇಳಿದ್ದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಶೀಘ್ರದಲ್ಲಿಯೇ 1,500 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಿದ್ದು; ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಈಗಿಂದಲೇ ತಯಾರಿ ನಡೆಸುವುದು ಉತ್ತಮ. ನಿರಂತರ ಮಾಹಿತಿಗಾಗಿ mahitimane.com ಜಾಲತಾಣ ವಿಕ್ಷಣೆ ಮಾಡಿ…

ಕುರಿ-ಮೇಕೆ ಸಾಕಾಣಿಕೆಗೆ ಕುರಿ ನಿಗಮದಿಂದ ಸಿಗುವ ಸಬ್ಸಿಡಿ ಸೌಲಭ್ಯಗಳು Karnataka Sheep and Goat Board facilities

Join WhatsApp Channel

Spread the love
WhatsApp Group Join Now
Telegram Group Join Now

7 thoughts on “SSLC ಪಾಸಾದವರಿಗೆ 1,500 ಪೊಲೀಸ್ ಹುದ್ದೆಗಳಿಗೆ ಅರ್ಜಿ | ಯಾವೆಲ್ಲ ಜಿಲ್ಲೆಗಳಿಗೆ ನೇಮಕ ನಡೆಯಲಿದೆ? KSRP SRPC Constable Recruitment 2024”

Leave a Comment

error: Content is protected !!