ಭಾರತೀಯ ಅಂಚೆ ಇಲಾಖೆಯ ಕಿಸಾನ್ ವಿಕಾಸ್ ಪತ್ರ (Kisan Vikas Patra – KVP) ಯೋಜನೆ ಹಣ ಡಬಲ್ ಮಾಡುವ ಸುರಕ್ಷಿತ ಯೋಜನೆಯಾಗಿದ್ದು; ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಭಾರತ ಸರ್ಕಾರದ ಅಂಚೆ ಇಲಾಖೆ ಉಳಿತಾಯದ ಅಭ್ಯಾಸವನ್ನು ಉತ್ತೇಜಿಸಲು ಪರಿಚಯಿಸಿರುವ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ಸ್ಕೀಮ್’ಗಳಲ್ಲಿ ‘ಕಿಸಾನ್ ವಿಕಾಸ್ ಪತ್ರ’ (Kisan Vikas Patra – KVP) ಪ್ರಮುಖವಾಗಿದೆ.
ಇದು ಹೂಡಿಕೆದಾರರಿಗೆ ತಮ್ಮ ಹಣವನ್ನು ನಿಗದಿತ ಅವಧಿಯಲ್ಲಿ ದ್ವಿಗುಣಗೊಳಿಸುವ ಖಚಿತ ಅವಕಾಶವನ್ನು ನೀಡುತ್ತದೆ. ಈ ಸ್ಕೀಮ್ ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಉಳಿತಾಯದ ಅಭ್ಯಾಸವನ್ನು ಬೆಳೆಸಲು 1988ರಲ್ಲಿ ಆರಂಭಿಸಲಾಯಿತು. ಆದರೆ, ಈಗ ಇದು ಗ್ರಾಮೀಣ ಮತ್ತು ನಗರ ಸೇರಿದಂತೆ ಇಡೀ ಭಾರತದಲ್ಲಿ ಜನಪ್ರಿಯವಾಗಿದೆ.
ಏನಿದು ಕಿಸಾನ್ ವಿಕಾಸ್ ಪತ್ರ?
ಕಿಸಾನ್ ವಿಕಾಸ್ ಪತ್ರ (KVP) ಒಂದು ಸರಕಾರದ ಪ್ರತಿಷ್ಠಿತ ಸಣ್ಣ ಉಳಿತಾಯ ಯೋಜನೆ. ಇದರಲ್ಲಿ ನೀವು ಹೂಡಿದ ಹಣವನ್ನು ಸರಕಾರವು ಬಹುಮಾನ ಪತ್ರ (Certificate) ರೂಪದಲ್ಲಿ ನೀಡುತ್ತದೆ. ವಿಶೇಷವೆಂದರೆ ನಿಗದಿತ ಅವಧಿಯ ನಂತರ, ನೀವು ಹೂಡಿದ ಮೊತ್ತದ ದ್ವಿಗುಣ ಹಣವನ್ನು ಪಡೆಯುತ್ತೀರಿ.
ಕೆವಿಪಿ ಅನ್ನು ಅಂಚೆ ಇಲಾಖೆಯ ಎಲ್ಲಾ ಶಾಖೆಗಳಲ್ಲಿ ಖರೀದಿಸಬಹುದು.ಇದು ಹೆಚ್ಚಿನ ಶ್ರೇಣಿಯ ಉಳಿತಾಯದ ಆಯ್ಕೆಗಳಲ್ಲಿ ಒಂದಾಗಿದೆ ಮತ್ತು ಹೆಚ್ಚು ಸುಲಭವಾಗಿ ಎಲ್ಲರಿಗೂ ಲಭ್ಯ. ಇದರಿಂದ ಹೂಡಿಕೆದಾರರಿಗೆ ಖಾತರಿಯಾದ ಆದಾಯ ಮತ್ತು ಸಂಪೂರ್ಣ ಭದ್ರತೆ ಸಿಗುತ್ತದೆ.
2025ರ ಹೊಸ ಬಡ್ಡಿದರದ ವಿವರ
ಅಂಚೆ ಇಲಾಖೆಯ ಇತ್ತೀಚಿನ ಅಧಿಸೂಚನೆಯ ಪ್ರಕಾರ:
- ಹಣ ಡಬಲ್ ಆಗುವ ಅವಧಿ: 9 ವರ್ಷ 5 ತಿಂಗಳು (115 ತಿಂಗಳು)
- ವಾರ್ಷಿಕ ಬಡ್ಡಿದರ: 7.5% (Compounded yearly)
ಹೀಗಾಗಿ, ನೀವು ₹50,000 ಹೂಡಿಕೆ ಮಾಡಿದರೆ 9 ವರ್ಷ 5 ತಿಂಗಳ ಬಳಿಕ ₹1 ಲಕ್ಷ ರೂಪಾಯಿ ಪಡೆಯುತ್ತೀರಿ. ₹5 ಲಕ್ಷ ಹೂಡಿಕೆ ಮಾಡಿದರೆ ₹10 ಲಕ್ಷ ಖಾತರಿಯಾಗಿರುತ್ತದೆ.

ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
- ಖಾತರಿ ಆದಾಯ: ಸ್ವತಃ ಕೇಂದ್ರ ಸರ್ಕಾರವೇ ಸಂಪೂರ್ಣ ಖಾತರಿ ಇದ್ದುದರಿಂದ, ನಿಮ್ಮ ಹಣ ಸಂಪೂರ್ಣ ಸುರಕ್ಷಿತ.
- ನಿಗದಿತ ಅವಧಿಯಲ್ಲಿ ದುಪ್ಪಟ್ಟು ಹಣ: ಹೂಡಿಕೆ ಮಾಡಿದ ಮೊತ್ತವನ್ನು ಸರಕಾರ ಸ್ಪಷ್ಟವಾಗಿ ದುಪ್ಪಟ್ಟು ಮಾಡಲು ಗ್ಯಾರಂಟಿ ನೀಡುತ್ತದೆ.
- ಕಡಿಮೆ ಆರಂಭಿಕ ಹೂಡಿಕೆ: ಕನಿಷ್ಠ ₹1,000 ರಿಂದ ಆರಂಭಿಸಬಹುದು. ಗರಿಷ್ಠಕ್ಕೆ ಮಿತಿ ಇಲ್ಲ.
- ಎಲ್ಲರಿಗೂ ಲಭ್ಯ: ಭಾರತದ ಯಾವುದೇ ನಾಗರಿಕರು ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಟ್ರಸ್ಟ್ಗಳಿಗೂ ಅವಕಾಶ.
- ಜಂಟಿ ಖಾತೆ ಅವಕಾಶ: ಒಬ್ಬರೇ ಅಥವಾ ಜಂಟಿಯಾಗಿ (Joint A / Joint B) ಖಾತೆ ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಪೋಷಕರು ಖಾತೆ ತೆರೆದು ಹೂಡಿಕೆ ಮಾಡಬಹುದು.
KVP ಸ್ಕೀಮ್ ಖಾತೆಯ ವಿಧಗಳು
- Single Holder Type: ಒಂದೇ ವ್ಯಕ್ತಿಯ ಹೆಸರಿನಲ್ಲಿ
- Joint A Type: ಇಬ್ಬರ ಹೆಸರಿನಲ್ಲಿ – ಇಬ್ಬರ ಸಹಿ ಅಗತ್ಯ
- Joint B Type: ಇಬ್ಬರ ಹೆಸರಿನಲ್ಲಿ – ಯಾರಿಗಾದರೂ ಪಾವತಿ
- Minor Account: ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಪೋಷಕರು / ಕಾನೂನು ಸಂರಕ್ಷಕರು
ಖಾತೆ ತೆರೆಯಲು ಬೇಕಾದ ದಾಖಲೆಗಳು
- ಪಾಸ್‌ಪೋರ್ಟ್ ಸೈಸ್ ಫೋಟೋಗಳು.
- ಗುರುತಿನ ದಾಖಲೆ (ಆಧಾರ್/ಪಾನ್/ಡ್ರೈವಿಂಗ್ ಲೈಸೆನ್ಸ್/ಪಾಸ್‌ಪೋರ್ಟ್).
- ವಿಳಾಸದ ದಾಖಲೆ (ವಿದ್ಯುತ್ ಬಿಲ್/ಬ್ಯಾಂಕ್ ಸ್ಟೇಟ್‌ಮೆಂಟ್/ಟೆಲಿಫೋನ್ ಬಿಲ್).
- ₹50,000ಕ್ಕಿಂತ ಹೆಚ್ಚಿನ ಹೂಡಿಕೆಗೆ ಪಾನ್ ಮತ್ತು ಆಧಾರ್ ಕಡ್ಡಾಯ.
ಹಣ ಹೂಡಿದ ಮೇಲೆ ಸಿಗುವ ಸೌಲಭ್ಯಗಳು
- ಹೂಡಿಕೆಯ ಪ್ರಮಾಣಪತ್ರವನ್ನು ಬ್ಯಾಂಕಿಗೆ ಅಡಮಾನವಿಟ್ಟು ಸಾಲ ಪಡೆಯಬಹುದು.
- ಒಂದು ಅಂಚೆ ಕಚೇರಿಯಿಂದ ಮತ್ತೊಂದಕ್ಕೆ ವರ್ಗಾಯಿಸಬಹುದು.
- ಹೂಡಿಕೆ ಮಾಡಿದ 2.5 ವರ್ಷಗಳ ಬಳಿಕ ಮುಂಚಿತ ವಾಪಾಸು (pre-mature closure) ಪಡೆಯಲು ಅವಕಾಶ.
- ಖಾತೆದಾರರ ನಿಧನರಾದಲ್ಲಿ ವಾರಸುದಾರರಿಗೆ ಹಣ ಕೊಡಲಾಗುತ್ತದೆ.
- ಸಾರಾಂಶವಾಗಿ, ಇದು ಸಂಪೂರ್ಣ ತೆರಿಗೆ ಮುಕ್ತ ಯೋಜನೆ ಅಲ್ಲ, ಆದರೆ ಬಹಳ ಸುಭದ್ರ ಯೋಜನೆ.
ಯಾರು ಹೂಡಿಕೆ ಮಾಡಬೇಕು?
- ಹೂಡಿಕೆ ಮೇಲೆ ಖಾತರಿಯಾದ ಆದಾಯ ಬಯಸುವವರು.
- ದುಪ್ಪಟ್ಟು ಮಾಡುವ ಉದ್ದೇಶದಿಂದ ದೀರ್ಘಾವಧಿಯ ಹೂಡಿಕೆ ಮಾಡಬಯಸುವವರು.
- ಗ್ರಾಮೀಣ ಹಾಗೂ ನಗರ ಪ್ರದೇಶದ ಸಣ್ಣ ಉಳಿತಾಯದ ಹೂಡಿಕೆದಾರರು.
- ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಉಳಿತಾಯದ ನಿರ್ವಹಣೆಗೆ.
- ಸಾಂಸ್ಥಿಕ ಹೂಡಿಕೆದಾರರು ಅಥವಾ ಟ್ರಸ್ಟ್’ಗಳು.
ಹೂಡಿಕೆ ಮಾಡುವ ವಿಧಾನ ಹೇಗೆ?
- ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.
- ಅರ್ಜಿ ಫಾರ್ಮ್ ತುಂಬಿ.
- ಅಗತ್ಯ ದಾಖಲೆಗಳನ್ನು ಸಲ್ಲಿಸಿ.
- ಹಣವನ್ನು ನಗದು ಅಥವಾ ಚೆಕ್ ಮೂಲಕ ಹಣ ಪಾವತಿಸಿ.
- ಕಿಸಾನ್ ವಿಕಾಸ್ ಪತ್ರ ಪ್ರಮಾಣಪತ್ರ ಪಡೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಕಿಸಾನ್ ವಿಕಾಸ್ ಪತ್ರ ಸ್ಕೀಮ್ ತುಂಬಾ ಸರಳ, ಸುಲಭವಾಗಿ ಎಲ್ಲರಿಗೂ ಲಭ್ಯ ಮತ್ತು ಸುರಕ್ಷಿತವಾಗಿದೆ. ಸರಕಾರದ ಸಂಪೂರ್ಣ ಖಾತರಿಯಿರುವ ಹೂಡಿಕೆ ಯೋಜನೆಗಳಲ್ಲಿ ಇದು ಪ್ರಮುಖವಾಗಿದೆ. ಹತ್ತಿರದ ಅಂಚೆ ಕಚೇರಿಗೆ ಹೋಗಿ ಮಾಹಿತಿ ಪಡೆದು ಖಾತೆ ತೆರೆದು ಹಣ ಹೂಡಿಸಿ – ನಿಮ್ಮ ಭವಿಷ್ಯವನ್ನು ಭದ್ರಮಾಡಿಕೊಳ್ಳಿ…
ಇದು ಸಣ್ಣ ಉಳಿತಾಯದ ಅಭ್ಯಾಸವನ್ನು ಬೆಳೆಸಲು ಅತ್ಯುತ್ತಮ ಯೋಜನೆ. ನೀವು ಮಕ್ಕಳ ವಿದ್ಯಾಭ್ಯಾಸ, ಮದುವೆ, ನಿವೃತ್ತಿ ವಯಸ್ಸಿನ ಯೋಜನೆಗೆ ಹೂಡಿಕೆ ಮಾಡಬಹುದು. ಹೆಚ್ಚಿನ ಮಾಹಿತಿ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.inಗೆ ಭೇಟಿ ನೀಡಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.