ಕರ್ನಾಟಕ ಕಸ್ತೂರ ಬಾ ಗಾಂಧಿ ಬಾಲಿಕಾ ವಸತಿ ನಿಲಯಗಳಲ್ಲಿ (KGBV) 6 ರಿಂದ 10ನೇ ತರಗತಿ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕದ ವಿವಿಧ ಹಿಂದುಳಿದ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ನಿಲಯಗಳಲ್ಲಿ (KGBV) 2025-26ನೇ ಶೈಕ್ಷಣಿಕ ಸಾಲಿನ ಉಚಿತ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ಹಾಗೂ ಶಿಕ್ಷಣ ಸೌಲಭ್ಯಗಳನ್ನು ಒದಗಿಸುತ್ತಿದ್ದು, 6ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ಹೆಣ್ಣುಮಕ್ಕಳಿಗೆ ಇದು ಮಹತ್ವದ ಅವಕಾಶವಾಗಿದೆ.
ಯೋಜನೆಯ ಸ್ಥಾಪನೆ ಮತ್ತು ಉದ್ದೇಶ
2004ರಲ್ಲಿ ಕೇಂದ್ರ ಸರ್ಕಾರದ ಸರ್ವಶಿಕ್ಷಣ ಅಭಿಯಾನ ಯೋಜನೆೆಯಡಿ ಸ್ಥಾಪನೆಯಾದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳು ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಪ್ರಾರಂಭವಾದವು.
ಈ ಶಾಲೆಗಳು ರಾಷ್ಟ್ರದ ಅತ್ಯಂತ ಹಿಂದುಳಿದ ಬ್ಲಾಕುಗಳಲ್ಲಿ ಸ್ಥಾಪಿಸಲ್ಪಟ್ಟಿದ್ದು, ಹೆಣ್ಣು ಮಕ್ಕಳ ಕಲಿಕೆಗೆ ಉತ್ತೇಜನ ನೀಡುವುದು ಮತ್ತು ವಸತಿ ಸಹಿತ ಗುಣಮಟ್ಟದ ಉಚಿತ ಶಿಕ್ಷಣವನ್ನು ಒದಗಿಸುವುದು ಯೋಜನೆಯ ಮುಖ್ಯ ಗುರಿಗಳಾಗಿವೆ.
e-Pouthi- ಮನೆ ಬಾಗಿಲಿಗೆ ಇ-ಪೌತಿ | ರೈತರ ಖಾತೆ ಸಮಸ್ಯೆ ಪರಿಹಾರಕ್ಕೆ ಕಂದಾಯ ಇಲಾಖೆ ಆಂದೋಲನ
ಕರ್ನಾಟಕದಲ್ಲಿ ಕೆಜಿಬಿವಿ ವಸತಿ ನಿಲಯಗಳ ಸ್ಥಿತಿ
ಡಾ. ನಂಜುAಡಪ್ಪ ವರದಿ ಆಧಾರವಾಗಿ 2008ರಲ್ಲಿ ಕರ್ನಾಟಕದಲ್ಲಿ ಶಿಕ್ಷಣ ಹಿಂದುಳಿದ 72 ತಾಲ್ಲೂಕುಗಳಲ್ಲಿ ಟೈಪ್-1 ಮತ್ತು ಟೈಪ್-3 ಕೆಜಿಬಿವಿ ವಸತಿ ನಿಲಯಗಳು ಸ್ಥಾಪಿ¸ಲಾಗಿದೆ. ಇವು 6ರಿಂದ 10ನೇ ತರಗತಿಯ ಹೆಣ್ಣುಮಕ್ಕಳಿಗೆ ಉಚಿತ ವಸತಿ, ಆಹಾರ, ವಿದ್ಯಾಭ್ಯಾಸ, ಆರೋಗ್ಯ ಸೇವೆ, ಹಾಗೂ ವ್ಯಕ್ತಿತ್ವ ವಿಕಸನದ ತರಬೇತಿಗಳನ್ನು ನೀಡುತ್ತವೆ.
ಇದೇ ರೀತಿ, ಟೈಪ್-4 ವಸತಿ ನಿಲಯಗಳು 71 ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 9ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸಮಾನವಾದ ಸೌಲಭ್ಯ ಒದಗಿಸುತ್ತಿವೆ.

2025-26ನೇ ಸಾಲಿನ ಪ್ರವೇಶಾತಿಗೆ ಅರ್ಜಿ ಆಹ್ವಾನ
ಈಗ 6ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಲು ಬಯಸುವ ಅರ್ಹ ವಿದ್ಯಾರ್ಥಿನಿಯರಿಗೆ 2025-26ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರವೇಶಾತಿಗೆ ಟೈಪ್-1 ಮತ್ತು ಟೈಪ್-3 ವಸತಿ ನಿಲಯಗಳಲ್ಲಿ ಅವಕಾಶ ಲಭ್ಯವಿದೆ.
Gruhalakshmi Scheme- ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಜಮಾ | ಮಹತ್ವದ ಮಾಹಿತಿ ಇಲ್ಲಿದೆ…
ಪ್ರವೇಶ ಮೀಸಲಾತಿ ಮತ್ತು ಆದ್ಯತೆಗಳು
ಶೇ.75% ಸ್ಥಾನಗಳು: ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (STಖ), ಹಿಂದುಳಿದ ವರ್ಗ (OBC) ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಿಡಲಾಗಿದೆ.
ಶೇ.25% ಸ್ಥಾನಗಳು: ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಬಾಲಕಿಯರು, ಅನಾಥರು, ದೇವದಾಸಿ ಪದ್ದತಿಯಿಂದ ರಕ್ಷಿಸಲ್ಪಟ್ಟವರು, ಬಾಲ ಕಾರ್ಮಿಕರು, ಶಿಕ್ಷಣ ವಂಚಿತ ಮಕ್ಕಳು ಮುಂತಾದವರಿಗೆ ಮೀಸಲಾಗಿವೆ.
ವಿದ್ಯಾರ್ಥಿನಿಯರಿಗೆ ದೊರೆಯುವ ಉಚಿತ ಸೌಲಭ್ಯಗಳು
ಕೆಜಿಬಿವಿ ವಸತಿ ನಿಲಯಗಳಲ್ಲಿ ಈ ಕೆಳಕಂಡ ಉಚಿತ ಸೌಲಭ್ಯಗಳನ್ನು ವಿದ್ಯಾರ್ಥಿನಿಯರಿಗೆ ಒದಗಿಸಲಾಗುತ್ತದೆ:
- ದಿನದ ಮೂರು ಹೊತ್ತಿಗೆ ಉಚಿತ ಆಹಾರ ಪೂರೈಕೆ.
- ಸುರಕ್ಷಿತ ಮತ್ತು ಸೌಕರ್ಯಯುಕ್ತ ವಸತಿ ವ್ಯವಸ್ಥೆ.
- ನಿಗದಿತ ಮೊತ್ತದ ವಿದ್ಯಾರ್ಥಿವೇತನ
- ಮೂಲಭೂತ ಡಿಜಿಟಲ್ ಕೌಶಲ್ಯ ತರಬೇತಿ
- ಸಾಬೂನು, ಎಣ್ಣೆ, ಟೂತ್ ಪೇಸ್ಟ್, sಚಿಟಿiಣಚಿಡಿಥಿ ಟಿಚಿಠಿಞiಟಿs ಮುಂತಾದ ವಸ್ತುಗಳ ಉಚಿತ ವಿತರಣೆ
- ನೋಟ್ ಬುಕ್, ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಮುಂತಾದ ಶೈಕ್ಷಣಿಕ ಸಾಮಗ್ರಿಗಳ ವಿತರಣೆ
- ನಿಯಮಿತ ವೈದ್ಯಕೀಯ ತಪಾಸಣೆ ಶಿಬಿರಗಳು, ವೈದ್ಯರ ಸಹಾಯ, ತುರ್ತು ವೈದ್ಯಕೀಯ ವ್ಯವಸ್ಥೆ
- ಸಂಗೀತ, ಯೋಗ, ಕರಾಟೆ, ಕ್ರೀಡೆ, ನಾಟಕ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು
- ಹೊಲಿಗೆ, ಕಸೂತಿ, ಬೊಂಬೆ ತಯಾರಿಕೆ, ಮೊಬೈಲ್, ಇಲೆಕ್ಟ್ರಾನಿಕ್ ಉಪಕರಣ ದುರಸ್ತಿ ಮುಂತಾದ ವೃತ್ತಿ ತರಬೇತಿಗಳು
ಅರ್ಜಿ ಸಲ್ಲಿಕೆ ವಿವರ ಮತ್ತು ಸಂಪರ್ಕ ಸಂಖ್ಯೆ
ರಾಜ್ಯಾದ್ಯಂತ ಇರುವ ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ನಿಲಯಗಳ ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದ್ದು; 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ಓದುತ್ತಿರುವ ವಿದ್ಯಾರ್ಥಿನಿಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಅಧಿಕೃತ ‘ವಿದ್ಯಾವಾಹಿನಿ’ ಜಾಲತಾಣದ ಮೂಲಕ ಇದೇ 2025ರ ಮೇ 20ರೊಳಗಾಗಿ ಅರ್ಜಿ ಸಲ್ಲಿಸಲು ಜಿಲ್ಲಾ ಯೋಜನಾಧಿಕಾರಿಗಳು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ಲಿಂಕ್ ಮೂಲಕ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು:
ನೋಡಲ್ ಅಧಿಕಾರಗಳ ಸಂಪರ್ಕ ಸಂಖ್ಯೆ: Click Here
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02-5-2025
- ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 20-05-2025
- ಮೊದಲ ಸುತ್ತಿನ ಸೀಟು ಆಯ್ಕೆ ಪ್ರಕಟಣೆ: 25-05-2025
- 2ನೇ ಸುತ್ತಿನ ಸೀಟು ಆಯ್ಕೆ ಪ್ರಕಟಣೆ: 02-06-2025
ಅರ್ಜಿ ಸಲ್ಲಿಕೆ ಲಿಂಕ್: Click Here
ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಸಮಾನ ಅವಕಾಶ ನೀಡಲು ಹಾಗೂ ಗ್ರಾಮೀಣ ಪರಿಸರದ ವಿದ್ಯಾರ್ಥಿನಿಯರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ಕೆಜಿಬಿವಿ ವಸತಿ ನಿಲಯಗಳು ಪ್ರಮುಖ ಪಾತ್ರವಹಿಸುತ್ತಿವೆ.
ಈ ಯೋಜನೆಯ ಸದುಪಯೋಗವನ್ನು ಗ್ರಾಮೀಣ ವಿದ್ಯಾರ್ಥಿನಿಯರಿಗೆ ತಲುಪಿಸುವುದು ಪೋಷಕರು, ಶಾಲಾ ಶಿಕ್ಷಕರು ಮತ್ತು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ. ಅರ್ಹ ವಿದ್ಯಾರ್ಥಿನಿಯರು ಈ ಅವಕಾಶವನ್ನು ಕಳೆದುಕೊಳ್ಳದೇ, ಮೇ 20ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.