ಹಳೇ ಪಿಂಚಣಿ ಯೋಜನೆ ಮರು ಜಾರಿಗೆ (Karnataka Old Pension Scheme) ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇರಿಸಿದ್ದು; ನೌಕರರ ಮನವಿ ಪರಿಶೀಲನೆಗೆ ಮೂರು ಸಮಿತಿಗಳನ್ನು ರಚಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯಾಗಿರುವ ಹಳೆಯ ಪಿಂಚಣಿ ಯೋಜನೆ (Old Pension Scheme – OPS) ಮರು ಜಾರಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ನೌಕರರ ಮನವಿ ಪರಿಶೀಲನೆಗೆ ಮೂರು ಸಮಿತಿಗಳನ್ನು ರಚಿಸುವ ಮೂಲಕ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದೆ.
ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಸಂಬಂಧಿಸಿದಂತೆ ಹಲವಾರು ಬಾರಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದ್ದಾರೆಗೀ ಕುರಿತು ಆಗಾಗ ಧರಣಿ, ರ‍್ಯಾಲಿ ಮೂಲಕ ತಮ್ಮ ಆಗ್ರಹವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ಸರ್ಕಾರ ತೆಗೆದುಕೊಂಡಿರುವ ಕ್ರಮ, ನೌಕರರಲ್ಲಿ ಭರವಸೆ ಮೂಡಿಸಿದೆ.
ಒಪಿಎಸ್ ಮರು ಪರಿಗಣನೆಗೆ ಸರ್ಕಾರದ ಕ್ರಮ
ಕಳೆದ 2024ರ ಜನವರಿ 24ರಂದು ಹೊರಡಿಸಿದ ಆದೇಶದನ್ವಯ, ಕರ್ನಾಟಕ ಸರ್ಕಾರ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಈ ತಂಡಗಳಲ್ಲಿ ತಲಾ ಮೂವರು ಹಿರಿಯ ಅಧಿಕಾರಿಗಳು ಅಥವಾ ನೌಕರರನ್ನು ನಿಯೋಜಿಸಲಾಗಿದ್ದು, ಅವರ ಮೇಲೆ OPS ಸಂಬಂಧಿತ ಪ್ರಸ್ತಾವನೆಗಳನ್ನು ಪರಿಶೀಲಿಸಿ ಸರಿಯಾದ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸುವ ಹೊಣೆ ವಹಿಸಲಾಗಿದೆ. ತಂಡಗಳ ಕಾರ್ಯದ ಪ್ರಮುಖ ಕಾರ್ಯಗಳು ಹೀಗಿವೆ:
- ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿ ಪರಿಶೀಲನೆ
- ಯರ‍್ಯಾರು OPSಗೆ ಅರ್ಹರಾಗಬಹುದು ಎಂಬದನ್ನು ನಿರ್ಧರಿಸುವುದು
- ಯೋಜನೆಯ ಮರು ಜಾರಿಗೆ ಆಗಬಹುದಾದ ಆರ್ಥಿಕ ಪರಿಣಾಮಗಳ ವಿಶ್ಲೇಷಣೆ
- ರಾಜ್ಯದ ಪಿಂಚಣಿ ನಿಧಿಯ ಮೇಲಿನ ದತ್ತಾಂಶ ಸಂಗ್ರಹಣೆ
- ಹಳೇ ಪಂಚಣಿ ಕುರಿತ ಇತರ ರಾಜ್ಯಗಳ ಅನುಭವದ ಅಧ್ಯಯನ
ಈ ಪ್ರಕ್ರಿಯೆಯಲ್ಲಿ ಪ್ರತಿ ದಿನ ತಂಡದ ಸದಸ್ಯರು ಮಧ್ಯಾಹ್ನ ಕಡ್ಡಾಯವಾಗಿ ಹಾಜರಾಗಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ. ಸರಕಾರವು ಹಳೇ ಪಿಂಚಣಿ ಮರುಜಾರಿ ಕುರಿತು ಶೀಘ್ರ ನಿರ್ಧಾರ ತಗೊಳ್ಳಲು ಬಯಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.

Ration Card Raddu- ರೇಷನ್ ಕಾರ್ಡ್ ರದ್ದು | ಸಿಎಂ ಖಡಕ್ ಸೂಚನೆ | ನಿಮ್ಮ ಕಾರ್ಡ್ ರದ್ದಾಗಿದೆಯಾ? ಈಗಲೇ ಚೆಕ್ ಮಾಡಿ
ಹಳೇ ಪಿಂಚಣಿ ಯೋಜನೆ ಯಾಕೆ ಉತ್ತಮ?
2004ರಿಂದ ಕೇಂದ್ರ ಸರ್ಕಾರ ಮತ್ತು ಬಹುತೇಕ ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯ ಬದಲು ‘ರಾಷ್ಟ್ರೀಯ ಪಿಂಚಣಿ ಯೋಜನೆ (NPS)’ ಅನ್ನು ಜಾರಿಗೆ ತಂದಿವೆ. ಈ ಯೋಜನೆಯ ಅಡಿಯಲ್ಲಿ ನೌಕರರು ತಮ್ಮ ವೇತನದಿಂದ ಒಂದು ನಿಶ್ಚಿತ ಶೇಕಡಾವಾರು ಹಣವನ್ನು ಕೊಡುಗೆ ನೀಡಬೇಕಾಗುತ್ತದೆ ಮತ್ತು ಪಿಂಚಣಿಯ ಪ್ರಮಾಣ ಮಾರುಕಟ್ಟೆ ಲಾಭ-ನಷ್ಟದ ಮೇಲೆ ಅವಲಂಬಿತವಾಗಿರುತ್ತದೆ.
ಇದು ಖಚಿತ ಆದಾಯವಲ್ಲದ ಕಾರಣ, ನೌಕರರು ಪುನಃ ‘ಹಳೆಯ ಪಿಂಚಣಿ ಯೋಜನೆ (OPS)’ಗೆ ಹಿಂದಿರುಗಲು ಬಯಸುತ್ತಿದ್ದಾರೆ. ಏಕೆಂದರೆ OPS ಅಡಿಯಲ್ಲಿ:
- ನಿವೃತ್ತಿಯ ನಂತರ ಭದ್ರವಾದ ಮಾಸಿಕ ಪಿಂಚಣಿ ಸಿಗುತ್ತದೆ.
- ಮಾರುಕಟ್ಟೆ ಮೇಲಿನ ಅವಲಂಬನೆ ಇಲ್ಲ.
- ನೌಕರರ ವೇತನದಿಂದ ಯಾವುದೇ ಕಡಿತವಿಲ್ಲ.
- ಪಿಂಚಣಿ ಆದಾಯ ತೆರಿಗೆ ರಹಿತವಾಗಿರುತ್ತದೆ.
- ಪತ್ನಿ ಅಥವಾ ಮಕ್ಕಳಿಗೆ ಪಿಂಚಣಿ ಹಸ್ತಾಂತರ ಮಾಡುವ ವ್ಯವಸ್ಥೆ ಇದೆ.

ಒಪಿಎಸ್ ಮರುಜಾರಿಗೊಳಿಸಿದ ಇತರ ರಾಜ್ಯಗಳು
ದೇಶದ ಹಲವಾರು ರಾಜ್ಯಗಳು ಈಗಾಗಲೇ OPS ಮರು ಜಾರಿಗೊಳಿಸಿವೆ. ಈ ಪೈಕಿ ರಾಜಸ್ಥಾನ ಕಾಂಗ್ರೆಸ್ ಸರ್ಕಾರವು ಮೊದಲನೆಯದಾಗಿ OPS ಮರು ಜಾರಿಗೆ ಕ್ರಮ ಕೈಗೊಂಡಿತು. ನಂತರ ಪಂಜಾಬ್, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ಈ ರಾಜ್ಯಗಳೂ ಹಳೆಯ ಯೋಜನೆಗೆ ಮರಳಿವೆ.
ಇತ್ತ ಮಹಾರಾಷ್ಟ್ರ ಸದ್ಯದಲ್ಲೇ OPS ಪರವಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ರಾಜ್ಯಗಳ ಅನುಭವಗಳನ್ನು ಅಧ್ಯಯನ ಮಾಡಿ, ಕರ್ನಾಟಕ ಸರ್ಕಾರವೂ ಹಳೇ ಪಿಂಚಣಿ ಮರುಜಾರಿಗೊಳಿಸುವ ನಿರೀಕ್ಷೆ ಮೂಡಿದೆ.
ಭವಿಷ್ಯದ ನಿರೀಕ್ಷೆಗಳು
ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಸರ್ಕಾರ ಇಚ್ಛಾಶಕ್ತಿ ಹೊಂದಿದರೆ, ಈ ಮೂರು ಸಮಿತಿಗಳ ವರದಿಗಳ ಆಧಾರದಲ್ಲಿ ತ್ವರಿತ ನಿರ್ಧಾರ ನಿರೀಕ್ಷಿಸಬಹುದಾಗಿದೆ. ಆದರೆ, ಇದರ ಜೊತೆಗೆ ರಾಜ್ಯದ ಹಣಕಾಸು ಸ್ಥಿತಿ, ಮುಂದಿನ ಬಜೆಟ್, ಸಾರ್ವಜನಿಕ ಖರ್ಚುಗಳು ಮತ್ತು ನೌಕರರ ಸಂಖ್ಯೆಯಂತೆಯೇ ಯೋಜನೆಯ ಭವಿಷ್ಯ ನಿರ್ಧರಿಸಲಿದೆ.
ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ರಾಜ್ಯ ಸರ್ಕಾರ ಆರಂಭಿಸಿದ ಕ್ರಮ, ಸರ್ಕಾರಿ ನೌಕರರಲ್ಲಿ ಹೊಸ ಭರವಸೆ ಮೂಡಿಸಿದೆ. ಸರ್ಕಾರಿ ನೌಕರರ ಭದ್ರ ಭವಿಷ್ಯ, ಆರ್ಥಿಕ ಸುರಕ್ಷತೆ ಹಾಗೂ ಗೌರವಪೂರ್ಣ ನಿವೃತ್ತಿ ಜೀವನದ ಪರಿಕಲ್ಪನೆಯ ಈ ಚಟುವಟಿಕೆಗಳು ಯಶಸ್ವಿಯಾಗಲಿ ಎಂಬುದು ಎಲ್ಲರ ಆಶಯ.