Kharif Season Crop Insurance 2024 : ಫಸಲ್ ಬಿಮಾ ವಿಮಾ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮಾ ಪ್ರಕ್ರಿಯೆ ಆರಂಭವಾಗಿದೆ. ಯಾವ್ಯಾವ ಬೆಳೆ ಮತ್ತು ಕೊನೆಯ ದಿನಾಂಕ ವಿವರ ಇಲ್ಲಿದೆ…
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2023-24ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ರೈತರು ಅಧಿಸೂಚಿತ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ನಿಗದಿತ ದಿನಾಂಕದೊಳಗೆ ಬೆಳೆವಿಮೆ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಕುರಿ-ಮೇಕೆ ಸಾಕಾಣಿಕೆಗೆ ಕುರಿ ನಿಗಮದಿಂದ ಸಿಗುವ ಸಬ್ಸಿಡಿ ಸೌಲಭ್ಯಗಳು
ಕಳೆದ ವರ್ಷ ಮಳೆಯ ಚೆಲ್ಲಾಟದಿಂದಾಗಿ ರಾಜ್ಯಾದ್ಯಂತ ಭೀಕರ ಬರದ ಛಾಯೆ ಆವರಿಸಿತ್ತು. ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದ್ದವು. ಈ ವರ್ಷ ಮುಂಗಾರು ಮಳೆ ಸಮೃದ್ಧವಾಗಿದೆ ಎಂಬ ಮಾಹಿತಿ ಇದೆಯಾದರೂ ಪ್ರಕೃತಿ ವಿಕೋಪಗಳನ್ನು ನಿಖರವಾಗಿ ಅಂದಾಜಿಸುವುದು ಕಷ್ಟಕರ. ಹೀಗಾಗಿ ರೈತರು ಕನಿಷ್ಟ ಮೊತ್ತ ಪಾವತಿಸಿ ಬೆಳೆವಿಮೆ ನೋಂದಣಿ ಮಾಡಿದರೆ ಮುಂಗಾರು ಬೆಳೆನಷ್ಟ ಪರಿಹಾರ ಪಡೆಯಲು ಅನುಕೂಲವಾಗಲಿದೆ.
ಬೆಳೆ ವಿಮೆ ಯೋಜನೆಯಡಿ ಮಳೆ ಹೆಚ್ಚಾಗಿಯೋ? ಕಮ್ಮಿಯಾಗಿಯೋ ಬೆಳೆನಷ್ಟವಾದಲ್ಲಿ ನಷ್ಟವಾದ ಬೆಳೆಗೆ ಅನುಗುಣವಾಗಿ ಪರಿಹಾರವನ್ನು ಪಡೆಯಬಹುದಾಗಿದೆ. ಬೆಳೆ ಕಟಾವು ಮಾಡಿದ ಎರಡು ವಾರದೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ನಷ್ಟ ಪರಿಹಾರ ನೀಡಲಾಗುತ್ತದೆ. ಜತೆಗೆ ವಿವಿಧ ಪ್ರಕೃತಿ ಅವಘಡಗಳಿಗೂ ಬೆಳೆನಷ್ಟ ಪರಿಹಾರ ದೊರೆಯಲಿದೆ.
ಆಧಾರ್ ಕಾರ್ಡ್ ಜೂನ್ 14ರ ನಂತರ ನಿಷ್ಕ್ರಿಯವಾಗುತ್ತಾ? ಏನಿದು ಹೊಸ ವದಂತಿ? ಯುಐಡಿಎಐ ಕೊಟ್ಟ ಮಾಹಿತಿ ಇಲ್ಲಿದೆ…
ಬೆಳೆ ವಿಮೆ ಮಾಡಲು ಆಸಕ್ತಿ ಇಲ್ಲದ ರೈತರು ಏನು ಮಾಡಬೇಕು?
ಬೆಳೆಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಒಂದು ವೇಳೆ ಬೆಳೆಸಾಲ ಪಡೆದ ರೈತರು ಯೋಜನೆಯಡಿ ವಿಮೆ ಮಾಡಿಸಲು ಇಚ್ಛಿಸದಿದ್ದರೆ, ತಾವು ಬೆಳೆಸಾಲ ಪಡೆದ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿಯ ಅಂತಿಮ ದಿನಾಂಕಕ್ಕಿ೦ತ 7 ದಿನ ಮುಂಚಿತ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕು. ಆಗ ಅವರನ್ನು ಯೋಜನೆಯಿಂದ ಕೈಬಿಡಲಾಗುತ್ತದೆ.
ಬೆಳೆಸಾಲ ಪಡೆಯದ ರೈತರಿಗೆ ಬೆಳೆವಿಮೆ ಯೋಜನೆಯು ಐಚ್ಛಿಕವಾಗಿರುತ್ತದೆ. ಆಸಕ್ತಿ ಇದ್ದರೆ ಬೆಳೆವಿಮೆ ಪಾವತಿಸಬಹುದು. ಆಸಕ್ತಿ ಇರದಿದ್ದರೆ ಯೋಚಿಸುವ ಪ್ರಮೇಯವೇ ಇಲ್ಲ. ಆಸಕ್ತ ರೈತರು ಅಧಿಸೂಚಿತ ಬೆಳೆಗೆ ಹತ್ತಿರದ ಬ್ಯಾಂಕಿನಲ್ಲಿ ವಿಮಾ ಕಂತು ತುಂಬಿ ಬೆಳೆಗೆ ವಿಮೆ ಮಾಡಿಸಲು ಇಲಾಖೆ ಕೋರಲಾಗಿದೆ.
ಬೆಳೆ ವಿಮೆ ಎಲ್ಲಿ ಮಾಡಿಸಬೇಕು?
ರೈತರು ಬೆಳೆ ವಿಮೆಯನ್ನು ತಮ್ಮ ಹತ್ತಿರದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿದೆ. ಬೆಳೆ ವಿಮೆ ಯೋಜನೆಯ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಬೆಳೆ ವಿಮೆ ಕಂಪನಿಯ ತಾಲ್ಲೂಕು ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ. ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 1800180 1551 ಉಚಿತ ಸಹಾವಾಣಿ ನಂಬರಿಗೆ ಕರೆ ಮಾಡಬಹುದು.
ರೈತರ ಜಮೀನು ಪಹಣಿಗೆ (RTC) ಆಧಾರ್ ಲಿಂಕ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇಲ್ಲಿದೆ…
2024-25ರ ಮುಂಗಾರು ಹಂಗಾಮು ಅಧಿಸೂಚಿತ ಬೆಳೆಗಳು
ಒಟ್ಟು 36 ಆಹಾರ, ಎಣ್ಣೆಕಾಳು, ವಾರ್ಷಿಕ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳನ್ನು ಮುಂಗಾರು ಹಂಗಾಮು-2024ರ ಅಧಿಸೂಚಿತ ಬೆಳೆಗಳನ್ನಾಗಿ ನಿಗದಿಪಡಿಸಲಾಗಿದೆ. ಈ ಪೈಕಿ ಮುಖ್ಯ ಬೆಳೆಗಳನ್ನು ಹಾಗೂ ಇತರೆ ಬೆಳೆಗಳನ್ನು ತಾಲ್ಲೂಕುವಾರು ಪರಿಗಣಿಸಲಾಗುತ್ತದೆ. ಆಯಾ ಗ್ರಾಮ ಪಂಚಾಯತ್/ ನಗರ ಸ್ಥಳೀಯ ಸಂಸ್ಥೆಗಳನ್ನು ಮುಖ್ಯ ಬೆಳೆಗಳಿಗೆ ವಿಮಾ ಘಟಕವಾಗಿ ಪರಿಗಣಿಸಲಾಗಿದೆ. ಅದೇ ರೀತಿ ಇತರೆ ಬೆಳೆಗಳಿಗೆ ವಿಮಾ ಘಟಕವಾಗಿ ಹೋಬಳಿಯನ್ನು ಪರಿಗಣಿಸಲಾಗಿದೆ. ಅಧಿಸೂಚಿತ ಬೆಳೆಗಳ ಪಟ್ಟಿ ಕೆಳಗಿನಂತಿರುತ್ತದೆ:
- ಅರಿಶಿನ
- ಅಲಸ೦ದೆ (ಮ.ಆ)
- ಆಲೂಗಡ್ಡೆ (ನೀ)
- ಆಲೂಗಡ್ಡೆ (ಮ.ಆ)
- ಈರುಳ್ಳಿ (ನೀ)
- ಈರುಳ್ಳಿ (ಮ.ಆ)
- ಉದ್ದು (ಮ.ಆ)
- ಎಲೆಕೋಸು
- ಕೆಂಪು ಮೆಣಸಿನಕಾಯಿ (ನೀ)
- ಕೆಂಪು ಮೆಣಸಿನಕಾಯಿ (ಮ.ಆ)
- ಜೋಳ (ನೀ)
- ಜೋಳ (ಮ.ಆ)
- ಟೊಮ್ಯಾಟೊ
- ತೊಗರಿ (ನೀ)
- ತೊಗರಿ (ಮ.ಆ)
- ನವಣೆ (ಮ.ಆ)
- ನೆಲಗಡಲೆ (ಶೇಂಗಾ) (ನೀ)
- ನೆಲಗಡಲೆ (ಶೇಂಗಾ) (ಮ.ಆ)
- ಭತ್ತ (ನೀ)
- ಭತ್ತ (ಮ.ಆ)
- ಮುಸುಕಿನ ಜೋಳ (ನೀ)
- ಮುಸುಕಿನ ಜೋಳ (ಮ.ಆ)
- ರಾಗಿ (ನೀ)
- ರಾಗಿ (ಮ.ಆ)
- ಸಜ್ಜೆ (ನೀ)
- ಸಜ್ಜೆ (ಮ.ಆ)
- ಸಾವೆ (ಮ.ಆ)
- ಸೂರ್ಯಕಾಂತಿ (ನೀ)
- ಸೂರ್ಯಕಾಂತಿ (ಮ.ಆ)
- ಸೋಯಾ ಅವರೆ (ನೀ)
- ಸೋಯಾಅವರೆ (ಮ.ಆ)
- ಹತ್ತಿ (ನೀ)
- ಹತ್ತಿ (ಮ.ಆ)
- ಹುರುಳಿ (ಮ.ಆ)
- ಹೆಸರು (ಮ.ಆ)
* ಮ.ಆ : ಮಳೆಯಾಶ್ರಿತ. * ನೀ: ನೀರಾವರಿ
ಮುಂಗಾರಿನಲ್ಲಿ ಬೆಳೆಯುವ ಪ್ರತಿಯೊಂದು ಬೆಳೆಗಳಿಗೂ ವಿಮಾ ಪಾವತಿ ಮಾಡಬಹುದು. ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಬಹುದು? ಕೊನೆಯ ದಿನಾಂಕ ಯಾವುದು? ಎಂಬುವುದನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಬಹುದು.
ನಿಮ್ಮ ಜಿಲ್ಲೆ ಮತ್ತು ಬೆಳೆವಾರು ದಿನಾಂಕಗಳ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಸರಕಾರದ ‘ಸಂರಕ್ಷಣೆ’ ಬೆಳೆ ವಿಮೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡರೆ ಬೆಳೆಗಳ ಮಾಹಿತಿ, ಬೆಳೆವಿಮೆ ಪಾವತಿಗೆ ನಿಗದಿಯಾದ ಕೊನೆಯ ದಿನಾಂಕಗಳ ವಿವರ ಪಟ್ಟಿ ತೆರೆದುಕೊಳ್ಳುತ್ತದೆ. ಆ ಪ್ರಕಾರ ತಮಗೆ ಅಗತ್ಯವಾದ ಬೆಳೆಗಳಿಗೆ ನಿಗದಿತ ದಿನಾಂಕದೊಳಗೆ ಪಾವತಿ ಮಾಡಬಹುದು.
2024-25ನೇ ಸಾಲಿನ ಮುಂಗಾರು ಬೆಳೆ ವಿಮೆ ಸಂಬ೦ಧಿತ ಸರಕಾರ ಹೊರಡಿಸಿದ ಸಂಪೂರ್ಣ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸುದ್ದಿ, ಸರಕಾರಿ ಯೋಜನೆ, ಉದ್ಯೋಗ ಮಾಹಿತಿ, ಕೃಷಿ, ತೋಟಗಾರಿಕೆ, ಪಶುಪಾಲನೆ ಸಹಾಯಧನ, ಸೌಲಭ್ಯಗಳ ಸ್ವಾರಸ್ಯಕರ ಸುದ್ದಿಗಳನ್ನು ಪಡೆಯಲು ಹಾಗೂ ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ…
ಕಾರ್ಮಿಕರು ಮತ್ತು ಕಾರ್ಮಿಕರ ಮಕ್ಕಳ ಮದುವೆಗೆ ಸರಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ….
2 thoughts on “ಮುಂಗಾರು ಬೆಳೆ ವಿಮೆ 2024-25 ನೋಂದಣಿ ಆರಂಭ: ಅಧಿಸೂಚಿತ ಬೆಳೆಗಳ ಪಟ್ಟಿ ಇಲ್ಲಿದೆ… Kharif Season Crop Insurance 2024”