KCET Mock Seat Allotment Result- ಸಿಇಟಿ ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ | ಮುಂದಿನ ಹಂತಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…

Spread the love

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ 2025ರ ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು (KCET Mock Seat Allotment Result) ಪ್ರಕಟಿಸಿದೆ. ಮುಂದಿನ ಹಂತಗಳ ವೇಳಾಪಟ್ಟಿ ವಿವರ ಇಲ್ಲಿದೆ…

WhatsApp Group Join Now
Telegram Group Join Now

ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ, ನರ್ಸಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್’ಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ನಿರೀಕ್ಷಿಸುತ್ತಿದ್ದ ಸಿಇಟಿ (CET) 2025ನೇ ಶೈಕ್ಷಣಿಕ ಸಾಲಿನ ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ನಿನ್ನೆ ಜುಲೈ 25ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ.

ಜುಲೈ 22ರ ಸಂಜೆ 6 ಗಂಟೆಯ ವರೆಗೆ ವಿದ್ಯಾರ್ಥಿಗಳು ದಾಖಲಿಸಿದ ಆಯ್ಕೆ/ಇಚ್ಛೆಪಟ್ಟಿ, ಮೆರಿಟ್ ಲಿಸ್ಟ್ ಹಾಗೂ ರೋಸ್ಟರ್ ನಿಯಮಗಳ ಆಧಾರದಲ್ಲಿ ಈ ಅಣಕು ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ತಿಳಿಸಿದ್ದಾರೆ.

IB Recruitment 2025- ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಗುಪ್ತಚರ ಇಲಾಖೆಯಲ್ಲಿ ಉದ್ಯೋಗ | ಬೆಂಗಳೂರಿನಲ್ಲಿ 204 ಭದ್ರತಾ ಸಹಾಯಕರ ನೇಮಕಾತಿ | ಕನ್ನಡ ಬಲ್ಲವರಿಗೆ ಆದ್ಯತೆ

ಯಾವುದೆಲ್ಲ ಕೋರ್ಸುಗಳಿಗೆ ಇದು ಅನ್ವಯ?

ಅಣಕು ಸೀಟು ಹಂಚಿಕೆ (Mock Allotment) ಎಂಬುದು ಪ್ರಾಥಮಿಕವಾಗಿ ವಿದ್ಯಾರ್ಥಿಗಳ ಇಚ್ಛೆಪಟ್ಟಿ ಮತ್ತು ಮೆರಿಟ್ ಆಧಾರದಲ್ಲಿ ಸೀಟುಗಳು ಹೇಗೆ ಹಂಚಿಕೊಳ್ಳಬಹುದು ಎಂಬುದರ ಒಂದು ಮಾದರಿ.

ಇದರ ಮೂಲಕ ವಿದ್ಯಾರ್ಥಿಗಳು ತಮ್ಮ ಆಯ್ಕೆಗಳಿಗೆ ತಿದ್ದುಪಡಿ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಸದರಿ ಅಣಕು ಹಂಚಿಕೆ ಫಲಿತಾಂಶವು ಈ ಕೆಳಗಿನ ಕೋರ್ಸುಗಳಿಗೆ ಅನ್ವಯವಾಗಿದೆ:

  • ಎಂ.ಬಿ.ಬಿ.ಎಸ್. (MBBS)
  • ಬಿ.ಡಿಎಸ್. (BDS)
  • ಎಂಜಿನಿಯರಿಂಗ್ (Engineering – B.E./B.Tech)
  • ಕೃಷಿ ವಿಜ್ಞಾನ (Agri Sciences)
  • ಪಶುವೈದ್ಯಕೀಯ (Veterinary Sciences)
  • ಬಿ.ಎಸ್.ಸಿ ನರ್ಸಿಂಗ್ (B.Sc Nursing)
  • ಬಿ.ಫಾರ್ಮ (B.Pharm)
  • ಫಾರ್ಮಾ-ಡಿ (Pharma-D)
  • ಬಿಪಿಟಿ (BPT)
  • ಬಿಪಿಒ (BPO)
  • ಅಲೈಡ್ ಹೆಲ್ತ್ ಸೈನ್ಸ್  (Allied Health Sciences)
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ 2025ರ ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಧವನ್ನು ಪ್ರಕಟಿಸಿದೆ. ಮುಂದಿನ ಹಂತಗಳ ವೇಳಾಪಟ್ಟಿ ವಿವರ ಇಲ್ಲಿದೆ...
KCET Mock Seat Allotment Result 2025

AIIMS Recruitment 2025- ಏಮ್ಸ್ ನೇಮಕಾತಿ 2025: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವೀಧರರಿಗೆ 3,496 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ತಿದ್ದುಪಡಿ ಮಾಡಲು ಅವಕಾಶ

ಅಣಕು ಹಂಚಿಕೆ ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳಿಗೆ ತಮ್ಮ ಇಚ್ಛೆಗಳನ್ನು ತಿದ್ದುಪಡಿ ಮಾಡುವ ಅವಕಾಶ ನೀಡಲಾಗಿದೆ. ಆ ಮೂಲಕ ಹೊಸ ಆಯ್ಕೆ ಸೇರಿಸಬಹುದು, ಬೇಡದ ಆಯ್ಕೆ ಅಳಿಸಬಹುದು, ಆಯ್ಕೆಗಳ ಕ್ರಮಾಂಕ ಬದಲಾಯಿಸಬಹುದು ಹಾಗೂ ಇಚ್ಛೆಯ ಕ್ರಮದಲ್ಲಿ ಬದಲಾವಣೆ ಮಾಡಬಹುದು. ಈ ತಿದ್ದುಪಡಿಗೆ ಜುಲೈ 26 ರಿಂದ ಜುಲೈ 29ರ ಸಂಜೆ 5 ಗಂಟೆ ವರೆಗೆ ಅವಕಾಶ ನೀಡಲಾಗಿದೆ.

ಆಗಸ್ಟ್ 1ರಂದು ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಹಾಗೂ ಆಗಸ್ಟ್ 2ರಂದು ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಆಗಸ್ಟ್ 4-7 ಛಾಯ್ಸ್ ಆಯ್ಕೆಗೆ (Choice Entry) ಅವಕಾಶ ನೀಡಲಾಗಿದೆ.

ಇನ್ನು ಈ ತನಕ ಇಚ್ಛೆ/ಆಯ್ಕೆ ಪಟ್ಟಿಗೆ ನೋಂದಾಯಿಸದ ಅಭ್ಯರ್ಥಿಗಳಿಗೆ ಕೂಡ ಒಂದು ಅಂತಿಮ ಅವಕಾಶ ನೀಡಲಾಗಿದೆ. ಅವರು ₹750 ಶುಲ್ಕ ಪಾವತಿಸಿ ತಮ್ಮ ಆಯ್ಕೆಯನ್ನು ದಾಖಲಿಸಬಹುದು. ಆದರೆ ಈ ಅವಕಾಶವೂ ನಿಗದಿತವಾಗಿದ್ದು ಮೊದಲ ಸುತ್ತಿನ ಕೊನೆಯ ದಿನಾಂಕದ ನಂತರ ಈ ಅವಕಾಶ ಇರುವುದಿಲ್ಲ.

IBPS Bank Recruitment 2025 – ವಿವಿಧ 11 ಸರ್ಕಾರಿ ಬ್ಯಾಂಕುಗಳಲ್ಲಿ 6,215 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಸುವರ್ಣಾವಕಾಶ

ಫಲಿತಾಂಶ ನೋಡುವುದು ಹೇಗೆ?

Spread the love
WhatsApp Group Join Now
Telegram Group Join Now
error: Content is protected !!