ಕರ್ನಾಟಕ ಸಿಇಟಿ ಪರೀಕ್ಷೆ 2025ರ ಫಲಿತಾಂಶ (KCET Result 2025) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಧಿಕೃತವಾಗಿ ರಿಸಲ್ಟ್ ಪ್ರಕಟಣೆ ಯಾವಾಗ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸುವ UGCET (Under Graduate Common Entrance Test) ಪರೀಕ್ಷೆ ಫಲಿತಾಂಶಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಫಲಿತಾಂಶ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
2025ನೇ ಸಾಲಿನ UGCET ಪರೀಕ್ಷೆಯನ್ನು ಕಳೆದ ಏಪ್ರಿಲ್ 16 ಮತ್ತು 17ರಂದು ನಡೆಸಲಾಗಿತ್ತು. ಎಂಜಿನಿಯರಿಂಗ್, ಅಗ್ರಿಕಲ್ಚರ್, ಆಯುಷ್, ಫಾರ್ಮಸಿ ಮತ್ತು ಇತರೆ ವೃತ್ತಿಪರ ಪದವಿ ಕೋರ್ಸ್’ಗಳ ಪ್ರವೇಶಕ್ಕಾಗಿ ಈ ಬಾರಿ ಪರೀಕ್ಷೆಗೆ 3.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಮೊದಲ ಬಾರಿಗೆ ಸಿಇಟಿ ಪರೀಕ್ಷೆಯಲ್ಲಿ ಟೆಕ್ನಾಲಜಿಯನ್ನು ವ್ಯಾಪಕವಾಗಿ ಬಳಸಲಾಗಿತ್ತು. ಆ ಪೈಕಿ ಕ್ಯೂಆರ್ ಕೋಡ್ ಮುಖಾಂತರ ಮುಖಚಹರೆ ದೃಢೀಕರಣ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಜೊತೆಗೆ ವೆಬ್‌ಕಾಸ್ಟಿಂಗ್ ಮೂಲಕ ನಿಗಾ ಇಡಲಾಗಿತ್ತು.
ಮೇ 20ರೊಳಗೆ ಫಲಿತಾಂಶ ಪ್ರಕಟ?
ಉನ್ನತ ಶಿಕ್ಷಣ ಸಚಿವರ ಡಾ. ಎಂ.ಸಿ ಸುಧಾಕರ್ ಅವರು ಇತ್ತೀಚೆಗೆ ‘ಸಿಇಟಿ ಫಲಿತಾಂಶ ಸಂಪೂರ್ಣವಾಗಿ ತಯಾರಾಗಿದೆ. ಆದರೆ CBSE, ಕೃಷಿ ಹಾಗೂ PUC-II ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಈ ಫಲಿತಾಂಶಗಳು ಪ್ರಕಟವಾದ ತಕ್ಷಣ ಕೆಸಿಇಟಿ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಮಾಹಿತಿ ನೀಡಿದ್ದರು.
ಅದರಂತೆ ಕಳೆದ ಮೇ 13ರಂದು ಸಿಬಿಎಸ್‌ಇ 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ನಿನ್ನೆ ಮೇ 16ರ ಶುಕ್ರವಾರದಂದು ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಕೂಡ ಬಿಡುಗಡೆಯಾಗಿದೆ. ಹೀಗಾಗಿ ಸಿಇಟಿ ಫಲಿತಾಂಶ ಪ್ರಕಟಣೆ ಮತ್ತಷ್ಟು ಸನಿಹವಾಗಿದೆ.
2022ರಲ್ಲಿ ಜುಲೈ 30 ಹಾಗೂ 2023ರಲ್ಲಿ ಜೂನ್ 15ರಂದು ಸಿಇಟಿ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಲಾಗಿತ್ತು. ಕಳೆದ ವರ್ಷ 2024ರಲ್ಲಿ ಮೇ 20ರಂದು ಕೆಸಿಇಟಿ ಫಲಿತಾಂಶ ಪ್ರಕಟಿಸಲಾಗಿತ್ತು. ಆ ಪ್ರಕಾರ ವರ್ಷ ಕೂಡ ಮೇ 20ರೊಳಗೆ ಸಿಇಟಿ ಫಲಿತಾಂಶ ಪ್ರಕಟವಾಗಬಹುದು ಎನ್ನಲಾಗುತ್ತಿದೆ.

ಫಲಿತಾಂಶವನ್ನು ಪರಿಶೀಲಿಸುವ ವಿಧಾನ
UGCET 2025 ಫಲಿತಾಂಶವನ್ನು ನೋಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
- KEA ಅಧಿಕೃತ ವೆಬ್‌ಸೈಟ್ cetonline.karnataka.gov.in/keaಗೆ ಭೇಟಿ ನೀಡಿ.
- UGCET 2025 RESULT ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ Register Number ಮತ್ತು Date of Birth ನಮೂದಿಸಿ.
- Submit ಕ್ಲಿಕ್ ಮಾಡಿದ ಮೇಲೆ, ನಿಮ್ಮ ವೈಯಕ್ತಿಕ ಫಲಿತಾಂಶ ಪ್ರದರ್ಶಿತವಾಗುತ್ತದೆ.
- ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಸಿಇಟಿ ಫಲಿತಾಂಶದ ನಂತರ ಮುಂದಿನ ಹಂತಗಳು
UGCET ಫಲಿತಾಂಶ ಪ್ರಕಟವಾದ ನಂತರ KEA ಪ್ರವೇಶದ ಮುಂದಿನ ಹಂತಗಳ ಬಗ್ಗೆ ಪ್ರಕಟಣೆ ನೀಡಲಿದೆ. ಸಾಮಾನ್ಯವಾಗಿ ಈ ಹಂತಗಳು ಈ ರೀತಿ ಇರುತ್ತವೆ:
- ವೈಯಕ್ತಿಕ ಡಾಕ್ಯುಮೆಂಟ್ ಪರಿಶೀಲನೆ (Document Verification)
- ಆಪ್ಷನ್ ಎಂಟ್ರಿ (Option Entry)
- ಸೀಟು ಹಂಚಿಕೆ ಪ್ರಕ್ರಿಯೆ
- ಅಂತಿಮ ಪ್ರವೇಶ ಪತ್ರ ಡೌನ್‌ಲೋಡ್
- ಕಾಲೇಜ್‌ಗೆ ಹಾಜರಾಗುವುದು
ವಿದ್ಯಾರ್ಥಿ ಸ್ನೇಹಿ ಮೊಬೈಲ್ ಅಪ್ಲಿಕೇಶನ್
KEA ಈ ಬಾರಿಗೆ ವಿಶೇಷವಾಗಿ ವಿದ್ಯಾರ್ಥಿ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಮೂಲಕ ಕೆಳಕಂಡ ಎಲ್ಲಾ ಸೇವೆಗಳನ್ನು ಪಡೆಯಬಹುದು:
- ಆನ್‌ಲೈನ್ ಅರ್ಜಿ ಭರ್ತಿ
- ಆಪ್ಷನ್ ಎಂಟ್ರಿ
- ಸೀಟು ಹಂಚಿಕೆ ಸ್ಥಿತಿ ಪರಿಶೀಲನೆ
- ಶುಲ್ಕ ಪಾವತಿ
- ಡಾಕ್ಯುಮೆಂಟ್ ಅಪ್ಲೋಡ್
- ಅಲರ್ಟ್ ಸಂದೇಶಗಳು
Google Play Store ಅಥವಾ KEA ವೆಬ್‌ಸೈಟ್ ಮೂಲಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಇದರ ಮೂಲಕ ಬಹುತೇಕ ಎಲ್ಲಾ ಪ್ರವೇಶ ಸಂಬಂಧಿತ ಹಂತಗಳನ್ನು ವಿದ್ಯಾರ್ಥಿಗಳೇ ಖುದ್ದು ಪೂರ್ಣಗೊಳಿಸಬಹುದು.