ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಹೆಚ್ಚುವರಿ ಸಂಬಳ ಎಷ್ಟು? ಹೀಗೆ ಚೆಕ್ ಮಾಡಿ… Karnataka Govt Employees Salary Calculation

Spread the love

Karnataka Govt Employees Salary Calculation : ಕರ್ನಾಟಕ ಸರ್ಕಾರ (Government of Karnataka) ಇದೇ ಆಗಸ್ಟ್ 1ರಿಂದ ಜಾರಿಯಾಗುವಂತೆ ಸರ್ಕಾರಿ ನೌಕರರ ವೇತನ, (Govt Employees Salary) ಭತ್ಯೆ, ಪಿಂಚಣಿ ಸೌಲಭ್ಯ ಪರಿಷ್ಕೃರಿಸಿ ಕಳೆದ ಜುಲೈ 23ರಂದು ಅಧಿಕೃತ ಆದೇಶ ಹೊರಡಿಸಿದೆ. ಅದರಂತೆ ಈ ತಿಂಗಳಿನಿ೦ದ ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಸಂಬಳ, ಸವಲತ್ತುಗಳು ಹೆಚ್ಚಳವಾಗಲಿವೆ.

WhatsApp Group Join Now
Telegram Group Join Now

7ನೇ ವೇತನ ಆಯೋಗ (7th Pay Commission) ವರದಿಯ ಶಿಫಾರಸು ಜಾರಿಯಾದ ನಂತರ ಹಾಲಿ ಸೇವೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರು ಹಾಗೂ ಸೇವೆಯಿಂದ ನಿವೃತ್ತರಾದ ನೌಕರರು, ಅವರ ಅವಲಂಬಿತ ಕುಟುಂಬಸ್ತರಿಗೆ ಭರ್ಜರಿ ಉಡುಗೊರೆ ಸಿಕ್ಕಂತಾಗಿದೆ. ಇದೇ ಆಗಸ್ಟ್’ನಿಂದ ನಿವೃತ್ತ ನೌಕರರ ಪಿಂಚಣಿ ಹಾಗೂ ಸೇವೆಯಲ್ಲಿರುವ ಸರ್ಕಾರಿ ನೌಕರರ ವೇತನ ಶೇ.27.5ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ನೌಕರರಿಂದ ಸರ್ಕಾರಕ್ಕೆ 3 ಬೇಡಿಕೆ ಈಡೇರಿಕೆಗೆ ಮನವಿ ಸಮರ್ಪಣೆ | ಏನೀ ಹೊಸ ಬೇಡಿಕೆಗಳು? ಸಂಪೂರ್ಣ ಮಾಹಿತಿ ಇಲ್ಲಿದೆ… Karnataka Govt employees New demands

ಯಾರಿಗೆ ಎಷ್ಟು ಸಂಬಳ ಏರಿಕೆ?

‘ಎ’ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ‘ಸಿ’ ಮತ್ತು ‘ಡಿ’ ದರ್ಜೆ ನೌಕರರಿಗೆ 6ನೇ ವೇತನ ಆಯೋಗದಲ್ಲಿ ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ ಒಟ್ಟು 29,005 ರೂಪಾಯಿ ಸಿಗುತ್ತಿತ್ತು. ಇದೀಗ 7ನೇ ವೇತನ ಆಯೋಗದಲ್ಲಿ ಈ ಮೊತ್ತಕ್ಕೆ 6,940 ರೂಪಾಯಿ ಹೆಚ್ಚುವರಿಯಾಗಿ ಸಿಗಲಿದೆ.

ಇನ್ನು ‘ಎ’ ವಲಯದಲ್ಲಿ ಕಾರ್ಯ ನಿರ್ವಹಿಸುವ ‘ಎ’ ಮತ್ತು ‘ಬಿ’ ದರ್ಜೆ ನೌಕರರಿಗೆ 6ನೇ ವೇತನ ಆಯೋಗದಲ್ಲಿ ಮೂಲ ವೇತನ, ತುಟ್ಟಿಭತ್ಯೆ, ಫಿಟ್ಮೆಂಟ್ ಸೌಲಭ್ಯ ಸೇರಿ ಒಟ್ಟು 35,595 ರೂಪಾಯಿ ಸಿಗುತ್ತಿತ್ತು. ಇದೀಗ 7ನೇ ವೇತನ ಆಯೋಗದಲ್ಲಿ ಈ ಮೊತ್ತಕ್ಕೆ 8,050 ರೂಪಾಯಿ ಹೆಚ್ಚುವರಿಯಾಗಿ ಸಿಗಲಿದೆ.

Karnataka Govt Employees Salary Calculation

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಗಿಫ್ಟ್? | ಯಾರಿಗೆ ಎಷ್ಟು ಸಿಗಲಿದೆ ಡಿಎ? DA Gift for Govt Employees

ವೇತನ ಲೆಕ್ಕಾಚಾರ ಹೇಗೆ?

ಸರ್ಕಾರಿ ನೌಕರರ ವೇತನವನ್ನು ಆನ್‌ಲೈನ್’ನಲ್ಲಿ ಲೆಕ್ಕಾಚಾರ ಮಾಡಲು ಪ್ರತ್ಯೇಕ ವೆಬ್‌ಸೈಟ್ ಅಭಿವೃದ್ದಿಗೊಳಿಸಲಾಗಿದೆ. ಈ ವೆಬ್‌ಸೈಟ್ ಮೂಲಕ ರಾಜ್ಯ ಸರ್ಕಾರಿ ನೌಕರರು ಹಿಂದಿನ 6ನೇ ವೇತನ ಆಯೋಗದ ವೇತನ ಹಾಗೂ ಈಗಿನ ಹೊಸ 7ನೇ ವೇತನದಲ್ಲಿ ಲಭ್ಯವಾಗುವ ಪರಿಷ್ಕೃತ ವೇತನವನ್ನು ಚೆಕ್ ಮಾಡಿಕೊಳ್ಳಬಹುದು.

6ನೇ ವೇತನ ಆಯೋಗದಲ್ಲಿದ್ದ ನಿಮ್ಮ ಸಂಬಳ, ಭತ್ಯೆ ಸೌಲಭ್ಯಗಳು ಹಾಗೂ ಇದೀಗ 7ನ ವೇತನ ಆಯೋಗದಲ್ಲಿ ಸಿಗಲಿರುವ ಪರಿಷ್ಕೃತ ಸಂಬಳ, ಭತ್ಯೆ ಹಾಗೂ ಕುಟುಂಬ ಪಂಚಣಿ ಸೌಲಭ್ಯಗಳ ವಿವರವನ್ನು ಈ ಕೆಳಗಿನ ವೆಬ್‌ಸೈಟ್ ಲಿಂಕ್ ಬಳಸಿ ಲೆಕ್ಕಾಚಾರ ಮಾಡಬಹುದು.

ವೆಬ್‌ಸೈಟ್ ಲಿಂಕ್ : ಇಲ್ಲಿ ಒತ್ತಿ

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಪರಿಷ್ಕೃತ ಪಿಂಚಣಿ ಹಣವೆಷ್ಟು? ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ…. 7th pay pension calculator


Spread the love
WhatsApp Group Join Now
Telegram Group Join Now

1 thought on “ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಹೆಚ್ಚುವರಿ ಸಂಬಳ ಎಷ್ಟು? ಹೀಗೆ ಚೆಕ್ ಮಾಡಿ… Karnataka Govt Employees Salary Calculation”

Leave a Comment

error: Content is protected !!