KCET 2025 Counselling- ಕೆಸಿಇಟಿ 2025 ಸೀಟು ಹಂಚಿಕೆ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆ | ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ಕೆಸಿಇಟಿ 2025 ಸೀಟು ಹಂಚಿಕೆ ಹಾಗೂ ಕೌನ್ಸಿಲಿಂಗ್ (KCET 2025 Counselling) ಪ್ರಕ್ರಿಯೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಲಕ್ಷಾಂತರ ಪಿಯು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 (KCET – Karnataka Common Entrance Test) ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಎಲ್ಲರ ದೃಷ್ಟಿಯೂ ವೃತ್ತಿಪರ ಕೋರ್ಸ್ಗಳ (ಇಂಜಿನಿಯರಿಂಗ್, ಫಾರ್ಮಸಿ, ಆಯುಷ್, ಕೃಷಿ ಮುಂತಾದವು) ಪ್ರವೇಶಕ್ಕಾಗಿ ನಡೆಯಲಿರುವ ಸೀಟು ಹಂಚಿಕೆ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಯ ಮೇಲೆ ಕೆಂದ್ರೀಕೃತವಾಗಿದೆ.

ಈ ಲೇಖನದಲ್ಲಿ, ಕೆಸಿಇಟಿ 2025 ಕೌನ್ಸೆಲಿಂಗ್ ಪ್ರಕ್ರಿಯೆಯ ಎಲ್ಲಾ ಹಂತಗಳನ್ನು, ಅಗತ್ಯ ದಾಖಲೆಗಳ ಪಟ್ಟಿಯನ್ನು, ನಿರೀಕ್ಷಿತ ದಿನಾಂಕಗಳನ್ನು ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಸಲಹೆಗಳನ್ನು ನೀಡಲಾಗಿದೆ.

Gram Panchayat B-Khata- ಅನಧಿಕೃತ ಆಸ್ತಿದಾರರಿಗೆ ಗುಡ್ ನ್ಯೂಸ್ | ಜುಲೈನಿಂದ ಗ್ರಾಮ ಪಂಚಾಯತಿ ಆಸ್ತಿಗಳಿಗೆ ಬಿ-ಖಾತೆ ವಿತರಣೆ

ಕೌನ್ಸೆಲಿಂಗ್ ಪ್ರಕ್ರಿಯೆಯ ಹಂತಗಳು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಏಕೀಕೃತ ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ಎಲ್ಲಾ ವೃತ್ತಿಪರ ಕೋರ್ಸ್ಗಳಿಗೆ ಸೀಟು ಹಂಚಿಕೆಯನ್ನು ನಡೆಸಲಿದೆ. ಆದರೆ ಈ ಪ್ರಕ್ರಿಯೆ ಆರಂಭವಾಗುವುದು ಕೆಳಗಿನ ಅಂಶಗಳ ಮೇಲೆ ಅವಲಂಬಿತವಾಗಿದೆ:

  1. NEET ಫಲಿತಾಂಶ ಪ್ರಕಟಣೆ (ವೈದ್ಯಕೀಯ/ದಂತ/ಆಯುಷ್ ಕೋರ್ಸ್’ಗಳಿಗೆ): NEET UG 2025 ಫಲಿತಾಂಶ ಪ್ರಕಟವಾದ ನಂತರ ಆಯುಷ್ ಮತ್ತು ವೈದ್ಯಕೀಯ ಕೋರ್ಸ್’ಗಳಿಗೆ ಸೀಟು ಹಂಚಿಕೆ ಸಾಧ್ಯವಾಗುತ್ತದೆ.
  2. NATA ಫಲಿತಾಂಶ ಪ್ರಕಟಣೆ (ಆರ್ಕಿಟೆಕ್ಚರ್ ಕೋರ್ಸ್’ಗಳಿಗೆ): ಆರ್ಕಿಟೆಕ್ಚರ್ ಪ್ರವೇಶಕ್ಕೆ ಅಗತ್ಯವಾದ NATA 2025 ಫಲಿತಾಂಶ ಬೇಕಾಗಿರುತ್ತದೆ.
  3. ಕೋರ್ಸ್’ವಾರು ಸೀಟು ಲಭ್ಯತೆ ಮಾಹಿತಿ: ಪ್ರತಿ ಇಲಾಖೆಯಿಂದ ಸೀಟುಗಳ ಲಭ್ಯತೆ ಬಗ್ಗೆ ಸಂಪೂರ್ಣ ಮಾಹಿತಿ ಕೆಇಎಗೆ ಸಲ್ಲಿಕೆಯಾಗಬೇಕು. ಎಲ್ಲಾ ಇಲಾಖೆಗಳ ಸಹಕಾರದಿಂದ ಸೀಟುಗಳ ಒಟ್ಟು ಲೆಕ್ಕಾಚಾರ ಪೂರ್ಣಗೊಳ್ಳಬೇಕು.
  4. ದಾಖಲೆ ಪರಿಶೀಲನೆ ಹಂತ: ಅರ್ಹ ವಿದ್ಯಾರ್ಥಿಗಳ ಡಾಕ್ಯುಮೆಂಟ್ ವೆರಿಫಿಕೇಷನ್, ಕೆಟಗರಿ ಮಾನ್ಯತೆ, ರೂರೆಲ್/ಕನ್ನಡ ಮೀಸಲಾತಿ ದೃಢೀಕರಣ ಹಂತಗಳು ನಡೆಯುತ್ತವೆ.
  5. ಆನ್‌ಲೈನ್ ಆಯ್ಕೆ ಪ್ರಕ್ರಿಯೆ: ವಿದ್ಯಾರ್ಥಿಗಳು ತಮ್ಮ ಆದ್ಯತೆಯ ಕೋರ್ಸ್ ಮತ್ತು ಕಾಲೇಜುಗಳನ್ನು ಆನ್‌ಲೈನ್ ಮೂಲಕ ಆಯ್ಕೆ ಮಾಡಬಹುದು.
  6. ಸೀಟು ಹಂಚಿಕೆ ಹಾಗೂ ದಾಖಲಾತಿ ಹಂತ: ಆಯ್ಕೆ ಪಟ್ಟಿಯ ಆಧಾರದ ಮೇಲೆ ಸೀಟು ಹಂಚಿಕೆ ನಡೆಯುತ್ತದೆ. ನಂತರ ವಿದ್ಯಾರ್ಥಿಗಳು ಆಯ್ಕೆಯಾದ ಕಾಲೇಜಿನಲ್ಲಿ ದಾಖಲಾಗಬೇಕು.
ಕೆಸಿಇಟಿ 2025 ಸೀಟು ಹಂಚಿಕೆ ಹಾಗೂ ಕೌನ್ಸಿಲಿಂಗ್ ಪ್ರಕ್ರಿಯೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
KCET 2025 Counselling Seat Allotment Details

e-Swathu Property Details- ನಿಮ್ಮ ಆಸ್ತಿಯ ಇ-ಸ್ವತ್ತು ದಾಖಲೆಯನ್ನು ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಿರಿ

KEA KCET ಕೌನ್ಸೆಲಿಂಗ್ 2025 ನಿರೀಕ್ಷಿತ ದಿನಾಂಕಗಳು

ಕಳೆದ ವರ್ಷದ ಕೌನ್ಸೆಲಿಂಗ್ ವೇಳಾಪಟ್ಟಿ ಮತ್ತು ಫಲಿತಾಂಶ ಪ್ರಕಟಣೆಗಳ ಆಧಾರದ ಮೇಲೆ, ಈ ವರ್ಷದ ಕೌನ್ಸೆಲಿಂಗ್ ಪ್ರಕ್ರಿಯೆ ಇದೇ ಜೂನ್ 2025ರ 2ನೇ ಅಥವಾ 3ನೇ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಕೆಸಿಇಟಿ 2025 ಸ್ಪಾಟ್ ರ‍್ಯಾಂಕ್ ಫಲಿತಾಂಶ ಪ್ರಕಟಣೆ ಇನ್ನೂ ಬಾಕಿ ಇರುವುದರಿಂದ, ಅಭ್ಯರ್ಥಿಗಳು ಜೂನ್ 2025ರ 2ನೇ ವಾರದೊಳಗೆ ಕೌನ್ಸೆಲಿಂಗ್ ಅಧಿಸೂಚನೆಯನ್ನು ನಿರೀಕ್ಷಿಸಬಹುದು ಮತ್ತು ಜೂನ್ 3ನೇ ವಾರದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆಯು ಪ್ರಾರಂಭವಾಗಬಹುದು.

ಅಭ್ಯರ್ಥಿಗಳು 2025ರ ಕೆಸಿಇಟಿ ಕೌನ್ಸೆಲಿಂಗ್ ದಿನಾಂಕಗಳನ್ನು ಅಧಿಕೃತ ವೆಬ್‌ಸೈಟ್ cetonline.karnataka.gov.inನಲ್ಲಿ ಪರಿಶೀಲಿಸಬಹುದು. ಮಾನ್ಯವಾದ ಕೆಸಿಇಟಿ 2025 ಅಂಕಪಟ್ಟಿ ಹೊಂದಿರುವ ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಹರಾಗಿರುತ್ತಾರೆ.

Free BCM Hostel- ಉಚಿತ ಬಿಸಿಎಂ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ | ಪಿಯುಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಅವಕಾಶ

ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆಗಳು
  • ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ (ಪಿಯುಸಿ ಅಂಕಪಟ್ಟಿ, ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಕನ್ನಡ/ಗ್ರಾಮೀಣ ಪ್ರಮಾಣಪತ್ರ ಇತ್ಯಾದಿ)
  • ಪರಿಶಿಷ್ಟ ವರ್ಗ ಹಾಗೂ ವಿಶೇಷ ಮೀಸಲಾತಿಗೆ ಸಂಬಂಧಿಸಿದ ದಾಖಲಾತಿಗಳನ್ನು ನವೀಕರಿಸಿ
  • ನಿಮ್ಮ ಇಷ್ಟದ ಕೋರ್ಸ್’ಗಳ ಕುರಿತು ಪೂರ್ವ ಅಧ್ಯಯನ ಮಾಡಿ
  • ಕಾಲೇಜುಗಳ ಶ್ರೇಣೀಕರಣ, ಪ್ಲೇಸ್ಮೆಂಟ್ ದಾಖಲೆ ಮತ್ತು ಲೊಕೇಶನ್ ಕುರಿತು ಮಾಹಿತಿ ಸಂಗ್ರಹಿಸಿ

ಕೆಸಿಇಟಿ 2025 ಕೌನ್ಸೆಲಿಂಗ್ ಪ್ರಕ್ರಿಯೆಯು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಭವಿಷ್ಯಕ್ಕೆ ದಿಕ್ಕು ನೀಡುವ ಅತೀ ಪ್ರಮುಖ ಹಂತವಾಗಿದೆ. ಸರಿಯಾದ ಸಮಯದಲ್ಲಿ, ಸರಿಯಾದ ಆಯ್ಕೆ ಮಾಡಿಕೊಂಡು ಮುಂದಿನ ಹಂತಕ್ಕೆ ಸಾಗುವುದು ಅತೀ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ನೀಡುವುದು ಉತ್ತಮ.

Education Loan- ₹10 ಲಕ್ಷದಿಂದ ₹60 ಲಕ್ಷದ ವರೆಗೆ ಶಿಕ್ಷಣ ಸಾಲ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!